
ಜೆಸಿಬಿಯಿಂದ ಮಣ್ಣನ್ನು ಅಗೆಯುವುದು, ಅಥವಾ ಕಲ್ಲು ಮೊದಲಾದ ವಸ್ತುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗುಸುವುದನ್ನು ನೋಡಿದ್ದೇವೆ. ಆದರೆ ಇದರಿಂದಾಗುವ ಮತ್ತೊಂದು ಉಪಯೋಗ ನಿಮಗೆ ತಿಳಿದಿದೆಯಾ?
ಹೌದು ಕಾರ್ಯಕ್ರಮ ನಿಮಿತ್ತ ಟ್ರಕ್‌ಗೇರಿ ಪ್ರಯಾಣಿಸುತ್ತಿದ್ದ ಮಹಿಳೆಯರು ಕೆಳಗಿಳಿಯಲಾಗದೇ ಪರದಾಡಿಡಿದ್ದಾರೆ. ಈ ವೇಳೆ ಬೇರೆ ಉಪಾಯವಿಲ್ಲದೇ ಜೆಸಿಬಿ ತರಿಸಿ ಅದನ್ನೇ ಮೆಟ್ಟಿಲಿನಂತೆ ನಿಲ್ಲಿಸಿ ಟ್ರಕ್‌ನಿಂದ ಕೆಳಗಿಳಿಸಿರುವ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಹಿಳೆಯರು ಇಳಿಯಲೂ ಆಗದೆ, ಹಾರಲೂ ಆಗದೆ ಸಂಕಷ್ಟಕ್ಕೆ ಸಿಲುಕಿದ್ದಾಗ ಜೆಸಿಬಿ ಮೂಲಕ ಕೆಳಗಿಳಿಸಿರುವ ವಿಡಿಯೋ ವ್ಯಾಪಕವಾಗಿ ಶೇರ್ ಕೂಡಾ ಆಗಿದೆ. ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿರುವ ಈ ವಿಡಿಯೋಗೆ ಭಿನ್ನ ವಿಭಿನ್ನ ಕಮೆಂಟ್‌ಗಳು ಬಂದಿದೆ.
ಹೀಗಿದ್ದರೂ ಈ ಘಟನೆ ನಡೆದಿದ್ದೆಲ್ಲಿ? ಎಂಬ ವಿಚಾರ ಬಯಲಾಗಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ