ಬಂಡಾಯ ಶಮನಕ್ಕೆ ಸೋನಿಯಾ ಪ್ಲಾನ್, ಗಡಿ ತಂಟೆ ಶುರುಮಾಡಿದ ಡ್ರ್ಯಾಗನ್; ನ.21ರ ಟಾಪ್ 10 ಸುದ್ದಿ!

By Suvarna News  |  First Published Nov 21, 2020, 4:58 PM IST

ಅಮೆರಿಕ ಬಹಿರಂಗ ಮಾಡಿದ ವರದಿಯಲ್ಲಿ ಚೀನಾದ ಗಡಿ ತಂಟೆ ಹಾಗೂ ಆಕ್ರಮಣ ಕಿರುಕುಳ ಬಯಲಾಗಿದೆ. ಚುನಾವಣೆಗಳ ಸೋಲಿನ ಬೆನ್ನಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಉದ್ಭವಿಸಿರುವ ಬಂಡಾಯ ಶಮನಕ್ಕೆ ಸೋನಿಯಾ ಗಾಂಧಿ ಪ್ಲಾನ್ ಮಾಡಿದ್ದಾರೆ.   ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಕಾಂಗ್ರೆಸ್ ಅಚ್ಚರಿ ಅಭ್ಯರ್ಥಿ ಕಣಕ್ಕಿಳಿಸುವ ಸಾಧ್ಯತೆ ಇದೆ. ಇಂಡೋ ಆಸೀಸ್ ಸರಣಿ ಟಿಕೆಟ್ ಸೋಲ್ಡ್ ಔಟ್, 20 ದಿನದಲ್ಲಿ ಹ್ಯುಂಡೈ ಟಿ20 ಕಾರು ದಾಖಲೆ ಸೇರಿದಂತೆ ನವೆಂಬರ್ 21ರ ಟಾಪ್ 10 ಸುದ್ದಿ ಇಲ್ಲಿವೆ.
 


ಆಕ್ರೋಶ ಶಮನಕ್ಕೆ ಸೋನಿಯಾ ಪ್ಲಾನ್‌; 3 ಸಮಿತಿ ರಚನೆ: ಬಂಡೆದ್ದವರಿಗೂ ಸ್ಥಾನ!...

Latest Videos

undefined

ಬಿಹಾರ ಮತ್ತು ಇತರ ಉಪಚುನಾವಣೆಗಳಲ್ಲಿ ಹೀನಾಯ ಸೋಲಿನ ಬಳಿಕ ಕಾಂಗ್ರೆಸ್‌ ನಾಯಕತ್ವದ ವಿರುದ್ಧ ಸಿಡಿದೆದ್ದಿರುವ ಬಂಡಾಯ ನಾಯಕರ ಅಸಮಾಧಾನ ಭುಗಿಲೆದ್ದಿರುವ ಹೊತ್ತಿನಲ್ಲೇ ರಾಷ್ಟ್ರೀಯ ಮಹತ್ವದ ಮೂರು ವಿಷಯಗಳ ಕುರಿತಂತೆ ಪಕ್ಷದೊಳಗೆ 3 ಆಂತರಿಕ ಸಮಿತಿ ರನೆ ಮಾಡಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಆದೇಶ ಹೊರಡಿಸಿದ್ದಾರೆ.

ಇಡೀ ಹಳ್ಳಿ ಮಂದಿಗೆಲ್ಲಾ ಕೊರೋನಾ, ನಿಯಮ ಪಾಲಿಸಿದ ಓರ್ವ ಮಾತ್ರ ಬಚಾವ್‌!...

ಸಣ್ಣ ಹಳ್ಳಿಗಳಲ್ಲಿ ಒಬ್ಬಿಬ್ಬರಿಗೆ ಕೊರೋನಾ ಬರೋದು ಹೊಸದಲ್ಲ. ಆದರೆ ಹಿಮಾಚಲ ಪ್ರದೇಶದಲ್ಲಿ ಹಳ್ಳಿಯೊಂದಲ್ಲಿ ಒಬ್ಬರನ್ನು ಹೊರತುಪಡಿಸಿ, ಉಳಿದೆಲ್ಲರಿಗೂ ಸೋಂಕು ಹಬ್ಬಿದೆ. 

ಆನ್‌ಲೈನ್ ಬೆಟ್ಟಿಂಗ್‌ ನಿಷೇಧಿಸಿದ ಸರ್ಕಾರ, ಸಿಕ್ಕಾಕೊಂಡ್ರೆ 2 ವರ್ಷ ಜೈಲು!...

ಬೆಟ್ಟಿಂಗ್‌ಗೆ ಅವಕಾಶ ನೀಡುವ ಆನ್‌ಲೈನ್‌ ಗೇಮ್‌ನಿಂದಾಗಿ ಭಾರೀ ಪ್ರಮಾಣದಲ್ಲಿ ಜನರು ಸಂಕಷ್ಟಕ್ಕೀಡಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬೆನ್ನಲ್ಲೇ, ಇಂಥ ಆಟಗಳಿಗೆ ತಮಿಳುನಾಡು ಸರ್ಕಾರ ನಿಷೇಧ ಹೇರಿದೆ. ಈ ಕುರಿತು ಅದು ಶುಕ್ರವಾರ ಸುಗ್ರೀವಾಜ್ಞೆ ಹೊರಡಿಸಿದೆ.

ಕೆಲವೇ ಗಂಟೆಗಳಲ್ಲಿ ಇಂಡೋ-ಆಸೀಸ್‌ ಪಂದ್ಯಗಳ ಟಿಕೆಟ್‌ ಸೋಲ್ಡೌಟ್‌..!...

ಇಂಡೋ-ಆಸೀಸ್ ಸರಣಿಯ ಕ್ರೇಜ್ ಹೇಗಿದೆಯೆಂದರೆ, ಶುಕ್ರವಾರ ಟಿಕೆಟ್‌ ಕೌಂಟರ್ ಓಪನ್ ಮಾಡಿ ಕೆಲವೇ ಗಂಟೆಗಳಲ್ಲಿ 3 ಟಿ20 ಪಂದ್ಯಗಳ ಸಂಪೂರ್ಣ ಟಿಕೆಟ್‌ಗಳು ಮಾರಾಟವಾಗಿವೆ.

ವಾಟ್ಸಪ್ ಡಿಪಿಯಿಂದ ದೃಶ್ಯ ಚಿತ್ರಕ್ಕೆ ಆಯ್ಕೆಯಾದೆ: ಆರೋಹಿ ನಾರಾಯಣ್...

ಭೀಮಸೇನ ನಳಮಹರಾಜ ಚಿತ್ರದ ಸಿಕ್ಕಾಪಟ್ಟೆ ಬೋಲ್ಡ್‌ ಹುಡುಗಿ ಆರೋಹಿ ಜೊತೆ ಸಣ್ಣ ಮಾತುಕತೆ

ತಪ್ಪು ಮಾಹಿತಿ ನೀಡಿದ 167 ಮಿಲಿಯನ್ ಫೇಸ್‌ಬುಕ್ ಬಳಕೆದಾರರ ಖಾತೆ ಕಪ್ಪು ಪಟ್ಟಿಗೆ!...

ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಹರಿದಾಡುತ್ತಿರುವುದು ಹೊಸದೇನಲ್ಲ. ಆದರೆ ಇದೀಗ ತಪ್ಪು ಮಾಹಿತಿಗಳನ್ನು ಪೋಸ್ಟ್ ಮಾಡಿ ಜನರ ದಾರಿ ತಪ್ಪಿಸುವ ಪರಿಪಾಠಕ್ಕೆ ಕಡಿವಾಣ ಹಾಕಲು ಎಲ್ಲಾ ಸಾಮಾಜಿಕ ಮಾಧ್ಯಮಗಳು ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. ಇದೇ ರೀತಿ ತಪ್ಪು ಮಾಹಿತಿ ನೀಡಿದ ಫೇಸ್‌ಬುಕ್ ಬಳಕೆದಾರರಿಗೆ ಸಂಕಷ್ಟ ಎದುರಾಗಿದೆ.

ಸಾಲ ಪಡೆಯಲು ಅಗತ್ಯ ಕ್ರೆಡಿಟ್ ಸ್ಕೋರ್, ತಿಳಿದುಕೊಳ್ಳಲೇಬೇಕು ಈ 7 ಪಾಂಯಿಟ್ಸ್!...

ಕ್ರೆಡಿಟ್ ಸ್ಕೋರ್ ಯಾವ ಆಧಾರದಲ್ಲಿ ನಿರ್ಧಾರವಾಗುತ್ತದೆ? ಹೇಗೆ ಇದು ಜಾಸ್ತಿಯಾಗುತ್ತದೆ ಹಾಗೂ ಕಡಿಮೆಯಾಗುತ್ತದೆ? ಭಾರತದಲ್ಲಿ ಬಹಳಷ್ಟು ಜನರಿಗೆ ಸಾಲ ಸಿಗೋದೇ ಕಷ್ಟ. ಇದಕ್ಕೆ ಕಾರಣ ಒಂದೋ ಅವರಿಗೆ ಅಷ್ಟೊಂದು ಆದಾಯವಿರುವುದಿಲ್ಲ, ಅಥವಾ ಸಾಲವನ್ನು ಕಟ್ಟುವ ಕ್ಷಮತೆ ಇರುವುದಿಲ್ಲ. ಹೀಗಾಗಿ ಬ್ಯಾಂಕ್ ಸಾಲ ಸಿಗುವುದಿಲ್ಲ.

20 ದಿನದಲ್ಲಿ ದಾಖಲೆ ಬರೆದ ಹೊಚ್ಚ ಹೊಸ ಹ್ಯುಂಡೈ i20 ಕಾರು!...

ಹೊಸ ವಿನ್ಯಾಸ, ಹೊಸ ಶೈಲಿಯೊಂದಿಗೆ ಹ್ಯುಂಡೈ i20 ಕಾರು ಬಿಡುಗಡೆಯಾಗಿದೆ.  ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳ ಪೈಕಿ ಅತ್ಯಂತ ಆಕರ್ಷಕ ವಿನ್ಯಾಸ ಹಾಗೂ ಅಷ್ಟೇ ದಕ್ಷ ಎಂಜಿನ್ ಹಾಗೂ ಪವರ್ ಹೊಂದಿರುವ ಹ್ಯುಂಡೈ i20 ಇದೀಗ 20 ದಿನದಲ್ಲಿ ದಾಖಲೆ ಬರೆದಿದೆ. 

ಬೆಳಗಾವಿ ಲೋಕಸಭಾ ಬೈ ಎಲೆಕ್ಷನ್: ಕಾಂಗ್ರೆಸ್‌ನಿಂದ ತೇಲಿ ಬಂತು ಅಚ್ಚರಿ ಹೆಸರು...

ಬೆಳಗಾವಿ ಲೋಕಸಭಾ ಉಪಚುನಾವಣೆಗ ಇನ್ನೂ ದಿನಾಂಕ ಪ್ರಕಟವಾಗಿಲ್ಲ. ಆಗಲೇ ಕಾಂಗ್ರೆಸ್‌ನಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಶುರುವಾಗಿದೆ.

ಟಿಬೆಟ್‌ ಚೀನಾ ಸೇನೆ ಆಕ್ರಮಿತ ಪ್ರದೇಶ: ವರದಿಯಲ್ಲಿ ಡ್ರ್ಯಾಗನ್ ಕಿರುಕುಳದ ಬಗ್ಗೆ ಅನಾವರಣ!...

ತನ್ನ ಗಡಿಗೆ ಅಂಟಿಕೊಂಡಿರುವ ತೈವಾನ್‌, ಟಿಬೆಟ್‌ ಸೇರಿದಂತೆ ಸುತ್ತಮುತ್ತಲ ರಾಷ್ಟ್ರಗಳ ಭೂಭಾಗವನ್ನು ಚೀನಾ ಕಬಳಿಸುತ್ತಿದೆ ಎಂಬ ಆರೋಪಗಳ ಬೆನ್ನಲ್ಲೇ, ಇದೇ ಮೊಟ್ಟಮೊದಲ ಬಾರಿಗೆ ಟಿಬೆಟ್‌ ಭೂಭಾಗವು ಚೀನಾ ಸೇನೆಯ ಆಕ್ರಮಿತ ಪ್ರದೇಶವೆಂದು ಅಮೆರಿಕ ಪ್ರತಿಪಾದಿಸಿದೆ.

click me!