
ಹಾವೆಂದರೆ ಮನುಷ್ಯನಿಗೆ ಒಂದು ಬಗೆಯ ಆಸಕ್ತಿ. ಸದ್ಯ ಸೋಶಿಯಲ್ ಮೀಡಿಯಾದಲ್ಲೂ ಇಂತಹುದೇ ಒಂದು ಅನಕೊಂಡದ ವಿಡಿಯೋ ಭಾರೀ ವೈರಲ್ ಆಗಿದೆ. ಈ ವಿಡಿಯೋದಲ್ಲಿ ನೀರಿನೊಳಗಿಂದ ವೇಗವಾಗಿ ಹೊರ ಬರುವ ಅನಕೊಂಡ ದಡದಲ್ಲಿ ಬಲೆ ಬೀಸಿ ಇಟಟ್ಟಿದ್ದ ಡ್ರಮ್‌ನೊಳಗೆ ಸಿಕ್ಕಾಕೊಂಡು, ಹೊರ ಬರಲು ಶ್ರಮ ಪಡುತ್ತಿರುವ ದೃಶ್ಯಗಳಿವೆ.
ಇದರಲ್ಲಿ ಒಂದು ಕೆಸರಿನಿಂದ ತುಂಬಿದ ಕೆರೆ ಬಳಿ ಹರಡಿದ್ದ ಬಲೆಗೆ ವಿಶಾಲವಾದ ಹಾವು ಸಿಕ್ಕಾಕೊಂಡಿದೆ. ಈ ಹಾವು ಚಡಪಡಿಸಸುತ್ತಿದ್ದರೂ ಯಾರೊಬ್ಬರೂ ಸಹಾಯ ಮಾಡಲು ಆಗಮಿಸಿಲ್ಲ. ಈ ವಿಡಿಯೋ ನೋಡದವರು ಮಾತ್ರ ಬೆಚ್ಚಿ ಬಿದ್ದಿದ್ದಾರೆ. ಈ ಅನಕೊಂಡದ ಗಾತ್ರ ಐವತ್ತು ಅಡಿಗೂ ಅಧಿಕವಿದೆ ಎನ್ನಲಾಗಿದೆ. ಇನ್ನು ಈ ವಿಡಿಯೋ ಶೇರ್ ಮಾಡಿದವರು ಕೋಳಿಯನ್ನು ಹಿಡಿಯಲು ಹೋದವರ ಕೈಗೆ ಪೌಲ್ಟ್ರಿ ಫಾರ್ಮ್‌ಗೇ ಸಿಕ್ಕಾಕೊಂಡಿದೆ ಎಂದು ಬರೆಯಲಾಗಿದೆ.
ಇನ್ನು ಈ ವಿಡಿಯೋ ಎರಡು ವರ್ಷ ಹಳೆಯದಾಗಿದೆ. ಸದ್ಯ ಮತ್ತೆ ಇದು ವೈರಲ್ ಆಗುತ್ತಿದೆ. ಇನ್ನು ವಿಡಿಯೋದಲ್ಲಿ ಈಓ ಹಾವು ಅದೆಷ್ಟು ಭಯಾನಕವಾಗಿ ಕಾಣುತ್ತಿದೆಯೋ ವಾಸ್ತವವಾಗಿ ಅಷ್ಟು ದೊಡ್ಡದಿರಲಿಲ್ಲ. ಫ್ಯಾಕ್ಟ್ ಚೆಕ್ ನಡೆಸಿದಾಗ ಈ ವಿಡಿಯೋವನ್ನು ಎಡಿಟ್ ಮಾಡಲಾಗಿದೆ. ಈ ಮೂಲಕ ಪುಟ್ಟ ಹಾವನ್ನು ಇಷ್ಟು ದೊಡ್ಡದಿದೆ ಎಂಬಂತೆ ಬಿಂಬಿಸಲಾಗಿದೆ ಎಂಬ ವಿಚಾರ ಬಯಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ