ಸಿದ್ದು-ರವಿ ಟ್ವಿಟ್ ವಾರ್, ಕೈ ಪ್ರಣಾಳಿಕೆ ಕದ್ದೊಯ್ಯಲು ಮೋದಿಗೆ ಮನವಿ: ಅ.19ರ ಟಾಪ್ 10 ಸುದ್ದಿ!

By Web DeskFirst Published Oct 19, 2019, 5:20 PM IST
Highlights

ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಹತ್ತು ಹಲವು ಘಟನಾವಳಿಗಳು| ಸುದ್ದಿಯ ಸಾರವರಿತು ಸುದ್ದಿಯ ಸಾರವರಿತು ಸುದ್ದಿಯ ಸಾರವರಿತು ಸುದ್ದಿಯ ವಿಶ್ಲೇಷಿಸುವ ನಿಮ್ಮ ಸುವರ್ಣನ್ಯೂಸ್.ಕಾಂ| ದಿನದ ಟಾಪ್ 10 ಸುದ್ದಿಗಳು ನಿಮಗಾಗಿ| ಅ19ರಂದು ನಡೆದ ವಿವಿಧ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ|

ಬೆಂಗಳೂರು(ಅ.19):  ದಿನವೊಂದಕ್ಕೆ ದೇಶದಲ್ಲಿ ಅದೆಷ್ಟು ಘಟನೆಗಳು ಸಂಭವಿಸುತ್ತವೆ. ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಅಸಂಖ್ಯಾತ ಘಟನಾವಳಿಗಳು ಜರುತ್ತಲೇ ಇರುತ್ತವೆ. ಈ ಎಲ್ಲ ಸುದ್ದಿಗಳನ್ನು ಹೆಕ್ಕಿ ತೆಗೆಯುವ, ಸುದ್ದಿಯ ಆಳಕ್ಕಿಳಿದು ವಿಶ್ಲೇಷಿಸುವ ಪತ್ರಿಕಾಧರ್ಮವನ್ನು ನಿಮ್ಮ ಸುವರ್ಣನ್ಯೂಸ್.ಕಾಂ ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತದೆ.  ಅದರಂತೆ ಇಂದಿನ ಅಸಂಖ್ಯ ಘಟನಾವಳಿಗಳ ಸಮುದ್ರದಿಂದ ಟಾಪ್ 10 ಸುದ್ದಿ ಎಂಬ ಬೊಗಸೆಯಲ್ಲಿಡಿದು ಓದುಗರ ಮುಂದಿಟ್ಟಿದೆ. ಸುವರ್ಣನ್ಯೂಸ್.ಕಾಂ. ಓದಿರಿ, ಓದಿಸಿರಿ.

1. ವಿದೇಶದಲ್ಲಿ ಕುಡಿದು ಸತ್ತವರ ಸತ್ಯವೂ ತಿಳಿದಿದೆಯಲ್ವೇ?: ಸಿದ್ದುಗೆ ತಿವಿದ ರವಿ!

ವೀರ್‌ ಸಾವರ್ಕರ್‌ಗೆ ಭಾರತ ರತ್ನ ನೀಡುವ ಸಂಬಂಧ ಸಚಿವ ಸಿ. ಟಿ. ರವಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ಆರಂಭವಾದ ಟ್ವೀಟ್ ವಾರ್ ಜೋರಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಇಬ್ಬರು ನಾಯಕರ ಮಾತಿನ ಚಕಮಕಿ ಭಾರೀ ಸೌಂಡ್ ಮಾಡುತ್ತಿದೆ. ಹೌದು ಕಂಠಪೂರ್ತಿ ಕುಡಿದು ವಾಹನ ಚಲಾಯಿಸಿ ಅಮಾಯಕರನ್ನು ಕೊಂದವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕೆಂದು ತಿವಿದಿದ್ದ ಸಿದ್ದರಾಮಯ್ಯಗೆ ಸಚಿವ ಸಿ. ಟಿ. ರವಿ ತಿರುಗೇಟು ನೀಡಿದ್ದು, ವಿದೇಶದಲ್ಲಿ ಕುಡಿದು ಸತ್ತವರ ಕುರಿತ ಸತ್ಯವನ್ನು ಸಹ ನೀವು ತಿಳಿದು ಮಾತನಾಡುತ್ತೀರಿ ಎಂದು ತಿರುಗೇಟು ನೀಡಿದ್ದಾರೆ.

2. ಸಂಧಾನಕ್ಕೆ ನಾವು ಸಿದ್ಧವಿಲ್ಲ: ಸುನ್ನಿ ಮಂಡಳಿ ಪ್ರಸ್ತಾವಕ್ಕೆ ಉಳಿದ ಮುಸ್ಲಿಂ ಪಕ್ಷಗಳ ತಿರಸ್ಕಾರ!

ಅಯೋಧ್ಯೆ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂವಿವಾದದ ಪ್ರಮುಖ ಪಕ್ಷಗಾರನಾದ ಸುನ್ನಿ ವಕ್ಫ್ ಮಂಡಳಿಯು ಷರತ್ತಿನ ಸಂಧಾನಕ್ಕೆ ಮುಂದಾಗಿದೆ ಎಂಬ ವರದಿಗಳ ಬಗ್ಗೆ, ಪ್ರಕರಣದ ಇತರ ಮುಸ್ಲಿಂ ಪಕ್ಷಗಾರರು ಆಘಾತ ವ್ಯಕ್ತಪಡಿಸಿದ್ದಾರೆ. ಸುನ್ನಿ ವಕ್ಫ್ ಮಂಡಳಿಯು ತಾನು ಸಂಧಾನಕ್ಕೆ ಸಿದ್ಧ ಎಂದು ಹಾಗೂ ಕೇಸು ವಾಪಸು ಪಡೆಯಲು ತಯಾರಿದ್ದೇನೆ ಎಂದು ಸುಪ್ರೀಂಕೋರ್ಟ್‌ನಿಂದ ನೇಮಕಗೊಂಡಿದ್ದ ನ್ಯಾ ಎಫ್‌.ಎಂ. ಖಲೀಫುಲ್ಲಾ ಹಾಗೂ ಶ್ರೀ ಶ್ರೀ ರವಿಶಂಕರ ಗುರೂಜಿ ನೇತೃತ್ವದ ಸಂಧಾನ ಸಮಿತಿ ಮುಂದೆ ಹೇಳಿತ್ತು ಎನ್ನಲಾಗಿದೆ. ಈ ಬಗ್ಗೆ ಸಂಧಾನ ಸಮಿತಿಯು ಕೋರ್ಟ್‌ಗೆ ಮಾಹಿತಿ ನೀಡಿದೆ ಎಂದು ವರದಿಯಾಗಿತ್ತು.

3. ರಾಂಚಿ ಟೆಸ್ಟ್: ಸಿಕ್ಸರ್’ನಲ್ಲಿ ವಿಶ್ವದಾಖಲೆ ಬರೆದ ರೋಹಿತ್ ಶರ್ಮಾ

ರೋಹಿತ್ ಶರ್ಮಾ ಸಿಕ್ಸರ್ ಬಾರಿಸುವುದು ಹೊಸದೇನಲ್ಲ. ಆದರೆ ಟೆಸ್ಟ್ ಕ್ರಿಕೆಟ್’ನಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಬಳಿಕ ರೆಡ್ ಬಾಲ್ ಕ್ರಿಕೆಟ್’ನಲ್ಲೂ ಹಿಟ್ ಮ್ಯಾನ್ ಅಬ್ಬರಿಸಲು ಆರಂಭಿಸಿದ್ದಾರೆ. ಮೊದಲ ಪಂದ್ಯದಲ್ಲೇ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ್ದ ರೋಹಿತ್ ಮೂರನೇ ಟೆಸ್ಟ್ ವೇಳೆಗೆ ಸಿಕ್ಸರ್’ನಲ್ಲಿ ವಿಶ್ವದಾಖಲೆಯನ್ನೇ ಬರೆದಿದ್ದಾರೆ. ಅಷ್ಟಕ್ಕೂ ರೋಹಿತ್ ಖಾತೆ ಸೇರಿದ ಆ ವಿಶ್ವದಾಖಲೆ ಯಾವುದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

4. 'ಸಿದ್ದರಾಮಯ್ಯ ಕಾಂಗ್ರೆಸ್‌ನಿಂದ ಹೊರಗೆ ಬಂದರೂ ಆಶ್ಚರ್ಯ ಇಲ್ಲ'

ಸಿದ್ದರಾಮಯ್ಯ ಕಾಂಗ್ರೆಸ್‌ನಿಂದ ಹೊರಗೆ ಬಂದರೂ ಆಶ್ಚರ್ಯ ಇಲ್ಲ. ಕಾದು ನೋಡಿ ಎಂದು ಸಿಎಂ ಯಡಿಯೂರಪ್ಪ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೊಸ ಬಾಂಬ್ ಸಿಡಿಸಿದ್ದಾರೆ. ಇಂದು (ಶನಿವಾರ) ಹೊನ್ನಾಳಿ ತಾಲ್ಲೂಕಿನ ಹಿರೇಗೋಣಿಗೆರೆ ಗ್ರಾಮದಲ್ಲಿ ಮಾತನಾಡಿರುವ ರೇಣುಕಾಚಾರ್ಯ, ಸಿದ್ದರಾಮಯ್ಯ  ಕಾಡಿ ಬೇಡಿ ವಿರೋಧ ಪಕ್ಷ ಸ್ಥಾನ ಪಡೆದವರು. ಬಿಜೆಪಿ ರಾಜ್ಯಾಧ್ಯಕ್ಷರ ಬಗ್ಗೆ ಗೋಲಿ ಆಡುವವರು ಅಂತ ಹೇಳಿಕೆ ಸರಿಯಲ್ಲ. ಸಿದ್ದರಾಮಯ್ಯ ಕಾಂಗ್ರೆಸ್ ತೊರೆದರೂ ತೊರೆಯಬಹುದು ಎಂದು ಹೇಳಿದರು.

5 .'ಸಾವರ್ಕರ್‌ಗೆ ಆಮೇಲೆ ಕೊಡುವಿರಂತೆ, ಮೊದಲು ಸಿದ್ದಗಂಗಾ ಶ್ರೀಗೆ ಭಾರತರತ್ನ ನೀಡಿ'

ಸಾವರ್ಕರ್‌ಗೆ ಭಾರತರತ್ನ ನೀಡುವ ಬಗ್ಗೆ ದೇಶಾದ್ಯಂತ ಪರ-ವಿರೋಧದ ಚರ್ಚೆಯಾಗುತ್ತಿರುವಾಗಲೇ ಸಿದ್ದಗಂಗಾ ಮಠದ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಗಳಿಗೆ ಮೊದಲು ಭಾರತರತ್ನ ನೀಡಿ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯ ಮಾಡಿದ್ದಾರೆ.

6. ಗುಪ್ತ್ ಗುಪ್ತಾಗಿ ನಡೆಯುತ್ತೆ ಮಂಗಳಮುಖಿಯರ ಶವಸಂಸ್ಕಾರ!

ಮಂಗಳಮುಖಿಯರು ಸತ್ತರೆ ಅದು ಸುದ್ದಿಯಾಗುವುದಿಲ್ಲ. ಬದಲಾಗಿ ಗುಟ್ಟಾಗಿ ಒಂದು ಸಮುದಾಯದೊಳಗಿನವರಿಗೆ ಮಾತ್ರ ವಿಷಯ ತಿಳಿಯುತ್ತದೆ. ಯಾರೊಬ್ಬರೂ ಅಳುವುದಿಲ್ಲ, ಬದಲಿಗೆ ಶವಕ್ಕೆ ಚಪ್ಪಲಿಯೇಟು ಕೊಡುತ್ತಾರೆ. ಅರ್ಧರಾತ್ರಿಯಲ್ಲಿ ಯಾರಿಗೂ ತಿಳಿಯದಂತೆ ಶವವನ್ನು ಮಣ್ಣು ಮಾಡಿ ಬರುತ್ತಾರೆ. ಇದಕ್ಕೆಲ್ಲ ಕಾರಣವೇನು ಗೊತ್ತಾ?.

7. ಪ್ರಚಾರ ಸಭೆಯಲ್ಲಿ ಅಸದುದ್ದೀನ್ ಒವೈಸಿ ಡ್ಯಾನ್ಸ್: ಟ್ವಿಟ್ಟರ್ ಗಾನ್ ಮ್ಯಾಡ್!

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಚುನಾವಣಾ ಪ್ರಚಾರ ನಡೆಸಿದ ಅಸದುದ್ದೀನ್ ಒವೈಸಿ, ಪ್ರಚಾರ ಭಾಷಣ ಮುಗಿಸಿ ವೇದಿಕೆಯಿಂದ ಕೆಳಗಿಳಿಯುತ್ತಿದ್ದಾಗ ಜಬರ್'ದಸ್ತ್ ಡ್ಯಾನ್ಸ್ ಮಾಡಿದ್ದಾರೆ. 2018ರಲ್ಲಿ ರಿಲೀಸ್ ಆದ ಮಿಯಾ ಭಾಯಿ ಹೈದರಾಬಾದಿ ಎಂಬ ಹಾಡಿಗೆ ಯುವಕರ ಗುಂಪೊಂದು ಡ್ಯಾನ್ಸ್ ಮಾಡುತ್ತಿತ್ತು. ಈ ವೇಳೆ ವೇದಿಕೆ ಇಳಿಯುತ್ತಿದ್ದ ಓವೈಸಿ, ತಮ್ಮ ಹಾರವನ್ನು ಗಾಳಿಯಲ್ಲಿ ಹಾರಾಡಿಸುತ್ತಾ ತಾವೂ ಕೂಡ ಡ್ಯಾನ್ಸ್ ಮಾಡಿದರು.

8. ಕಾಂಗ್ರೆಸ್ ಪ್ರಣಾಳಿಕೆ ಕದ್ದೊಯ್ಯಿರಿ: ಪ್ರಧಾನಿ ಮೋದಿಗೆ ರಾಹುಲ್ ಆಮಂತ್ರಣ!

ಆರ್ಥಿಕ ಕುಸಿತಕ್ಕೆ ಪರಿಹಾರ ಹುಡುಕುತ್ತಿರುವ ಪ್ರಧಾನಿ ಮೋದಿ, ಕಾಂಗ್ರೆಸ್ ಪ್ರಣಾಳಿಕೆ ಕದ್ದೊಯ್ದರೆ ಒಳ್ಳೆಯದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ. ಆರ್ಥಿಕ ಸ್ಥಿತಿಯನ್ನು ಮತ್ತೆ ಹಳಿ ಮೇಲೆ ತರಲು ಅವಶ್ಯವಾಗಿರುವ ಪರಿಹಾರ ಕಾರ್ಯಗಳು ಕಾಂಗ್ರೆಸ್ ಪ್ರಣಾಳಿಕೆಯಲ್ಲಿದ್ದು, ಅದನ್ನು ಪ್ರಧಾನಿ ಮೋದಿ ಕದ್ದೊಯ್ದು ಓದಿಕೊಳ್ಳಲಿ ಎಂದು ರಾಹುಲ್ ಕಿಚಾಯಿಸಿದ್ದಾರೆ.

9. BB7:ಮಧ್ಯರಾತ್ರಿ ಮನೆಯಿಂದ ಹೊರಟು ಇದ್ದದ್ದನ್ನೆಲ್ಲಾ ಮಾರಿಕೊಂಡ 'ದುನಿಯಾ' ನಟಿ!

ಇದೇನಪ್ಪಾ ದುನಿಯಾ ರಶ್ಮಿ ಇಷ್ಟೊಂದು ಸಣ್ಣ ಆಗಿದ್ದಾರೆ? ಸಿನಿಮಾದಲ್ಲಂತೂ ಕಾಣಿಸಿಕೊಂಡಿಲ್ಲ. ಆದರೆ ನಿಜ ಜೀವನದಲ್ಲಿ ಏನಾದ್ರೂ ಆಯ್ತಾ? ರಶ್ಮಿ ಫ್ಯಾಮಿಲಿಯಲ್ಲಿ ಆದ ಪ್ರಾಬ್ಲಂನಿಂದ ಯೋಚಿಸಿ ಯೋಚಿಸಿ ಸೊರಗಿ ಹೋಗಿದ್ದಾರಾ? ಎಮಬ ಅನುಮಾನ ಮೂಡಿದೆ.

10. ಉಗುರು ಕತ್ತರಿಸುತ್ತಿದ್ದ ಒಡತಿ, ನಾಯಿಯ ಒಂದೇ ಆ್ಯಕ್ಷನ್‌ಗೆ ವಿಡಿಯೋ ವೈರಲ್!

ಉಗುರು ಕತ್ತರಿಸುವುದೆಂದರೆ ನಾಯಿಗಳಿಗೆ ಇಷ್ಟವಾಗುವುದಿಲ್ಲ. ಹೀಗಂತ ಹೇಳಿದ್ದು ಟಿಕ್ ಟಾಕ್‌ ವಿಡಿಯೋ ಮೂಲಕ ಎಲ್ಲರ ಮನಕದ್ದ ನಾಯಿ. ವಿಡಿಯೋದಲ್ಲಿ ಒಡತಿ ಉಗುರು ಕತ್ತರಿಸುತ್ತಾಳೆನ್ನುವಷ್ಟರದಲ್ಲಿ ಮುದ್ದಾದ ನಾಯಿ ಮಾಡಿದ ಆ್ಯಕ್ಷನ್ಎಲ್ಲರಿಗೂ ಬಹಳ ಇಷ್ಟವಾಗಿದೆ.

click me!