ನ್ಯಾಯಾಧೀಶರ ವಿರುದ್ಧದ ಲಂಚದ ಪ್ರಕರಣ: ಅರ್ಜಿ ತಿರಸ್ಕರಿಸಿದ ಸುಪ್ರೀಂ

By Suvarna Web DeskFirst Published Nov 14, 2017, 4:50 PM IST
Highlights

ಹಿರಿಯವಕೀಲರುಎಫ್'ಐಆರ್'ಗೆಸಂಬಂಧಿಸಿದಂತೆಮೂಲಭೂತಅಂಶವನ್ನುಪರಿಶೀಲಿಸದೆಬೇಜವಾಬ್ದಾರಿಯುತ ಆರೋಪಗಳನ್ನು ಮಾಡಿದ್ದಾರೆ. ರೀತಿಯಆರೋಪಗಳುನ್ಯಾಯಾಂಗದವ್ಯವಸ್ಥೆಗೆಪೆಟ್ಟುಬೀಳುವುದಲ್ಲದೆದೇಶದಸಮಗ್ರತೆಯಮೇಲೆಅನಾವಶ್ಯಕವಾಗಿಅನುಮಾನಗಳನ್ನುಮೂಡಿಸುತ್ತವೆ.

ನವದೆಹಲಿ(.14): ನ್ಯಾಯಾಧೀಶರ ವಿರುದ್ಧವಿರುವ ಲಂಚದ ಆರೋಪದ ತನಿಖೆಯನ್ನು ಎಸ್ಐಟಿ'ಗೆ ವಹಿಸಬೇಕೆಂಬ ಹಿರಿಯ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರಿಂಕೋರ್ಟ್ ತಿರಸ್ಕರಿಸಿದೆ. ಅರ್ಜಿಯನ್ನು ತಿರಸ್ಕರಿಸಿದ ಕೋರ್ಟ್ ಇದೊಂದು ಬೇಜವಾಬ್ದಾರಿಯುತ ಪ್ರಕರಣವಾಗಿದ್ದು ಕಾನೂನಿಗಿಂತ ಯಾರು ಮಿಗಿಲಲ್ಲ' ಎಂದು ತಿಳಿಸಿದೆ.            

ಸೆಪ್ಟೆಂಬರ್ 19ರಂದು ಸಿಬಿಐ ಮಾಜಿ ಒಡಿಸಾ ಹೈಕೋರ್ಟ್ ನ್ಯಾಯಾಧೀಶರು ಒಳಗೊಂಡಂತೆ ಹಲವು ಮಂದಿ ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಎಫ್'ಐಆರ್ ಸಲ್ಲಿಸಿತ್ತು. ವೈದ್ಯಕೀಯ ಕಾಲೇಜಿಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ನ್ಯಾಯಾಧೀಶರು ಸೇರಿದಂತೆ ಹಲವರು ಲಾಭವನ್ನು ಪಡೆದು ತೀರ್ಪು ಪ್ರಕಟಿಸಿದರೆಂಬ ಆರೋಪಿಸಲಾಗಿದೆ.

ಈ ರೀತಿಯ ಆರೋಪದಿಂದ ನ್ಯಾಯಾಂಗಕ್ಕೆ ಪೆಟ್ಟು

ಆರ್.ಕೆ.ಅಗರ್'ವಾಲ್, ಅರುಣ್ ಮಿಶ್ರಾ ಹಾಗೂ ಎ.ಎಂ.ಖಾನ್ವಿಲ್ಕರ್ ಅವರನು  ಒಳಗೊಂಡ ನ್ಯಾಯಪೀಠ, ಲಂಚ ನೀಡಿಕೆಯಿಂದ ತಮ್ಮತ್ತ ಸೆಳೆದುಕೊಳ್ಳಲು ಮಾಡಿದ ಪ್ರಯತ್ನಗಳು ಫೋರಮ್ ಶಾಪಿಂಗ್ ಎನಿಸುವುದಿಲ್ಲ ಎಂದು ಹೇಳಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಳ್ಳಿ ಹಾಕಿದೆ.

ಹಿರಿಯ ವಕೀಲರು ಎಫ್'ಐಆರ್'ಗೆ ಸಂಬಂಧಿಸಿದಂತೆ  ಮೂಲಭೂತ ಅಂಶವನ್ನು ಪರಿಶೀಲಿಸದೆ ಬೇಜವಾಬ್ದಾರಿಯುತ ಆರೋಪಗಳನ್ನು ಮಾಡಿದ್ದಾರೆ. ಈ ರೀತಿಯ ಆರೋಪಗಳು ನ್ಯಾಯಾಂಗದ ವ್ಯವಸ್ಥೆಗೆ ಪೆಟ್ಟು ಬೀಳುವುದಲ್ಲದೆ  ದೇಶದ ಸಮಗ್ರತೆಯ ಮೇಲೆ ಅನಾವಶ್ಯಕವಾಗಿ ಅನುಮಾನಗಳನ್ನು ಮೂಡಿಸುತ್ತವೆ. ಸಿಬಿಐ ಸಲ್ಲಿಸಿರುವ ಎಫ್'ಐಆರ್ ಯಾವುದೇ ನ್ಯಾಯಾಧೀಶರ ವಿರುದ್ಧವಾಗಿಲ್ಲ ಅಲ್ಲದೆ ಒಬ್ಬರ ವಿರುದ್ಧದ ಆರೋಪಕ್ಕೆ ಎಲ್ಲರ ಮೇಲೆ ಗೂಬೆ ಕೂರಿಸಲು ಸಾಧ್ಯವಿಲ್ಲ ಎಂದು ಸುಪ್ರಿಂ ಕೋರ್ಟ್ ತಿಳಿಸಿದೆ.

ಮೆಡಿಕಲ್ ಕಾಲೇಜು ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಡಿಶಾ ಹೈಕೋರ್ಟ್'ನ ನಿವೃತ್ತ ನ್ಯಾಯಾಧೀಶ ಇಶ್ರತ್ ಮಸ್ರೂರ್ ಖುದ್ದುಸಿ ವಿರುದ್ಧವೇ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಬೇಕೆಂದು ಜೈಸ್ವಾಲ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

click me!