ಸಂಜನಾ, ರಾಗಿಣಿಗಿಲ್ಲ ಜಾಮೀನು, ರಾರಾ-ಶಿರಾದಲ್ಲಿ ಯಾರಿಗೆ ಜಾಮೂನು? ನ.3ರ ಟಾಪ್ 10 ಸುದ್ದಿ!

Published : Nov 03, 2020, 04:56 PM ISTUpdated : Nov 03, 2020, 04:59 PM IST
ಸಂಜನಾ, ರಾಗಿಣಿಗಿಲ್ಲ ಜಾಮೀನು, ರಾರಾ-ಶಿರಾದಲ್ಲಿ ಯಾರಿಗೆ ಜಾಮೂನು? ನ.3ರ ಟಾಪ್ 10 ಸುದ್ದಿ!

ಸಾರಾಂಶ

ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣದಲ್ಲಿ ನಟಿಮಣಿಯರಾದ ಸಂಜನಾ, ರಾಗಿಣಿಗೆ ಜಾಮೀನು ಸಿಕ್ಕಿಲ್ಲ. ಹೈಕೋರ್ಟ್‌ ಅರ್ಜಿ ವಜಾಗೊಳಿಸಿದೆ. ಇತ್ತ ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪಚುನಾವಣೆ ನಡೆದಿದ್ದು, ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಅತ್ತ ಅಮೆರಿಕಾ ಚುನಾವಣ ಕಣ ರಂಗೇರಿದೆ. ಬೆಂಗಳೂರು ಖ್ಯಾತ ರೌಡಿ ಬಯೋಪಿಕ್‌ನಲ್ಲಿ ಯಶ್ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋ ಮಾತು ಕೇಳಿ ಬಂದಿದೆ. ಕೋವಿಡ್ ಮುಚ್ಚಿಟ್ಟ ರಾಜಮನೆತನ, ಕುತೂಹಲ ಮೂಡಿಸಿದೆ ಐಪಿಎಲ್ ಪ್ಲೇ ಆಫ್ ಹೋರಾಟ ಸೇರಿದಂತೆ ನವೆಂಬರ್ 3ರ ಟಾಪ್ 10 ಸುದ್ದಿ.

ರಾಜಕುಮಾರ ವಿಲಿಯಂ ಕೋವಿಡ್‌ ಸುದ್ದಿ ರಹಸ್ಯ ಇಟ್ಟಿದ್ದ ರಾಜಮನೆತನ!...

ಬ್ರಿಟನ್‌ ರಾಜಕುಮಾರ ವಿಲಿಯಂಗೆ ಏಪ್ರಿಲ್‌ನಲ್ಲೇ ಸೋಂಕು ತಗುಲಿದ್ದರೂ, ಆ ಸುದ್ದಿಯನ್ನು ರಹಸ್ಯವಾಗಿಡಲಾಗಿತ್ತು ಎಂದು ಲಂಡನ್‌ ಮಾಧ್ಯಮಗಳು ವರದಿ ಮಾಡಿದೆ.

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ: ಇಲ್ಲಿದೆ ತಿಳಿದುಕೊಳ್ಳಲೇಬೇಕಾದ ವಿಚಾರಗಳು!...

ಕೊರೋನಾ ಮಹಾಮಾರಿ ನಡುವೆ ಇಂದು ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಅಮೆರಿಕದ ಈ ಚುನಾವಣೆ ಮೇಲೆ ಇಡೀ ವಿಶ್ವದ ಗಮನವಿದೆ. ಅಮೆರಿಕದ ಈ ಚುನಾವಣೆ ಈ ಬಾರಿ ಅಲ್ಲಿನ ಇತಿಹಾಸದ ಬಹುದೊಡ್ಡ ಚುನಾವಣೆಯಾಗಲಿದೆ. ಈ ಚುನಾವಣೆಯಲ್ಲಿ ಕಳೆದ ಅಧ್ಯಕ್ಷೀಯ ಚುನಾವಣೆಗೆ ಹೋಲಿಸಿದರೆ ಎರಡು ಪಟ್ಟು ಹಣ ಖರ್ಚು ಮಾಡಿದ್ದಾರೆಂದು ಅಂದಾಜಿಸಲಾಗಿದೆ. ಈ ಬಾರಿ ಸುಮಾರು  14 ಮಿಲಿಯನ್ ಡಾಲರ್ ವ್ಯಯಿಸಿದ್ದಾರೆಂದು ಅಂದಾಜಿಸಲಾಗಿದೆ. 

ನ್ಯೂಜಿಲೆಂಡ್ ಸಚಿವೆಯಾದ ಮೊದಲ ಭಾರತೀಯ ಮಹಿಳೆ ಪ್ರಿಯಾಂಕ..!...

ನ್ಯೂಜಿಲ್ಯಾಂಡ್ ಸಚಿವೆಯಾದ ಮೊದಲ ಭಾರತೀಯ ಸಂಜಾತೆಗೆ ಇದೀಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ರಾರಾ, ಶಿರಾದಲ್ಲಿ ಹೈವೋಲ್ಟೇಜ್‌ ಉಪಕದನ: 31 ಅಭ್ಯರ್ಥಿಗಳ ಭವಿಷ್ಯ ತೀರ್ಮಾನ!...

ಆಡಳಿತ ಮತ್ತು ಪ್ರತಿಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿರುವ ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮಂಗಳವಾರ ಮತದಾನ ನಡೆದಿದೆ. ಒಟ್ಟು 31 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

RCB ವರ್ಸಸ್ ಡೆಲ್ಲಿ ಮ್ಯಾಚ್‌ ಬಳಿಕ ಸಿಕ್ಕಾಪಟ್ಟೆ ಟ್ರೆಂಡ್‌ ಆದ ಮೀಮ್ಸ್‌ಗಳಿವು..!...

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲನ್ನನುಭವಿಸಿದರೂ ಪ್ಲೇ ಆಫ್‌ ಸ್ಥಾನ ಖಚಿತಪಡಿಸಿಕೊಂಡಿದೆ. ಇದರ ಬೆನ್ನಲ್ಲೇ ಆರ್‌ಸಿಬಿ ಹಾಗೂ ಡೆಲ್ಲಿ ಪಂದ್ಯ ನೋಡಿದ ನೆಟ್ಟಿಗರು ಸಾಮಾಜಿಕ ಜಾಲತಾಣಗಲ್ಲಿ ಮೀಮ್ಸ್ ಹೊಳೆಯನ್ನೇ ಹರಿಸಿದ್ದಾರೆ

ಬೆಂಗಳೂರು ಖ್ಯಾತ ರೌಡಿ ಬಯೋಪಿಕ್‌ನಲ್ಲಿ ಯಶ್...?

ಕೆಜಿಎಫ್‌ 2 ರಿಲೀಸ್‌ಗಾಗಿ ಕಾಯುತ್ತಿರುವ ಅಭಿಮಾನಿಗಳು ಗಾಂಧಿ ನಗರದಲ್ಲಿ ಕೇಳಿ ಬರುತ್ತಿರುವ ಮತ್ತೊಂದು ಸುದ್ದಿ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. ಅದುವೇ ನಟ ಯಶ್‌ ಮತ್ತೊಂದು ಪ್ಯಾನ್‌ ಇಂಡಿಯಾ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುವುದು. ಅದೂ ಬೆಂಗಳೂರಿನ ಖ್ಯಾತ ರೌಡಿ ಬಯೋಪಿಕ್‌ ಅಂತೆ. ಇದ್ಯಾವ ಸಿನಿಮಾ, ಆ ರೌಡಿ ಯಾರು?

ವಿದ್ಯಾರ್ಥಿಗಳಿಗಾಗಿ ಕನ್ನಡ ಸೇರಿದಂತೆ 8 ಭಾಷೆಗಳಲ್ಲಿ HP ಪ್ರಿಂಟ್ ಲರ್ನ್ ಸೆಂಟರ್ ಆರಂಭ!...

ಭಾರತಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ HP ಇಂಡಿಯಾ ಪ್ರಿಂಟ್ ಲರ್ನ್ ಸೆಂಟರ್ ಆರಂಭಿಸಿದೆ. ಈ ಪ್ರಿಂಟ್ ಲರ್ನ್ ಸೆಂಟರ್ 3 ರಿಂದ 12 ವರ್ಷದೊಳಗಿನ ಮಕ್ಕಳಿಗೆ ಪ್ರಿಂಟಿಂಗ್ ಅನುಭವವನ್ನು ನೀಡುವ ಉದ್ದೇಶದೊಂದಿಗೆ ಮಕ್ಕಳ ಶಿಕ್ಷಣ ತಜ್ಞರು ವೈಜ್ಞಾನಿಕವಾಗಿ ವಿನ್ಯಾಸಗೊಳಿಸಿರುವ ಮುದ್ರಿಸಬಹುದಾದ ಕಲಿಕಾ ಮಾಡ್ಯೂಲ್ ಗಳನ್ನು ಹೊಂದಿದೆ. 

ಮೇಡ್ ಇನ್ ಇಂಡಿಯಾ ಮರ್ಸಿಡೀಸ್ ಬೆಂಝ್ AMG GLC 43 4MATIC ಕೂಪ್ ಬಿಡುಗಡೆ!...

ಪ್ರಧಾನಿ ನರೇಂದ್ರ ಮೋದಿಯ ಆತ್ಮನಿರ್ಭರ್ ಭಾರತ್ ಪರಿಕಲ್ಪನೆಯಿಂದ ಇದೀಗ ಬಹುತೇಕ ಕಂಪನಿಗಳು ಭಾರತದಲ್ಲಿ ಉತ್ಪಾದನೆ ಆರಂಭಿಸಿದೆ. ಇದೀಗ ವಿಶ್ವದ ಐಷಾರಾಮಿ ಹಾಗೂ ದುಬಾರಿ ಕಾರು ತಯಾರಕ ಮರ್ಸಿಡೀಸ್ ಬೆಂಝ್ ಕಂಪನಿ, ಭಾರತದಲ್ಲಿ ನಿರ್ಮಿಸಿದ ಮರ್ಸಿಡೀಸ್ ಬೆಂಝ್ AMG GLC 43 4MATIC ಬಿಡುಗಡೆ ಮಾಡಿದೆ.

ರಿಯಾಗೆ ಸಿಕ್ಕ ಜಾಮೀನು ಸಂಜನಾ, ರಾಗಿಣಿಗಿಲ್ಲ,  ಹೈಕೋರ್ಟ್‌ನಲ್ಲೂ ಅರ್ಜಿ ವಜಾ...

ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣದಲ್ಲಿ ನಟಿಮಣಿಯರಿಗೆ  ಜಾಮೀನು ಸಿಕ್ಕಿಲ್ಲ, ರಾಗಿಣಿ, ಸಂಜನಾ ಮತ್ತು ಉಳಿದ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.

ಅಮೆರಿಕದಲ್ಲಿ 150 ವರ್ಷದಿಂದ ಮಂಗಳವಾರವೇ ಯಾಕೆ ನಡೆಯುತ್ತೆ ಚುನಾವಣೆ?...

ಅಮೆರಿಕದ ಅಧ್ಯಕ್ಷೀಯ ಚುನಾವಣೆ ವಿಚಾರದಲ್ಲಿ ಬಹಳ ವಿಶೇಷ ದಿನವಾಗಿದೆ. ಇದೇ ದಿನ ಅಧ್ಯಕ್ಷರ ಆಯ್ಕೆಗೆ ಮತದಾನ ನಡೆಯುತ್ತದೆ. ರಿಪಬ್ಲಿಕನ್ ಪಕ್ಷದ ಪರವಾಗಿ ಡೊನಾಲ್ಡ್ ಟ್ರಂಪ್ ಹಾಗೂ ಡೆಮಾಕ್ರಟಿಕ್ ಪಾರ್ಟಿ ಪರವಾಗಿ ಎರಡು ಬಾರಿ ಅಮೆರಿಕದ ಉಪ ಅಧ್ಯಕ್ಷರಾಗಿ ಆಯ್ಕೆಯಾದ ಬೈಡೆನ್ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು