ಆಧುನಿಕ ಭಾರತದ ವಾಸ್ತುಶಿಲ್ಪಿ; ದಾದಾಭಾಯಿ ನರೋಜಿ ಬಗ್ಗೆ ಮತ್ತಷ್ಟು!

By Web DeskFirst Published Sep 4, 2019, 8:13 PM IST
Highlights

ಭಾರತೀಯ ರಾಷ್ಟ್ರೀಯತೆಯ  ವಾಸ್ತುಶಿಲ್ಪಿ ಎಂದೇ ಹೆಸರಾಗಿರುವ ದಾದಾಭಾಯಿ ನರೋಜಿಯ ಜನ್ಮದಿನದಂದು ಸ್ವರಾಜ್ ಕಲ್ಪನೆ ಮೂಡಿಸಿದ ಧೀಮಂತ ನಾಯಕನ ಕುರಿತು ಒಂದಷ್ಟು ಮಾಹಿತಿಗಳು ಇಲ್ಲಿವೆ. 

ಬೆಂಗಳೂರು(ಸೆ.04):  ಬುದ್ಧಿಜೀವಿ, ಶಿಕ್ಷಣ ತಜ್ಞ, ಉದ್ಯಮಿ ಎಲ್ಲವುಕ್ಕಿಂತ ಮುಖ್ಯವಾಗಿ ಭಾರತೀಯ ರಾಷ್ಟ್ರೀಯತೆಯ ವಾಸ್ತುಶಿಲ್ಪಿ ದಾದಾಭಾಯಿ ನಾರೋಜಿ ಅವರ ಜನ್ಮದಿನವಿಂದು. ಭಾರತ ಹುಟ್ಟಿನ ಆರಂಭದ ಶಿಲ್ಪಿಯಾಗಿ ಹಾಗೂ ಸಾಮಾಜಿಕ ನಾಯಕರಾಗಿ ಹೆಸರಾದ ಇವರು ಹುಟ್ಟಿದ್ದು 1825ರಲ್ಲಿ.

"

1.1845 ರಲ್ಲಿ, ಅವರು ಪದವಿ ಪಡೆದರು. ನಂತರ ಸಂಸ್ಥೆಯೊಂದರ ಪಾಲುದಾರರಾಗಿ ಲಂಡನ್‌ಗೆ ಹೋದರು. ದಾದಾಭಾಯ್ ನೌರೋಜಿ 1850ರಲ್ಲಿ ಬಾಂಬೆಯ ಎಲ್ಫಿನ್‌ಸ್ಟೋನ್ ಸಂಸ್ಥೆಯಲ್ಲಿ ನೈಸರ್ಗಿಕ ತತ್ವಶಾಸ್ತ್ರ ಮತ್ತು ಗಣಿತಶಾಸ್ತ್ರದ ಪ್ರಮುಖ ಪ್ರಾಧ್ಯಾಪಕರಾಗಿ ಕೆಲಸ ಆರಂಭಿಸಿದರು.

2. ಭಾರತದ ಅಗತ್ಯ ಹಾಗೂ ಅವಶ್ಯಕತೆಗಳ ಬಗ್ಗೆ ಬ್ರಿಟನ್‌ಗೆ ಅರಿವು ಮೂಡಿಸಲು 1860ರ ದಶಕದ ಉತ್ತರಾರ್ಧದಲ್ಲಿ ಈಸ್ಟ್ ಇಂಡಿಯಾ ಅಸೋಸಿಯೇಷನ್ ಸ್ಥಾಪಿಸಿದರು. ಸಂಘಕ್ಕೆ ಅಗತ್ಯವಾದ ಧನ ಸಹಾಯ ಯಾಚಿಸಿ, ಆಗಿನ ರಾಜಕುಮಾರನನ್ನು ಮನವೊಲಿಸುವಲ್ಲಿ ಯಶಸ್ವಿಯಾದರು. ಭಾರತೀಯ ನಾಗರಿಕ ಸೇವೆಗೆ ಭಾರತೀಯರು  ಪ್ರವೇಶಿಸಲು ಅವಕಾಶ ನೀಡುವ ಅಭಿಯಾನಕ್ಕೆ ಈ ಸಂಘ  ಒಂದು ವೇದಿಕೆ ಕಲ್ಪಿಸಿತು.

3. 1892 ರಿಂದ 1895 ರವರೆಗೆ ಯುನೈಟೆಡ್ ಕಿಂಗ್‌ಡಂನ ಹೌಸ್ ಆಫ್ ಕಾಮನ್ಸ್‌ನಲ್ಲಿ ಬ್ರಿಟಿಷ್ ಸಂಸತ್ ಸದಸ್ಯ (ಸಂಸದ) ಆದ ಮೊದಲ ಏಷ್ಯನ್ ಇವರು.

4. ‘ಡ್ರೈನ್ ಥಿಯರಿ’ ಕಲ್ಪನೆಯನ್ನೂ ವಿವರಿಸಿದವರು ನಾರೋಜಿ. ಭಾರತದ ಸಂಪತ್ತು ಹಾಗೂ ಮಾನವ ಸಂಪನ್ಮೂಲವನ್ನು ಬ್ರಿಟಿಷರು ಹಾಗೆ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ವಿವರಿಸಿದವರಲ್ಲಿ ಅವರೇ ಮೊದಲಿಗರು.  ಅಂಕಿ ಅಂಶಗಳೊಂದಿಗೆ ವಿವರಿಸಿದ 'ಭಾರತದಲ್ಲಿ ಬಡತನ ಮತ್ತು ಅನ್ ಬ್ರಿಟಿಷ್ ರೂಲ್' ಎಂಬ ನಾರೋಜಿ ಪುಸ್ತಕವನ್ನು ವಸಾಹತು ಶಾಹಿ ಭಾರತದ ಮೊದಲ ಆರ್ಥಿಕ ಪುಸ್ತಕವೆಂದು  ಪ್ರಾಜ್ಞರು ಪರಿಗಣಿಸುತ್ತಾರೆ.
5. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಂಸ್ಥಾಪಕ ಸದಸ್ಯರಾದ ನರೋಜಿ ಅವರು  ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. 1906ರಲ್ಲಿಯೇ ಭಾರತಕ್ಕೆ ‘ಸ್ವರಾಜ್’ ಎಂದು ಸಾರ್ವಜನಿಕವಾಗಿ ಅವರು ಕಾಂಗ್ರೆಸ್ ವೇದಿಕೆಯಿಂದಲೇ ಒತ್ತಾಯಿಸಿದರು.
6. ಅವರು ಬಾಂಬೆಯಲ್ಲಿ ತಮ್ಮ 91ನೇ ವಯಸ್ಸಿನಲ್ಲಿ 30 ಜೂನ್ 1917ರಂದು ನಿಧನರಾದರು.

click me!