ಪ್ರೇಮಿಗಳ ದಿನ ಪ್ರೀತಿಸಿದ ಹೃದಯಗಳು ಮಾತ್ರವಲ್ಲ, ರಾಜಕೀಯ, ಕ್ರೀಡೆ, ಸ್ಯಾಂಡಲ್‌ವುಡ್ ಸೇರಿದಂತೆ ಎಲ್ಲಾ ಕ್ಷೇತ್ರ ಸದ್ದು ಮಾಡುತ್ತಿದೆ. ಮಹಿಳಾ ಐಎಎಸ್ ಅಧಿಕಾರಿ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರ ಹೆಣ್ಣುಮಕ್ಕಳನ್ನು ದತ್ತು ಪಡೆದಿದ್ದಾರೆ. ಇತ್ತ RCB ತಂಡಕ್ಕೆ ಹೊಸ ರೂಪ ನೀಡಲಾಗಿದೆ. ಗುಳಿ ಕೆನ್ನೆ ಚೆಲುವೆ ರಚಿತಾ ರಾಮ್ ಲಿಪ್ ಲಾಕ್, ತೆರಿಗೆ ಕುರಿತು ಪ್ರಧಾನಿ ಮೋದಿ ಮಾತು ಸೇರಿದಂತೆ ಫೆಬ್ರವರಿ 14ರಂದು ಸಂಚಲನ ಮೂಡಿಸಿದ ಟಾಪ್ 10 ಸುದ್ದಿ ಇಲ್ಲಿವೆ.
'ಪ್ರಧಾನಿಯಾಗೋನು ಹುಚ್ಚುನಾಯಿಯಾಗಿರ್ಬಾರ್ದು': ರಾಹುಲ್‌ಗೆ ಟಾಂಗ್
ನನಗೂ ಪ್ರಧಾನಿಯಾಗೋ ಚಟ ಇದೆ. ಪ್ರಧಾನಿಯಾಗುವವರು ಹುಚ್ಚುನಾಯಿಯಾಗಿರಬಾರದು ಎಂದು ತುಮಕೂರಿನಲ್ಲಿ ಸಂಸದ ಜಿ. ಎಸ್. ಬಸವರಾಜು ಹೇಳಿದ್ದಾರೆ. ಈ ಮೂಲಕ ರಾಹುಲ್ ಗಾಂಧಿಗೆ ಟಾಂಗ್ ನೀಡಿದ್ದಾರೆ.
ನಿನ್ನ ನೋಡ್ಕೊಳ್ತೀನಿ, ಬೆದರಿಕೆಯೊಡ್ಡಿದ ರಾಜಕಾರಣಿಯ ಸೊಕ್ಕಡಗಿಸಿದ ಮಹಿಳಾ IPS!
ಕಾಂಗ್ರೆಸ್ ಶಾಸಕಿ ಹಾಗೂ ಮಹಿಳಾ IPS ಅಧಿಕಾರಿ ನಡುವೆ ಮಾತಿನ ಚಕಮಕಿ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಮಹಿಳಾ IPS ವಿರುದ್ದ ಸಾರ್ವಜನಿಕವಾಗಿಯೇ ರೇಗಾಡಿದ ಶಾಸಕಿಗೆ IPS ಅಧಿಕಾರಿಯೂ ಅದೇ ಧಾಟಿಯಲ್ಲಿ ಪ್ರತ್ಯುತ್ತರ ನೀಡಿದ್ದಾರೆ.
ಪುಲ್ವಾಮಾ ಹುತಾತ್ಮರ ಹೆಣ್ಮಕ್ಕಳನ್ನು ದತ್ತು ಪಡೆದ ಮಹಿಳಾ IAS!
ಫೆಬ್ರವರಿ 14ರಂದು ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಇಂದು ಒಂದು ವರ್ಷ. CRPF ಸೈನಿಕರ ಮೇಲೆ ನಡೆದ ಈ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದರು. ಓರ್ವ ಮುಸ್ಲಿಂ ಮಹಿಳಾ IAS ಅಧಿಕಾರಿ ಹುತಾತ್ಮರಾದವರ ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಂಡಿದ್ದಾರೆ.
ವ್ಯಾಲಂಟೈನ್ಸ್ ಡೇ: ಕಬ್ಬನ್ ಪಾರ್ಕ್‌ನಲ್ಲಿ ಖಾಕಿ ಕಣ್ಗಾವಲು
ವ್ಯಾಲಂಟೈನ್ಸ್ ಡೇ ಆಚರಣೆ ಹಿನ್ನಲೆಯಲ್ಲಿ ಖಾಕಿ ಪಡೆ ಹೈ ಅಲರ್ಟ್ ಆಗಿದೆ. ಕಬ್ಬನ್ ಪಾರ್ಕ್ ಮೇಲೆ ಇಂದು ಪೊಲೀಸರ ಹದ್ದಿನ ಕಣ್ಣಿಟ್ಟಿದೆ. ಕೆಲ ಸಂಘಟನೆಗಳು ಪ್ರೇಮಿಗಳ ವಿರುದ್ಧ ಮುಗಿ ಬೀಳುವ ಸಾಧ್ಯತೆ ಇದ್ದು ಮಾಹಿತಿ ಮೇರೆಗೆ ಬೆಂಗಳೂರು ಪೊಲೀಸರು ಕಣ್ಗಾವಲ್ಲಿಟ್ಟಿದ್ದಾರೆ.
IPL ಟೂರ್ನಿಗೂ ಮುನ್ನ ಹೊಸ ಲೋಗೋ ಅನಾವರಣ ಮಾಡಿದ RCB
ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ತಂಡ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಹೊಸ ಲೋಗೋವನ್ನು ಅನಾವರಣ ಮಾಡಿದೆ. ಮಾರ್ಚ್ 29ರಿಂದ ಆರಂಭವಾಗಲಿರುವ ಐಪಿಎಲ್ ಟೂರ್ನಿಯಲ್ಲಿ ಹೊಸ ಲೋಗೊದೊಂದಿಗೆ RCB ತಂಡ ಕಣಕ್ಕಿಳಿಯಲಿದೆ.
ಮದುವೆಗೂ ಮುನ್ನ ಸೆಕ್ಸ್‌ಗೆ ಅಡ್ವಾಣಿ ಕೊಟ್ರು ಸಮ್ಮತಿ!
ಬಾಲಿವುಡ್ ನಟಿ ಕಿಯಾರ ಅಡ್ವಾಣಿ ಪ್ರೇಮಿಗಳ ದಿನದ ಪ್ರಯುಕ್ತ ಸಂಬಂಧಗಳು ಹೇಗಿರಬೇಕೆಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಮದುವೆಗೂ ಮುನ್ನ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದೂ ತಪ್ಪಿಲ್ಲವೆಂದಿರುವುದು ಮಡಿವಂತ ಭಾರತೀಯರ ಕಣ್ಣನ್ನು ಕೆಂಪಾಗಿಸಿದೆ.
ಸಿಗರೇಟ್ ಆಯ್ತು, ಈಗ ರಚಿತಾ ರಾಮ್ ಲಿಪ್‌ಲಾಕ್ ವೈರಲ್..!
ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಸಿನಿಮಾ ಟ್ರೇಲರ್ ಬಿಡುಗಡೆಯಾಗಿದೆ. ಕ್ರೇಜಿ ಕ್ವೀನ್ ಎಣ್ಣೆ ಬಾಟಲ್ ಹಿಡಿದು ಕೊಟ್ಟ ಬೋಲ್ಡ್ ಲುಕ್ ಪೋಸ್ಟರ್ ವೈರಲ್ ಆಗಿತ್ತು. ಇದೀಗ ಸಿನಿಮಾ ಟ್ರೈಲರ್ ಬಿಡುಗಡೆಯಾಗಿದ್ದು ಹವಾ ಕ್ರಿಯೇಟ್ ಮಾಡಿದೆ.
ಮೋದಿ ಹೇಳಿದ ‘ಆ’ ಮಾತು ಸರಿಯಂತೆ: ಪ್ರಧಾನಿ ಹೇಳಿದ್ದೇನಂತೆ?
131 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಕೇವಲ 1.5 ಕೋಟಿ ಜನ ಮಾತ್ರ ತೆರಿಗೆ ಕಟ್ಟುತ್ತಾರೆ ಎಂಬ ಪ್ರಧಾನಿ ಮೋದಿ ಅವರ ಹೇಳಿಕೆ ಸರಿ ಎಂದು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಹೇಳಿದೆ.
ಆನ್ ಸ್ಕ್ರೀನ್ ಬಿಡ್ರೀ, ಆಫ್ ಸ್ಕ್ರೀನ್ ಈ ಜೋಡಿ ಲವ್ ಸ್ಟೋರಿ ಕೇಳಿ!
ಸಿನಿಮಾಗಳಲ್ಲಿ ರೊಮ್ಯಾನ್ಸ್ ಮಾಡೋ ನಟ-ನಟಿಯರು ರಿಯಲ್ ಲೈಫ್‌ನಲ್ಲೂ ರೋಮ್ಯಾಂಟಿಕಾ? ಪ್ರೀತಿಸಿ ಗುರು- ಹಿರಿಯರ ಒಪ್ಪಿಗೆ ಮೇಲೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಟಾರ್ಸ್ ಇವರು.
ಪ್ರೇಮಿಗಳ ದಿನ ಆಫರ್ ಘೋಷಿಸಿದ GoAir, ರೂ.957ಕ್ಕೆ ವಿಮಾನ ಟಿಕೆಟ್!
ಪ್ರೇಮಿಗಳ ದಿನ ಭಾರತದ ಪ್ರಮುಖ 3 ವಿಮಾನ ಯಾನ ಸಂಸ್ಥೆಗಳು ಭರ್ಜರಿ ಆಫರ್ ನೀಡಿದೆ. ಈ ಆಫರ್ ನಿಗದಿತ ಅವಧಿಗೆ ಮೀಸಲಿಡಲಾಗಿದೆ. ಗೋ ಏರ್ ಫ್ಲೈಟ್ ಇಂದಿನಿಂದ(ಫೆ.14) ಸೆಪ್ಟೆಂಬರ್ 30ರ ವರೆಗೆ ಆರಂಭಿಕ ಬೆಲೆ 957 ರೂಪಾಯಿಗೆ ವಿಮಾನ ಟಿಕೆಟ್ ನೀಡುತ್ತಿದೆ.