Asianet Suvarna News Asianet Suvarna News

ಮತ್ತೆ ಹಾಟ್ ಹಾಟ್ ರಚಿತಾ, ಲಿಪ್ ಲಾಕ್ ಹಿಂದಿನ ಕತೆ ಹೇಳಿದ ಬುಲ್ ಬುಲ್!

ಪ್ರೇಮ್‌ ನಿರ್ದೇಶನದ ಏಕ್‌ ಲವ್‌ ಯಾ ಸಿನಿಮಾ ಟ್ರೇಲರ್ ಬಿಡುಗಡೆಯಾಗಿದೆ. ಕ್ರೇಜಿ ಕ್ವೀನ್ ಎಣ್ಣೆ ಬಾಟಲ್ ಹಿಡಿದು ಕೊಟ್ಟ ಬೋಲ್ಡ್ ಲುಕ್‌ ಪೋಸ್ಟರ್ ವೈರಲ್ ಆಗಿತ್ತು. ಇದೀಗ ಸಿನಿಮಾ ಟ್ರೈಲರ್ ಬಿಡುಗಡೆಯಾಗಿದ್ದು ಹವಾ ಕ್ರಿಯೇಟ್ ಮಾಡಿದೆ.

 

Ek Love Ya Movie Official Teaser released
Author
Bangalore, First Published Feb 14, 2020, 2:49 PM IST
  • Facebook
  • Twitter
  • Whatsapp

ಪ್ರೇಮ್‌ ನಿರ್ದೇಶನದ ಏಕ್‌ ಲವ್‌ ಯಾ ಸಿನಿಮಾ ಟ್ರೇಲರ್ ಬಿಡುಗಡೆಯಾಗಿದೆ. ಕ್ರೇಜಿ ಕ್ವೀನ್ ಎಣ್ಣೆ ಬಾಟಲ್ ಹಿಡಿದು ಕೊಟ್ಟ ಬೋಲ್ಡ್ ಲುಕ್‌ ಪೋಸ್ಟರ್ ವೈರಲ್ ಆಗಿತ್ತು. ಇದೀಗ ಸಿನಿಮಾ ಟ್ರೈಲರ್ ಬಿಡುಗಡೆಯಾಗಿದ್ದು ಹವಾ ಕ್ರಿಯೇಟ್ ಮಾಡಿದೆ.

ನಾಲ್ಕೇ ಗಂಟೆಗಳಲ್ಲಿ 73 ಸಾವಿರಕ್ಕೂ ಹೆಚ್ಚು ಜನ ಟ್ರೇಲರ್ ವೀಕ್ಷಿಸಿದ್ದಾರೆ. ಡಿಂಪಲ್ ಕ್ವೀನ್ ರಚಿತಾ ರಾಮ್ ಸಿಗರೇಟ್ ಹಿಡಿದು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, crazy ಕ್ವೀನ್ ಹಾಡೊಂದರಲ್ಲಿ ಹೆಜ್ಜೆ ಹಾಕಿದ್ದಾರೆ.

ರಚಿತಾ ಕೈಗೆ ಸಿಗರೇಟ್, ರಕ್ಷಿತಾ ಕೈಗೆ ಎಣ್ಣೆ ಬಾಟ್ಲಿ, ಫ್ಯಾನ್ಸ್‌ ಕೈಯಲ್ಲಿ ಪ್ರೇಮ್!

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರ ಭಾರತೀಯ ಯೋಧರ ನೆನಪಲ್ಲಿ ಎಂದು ಟ್ರೇಲರ್ ಆರಂಭದಲ್ಲಿ ಸ್ಮರಿಸಿದ್ದು, ಯೋಧರಿಗೆ ಗೌರವ ಸಲ್ಲಿಸಲಾಗಿದೆ.

ಫೈಟ್‌, ಪ್ರೇಮ ಕಥೆ, ಕ್ರಶ್ ಕುರಿತ ಹಿಂಟ್ಸ್‌ ನೀಡುವ ಟ್ರೇಲರ್‌ನಲ್ಲಿ ನಿಜವಾದ ಪ್ರೀತಿಗೆ ಸಾವಿಲ್ಲ ಎಂಬುದನ್ನು ಹೈಲೈಟ್‌ ಮಾಡಲಾಗಿದೆ. ವಿರಹ, ವೇದನೆ, ಮೋಸ, ಲವ್‌ ಸ್ಟೋರಿ ಕುರಿತಾಗಿಯೂ ಸಿನಿಮಾ ಬೆಳಕು ಚೆಲ್ಲಲಿದೆ ಎಂದು ತೋರಿಸುತ್ತೆ ಟ್ರೇಲರ್.

"

ಎಣ್ಣೆ ಬಾಟಲಿ ಹಿಡ್ಕೊಂಡು ಮತ್ತೊಮ್ಮೆ ಬಣ್ಣ ಹಚ್ಚಿದ್ದಾರೆ ಕ್ರೇಜಿ ಕ್ವೀನ್..!

1.40 ಸೆಕುಂಡುಗಳ ಟೀಸರ್ ರಚಿತಾ ರಾಮ್‌ ಹೀರೋ ಜೊತೆಗಿನ ಲಿಪ್ ಲಾಕ್‌ ಸೀನ್‌ನಲ್ಲಿ ಕೊನೆಯಾಗುತ್ತದೆ. ಅರ್ಜುನ್‌ ಜನ್ಯಾ ಈ ಪ್ರೇಮ ಕಥೆಗೆ ಸಂಗೀತ ಸಂಯೋಜಿಸಿದ್ದಾರೆ.

ಕಾಮಿಡಿ ಶೋ ಒಂದರಲ್ಲಿ ಭಾಗವಹಿದಿದ್ದ ನಟಿ ಸಿನಿಮಾ ಪ್ರಮೋಶನ್ ಗೆ ಆಗಮಿಸಿದ್ಗದರು. ಈ ವೇಳೆ ಲಿಪ್ ಲಾಕ್ ಸೀನ್ ಬಗ್ಗೆ ಕೇಳಿದಾಗ ಗೌದು ಚಿತ್ರದಲ್ಲಿ ಇದೆ ಎಂದು ಹೇಳಿದರು.

ಫೆಬ್ರವರಿ 14ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios