ಉತ್ತರಪ್ರದೇಶದಲ್ಲಿ ಮುಂದುವರೆದ ‘ಜಂಗಲ್ರಾಜ್' : ಗ್ಯಾಂಗ್ ರೇಪ್ ಸಂತ್ರಸ್ತೆ ಮೇಲೆ 4ನೇ ಬಾರಿ ಆ್ಯಸಿಡ್ ದಾಳಿ

By Suvarna Web DeskFirst Published Jul 2, 2017, 11:42 AM IST
Highlights

ಕಾನೂನು ಸುವ್ಯವಸ್ಥೆಗೆ ಸವಾಲಾಗಿರುವ ಉತ್ತರ ಪ್ರದೇಶದಲ್ಲಿ ಅತ್ಯಂತ ಅಮಾನವೀಯ ಘಟನೆಯೊಂದು ನಡೆದಿದೆ. ಅತ್ಯಾಚಾರ ಮತ್ತು ಆ್ಯಸಿಡ್‌ ದಾಳಿ ಸಂತ್ರಸ್ತೆಯ ಮೇಲೆ  ಶನಿವಾರ ಮತ್ತೆ ಆ್ಯಸಿಡ್‌ ದಾಳಿ ನಡೆಸಲಾಗಿದ್ದು, ಇದು ಆಕೆಯ ಮೇಲೆ ನಡೆದ ನಾಲ್ಕನೇ ಆ್ಯಸಿಡ್ ದಾಳಿ ಎಂದು ತಿಳಿದು ಬಂದಿದೆ.

ಉತ್ತರಪ್ರದೇಶ(ಜು.02): ಕಾನೂನು ಸುವ್ಯವಸ್ಥೆಗೆ ಸವಾಲಾಗಿರುವ ಉತ್ತರ ಪ್ರದೇಶದಲ್ಲಿ ಅತ್ಯಂತ ಅಮಾನವೀಯ ಘಟನೆಯೊಂದು ನಡೆದಿದೆ. ಅತ್ಯಾಚಾರ ಮತ್ತು ಆ್ಯಸಿಡ್‌ ದಾಳಿ ಸಂತ್ರಸ್ತೆಯ ಮೇಲೆ  ಶನಿವಾರ ಮತ್ತೆ ಆ್ಯಸಿಡ್‌ ದಾಳಿ ನಡೆಸಲಾಗಿದ್ದು, ಇದು ಆಕೆಯ ಮೇಲೆ ನಡೆದ ನಾಲ್ಕನೇ ಆ್ಯಸಿಡ್ ದಾಳಿ ಎಂದು ತಿಳಿದು ಬಂದಿದೆ.

ಇದೇ ವರ್ಷ ಮಾರ್ಚ್‌ ತಿಂಗಳಿನಲ್ಲಿ 35 ರ ಹರೆಯದ ಸಂತ್ರಸ್ತ ಮಹಿಳೆಯ ಮೇಲೆ ರಾಯ್‌ ಬರೇಲಿಯಲ್ಲಿ ರೈಲಿನಲ್ಲಿ ತೆರಳುತ್ತಿದ್ದ ವೇಳೆ ಆ್ಯಸಿಡ್‌ ದಾಳಿ ನಡೆಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಕಿಂಗ್ಸ್‌ ಜಾರ್ಜ್‌ ಮೆಡಿಕಲ್‌ ಆಸ್ಪತ್ರೆಗೆ  ದಾಖಲಿಸಲಾಗಿತ್ತು. ಆಸ್ಪತ್ರೆಗೆ ಭೇಟಿ ನೀಡಿದ್ದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ 1 ಲಕ್ಷ ರೂಪಾಯಿ ಪರಿಹಾರವನ್ನು ನೀಡಿ ಭದ್ರತೆ ನೀಡುವ ಭರವಸೆ ನೀಡಿದ್ದರು.

ಆದರೆ ಕಳೆದ ರಾತ್ರಿ ಮನೆಯಲ್ಲಿದ್ದ ಮಹಿಳೆಯ ಮೇಲೆ ದುಷ್ಕರ್ಮಿಗಳು ಮತ್ತೆ ದಾಳಿ ನಡೆಸಿದ್ದು ಹಲವು ಪ್ರಶ್ನೆಗಳು ಹುಟ್ಟು ಹಾಕಿದೆ ಅಲ್ಲದೇ ಕಾನೂನು ಸುವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿದೆ.

ಪದೇ ಪದೇ ದಾಳಿ

ಸಂತ್ರಸ್ತ ಮಹಿಳೆ ಪದೇ ಪದೇ ದಾಳಿಗೊಳಾಗಿದ್ದು ಝರ್ಝರಿತಳಾಗಿ ಹೋಗಿದ್ದಾಳೆ. 2008 ರಲ್ಲಿ ಬೊಂಡು ಸಿಂಗ್‌ ಎಂಬಾತ ಅತ್ಯಾಚಾರ ನಡೆಸಿದ್ದ, ಪೊಲೀಸರಿಗೆ ದೂರು ನೀಡಿದ್ದನ್ನು ವಿರೋಧಿಸಿ ಸಹೋದರ ಗುಡ್ಡುನೊಂದಿಗೆ ಸೇರಿ ಮಹಿಳೆಗೆ ಚೂರಿ ಇರಿದಿದ್ದ. 2011 ರಂದು ಆ್ಯಸಿಡ್‌ ಎರಚಲಾಗಿತ್ತು, 2012 ರಲ್ಲಿ ಮತ್ತೆ ಗ್ಯಾಂಗ್‌ ರೇಪ್‌ ನಡೆಸಲಾಗಿತ್ತು.

ಪೊಲೀಸರು ದುಷ್ಕರ್ಮಿಯ ಪತ್ತೆಗೆ ತಂಡಗಳನ್ನು ರಚಿಸಿದ್ದು ವ್ಯಾಪಕ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.

click me!