ರಾಜ್ಯದಲ್ಲಿ ಹೆಚ್ಚುತ್ತಲೇ ಇವೆ ಅತ್ಯಾಚಾರ ಪ್ರಕರಣಗಳು

By Suvarna Web DeskFirst Published Dec 20, 2017, 3:19 PM IST
Highlights

ದೇಶದಲ್ಲಿ ಮಹಿಳಾ ಸುರಕ್ಷತೆ ಹೆಚ್ಚಿನ ಒತ್ತು ನೀಡಿದರೂ ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣ ಇಲ್ಲವಾಗಿದೆ.ದಿನದಿಂದ ದಿನಕ್ಕೆ ಮಹಿಳಾ ದೌರ್ಜನ್ಯಗಳು ವರದಿಯಾಗುತ್ತಲೇ ಇವೆ. ಕೆಲ ವರ್ಷಗಳಿಂದ ವರ್ಷಕ್ಕೆ  ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಲೇ ಇವೆ. 

ಬೆಂಗಳೂರು (ಡಿ.20): ದೇಶದಲ್ಲಿ ಮಹಿಳಾ ಸುರಕ್ಷತೆ ಹೆಚ್ಚಿನ ಒತ್ತು ನೀಡಿದರೂ ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣ ಇಲ್ಲವಾಗಿದೆ.ದಿನದಿಂದ ದಿನಕ್ಕೆ ಮಹಿಳಾ ದೌರ್ಜನ್ಯಗಳು ವರದಿಯಾಗುತ್ತಲೇ ಇವೆ. ಕೆಲ ವರ್ಷಗಳಿಂದ ವರ್ಷಕ್ಕೆ  ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಲೇ ಇವೆ. 

ಕರ್ನಾಟಕದಲ್ಲಿ 2016-17ನೇ ಸಾಲಿನಲ್ಲಿ (ಫೆಬ್ರವರಿವರೆಗೆ) 686 ಅತ್ಯಾಚಾರ ಪ್ರಕರಣಗಳು ದಾಖಲಾಗಿದೆ, 2015ರಲ್ಲಿ 10 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.  2014ರಲ್ಲಿ ಈ ಪ್ರಕರಣಗಳು ಅತೀ ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸಿವೆ. ಒಟ್ಟು 1004 ಅತ್ಯಾಚಾರ ಪ್ರಕರಣಗಳು ಕರ್ನಾಟಕದಲ್ಲಿ ವರದಿಯಾಗಿವೆ. 2014ರಲ್ಲಿ 950 ಅತ್ಯಾಚಾರ ಪ್ರಕರಣಗಳು ನಡೆದಿವೆ.

ಇಂತಹ ಪ್ರಕರಣಗಳು ನಡೆದಾಗ ಶೀಘ್ರ ತನಿಖೆ ನಡೆಸುವ ಸಲುವಾಗಿ 2012ರಲ್ಲಿ ದಿಲ್ಲಿಯಲ್ಲಿ ನಿರ್ಭಯಾ ಅತ್ಯಾಚಾರ ಪ್ರಕರಣ ನಡೆದ ಬಳಿಕ ಫಾಸ್ಟ್ ಟ್ರ್ಯಾಕ್ ಕೋರ್ಟ್'ಗಳನ್ನು ಸ್ಥಾಪಿಸಲಾಯಿತು. ಆದರೂ ಎಲ್ಲಾ ಪ್ರಕರಣಗಳು ಇತ್ಯರ್ಥವಾಗದೇ ತನಿಖೆಯ ಹಂತದಲ್ಲೇ ಇದೆ.

click me!