ಮಗುವಿನ ನಿರೀಕ್ಷೆಯಲ್ಲಿರುವ ಮೇಘನ್ ಬೇರೆ ಮನೆಗೆ ಶಿಫ್ಟ್

By Web DeskFirst Published Nov 26, 2018, 12:59 PM IST
Highlights

ಪುಟ್ಟ ಮಗುವಿನ ನಿರೀಕ್ಷೆಯಲ್ಲಿರುವ ಈ ರಾಯಲ್ ಕಪಲ್ ಹೊಸ ಮನೆಗೆ ಶಿಪ್ಟ್ ಆಗುತ್ತಿದ್ದಾರೆ. ಹೊಸ ಮನೆಯಲ್ಲಿ ತಮ್ಮ ಮಗುವನ್ನು ಸ್ವಾಗತಿಸಲಿದ್ದಾರೆ. 

ಲಂಡನ್ :  ಬ್ರಿಟನ್ ರಾಜಮನೆತನದಲ್ಲಿ  ಮಗುವಿನ ಆಗಮನಕ್ಕೆ ದಿನಗಣನೆ ಆರಂಭವಾಗಿದೆ. ಇದೇ ವೇಳೆ ರಾಜಕುಮಾರ ಪ್ರಿನ್ಸ್ ಹ್ಯಾರಿ ಹಾಗೂ ಮೇಘನ್ ಮರ್ಕೆಲ್ ಬೇರೆ ರಾಯಲ್ ಬಿಲ್ಡಿಂಗ್ ಗೆ ಶಿಫ್ಟ್ ಆಗುತ್ತಿದ್ದಾರೆ. 

ತಮ್ಮ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ಹ್ಯಾರಿ, ಮೇಘನ್ ಮತ್ತೊಂದು ರಾಯಲ್ ಬಿಲ್ಡಿಂಗ್ ಗೆ ತೆರಳುತ್ತಿದ್ದಾರೆ. ರಾಜಮನೆತನದ್ದೇ ಆದ ವಿಂಡ್ಸರ್ ಎಸ್ಟೇಟ್ ಗೆ ತೆರಳುತ್ತಿದ್ದು, ಈ ಎಷ್ಟೇಟ್ ಅತ್ಯಂತ ರಾಯಲ್ ಆಗಿದ್ದು ರಾಜಮನೆತನಕ್ಕೆ ತಕ್ಕುನಾದ  ಸೌಲಭ್ಯಗಳನ್ನು ಒಳಗೊಂಡಿದೆ. 

18 ನೇ ಶತಮಾನದಲ್ಲೇ ನಿರ್ಮಾಣವಾಗಿರುವ ಈ  ರಾಯಲ್ ಫ್ಯಾಮಿಲಿ ಕಟ್ಟಡ ಪಶ್ಚಿಮ ಲಂಡನ್ ನಲ್ಲಿದ್ದು, ಇನ್ನು ಮುಂದೆ ರಾಜ - ರಾಣಿ ಇಲ್ಲಿ ವಾಸ ಮಾಡಲಿದ್ದಾರೆ.  

ಕಳೆದ ಮೇ ತಿಂಗಳಲ್ಲಿ ವಿವಾಹವಾದ ಮೇಘನ್ ಹಾಗೂ ಫ್ರಿನ್ಸ್ ಹ್ಯಾರಿ ಇಷ್ಟು ದಿನ ಲಂಡನ್ ನಲ್ಲಿರುವ ನಾಟಿಂಗ್ ಹ್ಯಾಮ್ ಕಾಟೇಜ್ ನ  ಕೆನ್ಸಿಂಗ್ ಟನ್ ಪ್ಯಾಲೇಸ್ ನಲ್ಲಿ ವಾಸವಿದ್ದರು. 

ಆದರೆ ಮತ್ತೊಂದು ಅರಮನೆಗೆ ತೆರಳುತ್ತಿರುವ ಈ ದಂಪತಿ ಮೊದಲ ಮಗುವನ್ನು ಹೊಸ ಮನೆಯಲ್ಲಿ ಸ್ವಾಗತಿಸುತ್ತಿದ್ದಾರೆ. 

ಮೊದಲ ಮಗುವಿನ ನಿರೀಕ್ಷೆಯಲ್ಲಿ ಮೇಘನ್ ದಂಪತಿ
click me!