ನಮ್ಮ ಸರ್ಕಾರಕ್ಕೆ ಎಷ್ಟು ರೇಟಿಂಗ್‌ ಕೊಡ್ತೀರಿ: ಜನತೆಗೆ ಮೋದಿ ಪ್ರಶ್ನೆ

By Web DeskFirst Published Jan 15, 2019, 8:56 AM IST
Highlights

ನಮ್ಮ ಸರ್ಕಾರಕ್ಕೆ ಎಷ್ಟುರೇಟಿಂಗ್‌ ಕೊಡ್ತೀರಿ: ಜನತೆಗೆ ಮೋದಿ ಪ್ರಶ್ನೆ |  ಸಂಸದರ ಸಾಧನೆ ಬಗ್ಗೆಯೂ ಆ್ಯಪ್‌ನಲ್ಲಿ ಮತದಾನ |  ಕಡಿಮೆ ರೇಟಿಂಗ್‌ ಪಡೆದವರಿಗೆ ಟಿಕೆಟ್‌ ನಿರಾಕರಣೆ |  ಮಹಾಗಠಬಂಧನ್‌ ಕುರಿತು ಜನರಿಂದ ಮಾಹಿತಿ

ನವದೆಹಲಿ (ಜ. 15): ಮೋದಿ ಸರ್ಕಾರಕ್ಕೆ ನೀವು ಎಷ್ಟುರೇಟ್‌ ನೀಡುತ್ತೀರಿ? ಇದು ಸಾರ್ವಜನಿಕರನ್ನುದ್ದೇಶಿಸಿ ವಿಪಕ್ಷಗಳು ಮಾಡುತ್ತಿರುವ ಆರೋಪವಲ್ಲ. ಬದಲಿಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 5 ವರ್ಷಗಳ ತಮ್ಮ ಆಡಳಿತ ಹೇಗಿತ್ತು ಎಂಬುದರ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದಾರೆ.

ನಿರ್ಣಾಯಕ ಲೋಕಸಭಾ ಚುನಾವಣಾ ಸಮೀಪಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು, ನಮೋ ಆ್ಯಪ್‌ ಮೂಲಕ ತಮ್ಮ ಅಭಿಪ್ರಾಯವನ್ನು ನೇರವಾಗಿ ತನಗೇ ತಿಳಿಸುವಂತೆ ಸಾರ್ವಜನಿಕರಲ್ಲಿ ಕೋರಿಕೊಂಡಿದ್ದಾರೆ. ಅಲ್ಲದೆ, ವಿಪಕ್ಷಗಳ ನೇತೃತ್ವದ ಮಹಾಗಠಬಂಧನ್‌(ಮಹಾಮೈತ್ರಿ) ಪ್ರಭಾವ ತಮ್ಮ ಕ್ಷೇತ್ರಗಳಲ್ಲಿ ಇದೆಯೇ ಎಂಬುದನ್ನು ತಿಳಿಸುವಂತೆಯೂ ಮೋದಿ ವಿನಂತಿಸಿದ್ದಾರೆ.

ಈ ಬಗ್ಗೆ ಸೋಮವಾರ ಟ್ವಿಟರ್‌ ಮತ್ತು ಫೇಸ್‌ಬುಕ್‌ನಲ್ಲಿ ವಿಡಿಯೋ  ಪ್ರಕಟಿಸಿರುವ ಮೋದಿ, ‘ನಿಮ್ಮ ಅಭಿಪ್ರಾಯ ನಮಗೆ ಅಮೂಲ್ಯವಾದದ್ದು. ನಾವು ಮುಖ್ಯ ನಿರ್ಧಾರಗಳನ್ನು ಕೈಗೊಳ್ಳಲು ನಿಮ್ಮ ಅಭಿಪ್ರಾಯ ನಮಗೆ ನೆರವಾಗುತ್ತದೆ. ಸಮೀಕ್ಷೆಯ ಎಲ್ಲ ಅಂಶಗಳನ್ನು ಭರ್ತಿ ಮಾಡಿ. ಅಲ್ಲದೆ, ಇತರರಿಗೂ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ತಿಳಿಸಿ,’ ಎಂದು ಕೋರಿದ್ದಾರೆ.

ನಮೋ ಆ್ಯಪ್‌ನಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಾದ ಸ್ವಚ್ಛ ಭಾರತ, ಆರ್ಥಿಕತೆ, ರಾಷ್ಟ್ರೀಯ ಭದ್ರತೆ, ಭ್ರಷ್ಟಾಚಾರ ಮುಕ್ತ ಆಡಳಿತ, ದರ ಏರಿಕೆ, ಕಾನೂನು ಮತ್ತು ಸುವ್ಯವಸ್ಥೆ, ಆರೋಗ್ಯ ಸೇವೆ ಸೇರಿದಂತೆ ಇತರ ಅಂಶಗಳ ಬಗ್ಗೆಯೂ ರೇಟಿಂಗ್‌ ನೀಡುವಂತೆ ಕೋರಲಾಗಿದೆ. ಈ ಆ್ಯಪ್‌ನಲ್ಲಿ ಅತೀ ಕಡಿಮೆ ರೇಟಿಂಗ್‌ ಪಡೆಯುವ ಹಾಲಿ ಸಂಸದರಿಗೆ ಬಿಜೆಪಿಯ ಟಿಕೆಟ್‌ ನಿರಾಕರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

click me!