ನಾಳೆ ಪ್ರಧಾನಿ ಮೋದಿ ಭಾಷಣ, ಸೆಕ್ಸ್ ವರ್ಕರ್ ಮಕ್ಕಳಿಗೆ ಉಚಿತ ಶಿಕ್ಷಣ; ಜು.31ರ ಟಾಪ್ 10 ಸುದ್ದಿ!

Published : Jul 31, 2020, 04:58 PM ISTUpdated : Jul 31, 2020, 04:59 PM IST
ನಾಳೆ ಪ್ರಧಾನಿ ಮೋದಿ ಭಾಷಣ, ಸೆಕ್ಸ್ ವರ್ಕರ್ ಮಕ್ಕಳಿಗೆ ಉಚಿತ ಶಿಕ್ಷಣ; ಜು.31ರ ಟಾಪ್ 10 ಸುದ್ದಿ!

ಸಾರಾಂಶ

ಶನಿವಾರ ಸಂಜೆ 4.30ಕ್ಕೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. 3ನೇ ಹಂತದ ಅನ್‌ಲಾಕ್‌ನಲ್ಲಿ ಬಾರ್‌& ರೆಸ್ಟೋರೆಂಟ್‌ಗಳು ಲಭ್ಯವಿರುವುದಿಲ್ಲ.  ಅಮೆರಿಕದಲ್ಲಿ ರಾಮ ಮಂದಿರ ಭೂಮಿ ಪೂಜೆ ಸಂಭ್ರಮ ಮನೆ ಮಾಡಿದೆ. ಲೈಂಗಿಕ ಕಾರ್ಯಕರ್ತೆಯರ ಹೆಣ್ಣು ಮಕ್ಕಳ ಉಚಿತ ಶಿಕ್ಷಣ ಜವಾಬ್ದಾರಿಯನ್ನು  ಗೌತಮ್ ಗಂಭೀರ್ ಹೊತ್ತಿದ್ದಾರೆ. ಅನ್‌ಲಾಕ್ 3.O ಮಾರ್ಗಸೂಚಿ, ಪ್ಯಾಂಟ್‌ನೊಳಗೆ ಹೊಕ್ಕ ನಾಗರ ಹಾವು ಸೇರಿದಂತೆ ಜುಲೈ 31ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಪ್ರಧಾನಿ ಮೋದಿಗೆ 501 ರಾಖಿ ಮತ್ತು ಮಾಸ್ಕ್ ಕಳಿಸಿದ ವೃಂದಾವನದ ಸಹೋದರಿ..!...

ಕೊರೋನಾ ವೈರಸ್‌ ಸಂಕಷ್ಟದಿಂದ ಈ ಬಾರಿ ಪ್ರಧಾನಿಯನ್ನು ಬೇಟಿಯಾಗಲು ಸಾಧ್ಯವಿರದ ಕಾರಣ ವೃಂದಾವನದ ಸಹೋದರಿಯೊಬ್ಬರು ಮೋದಿಗೆ 501 ರಾಖಿ ಮತ್ತು ಮಾಸ್ಕ್ ಕಳುಹಿಸಿ ಕೊಟ್ಟಿದ್ದಾರೆ.

ಶನಿವಾರ ಸಂಜೆ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ!...

ನಾಳೆ, ಶನಿವಾರ ಸಂಜೆ 4.30ಕ್ಕೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಕೊರೋನಾ ನಿಯಂತ್ರಣ, ಅನ್‌ಲಾಕ್‌ 3, ರಫೇಲ್ ಆಗಮನ ಹೀಗೆ ಈ ಎಲ್ಲಾ ವಿಚಾರಗಳ ಕುರಿತು ಮೋದಿ ಮಾತನಾಡಲಿದ್ದಾರೆನ್ನಲಾಗುತ್ತಿದೆ.

ಪ್ಯಾಂಟ್‌ನೊಳಗೆ ಹೊಕ್ಕ ನಾಗರ ಹಾವು: 7 ಗಂಟೆ ಕಂಬ ಹಿಡಿದು ನಿಂತು ಪ್ರಾಣ ಉಳಿಯಿತು!

ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯಲ್ಲಿ ಯುವಕನೊಬ್ಬನ ಜೀನ್ಸ್‌ ಪ್ಯಾಂಟ್ ಒಳಗೆ ನಾಗರ ಹಾವು ಹೊಕ್ಕಿಕೊಂಡಿದೆ. ಭಯಬಿದ್ದ ಯುವಕ ರಾತ್ರಿಯಿಡೀ ಕಂಬವೊಂದನ್ನು ಹಿಡಿದು ಸಮಯ ಕಳೆದಿದ್ದಾನೆ. ಬೆಳಗಾಗುತ್ತಿದ್ದಂತೆಯೇ ಹಾವಾಡಿಗನ ಸಹಾಯದಿಂದ ಪ್ಯಾಂಟ್‌ನೊಳಗಿದ್ದ ಹಾವನ್ನು ಹೊರ ತೆಗೆಯಲಾಗಿದೆ. ಈ ವೇಳೆ ಪೊಲೀಸರು ಹಾಗೂ ಅಧಿಕಾರಿಗಳೊಂದಿಗೆ ಗ್ರಾಮಸ್ಥರೆಲ್ಲರೂ ಅಲ್ಲಿ ಜಮಾಯಿಸಿದ್ದರು.

ಅಮೆರಿಕದಲ್ಲೂ ರಾಮಜಪ: ಐತಿಹಾಸಿಕ ಸಂಭ್ರಮಕ್ಕೆ ಸಜ್ಜು!...

ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯುವ ಆ.5ರಂದು ಅಮೆರಿಕದ ಹೆಗ್ಗುರುತಾಗಿರುವ ಟೈಮ್ಸ್‌ ಸ್ಕ್ವೇರ್‌ನಲ್ಲಿ ರಾಮ ಮಂದಿರ ಹಾಗೂ ರಾಮನ ಚಿತ್ರಗಳನ್ನು ಬೃಹತ್‌ ಪರದೆಯಲ್ಲಿ ಪ್ರದರ್ಶಿಸಲು ಅನಿವಾಸಿ ಭಾರತೀಯರು ತೀರ್ಮಾನಿಸಿದ್ದಾರೆ. ಆ ಮೂಲಕ ಐತಿಹಾಸಿಕ ಸಂಭ್ರಮಕ್ಕೆ ಅಮೆರಿಕ ಕೂಡ ಸಾಕ್ಷಿಯಾಗಲಿದೆ.

ಲೈಂಗಿಕ ಕಾರ್ಯಕರ್ತೆಯರ ಹೆಣ್ಣು ಮಕ್ಕಳ ಉಚಿತ ಶಿಕ್ಷಣ ಜವಾಬ್ದಾರಿ ಹೊತ್ತ ಗೌತಮ್ ಗಂಭೀರ್!...

ಪೂರ್ವ ದೆಹಲಿ ಬಿಜೆಪಿ ಸಂಸದ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಇದೀಗ ಮತ್ತೊಂದು ಮಹತ್ವದ ಕಾರ್ಯಕ್ಕೆ ಮುಂದಾಗಿದ್ದಾರೆ. ಮಕ್ಕಳ ಶಿಕ್ಷಣ ವಿಚಾರದಲ್ಲಿ ಹಲವು ಭಾರಿ ತಮ್ಮ ಸಾಮಾಜಿಕ ಕಳಕಳಿ ವ್ಯಕ್ತಪಡಿಸಿರುವ ಗಂಭೀರ್, ಇದೀಗ ಲೈಂಗಿಕ ಕಾರ್ಯಕರ್ತೆಯರ ಹೆಣ್ಣು ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಗೌತಮ್ ಗಂಭೀರ್ ವಹಿಸಿಕೊಂಡಿದ್ದಾರೆ.

ಅನ್‌ಲಾಕ್ 3.O: ಬಾರ್&ರೆಸ್ಟೋರೆಂಟ್‌ ಓಪನ್‌ಗೆ ಇಲ್ಲ ಅವಕಾಶ..!...

ಮೂರನೇ ಹಂತದ ಅನ್‌ಲಾಕ್‌ನಲ್ಲಿ ಹಲವು ಸೇವೆಗಳು ಓಪನ್ ಆಗುತ್ತಿವೆಯಾದರೂ ಬಾರ್‌& ರೆಸ್ಟೋರೆಂಟ್‌ಗಳು ಬಾಗಿಲು ತೆರೆಯಲು ಮತ್ತಷ್ಟು ದಿನಗಳು ಕಾಯಲೇಬೇಕಾಗಿದೆ.  ಆದರೆ ಲಾಕ್‌ಡೌನ್‌ನಿಂದ ಬಾಗಿಲು ಮುಚ್ಚಿದ್ದ ಜಿಮ್ ಹಾಗೂ ಯೋಗ ಕ್ಲಾಸ್‌ಗಳು ಆಗಸ್ಟ್ 05ರಿಂದ ಆರಂಭವಾಗಲಿವೆ.

ಸುದೀಪ್‌ ಫಾಲೋ ಮಾಡುವ ಆ ಒಂದು ರೂಲನ್ನು ಪಾಲಿಸಿದ ನಟಿ ಮಾನ್ವಿತಾ!...

ಕಿಚ್ಚ ಸುದೀಪ್‌ ಅತ್ಯುತ್ತಮ ನಟ, ಸ್ನೇಹ ಜೀವಿ ಹಾಗೂ ಉತ್ತಮ ವಾಗ್ಮಿ. ಸಿನಿ ಜರ್ನಿಯಲ್ಲಿ ಎದುರಿಸಿದ ಕೆಲವೊಂದು ಜೀವನದ ಪಾಠಗಳ ಬಗ್ಗೆ ಮಾತನಾಡುತ್ತಿದ್ದರೆ, ಅದನ್ನು ಕೇಳುತ್ತಲೇ ಇರಬೇಕು ಎಂದು ಅನಿಸುತ್ತದೆ. ಸಕ್ಸಸ್ ಆಗಲು ಕೆಲವೊಂದು ರೂಲ್ಸ್ ಫಾಲೋ ಮಾಡುತ್ತಾರ. ಈ ಲೈಫ್‌ ರೂಲ್‌ನಿಂದ ನಟಿ ಮಾನ್ವಿತಾ ಕಾಮತ್ ಪಾಠ ಕಲಿತುಕೊಂಡಿದ್ದಾಂತೆ.

ಭಾಸ್ಕರ್ ರಾವ್ ಜಾಗಕ್ಕೆ ಕಮಲ್ ಪಂಥ್, ಬೆಂಗಳೂರಿಗೆ ಹೊಸ ಕಮಿಷನರ್...

ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌  ಆಗಿ ಕಮಲ್ ಪಂಥ್ ನೇಮಕವಾಗಿದ್ದಾರೆ.  ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಕಮಲ್ ಪಂಥ್  ಶುಕ್ರವಾರ ಸಂಜೆ ಪದಗ್ರಹಣ ಮಾಡಲಿದ್ದಾರೆ.

ಅನಿಲ್‌ ಅಂಬಾನಿ ಕೇಂದ್ರ ಕಚೇರಿ ಬ್ಯಾಂಕಿಂದ ಜಪ್ತಿ!...

ಬರೋಬ್ಬರಿ 2892 ಕೋಟಿ ರು. ಸಾಲ ಮರುಪಾವತಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಉದ್ಯಮಿ ಅನಿಲ್‌ ಅಂಬಾನಿ ಗ್ರೂಪ್‌ನ ಕೇಂದ್ರ ಕಚೇರಿ ‘ರಿಲಯನ್ಸ್‌ ಸೆಂಟರ್‌’ ಅನ್ನು ಯಸ್‌ ಬ್ಯಾಂಕ್‌ ತನ್ನ ವಶಕ್ಕೆ ಪಡೆದುಕೊಂಡಿದೆ. ಇದೇ ವೇಳೆ, ಮುಂಬೈನಲ್ಲಿರುವ ಎರಡು ಫ್ಲಾ ್ಯಟ್‌ಗಳನ್ನೂ ಜಪ್ತಿ ಮಾಡಿದೆ. ಈ ಕುರಿತು ಬ್ಯಾಂಕ್‌ ಗುರುವಾರ ಪತ್ರಿಕಾ ಜಾಹೀರಾತು ನೀಡಿದೆ.

KTM 390 ಬೈಕ್ ಖರೀದಿ ಸುಲಭ, ಭರ್ಜರಿ ಆಫರ್ ಘೋಷಣೆ!

KTM ಡ್ಯೂಕ್ ಬೈಕ್ ಖರೀದಿ ಬಹುತೇಕರ ಕನಸು. ಆದರೆ ದುಬಾರಿ ಬೆಲೆ ಕಾರಣ ಸಾಧ್ಯವಾಗುವುದಿಲ್ಲ. ಡೌನ್‌ಪೇಮೆಂಟ್ ಕಟ್ಟೋ ಹಣದಿಂದ ಇತರ ಯಾವುದಾದರ ಬೈಕ್ ಖರೀದಿಸಬಹುದು ಅನ್ನೋದು ಹಲವರ ಅಭಿಪ್ರಾಯ. ಇದೀಗ KTM ತನ್ನ 390 ಅಡ್ವೆಂಚರ್ ಬೈಕ್ ಖರೀದಿಸುವ ಗ್ರಾಹಕರಿಗೆ ಭರ್ಜರಿ ಆಫರ್ ಘೋಷಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮದುವೆ ಮುಂದೂಡಿಕೆ ಆದ 12 ದಿನಗಳ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಮೊದಲ ಪೋಸ್ಟ್‌ ಮಾಡಿದ ಸ್ಮೃತಿ, ಕೈಯಲ್ಲಿದ್ದ ರಿಂಗ್‌ ಮಾಯ!
ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ