ರಾಮಂದಿರ ಭೂಮಿಪೂಜೆ ನೇರಪ್ರಸಾರಕ್ಕೆ ಬಿಜೆಪಿ ಮಾಸ್ಟರ್ ಪ್ಲಾನ್

By Suvarna News  |  First Published Jul 31, 2020, 4:31 PM IST

ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮ/ ದೆಹಲಿ ಕಾರ್ಯಕರ್ತರಿಗೆ ಎಲ್‌ಇಡಿ ಸ್ಕ್ರೀನ್/  ಬಿಜೆಪಿಯಿಂದ ಹೊಸ ಆಲೋಚನೆ/ ಆಗಸ್ಟ್  5  ರಂದು ನಡೆಯಲಿರುವ ಸಮಾರಂಭ


ಬೆಂಗಳೂರು (ಜು.  31) ಅಯೋಧ್ಯೆ ರಾಮಮಂದಿರ  ಶಿಲಾನ್ಯಾಸ ಕಾರ್ಯಕ್ರಮ ಹತ್ತಿರ ಬಂದಿದೆ. ಆಗಸ್ಟ್  5  ರಂದು ನಡೆಯಲಿರುವ ಶಿಲಾನ್ಯಾಸ ಕಾರ್ಯಕ್ರಮವನ್ನು ವೀಕ್ಷಿಸಲು ದೆಹಲಿ ಜನರು ಮತ್ತು ಕಾರ್ಯಕರ್ತರಿಗೆ ಬಿಜೆಪಿ ಎಲ್‌ ಇಡಿ ಸ್ಕ್ರೀನ್ ಅಳವಡಿಸಲಿದೆ.

ಬಿಜೆಪಿ ನಾಯಕ ಅದೇಶ್ ಕುಮಾರ್ ಗುಪ್ತಾ ಮಾಹಿತಿ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಕಾರ್ಯಕ್ರಮವನ್ನು ಎಲ್ಲರೂ ಕಣ್ಣು ತುಂಬಿಕೊಳ್ಳಲಿದ್ದಾರೆ. ಈ ಐತಿಹಾಸಿಕ ಕ್ಷಣಗಳನ್ನು ಮತ್ತಷ್ಟು ಸ್ಮರಣೀಯ ಮಾಡಲು ಎಲ್ ಇಡಿ ಸ್ಕ್ರೀನ್ ಅಳವಡಿಕೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Latest Videos

undefined

ರಾಮಮಂದಿರ ಭೂಮಿ ಪೂಜೆಗೆ ದಿನಾಂಕ ನಿಗದಿ ಮಾಡಿದ್ದು ಕನ್ನಡಿಗ

ದೆಹಲಿಯ ಎಲ್ಲ 70  ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಭೂಮಿ ಪೂಜೆ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.  ಸಂಜೆ ಎಲ್ಲ ಕಾರ್ಯಕರ್ತರ ಮನೆಯಲ್ಲಿ ದೀಪ ಹಚ್ಚಿ ಆರಾಧನೆ ಮಾಡಲಾಗುವುದು ಎಂದು  ತಿಳಿಸಿದ್ದಾರೆ. ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಿದೆ.  

ರಾಮಮಂದಿರ ನಿರ್ಮಾಣ ಸಂಬಂಧ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಮಾನ ನೀಡಿದ ನಂತರ  ನಿರ್ಮಾಣ ಕಾರ್ಯ ವೇಗವಾಗಿ ನಡೆದಿದೆ.  ದಶಕಗಳ ವಿವಾದ ಸುಪ್ರೀಂ ಕೋರ್ಟ್ ನಲ್ಲಿ ಇತ್ಯರ್ಥವಾಗಿತ್ತು.

click me!