ಎನ್‌ಆರ್‌ಸಿ: ವಿಪಕ್ಷಗಳ ಡಬಲ್ ಸ್ಟ್ಯಾಂಡರ್ಡ್ ಪಾಲಿಟಿಕ್ಸ್!

Aug 5, 2018, 4:38 PM IST

ಬೆಂಗಳೂರು(ಆ.5): ಅಕ್ರಮ ಬಾಂಗ್ಲಾ ವಲಸಿಗರನ್ನು ಗುರುತಿಸುವ ಕೆಲಸದ ಮಧ್ಯೆ ಇನ್ನೊಂದು ಕೆಲಸ ಕೂಡ ತಂತಾನೆ ನಡೀತಿದೆ. ಅಕ್ರಮ ಬಾಂಗ್ಲಾ ವಲಸಿಗರ ಕುರಿತು ವಿಪಕ್ಷಗಳ ಡಬಲ್ ಸ್ಟ್ಯಾಂಡರ್ಡ್ ತಾನೇ ತಾನಾಗಿ ದೇಶದ ಮುಂದೆ ಸಾಬೀತಾಗುತ್ತಿದೆ.

ಅಕ್ರಮ ಬಾಂಗ್ಲಾ ವಲಸಿಗರ ಕುರಿತು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ನಿಲುವು ಏನಾಗಿತ್ತು ಎಂಬುದು ವಿಕಿ ಲೀಕ್ಸ್ ಮಾಹಿತಿಯಿಂದ ಇದೀಗ ಬಹಿರಂಗವಾಗಿದೆ. ಮುಸ್ಲಿಮರ ಓಲೈಕೆಗಾಗಿ, ವೋಟ್ ಬ್ಯಾಂಕ್ ಗಾಗಿ ಸೋನಿಯಾ ಎನ್ ಆರ್ ಸಿ ಜಾರಿಗೆ ಹಿಂದೇಟು ಹಾಕಿದ್ದರು ಎಂಬ ಆಘಾಥಕಾರಿ ಅಂಶ ಬಯಲಾಗಿದೆ.

ಇದೇ ವೇಳೆ ಬಾಂಗ್ಲಾ ಅಕ್ರಮ ವಲಸಿಗರ ವಿರುದ್ಧ ಈ ಹಿಂದೆ ಗುಡುಗಿದ್ದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಇದೀಗ ವಲಸಿಗರ ಪರ ಮಾತನಾಡುತ್ತಿರುವುದು ದೇಶಕ್ಕೆ ಆಘಾತ ತಂದಿದೆ.

ಈ ಕುರಿತು ನಿಮ್ಮ ಸುವರ್ಣನ್ಯೂಸ್ ನ ಲೆಫ್ಟ್ ರೈಟ್ ಆ್ಯಂಡ್ ಸೆಂಟರ್ ನಲ್ಲಿ ನಡೆದ ಚರ್ಚೆಯ ಸಂಪೂರ್ಣ ಮಾಹಿತಿ ಇಲ್ಲಿದೆ.