ಹೊಸ ವರ್ಷಕ್ಕೆ ಹೊಸ ರೂಲ್ಸ್, BSY ಸರ್ಕಾರಕ್ಕೆ ಹೈಕೋರ್ಟ್ ಶಾಕ್; ಡಿ.21ರ ಟಾಪ್ 10 ಸುದ್ದಿ!

By Suvarna News  |  First Published Dec 21, 2020, 6:26 PM IST

ಹೊಸ ವರ್ಷ ಬರಮಾಡಿಕೊಳ್ಳಲು ಹೊಸ ನಿಯಮ ಪಾಲಿಸಲೇಬೇಕು. ಉಲ್ಲಂಘಿಸಿದರೆ ದುಬಾರಿ ದಂಡ ವಿಧಿಸಲಾಗುತ್ತೆ. ಇನ್ನು ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಎರಡಂಕಿ ದಾಟಲ್ಲ ಎಂದು ಪ್ರಶಾಂತ್ ಕಿಶೋರ್, ಅಮಿತ್ ಶಾಗೆ ಸವಾಲು ಹಾಕಿದ್ದಾರೆ. 800 ವರ್ಷಗಳ ನಂತರ ಗುರು - ಶನಿ ಸಮ್ಮಿಲನ ಸಂಭ್ರಮ ನಡೆಯುತ್ತಿದೆ. ಕೊರೋನಾ ಕಾಲದ ನಿಜ ಹೀರೋ ಸೋನು ಸೂದ್‌ಗೆ ದೇವಾಲಯ, ಸಿದ್ದರಾಮಯ್ಯ ವಿರುದ್ಧ ಕೊಡವ ಸಮುದಾಯ ಆಕ್ರೋಶ ಸೇರಿದಂತೆ ಡಿಸೆಂಬರ್ 21ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.


ಬಂಗಾಳದಲ್ಲಿ 200 ಸ್ಥಾನ ಗೆದ್ದರೆ ಟ್ವಿಟರ್ ತ್ಯಜಿಸುತ್ತೇನೆ; ಅಮಿತ್ ಶಾಗೆ ಪ್ರಶಾಂತ್ ಕಿಶೋರ್ ಸವಾಲು!...

Latest Videos

undefined

2021ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 200 ಸ್ಥಾನ ಗೆಲ್ಲಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ಇದೀಗ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ ಚುನಾವಣಾ ಸ್ಟ್ರಾಟರ್ಜಿ ಜವಾಬ್ದಾರಿ ವಹಿಸಿಕೊಂಡಿರುವ ಪ್ರಶಾಂತ್ ಕಿಶೋರ್ ಹೊಸ ಸವಾಲು ಹಾಕಿದ್ದಾರೆ.

ಕೊರೋನಾ ಲಸಿಕೆ ವಿತರಣೆ ಜತೆಗೆ ಮತ್ತೊಂದು ದೊಡ್ಡ ಕೆಲಸಕ್ಕೆ ಕೈ ಹಾಕಿದ ಕೇಂದ್ರ!...

ಸಿಎಎಗೆ (ಪೌರತ್ವ ತಿದ್ದುಪಡಿ) ಸಂಬಂಧಿಸಿದ ರೀತಿ ರಿವಾಜು ಮತ್ತು ಕಾನೂನುಗಳ ತಿದ್ದುಪಡಿಗೆ ಕೊರೋನಾ ಪರಿಸ್ಥಿತಿ ಸುಧಾರಣೆಯಾದ ನಂತರದಲ್ಲಿ ಚಾಲನೆ ನೀಡಲಾಗುವುದು  ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಮೋದಿಯ ಒಂದು ದೇಶ-ಒಂದು ಚುನಾವಣೆ ನೀತಿ ಜಾರಿಗೊಳಿಸಲು ಚುನಾವಣಾ ಆಯೋಗ ರೆಡಿ!...

ಪ್ರಧಾನಿ ನರೇಂದ್ರ ಮೋದಿ ಒಂದು ದೇಶ- ಒಂದು ಚುನಾವಣೆ ಪರಿಕಲ್ಪನೆಯನ್ನು ಕಳೆದ ಕೆಲ ವರ್ಷಗಳಿಂದ ಒತ್ತಿ ಹೇಳುತ್ತಿದ್ದಾರೆ. ಈ ಮೂಲಕ ಹೊಸ ಭಾರತದ ಕನಸು ಬಿತ್ತಿದ್ದಾರೆ. ಇದೀಗ ಪ್ರಧಾನಿ ಮೋದಿ ಮಾತಿಗೆ ಚುನಾವಣಾ ಆಯೋಗವೂ ತಲೆಯಾಡಿಸಿದೆ. ಹೊಸ ಒಂದು ದೇಶ-ಒಂಜು ಚುನಾವಣೆ ನೀತಿ ಜಾರಿಗೊಳಿಸಲು ಆಯೋಗ ರೆಡಿ ಎಂದಿದೆ.

ಕೊರೋನಾ ಕಾಲದ ನಿಜ ಹೀರೋ ಸೋನು ಸೂದ್‌ಗೆ ದೇವಾಲಯ...

ಕೊರೋನಾ ಸಂಕಷ್ಟದ ಕಾಲದಲ್ಲಿ ಸೋನು ಸೂದ್ ಮಾಡಿರುವ ಮತ್ತು ಮಾಡುತ್ತಿರುವ ಜನಾನುರಾಗಿ ಕೆಲಸಗಳಿಗೆ ಕೊನೆಯೇ ಇಲ್ಲ. ಇದೇ ಕಾರಣಕ್ಕೆ ವಿಶ್ವ ಮಟ್ಟದಲ್ಲಿ ಅವರು ಗುರುತಿಸಿಕೊಂಡಿದ್ದಾರೆ. ತೆಲಂಗಾಣದ ಜನರು ಸೋನು ಸೂದ್ ಗೆ ವಿಶೇಷ ಗೌರವ ಸಲ್ಲಿಸಿದ್ದಾರೆ.

ಅಪಾರ್ಟ್‌ಮೆಂಟ್‌ಗಳಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್; ನಿಯಮ ಉಲ್ಲಂಘಿಸಿದ್ರೆ ಬೀಳುತ್ತೆ ಫೈನ್!...

ಕೋವಿಡ್ 19 2 ನೇ ಅಲೆ ಭೀತಿ ಹಿನ್ನಲೆಯಲ್ಲಿ ಹೊಸ ವರ್ಷಾಚರಣೆ ಹಾಗೂ ಕ್ರಿಸ್‌ಮಸ್‌ಗೆ ಬ್ರೇಕ್‌ ಹಾಕಲಾಗಿದೆ. ಅಪಾರ್ಟ್‌ಮೆಂಟ್‌ಗಳಲ್ಲಿ ನ್ಯೂ ಇಯರ್ ಸೆಲಬ್ರೇಶನ್‌ಗೆ ಬ್ರೇಕ್ ಹಾಕಲಾಗಿದೆ.

ಶಕೀಲಾ ನೋಡಲು ಜನ ಬರದಿದ್ರೆ ಮತ್ಯಾವುದಕ್ಕೆ ಬರ್ತಾರೆ : ಇಂದ್ರಜಿತ್‌...

ಡಿ.25ಕ್ಕೆ 2000 ಥಿಯೇಟರ್‌ಗಳಲ್ಲಿ ಶಕೀಲಾ ರಿಲೀಸ್‌ ಆಗುತ್ತಿದೆ. ಈ ಬಗ್ಗೆ ನಿರ್ದೇಶನ ಇಂದ್ರಜಿತ್ ಲಂಕೇಶ್ ಮಾತನಾಡುತ್ತಿದ್ದಾರೆ. 

800 ವರ್ಷಗಳ ನಂತರ ಗುರು - ಶನಿ ಸಮ್ಮಿಲನ; ಏನೀ ಸೌರಮಂಡಲದ ಅದ್ಭುತ?...

ಖಗೋಳ ವಿಸ್ಮಯಕ್ಕೆ ಇಂದು ಸೌರಮಂಡಲ ಸಾಕ್ಷಿಯಾಗಲಿದೆ. 800 ವರ್ಷಗಳ ನಂತರ ಶನಿ- ಗುರು ಮಕರ ರಾಶಿಯಲ್ಲಿ ಸಂಗಮವಾಗಲಿದೆ.

ಅಕ್ಟೋಬರ್‌ನಲ್ಲಿ 11.55 ಲಕ್ಷ ಉದ್ಯೋಗ ಸೃಷ್ಟಿ: ಕರ್ನಾಟಕ ದೇಶದಲ್ಲಿ ನಂ.2!...

ಕೊರೋನಾದಿಂದ ಮಲಗಿದ್ದ ಆರ್ಥಿಕತೆ ಮತ್ತೆ ಸರಿದಾರಿಗೆ ಬರುತ್ತಿದೆ ಎಂಬ ಮತ್ತಷ್ಟುಸುಳಿವು ಲಭ್ಯವಾಗಿದೆ. ಕಳೆದ ಆಕ್ಟೋಬರ್‌ ತಿಂಗಳಲ್ಲಿ ದೇಶದಲ್ಲಿ 11.55 ಲಕ್ಷ ಹೊಸ ಉದ್ಯೋಗ ಸೃಷ್ಟಿಯಾಗಿದೆ ಎಂದು ಕಾರ್ಮಿಕರ ಭವಿಷ್ಯನಿಧಿ ಮಂಡಳಿಯ ವರದಿ ತಿಳಿಸಿದೆ. 

ಬಿಜೆಪಿ ನಾಯಕರ ಮೇಲಿನ ಕ್ರಿಮಿನಲ್​ ಕೇಸ್​ ವಾಪಸ್: ಸರ್ಕಾರಕ್ಕೆ ಹೈಕೋರ್ಟ್ ಶಾಕ್...

ಹೋರಾಟ ಹಾಗೂ ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಿಜೆಪಿ ನಾಯಕರು ಹಾಗೂ ಬೆಂಬಲಿಗರ ವಿರುದ್ಧ ದಾಖಲಾದ ಕೇಸ್‌ ವಾಪಸ್ ಪಡೆಯಲು ಆದೇಶಿಸಿದ್ದ ಸರ್ಕಾರಕ್ಕೆ ಕೋರ್ಟ್ ಬಿಗ್ ಶಾಕ್ ಕೊಟ್ಟಿದೆ.

ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದ ಕೊಡವ ಸಮುದಾಯ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಯಿಂದ ಕೊಡವ ಸಮುದಾಯಕ್ಕೆ ಅಪಮಾನವಾಗಿದೆ. ಸಿದ್ದರಾಮಯ್ಯ ಈ ಕೂಡಲೇ ಬಹಿರಂಗವಾಗಿ ಕೊಡವರ ಕ್ಷಮೆಯಾಚಿಸಿ, ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಕೊಡವ ಸಮುದಾಯ ಆಗ್ರಹಿಸಿದೆ. 
 

click me!