ಗಪ್ ಚುಪ್ ಇರುವಂತೆ ಬಿಜೆಪಿ ನಾಯಕರಿಗೆ ಸಿಎಂ ಬಿಎಸ್‌ವೈ ಖಡಕ್ ಸೂಚನೆ..!

By Suvarna NewsFirst Published Dec 21, 2020, 4:42 PM IST
Highlights

ಬಿಜೆಪಿ ಜೊತೆ ಜೆಡಿಎಸ್ ವಿಲೀನ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ರಾಜಕಾಣದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಇದೀಗ ಬಿಜೆಪಿ ನಾಯಕರುಗಳಿಗೆ ಲಗಾಮು ಹಾಕಲಾಗಿದೆ.
 

ಬೆಂಗಳೂರು, (ಡಿ.21): ಬಿಜೆಪಿ ಜೊತೆ ಜೆಡಿಎಸ್ ವಿಲೀನ ಮಾಡಿಕೊಳ್ಳುವ ಬಗ್ಗೆ ಅನಗತ್ಯವಾಗಿ ಸಚಿವರಾಗಲಿ ಇಲ್ಲವೇ ಪಕ್ಷದ ಮುಖಂಡರಾಗಲಿ ಹೇಳಿಕೆಗಳನ್ನು ಮಾಧ್ಯಮಗಳಿಗೆ ನೀಡಬಾರದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಖಡಕ್‌ ಸೂಚನೆ ಕೊಟ್ಟಿದ್ದಾರೆ.

ಜೆಡಿಎಸ್ ಒಂದು ರಾಜಕೀಯ ಪಕ್ಷವಾಗಿದ್ದು, ಅವರು ತಮ್ಮ ಪಾಡಿಗೆ ತಾವು ಪಕ್ಷವನ್ನು ಸಂಘಟಿಸುತ್ತಿದ್ದಾರೆ. ಬಿಜೆಪಿ ಜೊತೆ ವಿಲೀನ ಮಾಡಿಕೊಳ್ಳಲಿದೆ ಎಂಬುದರ ಬಗ್ಗೆ ಅನಗತ್ಯವಾಗಿ ಹೇಳಿಕೆಗಳನ್ನು ಯಾರೊಬ್ಬರು ನೀಡಬಾರದು. ಇದರಿಂದ ಗೊಂದಲ ಉಂಟಾಗುತ್ತದೆ ಎಂದು ಬಿಎಸ್‌ವೈ, ತಮ್ಮ ನಾಯರುಗಳಿಗೆ ಸೂಚಿಸಿದ್ದಾರೆ.

'ಜೆಡಿಎಸ್ ವಿಲೀನ ಬಗ್ಗೆ ಮಾತಾಡೋದು ದೇವೇಗೌಡ, ಕುಮಾರಸ್ವಾಮಿಗೆ ಮಾಡೋ ಅವಮಾನ' 

ಈಗಾಗಲೇ ಬಿಜೆಪಿ ಜೊತೆ ಜೆಡಿಎಸ್ ವಿಲೀನ ಎನ್ನುವ ಸುದ್ದಿ ರಾಜ್ಯ ರಾಜಕಾಣದಲ್ಲಿ ಹರಿದಾಡುತ್ತಿದ್ದು, ಇದಕ್ಕೆ ಪುಷ್ಠಿ ನೀಡುವಂತೆ  ರಾಜ್ಯ ಬಿಜೆಪಿ ಉಪಾಧ್ಯಕ್ಷ ಅರವಿಂದ ಲಿಂಬಾವಳಿ ಅವರು ಮುಂದಿನ ದಿನಗಳಲ್ಲಿ ಬಿಜೆಪಿ ಜೊತೆ ವಿಲೀನವಾಗಲಿದೆ ಎಂಬ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು.

ಕೂಡಲೇ ಸಿಎಂ ಬಿಎಸ್‌ವೈ ಪತ್ರಿಕಾ ಪ್ರಕಟಣೆ ಹೊರಡಿಸುವ ಮೂಲಕ, ಇವೆಲ್ಲಾ ಕೇವಲ ವದಂತಿಗಳು ಅಂತೆಲ್ಲಾ ಸ್ಪಷ್ಟನೆ ಕೊಟ್ಟಿದ್ದಾರೆ. ಅಲ್ಲದೇ ಖುದ್ದು ಸಿಎಂ ತಮ್ಮೆಲ್ಲಾ ನಾಯಕರುಗಳಿಗೆ ಈ ಬಗ್ಗೆ ಹುಕ್ಕುಂ ಹೊರಡಿಸಿದ್ದಾರೆ.

click me!