ಅಮ್ಮಂದಿರಿಗೆ ವಿಶ್ವವೇ ಹೇಳಿತು ನಮನ; ದುಬೈನಲ್ಲಿ IPL ನಡೆಸಲು ಆಹ್ವಾನ; ಮೇ.10ರ ಟಾಪ್ 10 ಸುದ್ದಿ!

By Suvarna NewsFirst Published May 10, 2020, 5:26 PM IST
Highlights

ಲಾಕ್‌ಡೌನ್ ಸಡಿಲಿಕೆಯಾದ ಬೆನ್ನಲ್ಲೇ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಾಗತೊಡಗಿದೆ. ಕಳೆದ ನಾಲ್ಕು ದಿನಗಳಲ್ಲಿ ಕರ್ನಾಟಕದಲ್ಲಿ 159 ಹೊಸ ಪ್ರಕರಣಗಳು ದೃಢವಾಗಿದೆ. ಕೊರೋನಾ ಸೋಂಕಿತರಿಗೆ ಸರ್ಕಾರ 3.5 ಲಕ್ಷ ರೂಪಾಯಿ ವೆಚ್ಚಮಾಡುತ್ತಿದೆ.  ಕಾಮಿಡಿ ಚಿತ್ರಕ್ಕಾಗಿ ಬೆತ್ತಲೆ ಫೋಟೋ ಶೂಟ್ ಮಾಡಿದ ಆದಾ ಶರ್ಮಾ. ವಿಶ್ವ ಅಮ್ಮಂದಿನ ದಿನಾಚರಣೆಗೆ ಕ್ರಿಕೆಟಿಗರು, ಸೆಲೆಬ್ರೆಟಿಗಳು ಶುಭಾಶಯ, ದುಬೈನಲ್ಲಿ ಐಪಿಎಲ್ ಆಯೋಜಿಸಲು ಆಹ್ವಾನ ಸೇರಿದಂತೆ ಮಾರ್ಚ್ 10ರ ಟಾಪ್ 10 ಸುದ್ದಿ ಇಲ್ಲಿವೆ. 

ಪಾಕಿಸ್ತಾನ ಗಢ ಗಢ: ಗಡಿಯಲ್ಲಿ ಯುದ್ಧ ವಿಮಾಗಳ ಹಾರಾಟ, ಮತ್ತಷ್ಟು ಕಣ್ಗಾವಲು!

ವಿಶ್ವಾದ್ಯಂತ ಕೊರೋನಾ ಆತಂಕ ಹುಟ್ಟು ಹಾಕಿದೆ. ಭಾರತ ಸೇರಿದಂತೆ ಬಹುತೇಕ ಎಲ್ಲಾ ರಾಷ್ಟ್ರಗಳಿಗೂ ಕೊರೋನಾ ವ್ಯಾಪಿಸಿದ್ದು, ನೆರೆ ರಾಷ್ಟ್ರ ಪಾಕಿಸ್ತಾನದಲ್ಲೂ ಇದು ಅಪಾರ ಸಾವು ನೋವು ಉಂಟು ಮಾಡಿದೆ. ಈ ನಡುವೆ ಪಾಕಿಸ್ತಾನಕ್ಕೆ ಭಾರತದ ಭಯ ಕಾಡಲಾರಂಭಿಸಿದೆ. ಹೌದು ಜಮ್ಮು ಕಾಶ್ಮೀರದ ಹಂದ್ವಾಡಾ ಪ್ರದೇಶದಲ್ಲಿಭಾರತೀಯ ಯೋಧರ ಮೇಲೆ ನಡೆದಿದ್ದ ಉಗ್ರ ದಾಳಿ ಬಳಿಕ ಇದು ತನ್ನ ಗಡಿ ಪ್ರದೇಶದಲ್ಲಿ ಪೆಟ್ರೋಲಿಂಗ್(ಕಣ್ಗಾವಲು) ಹೆಚ್ಚಿಸಿದೆ.

ಲಾಕ್‌ಡೌನ್ ನಡುವೆ ಕೇಂದ್ರದಿಂದ ಹೊಸ ಗೈಡ್‌ಲೈನ್ಸ್!

ಸರ್ಕಾರ ಈಗಾಗಲೇ ಲಾಕ್‌ಡೌನ್ ಸಡಿಲಿಕೆ ನೀಡಿದ್ದು, ಅನೇಕ ಕೆಲಸ ಆರಂಭವಾಗಿವೆ. ಕಾರ್ಖಾನೆಗಳೂ ಆರಂಭವಾಗಿವೆ. ಹೀಗಿರುವಾಗ ಕೇಂದ್ರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಉತ್ಪಾದನೆಗಿಂತ ಹೆಚ್ಚು ಸುರಕ್ಷತೆಗೆ ಗಮನ ನೀಡುವಂತೆ ಸೂಚಿಸಿದೆ.

ಸೋಂಕು ಭಾರಿ ಹೆಚ್ಚಳ!: ರಾಜ್ಯಕ್ಕೆ ಕಂಟಕವಾಯ್ತಾ ಲಾಕ್‌ಡೌನ್ ಸಡಿಲಿಕೆ?

ರಾಜ್ಯದಲ್ಲಿ ಮೇ 4ರ ಲಾಕ್‌ಡೌನ್‌ ಸಡಿಲಿಸಿದ ಬಳಿಕ ಆರೇ ದಿನದಲ್ಲಿ 159 ಪ್ರಕರಣಗಳು ಹೆಚ್ಚಳವಾಗಿವೆ. ಇದರಿಂದ ಲಾಕ್‌ಡೌನ್‌ ಸಡಿಲಿಕೆ ರಾಜ್ಯಕ್ಕೆ ಕಂಟಕವಾಗುತ್ತಿದೆಯೇನೊ ಎಂಬ ಸಂದೇಹ ಮೂಡತೊಡಗಿದೆ.

IPL 2020 ಟೂರ್ನಿ ಆಯೋಜಿಸಲು ಬಿಸಿಸಿಐಗೆ ಆಹ್ವಾನ ನೀಡಿದ ದುಬೈ!

 ಕೊರೋನಾ ವೈರಸ್ ಕಾರಣದಿಂದ ಎಲ್ಲಾ ಕ್ರೀಡಾಕೂಟಗಳು ರದ್ದಾಗಿದೆ. ಐಪಿಎಲ್ ಟೂರ್ನಿ ಆಯೋಜನೆ ಕೂಡ ತಾತ್ಕಾಲಿಕ ರದ್ದಾಗಿದೆ. ಕೊರೋನಾ ವೈರಸ್ ನಿಯಂತ್ರಣಕ್ಕೆ ಬರದ ಕಾರಣ ಒಂದೊಂದೆ ಕ್ರಿಕೆಟ್ ಟೂರ್ನಿಗಳು ರದ್ದಾಗುತ್ತಿದೆ. ಇದೀಗ ಮುಂಬರುವ ಟಿ20 ವಿಶ್ವಕಪ್ ಆಯೋಜನೆಯೇ ಸವಾಲಾಗಿ ಪರಿಣಮಿಸಿದೆ. ಇದರ ಬೆನ್ನಲ್ಲೇ ಬಿಸಿಸಿಐಗೆ ಯುಎಇ ಆಹ್ವಾನ ನೀಡಿದೆ. 2020ರ ಐಪಿಎಲ್ ಟೂರ್ನಿಯನ್ನು ದುಬೈನಲ್ಲಿ ಆಯೋಜಿಸಲು ಮನವಿ ಮಾಡಿದೆ. 

ಕಾಮಿಡಿ ಸಿನಿಮಾಗೆ ಕನ್ನಡ ನಟಿ ಬೆತ್ತಲೆ ಫೋಟೋಶೂಟ್; ನೋಡಿದ್ರೆ ಶಾಕ್..!

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ಜೋಡಿಯಾಗಿ 'ರಣವಿಕ್ರಮ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ ನಟಿ ಅದಾಶರ್ಮಾ ಈಗಿನ ಅವತಾರ ನೋಡಿದರೆ ಅಚ್ಚರಿಯಾಗುವುದು ಖಚಿತ

ಅಮ್ಮನೆಂಬ ದೇವತೆಗೆ ಸ್ಯಾಂಡಲ್‌ವುಡ್ ನಟಿಯರು ಕೃತಜ್ಞತೆ ಸಲ್ಲಿಸಿದ್ದು ಹೀಗೆ..!...

ಅಮ್ಮಂದಿರ ದಿನ ಸ್ಯಾಂಡಲ್‌ವುಡ್ ಸೆಲೆಬ್ರೆಟಿಗಳು ಶುಭಕೋರಿದ್ದಾರೆ. ತಾಯಿಯ ತ್ಯಾಗ, ಮಮಕಾರವನ್ನು ಸಾರಿ ಹೇಳಿದ್ದಾರೆ. 

ಮಾರಾಟ ಹೆಚ್ಚಿಸಲು ಮಾರುತಿ ಸ್ವಿಫ್ಟ್, ಬಲೆನೋ ಕಾರಿಗೆ ಭರ್ಜರಿ ಡಿಸ್ಕೌಂಟ್!

ಲಾಕ್‌ಡೌನ್ ಸಡಿಲಿಕೆಯಾದ ಬೆನ್ನಲ್ಲೇ ಹಲವು ಆಟೋಮೊಬೈಲ್ ಕಂಪನಿಗಳು ಕಾರ್ಯರಂಭಿಸಿದೆ. ಉತ್ಪಾನೆ ಕೂಡ ಆರಂಭಿಸಿದೆ. ಇದರ ಬೆನ್ನಲ್ಲೇ ಕೆಲ ಡೀಲರ್‌ಗಳು ಮಾರಾಟ ಉತ್ತೇಜಿಸಲು ಮಾರುತಿ ಸುಜುಕಿ ಆಯ್ದ ಕಾರುಗಳ ಮೇಲೆ ಡಿಸ್ಕೌಂಟ್ ಘೋಷಿಸಿದ್ದಾರೆ. 


ಕೊಹ್ಲಿ, ಯುವಿ, ಸಚಿನ್ ಸೇರಿದಂತೆ ಕ್ರೀಡಾ ತಾರೆಗಳಿಂದ ಅಮ್ಮಂದಿರ ದಿನದ ಶುಭಾಶಯ!...

ವಿಶ್ವದೆಲ್ಲೆಡೆ ಅಮ್ಮಂದಿನ ದಿನವನ್ನು ಆಚರಿಸಲಾಗುತ್ತಿದೆ. ಭಾರತದಲ್ಲಿ ಪ್ರತಿ ದಿನವೂ ಅಮ್ಮಂದಿರ ದಿನ ಅಂದರೂ ತಪ್ಪಲ್ಲ. ಕಾರಣ ಪ್ರತಿಯೊಬ್ಬರ ಸಾಧನೆ ಹಿಂದೆ ತಾಯಿಯ ತ್ಯಾಗ, ಮಮಕಾರ, ಪ್ರೋತ್ಸಾಹ, ಬೆಂಬಲ, ಆರೈಕೆ ಇದೆ. ಇದೀಗ ಅಮ್ಮಂದಿನ ದಿನಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರು, ಭಾರತೀಯ ಕ್ರೀಡಾ ತಾರೆಗಳು ಸೇರಿದಂತೆ ಹಲವು ಶುಭಕೋರಿದ್ದಾರೆ. 

ದೇಶದಲ್ಲಿ 2000 ಸಾವು: ಒಂದೇ ದಿನ 112 ಬಲಿ, 3413 ಹೊಸ ಕೇಸ್‌!

ಶನಿವಾರ ದೇಶಾದ್ಯಂತ 3413 ಹೊಸ ಕೊರೋನಾ ಸೋಂಕಿತರು ಪತ್ತೆಯಾಗಿದ್ದು, 112 ಜನ ಬಲಿಯಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 62513ಕ್ಕೆ ಏರಿದ್ದರೆ, ಸಾವಿನ ಸಂಖ್ಯೆ 2016ಕ್ಕೆ ತಲುಪಿದೆ. 2020ರ ಜ.30ರಂದು ಕೇರಳದಲ್ಲಿ ಮೊದಲಿಗೆ ಕಾಣಿಸಿಕೊಂಡು, ಮಾ.12ರಂದು ಕರ್ನಾಟಕದಲ್ಲಿ ಮೊದಲ ಬಲಿ ಪಡೆದಿದ್ದ ಕೊರೋನಾ ಸೋಂಕು, ನಂತರದ 58 ದಿನಗಳಲ್ಲಿ 2000ನೇ ಬಲಿ ಪಡೆದಂತೆ ಆಗಿದೆ.


ಕೊರೋನಾ ಚಿಕಿತ್ಸೆಗೆ ಪ್ರತಿ ವ್ಯಕ್ತಿಗೆ 3.5 ಲಕ್ಷ ರೂ. ವೆಚ್ಚ!

ರಾಜ್ಯದಲ್ಲಿ ಕೊರೋನಾ ಸೋಂಕಿತ ವ್ಯಕ್ತಿಗಳ ಚಿಕಿತ್ಸೆಗೆ ಸರ್ಕಾರ ಮಾಡುತ್ತಿರುವ ವೆಚ್ಚ ಎಷ್ಟುಗೊತ್ತಾ? ಪ್ರತಿ ಸೋಂಕಿತ ವ್ಯಕ್ತಿಗೆ ಸರಾಸರಿ ಮೂರೂವರೆ ಲಕ್ಷ ರು.ವರೆಗೂ ಅಂದಾಜು ಚಿಕಿತ್ಸಾ ವೆಚ್ಚ ತಗಲುತ್ತಿದೆ. ಆಶ್ಚರ್ಯವಾದರೂ ಇದು ನಿಜ.

click me!