ವಿಶಾಖಪಟ್ಟಣ ಅನಿಲ ದುರಂತ/ ನೂರಾರು ಜನರ ಪ್ರಾಣ ಕಾಪಾಡಿದ ಪಬ್ ಜಿ / ಗೆಳೆಯರಿಬ್ಬರ ಸಾಹಸ/ ಪೊಲೀಸರಿಗೆ ಮೊದಲು ಮಾಹಿತಿ ತಿಳಿಸಿದ ಯುವಕ
ವಿಶಾಖಪಟ್ಟಣ(ಮೇ 10) ಪಬ್ ಜಿ ಎಂಬ ಮೊಬೈಲ್ ಗೇಮ್ ಆಡುವವರನ್ನು ಸಿಕ್ಕಾಪಟ್ಟೆ ಬೈಯುತ್ತಾರೆ. ಅವರಿಗೂ ಒಂದು ಕಾಲ ಬರುತ್ತದೆ ಈ ಘಟನೆಯೇ ಸಾಕ್ಷಿ. ಆಂಧ್ರ ಪ್ರದೇಶದ ವಿಶಾಖಪಟ್ಟಣ ಘಟನೆಯಲ್ಲಿ ಅನೇಕ ಜನರ ಪ್ರಾಣ ಉಳಿಸಲು ಪಬ್ ಜಿ ಗೇಮ್ ಕಾರಣ! ಹೌದು ಈ ಸುದ್ದಿಯನ್ನು ನಂಬಲೇಬೇಕು .
ಆಗಿದ್ದಿಷ್ಟು.. ಗ್ಯಾಸ್ ಲೀಕ್ ಆದ ಕಂಪನಿಯ ಸುತ್ತಲಿನ ಪ್ರದೇಶದಲ್ಲಿ ವಾಸ ಮಾಡುತ್ತಿದ್ದ ಸುರೇಶ್ ಮಧ್ಯರಾತ್ರಿಯಾದರೂ ಪಬ್ ಜಿ ಆಡುತ್ತಿದ್ದ. ಗ್ಯಾಸ್ ಲೀಕ್ ಆದ ನಂತರ ಈತನ ಮೂಗಿಗೆ ವಾಸನೆ ಬಡಿದಿದೆ. ಸುರೇಶ್ ಸ್ನೇಹಿತ ಕಿರಣ ಕರೆ ಮಾಡಿ ಗ್ಯಾಸ್ ವಾಸನೆ ಬಗ್ಗೆ ಹೇಳಿದ್ದಾನೆ.
undefined
ಉಸಿರಾಡುವ ಗಾಳಿಯೇ ವಿಷವಾದಾಗ, ವಿಶಾಖಪಟ್ಟಣದ ಕತೆ!
ತಕ್ಷಣ ಎಚ್ಚೆತ್ತುಕೊಂಡ ಸುರೇಶ್ ಪೊಲೀಸರಿಗೆ ವಿಷಯ ಮುಟ್ಟಿಸಿದ. ಇದರ ಪರಿಣಾಮವಾಗಿಯೇ ಸಾಕಷ್ಟು ಜನರನ್ನು ಹೊರಗೆ ತರಲಾಯಿತು. ಪಬ್ ಜಿ ಆಡುತ್ತಿದ್ದ ಸುರೇಶ್ ಅವರಿಗೆ ಒಂದು ಅಭಿನಂದನೆ ಹೇಳಲೇಬೇಕು.
11 ಮಂದಿಯ ಸಾವಿಗೆ ಕಾರಣವಾದ ವೈಜಾಗ್ ವಿಷಾನಿಲ ಸೋರಿಕೆ ಕಾರಣವಾಗಿತ್ತು. ಗ್ಯಾಸ್ ಲೀಕ್ ಆದ ಎಲ್‌ಜಿ ಪಾಲಿಮರ್ಸ್ ಇಂಡಿಯಾಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ 50 ಕೋಟಿ ದಂಡ ವಿಧಿಸಿತ್ತು.
ಅಲ್ಲದೆ ಈ ನಡುವೆ, ವಿಷಾನಿಲ ಸೋರಿಕೆ ಕುರಿತು ತನಿಖೆ ನಡೆಸಲು ಅತ್ಯುನ್ನತ ಸಮಿತಿಯೊಂದನ್ನು ಆಂಧ್ರ ಮುಖ್ಯ ಕಾರ್ಯದರ್ಶಿ ನೀಲಂ ಸಾಹ್ನೆ ಅವರು ರಚನೆ ಮಾಡಿದ್ದಾರೆ. ವಿಷಾನಿಲದಿಂದ ಕಾರ್ಖಾನೆ ಸುತ್ತಮುತ್ತಲ ಗ್ರಾಮಗಳ ಜನರ ಮೇಲೆ ದೀರ್ಘಾವಧಿಯಲ್ಲಿ ಯಾವುದಾದರೂ ಪರಿಣಾಮಗಳು ಆಗುತ್ತವೆಯೇ ಎಂಬುದರ ಬಗ್ಗೆಯೂ ಅಧ್ಯಯನ ನಡೆಸಲು ಉದ್ದೇಶಿಸಲಾಗಿದೆ.