ದೇಶದೆಲ್ಲೆಡೆ ಮಹತ್ಮಾ ಗಾಂಧಿ ಹಾಗೂ ದೇಶದ 2ನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ದಿನವೇ ಕರ್ನಾಟಕದಲ್ಲಿ ಪ್ರತಿಭಟನೆ ಕೂಗು ಕೇಳಿ ಬರುತ್ತಿದೆ. ಭೀಕರ ನೆರೆಗೆ ತುತಾಗಿರುವ ಕರ್ನಾಟಕವನ್ನು ನಿರ್ಲಕ್ಷ್ಯಿಸಿರುವ ಕೇಂದ್ರದ ವಿರುದ್ಧ ಪ್ರತಿಭಟನೆ ಕಾವು ಹೆಚ್ಚಾಗುತ್ತಿದೆ. ಇತ್ತ ರೋಹಿತ್ ಶರ್ಮಾ ಭರ್ಜರಿ ಶತಕದ ನೆರವಿನಿಂದ ಟೀಂ ಇಂಡಿಯಾ, ಸೌತ್ ಆಫ್ರಿಕಾ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ಅಬ್ಬರಿಸಿದೆ. ದೀಪಿಕಾ ಪಡುಕೋಣೆ ಕನವರಿಕೆ, ಸುವರ್ಣನ್ಯೂಸ್ ಇಂಪ್ಯಾಕ್ಟ್ ಸೇರಿದಂತೆ ಅ.2 ರಂದು ಸಂಚಲನ ಮೂಡಿಸಿದ ಟಾಪ್ 10 ಸುದ್ದಿ ಇಲ್ಲಿವೆ.
1) ಗಾಂಧಿ @150: ದೇಶಾದ್ಯಂತ ಹೀಗಿತ್ತು ರಾಷ್ಟ್ರಪಿತನ ಹುಟ್ಟುಹಬ್ಬದ ಸಂಭ್ರಮ!
undefined
ರಾಷ್ಟ್ರಪಿತ ಮಹಾತ್ಮ ಗಾಂಧಿ 150ನೇ ಜಯಂತಿ. ಪ್ಲಾಸ್ಟಿಕ್ ವಿರೋಧಿ, ಸ್ವಚ್ಛತೆ, ಸೇರಿ ಹಲವು ಅಭಿಯಾನಗಳ ಮೂಲಕ ಬಾಪುವಿನ ಕನಸು ನನಸು ಮಾಡಲು ಸಕಲ ಪ್ರಯತ್ನಗಳು ನಡೆಯುತ್ತಿವೆ. ಗಾಂಧಿ ಸ್ಮರಣಾರ್ಥ ಬಿಜೆಪಿ ಸಂಕಲ್ಪ ಯಾತ್ರೆ ನಡೆಸಿದರೆ, ಕಾಂಗ್ರೆಸ್ ಪಾದಯಾತ್ರೆ ನಡೆಸಿದೆ. ರಾಷ್ಟ್ರಪಿತನ 150ನೇ ಜನ್ಮದಿನವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗಿದೆ.
2) ಕರ್ನಾಟಕದ ಮೇಲೇಕೆ ಕೋಪ? ಪಿಎಂ ಮೌನಕ್ಕೆ ಹತ್ತಾರು ವ್ಯಾಖ್ಯಾನಗಳು!
ಪ್ರಧಾನಿ ನರೇಂದ್ರ ಮೋದಿಗೆ ಕರ್ನಾಟಕದ ಮೇಲೆ ಕೋಪ ಇದೆಯಾ? ಹೀಗಾಗಿಯೇ ಪ್ರವಾಹಕ್ಕೀಡಾದ ಕರ್ನಾಟಕಕ್ಕೆ ಪರಿಹಾರ ನೀಡದೇ ಸತಾಯಿಸುತ್ತಿದ್ದಾರಾ? ಕರ್ನಾಟಕ ಮಂದಿ ಸದ್ಯ ಈ ನಡೆಯಿಂದ ಬೇಸತ್ತು ಕೇಂದ್ರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಬಿಜೆಪಿ ಸಂಸದರೂ ಚಿತ್ರ, ವಿಚಿತ್ರ ಹೇಳಿಕೆಗಳನ್ನು ನೀಡಿದ್ದು ಇದು ಕನ್ನಡಿಗರನ್ನು ಮತ್ತಷ್ಟು ಕೆರಳಿಸಿದೆ. ಇವೆಲ್ಲದರ ನಡುವೆ ಮೋದಿಯ ಮೌನಕ್ಕೆ ಹತ್ತಾರು ವ್ಯಾಖ್ಯಾನಗಳು ಹುಟ್ಟಿಕೊಳ್ಳಲಾರಂಭಿಸಿವೆ.
3) INDvSA 1ನೇ ಟೆಸ್ಟ್; ಮೊದಲ ದಿನದಾಟ ರದ್ದು, ಭಾರತಕ್ಕೆ ನಿರಾಸೆ!...
ಸೌತ್ ಆಫ್ರಿಕಾ ವಿರುದ್ದದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಅಬ್ಬರಿಸಿದ ಟೀಂ ಇಂಡಿಯಾಗೆ ಮಳೆರಾಯ ಅಡ್ಡಿಯಾಗಿದ್ದಾನೆ. ರೋಹಿತ್ ಶರ್ಮಾ ಶತಕ ಹಾಗೂ ಮಯಾಂಕ್ ಅಗರ್ವಾಲ್ ಅರ್ಧಶತಕದ ನೆರವಿನಿಂದ ಬೃಹತ್ ಮೊತ್ತದತ್ತ ಮುನ್ನಗ್ಗುತ್ತಿದ್ದ ಭಾರತಕ್ಕೆ ಕೊಂಚ ನಿರಾಸೆಯಾಗಿದೆ. ಮಳೆಯಿಂದಾಗಿ ಮೊದಲ ದಿನದಾಟ ರದ್ದಾಗಿದೆ.
4) ರೋಹಿತ್ ಒಂದು ಶತಕ; ಹಲವಾರು ದಾಖಲೆ ನಿರ್ಮಾಣ..!
ಕೆ.ಎಲ್. ರಾಹುಲ್ ಟೆಸ್ಟ್ ಕ್ರಿಕೆಟ್’ನಲ್ಲಿ ಸತತ ವೈಫಲ್ಯ ಅನುಭವಿಸಿದ್ದರಿಂದ ಅವರನ್ನು ಕೈ ಬಿಟ್ಟು, ರೋಹಿತ್’ಗೆ ಆರಂಭಿಕನಾಗಿ ತಂಡ ಕಣಕ್ಕಿಳಿಸಿತು. ಸಿಕ್ಕ ಅವಕಾಶವನ್ನು ಎರಡು ಕೈಗಳಿಂದ ಬಾಚಿಕೊಳ್ಳುವಲ್ಲಿ ಮುಂಬೈಕರ್ ಯಶಸ್ವಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್ ನಲ್ಲಿ ಆರಂಭಿಕನಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ನಿರ್ಭಯವಾಗಿ ಬ್ಯಾಟ್ ಬೀಸಿದರು.
5) ಮಧ್ಯರಾತ್ರಿ ಶಾರೂಕ್ ನೆನೆಸಿಕೊಂಡು ‘ನನಗೆ ಕಾಲ್ ಮಾಡಬೇಕಿತ್ತು’ ಎಂದು ಟ್ವೀಟ್ ಮಾಡಿದ ದೀಪಿಕಾ!
'ಪದ್ಮಾವತ್' ನಟಿ ದೀಪಿಕಾ ಪಡುಕೋಣೆ, ಶಾರೂಕ್ ಖಾನ್ ಬಾಲಿವುಡ್ ನ ಆತ್ಮೀಯ ಸ್ನೇಹಿತರು. ಇಬ್ಬರೂ ಆಗಾಗ ತಮಾಷೆ ಮಾಡಿಕೊಳ್ಳುತ್ತಾ ಮಜಾ ತೆಗೆದುಕೊಳ್ಳುತ್ತಾರೆ. ಶಾರೂಕ್ ಖಾನ್ ಬ್ಲಾಕ್ ಆ್ಯಂಡ್ ವೈಟ್ ಫೋಟೋ ಹಾಕಿ ‘ ನನ್ನ ಲೈಬ್ರರಿಯನ್ನು ಕ್ಲೀನ್ ಮಾಡಲು ರಾತ್ರಿ ಬೆಳಗಾಯಿತು. ಪುಸ್ತಕಗಳ ಘಮಟು ವಾಸನೆ, ಧೂಳು ಒಂಥರಾ ಖುಷಿ ನೀಡಿತು’ ಎಂದು ಟ್ವೀಟ್ ಮಾಡಿದ್ದಾರೆ.
6) ಚಾಮರಾಜನಗರ: 'ಪ್ರತಾಪ್ ಸಿಂಹ ಅವ್ರನ್ನು ಗಡಿಪಾರು ಮಾಡಿ'!
ಮಹಿಷಾ ದಸರಕ್ಕೆ ಅಡ್ಡಿಪಡಿಸಿದ ಸಂಸದ ಪ್ರತಾಪ್ ಸಿಂಹ ಅವರನ್ನು ಗಡಿಪಾರು ಮಾಡಬೇಕು ಎಂದು ದಲಿತ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮತ್ತು ಸಂಸದ ಪ್ರತಾಪ ಸಿಂಹ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದ್ದಾರೆ.
7) ದೀಪಾವಳಿಗೆ ಆದಾಯ ತೆರಿಗೆ ಕಡಿತ ಘೋಷಣೆ ಬಂಪರ್?
ಹಿಂಜರಿತಕ್ಕೆ ಒಳಗಾಗಿರುವ ದೇಶದ ಆರ್ಥಿಕತೆಯನ್ನು ಮೇಲೆತ್ತಲು ಹತ್ತು ದಿನಗಳ ಹಿಂದೆ ಕಾರ್ಪೋರೆಟ್ ತೆರಿಗೆಯನ್ನು ಶೇ.10ರಷ್ಟುಇಳಿಕೆ ಮಾಡಿದ್ದ ಕೇಂದ್ರ ಸರ್ಕಾರ, ಆದಾಯ ತೆರಿಗೆ ಪಾವತಿಸುವವರಿಗೆ ಬಂಪರ್ ಕೊಡುಗೆಯೊಂದನ್ನು ಘೋಷಿಸಲು ತಯಾರಿ ನಡೆಸುತ್ತಿದೆ. ಆದಾಯ ತೆರಿಗೆ ಸ್ಲಾಯಬ್‌ಗಳನ್ನು ಕಡಿತಗೊಳಿಸುವ ಮೂಲಕ ಜನರು ಹೆಚ್ಚು ಹೆಚ್ಚು ಖರ್ಚು ಮಾಡುವಂತೆ, ತನ್ಮೂಲಕ ಆರ್ಥಿಕತೆ ಸರಿದಾರಿಗೆ ಬರುವಂತೆ ಮಾಡಲು ಚಿಂತನೆ ನಡೆಸುತ್ತಿದೆ.
8) ಒಂದು ಮೇಕೆ ಸಾವಿನಿಂದ ಕೋಟ್ಯಾಂತರ ರೂಪಾಯಿ ನಷ್ಟವೆದುರಿಸಿದ ಕಂಪೆನಿ!
ಒಡಿಶಾದಲ್ಲಿ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟ ಮೇಕೆಯಿಂದಾಗಿ ಮಹಾನದಿ ಕೋಲ್ ಲಿಮಿಟೆಡ್[ಕಲ್ಲಿದ್ದಲು ಕಂಪೆನಿ]ಗೆ 2.68 ಕೋಟಿ ರೂಪಾಯಿ ನಷ್ಟವಾಗಿದೆ. ಹೌದು ಮೇಕೆ ಮೃತಪಟ್ಟ ಬಳಿಕ ನಡೆದ ಆಂದೋಲನದಿಂದ ಕಂಪೆನಿಯ ಕೆಲಸದಲ್ಲಿ ತೊಡಕುಂಟಾಗಿದೆ. ಈ ಕರಣದಿಂದ ಕಂಪೆನಿಯು ಇಷ್ಟು ಪ್ರಮಾಣದ ನಷ್ಟವನ್ನೆದುರಿಸಿದೆ.
9) ಗೆದ್ದು ಬರುತ್ತೇನೆ, ಬಿಜೆಪಿ ನಾಯಕರ ಬಂಡವಾಳ ಬಿಚ್ಚಿಡುತ್ತೇನೆ: ಡಿಕೆಶಿ ಗುಡುಗು
ನಾನು ಎಲ್ಲವನ್ನು ಗೆದ್ದು ಬರುತ್ತೇನೆ, ಬಿಜೆಪಿ ನಾಯಕರ ಬಂಡವಾಳ ಬಿಚ್ಚಿ ಇಡುತ್ತೇನೆ, ನಾನೊಬ್ಬನೇ ತಪ್ಪು ಮಾಡಿದ್ದಾ? ಎಲ್ಲದಕ್ಕೂ ಉತ್ತರ ಕೊಡುತ್ತೇನೆ’ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಎಂದು ಗುಡುಗಿದ್ದಾರೆ.
10) ಸುವರ್ಣ ನ್ಯೂಸ್ ಇಂಪ್ಯಾಕ್ಟ್: 95ರ ಗಂಗಮ್ಮಜ್ಜಿಗೆ ನಾಡ ದೊರೆ ಕೊಟ್ಟ ಮಾತು ತಪ್ಪಲಿಲ್ಲ!
ಬರ್ಮಾದ ರಂಗೂನ್ ಮೂಲದ , ಬ್ರಿಟೀಷರ ಕಾಲದಲ್ಲಿ ಮಿಲಿಟರಿ ಮ್ಯಾನ್ ಆಗಿದ್ದ ಎ.ಸುಬ್ಬನಾಯ್ಡು ರವರ ಪತ್ನಿ ಎ.ಎಸ್.ಗಂಗಮ್ಮ ಎಂಬ ಹಣ್ಣು ಹಣ್ಣು ಅಜ್ಕಿಗೆ ಕೊನೆಗೂ ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಂದಿಸಿದ್ದಾರೆ. ಅವರಿಗೆ 5ಲಕ್ಷ ರೂ ಪರಿಹಾರದ ಜತೆಗೆ ಉಚಿತ ಸೈಟ್, ಮನೆ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಅಜ್ಜಿಗೆ ಮನೆಯ ಹಕ್ಕು ಪತ್ರ ನೀಡಿ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.