ರಾಷ್ಟ್ರಪಿತನಿಗೆ ಹಾಡಿನ ಮೂಲಕ ನಮನ ಸಲ್ಲಿಸಿದ ಪ್ರೊ. ಬಿ ಆರ್ ಪೊಲೀಸ್ ಪಾಟೀಲ

By Akshit Choudhary  |  First Published Oct 2, 2019, 1:32 PM IST

ಇಡೀ ವಿಶ್ವಕ್ಕೇ ಅಹಿಂಸೆಯ ತತ್ವ ಸಾರಿದ ಹಾಗೂ ಅಹಿಂಸಾ ಹೋರಾಟದ ಮೂಲಕವೇ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150 ನೇ ವರ್ಷಾಚರಣೆ ಈ ವರ್ಷವಿಡೀ ಅದ್ಧೂರಿಯಾಗಿ ನಡೆಯಲಿದೆ. ಗಾಂಧೀಜಿ ಎಂದರೆ ಅಹಿಂಸೆ ಹಾಗೂ ಭಾರತ ಎಂದು ಜಗತ್ತಿನ ಮೂಲೆಮೂಲೆಯ ಜನರೂ ಗುರುತಿಸುವಂತೆ ಮಾಡಿದ ಬಾಪು ಅವರ ಜನ್ಮದಿನವನ್ನು ದೇಶದೆಲ್ಲೆಡೆ ಆಚರಿಸಲಾಗುತ್ತಿದೆ. 


ಅಕ್ಟೋಬರ್ 2 ಬಂದರೆ ಸಾಕು ದೇಶದೆಲ್ಲೆಡೆ ಗಾಂಧಿಜಯಂತಿ ಸಂಭ್ರಮ ಸಡಗರ ಕಳೆಗಟ್ಟುತ್ತದೆ. ದೇಶವಷ್ಟೇ ಏಕೆ ಜಗತ್ತಿನ ಮೂಲೆ ಮೂಲೆಗಳಲ್ಲಿ ಅಂದು ಗಾಂಧೀಜಿ ಸ್ಮರಿಸುವ ಚಟುವಟಿಕೆಗಳು ನಡೆಯುತ್ತವೆ. ಅಂದು ಖಾದಿ ಬಟ್ಟೆಗಳ ಮೇಲೆ ಖಾದಿ ಉತ್ಪನ್ನಗಳ ಮೇಲೆ ರಿಯಾಯತಿ ಘೋಷಿಸುವ ಮೂಲಕ ಸರ್ಕಾರ ಖಾದಿ ಬಳಕೆಗೆ ಪ್ರೋತ್ಸಾಹ ನೀಡಿದರೆ, ಗಾಂಧಿ ತತ್ವಗಳಾದ ಸತ್ಯ, ಅಹಿಂಸೆ, ದುಶ್ಚಟಗಳ ನಿವಾರಣೆ, ಸ್ವಾವಲಂಬನೆ ಇತ್ಯಾದಿ ಅವರ ಬದುಕಿನ ಅಂಶಗಳ ಮೇಲೆ ಬೆಳಕು ಚೆಲ್ಲುವ ವಿಚಾರಗಳತ್ತ ವಿವಿಧ ಉಪನ್ಯಾಸಗಳು ಜರಗುತ್ತವೆ. ಗಾಂಧೀ ಬದುಕಿನ ಧಾರೆಗಳನ್ನು ಶಾಲೆಗಳಲ್ಲಿ ಮಕ್ಕಳಿಗೆ ತಿಳಿಸುತ್ತೇವೆ. ಹೀಗೆ ಎಲ್ಲ ವಿಧದಲ್ಲಿಯೂ ಗಾಂಧೀಜಿಯವರ ಸ್ಮತಿಯನ್ನು ಮಾಡುತ್ತೇವೆ. 

ವಿದೇಶಿ ಅಂಚೆ ಚೀಟಿಯಲ್ಲೂ ಗಾಂಧಿ ವಿರಾಜಮಾನ!

Latest Videos

undefined

ಇಲ್ಲೊಬ್ಬ ಗಾಂಧಿ ಅನುಯಾಯಿ ಹಾಡಿನ ಮೂಲಕ ಗಾಂಧಿ ತಾತನಿಗೆ ನಮನ ಸಲ್ಲಿಸಿದ್ದಾರೆ.  ಪ್ರೊ. ಬಿ ಆರ್ ಪೊಲೀಸ್ ಪಾಟೀಲ ಮಹಾತ್ಮ ಗಾಂಧಿ ಬಗ್ಗೆ ಸಾಹಿತ್ಯ ಬರೆದು ರಾಗ ಸಂಯೋಜನೆಯನ್ನೂ ಮಾಡಿದ್ದಾರೆ. ಗಾಯನ ಹಾಗೂ ಸಂಗೀತ ನಿರ್ದೇಶನವನ್ನು ಪಂ. ಶರಣ್ ಚೌಧರಿ ಮಾಡಿದ್ದಾರೆ. ಪ್ರೊ. ಬಿ ಆರ್ ಪೊಲೀಸ್ ಪಾಟೀಲ ಅವರು ವಿಜಯಪುರದವರಾಗಿದ್ದು ರಾಜ್ಯೋತ್ಸವ ಪ್ರಶಸ್ತಿ ವಿಜೇತರಾಗಿದ್ದಾರೆ. ಇಲ್ಲಿದೆ ಹಾಡು ನೀವೂ ಒಮ್ಮೆ ಕೇಳಿ. 

 


 

click me!