ಬದಲಾಯ್ತು ಮಾಪನ: ಕೇಜಿ ತೂಕ ಹಾಕಲು ಇನ್ನು ಹೊಸ ವಿಧಾನ

By Web DeskFirst Published Nov 17, 2018, 10:16 AM IST
Highlights

ಘನ ವಸ್ತುವನ್ನು ತೂಕ ಹಾಕಲು ಕಿಲೋ ಗ್ರಾಂ ಅಥವಾ ಕೆ.ಜಿ. ಎಂಬ ಮಾಪನವನ್ನು ಬಳಸುತ್ತೇವೆ. ಆದರೆ ಈಗ ಕೆ.ಜಿ.ಯನ್ನು ಲೆಕ್ಕ ಹಾಕುವ ವ್ಯವಸ್ಥೆಯನ್ನೇ ಬದಲಿಸಲು ಫ್ರಾನ್ಸ್‌ನಲ್ಲಿ ಸಭೆ ಸೇರಿದ್ದ 57 ರಾಷ್ಟ್ರದ ಪ್ರತಿನಿಧಿಗಳು ನಿರ್ಧರಿಸಿದ್ದಾರೆ. 

ಘನ ವಸ್ತುವನ್ನು ತೂಕ ಹಾಕಲು ಕಿಲೋ ಗ್ರಾಂ ಅಥವಾ ಕೆ.ಜಿ. ಎಂಬ ಮಾಪನವನ್ನು ಬಳಸುತ್ತೇವೆ. ಆದರೆ ಈಗ ಕೆ.ಜಿ.ಯನ್ನು ಲೆಕ್ಕ ಹಾಕುವ ವ್ಯವಸ್ಥೆಯನ್ನೇ ಬದಲಿಸಲು ಫ್ರಾನ್ಸ್‌ನಲ್ಲಿ ಸಭೆ ಸೇರಿದ್ದ 57 ರಾಷ್ಟ್ರದ ಪ್ರತಿನಿಧಿಗಳು ನಿರ್ಧರಿಸಿದ್ದಾರೆ. ಹೊಸ ವ್ಯವಸ್ಥೆಯಿಂದ ದೈನಂದಿನ ಜೀವನದ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ. ಅಂಗಡಿಯವ ತೂಕ ಮಾಡುವ ವಿಧಾನವೂ ಬದಲಾವಣೆಯಾಗುವುದಿಲ್ಲ. ಆದರೆ ವಿಶ್ವಕ್ಕೆ ಅತ್ಯಂತ ನಿಖರವಾದ ‘ಕಿಲೋಗ್ರಾಂ’ ಲಭ್ಯವಾಗುತ್ತದೆ. ತೂಕ ಎಂಬುದು ಅತ್ಯಂತ ನಿಖರವಾಗಿರಲೇಬೇಕು. ಔಷಧ ಅಭಿವೃದ್ಧಿ, ನ್ಯಾನೋ ತಂತ್ರಜ್ಞಾನ ಹಾಗೂ ಎಂಜಿನಿಯರಿಂಗ್‌ ಕ್ಷೇತ್ರಕ್ಕೆ ಕೆ.ಜಿ. ಕರಾರುವಾಕ್ಕಾಗಿರಬೇಕು.

ಯಾಕೆ ಬದಲಾವಣೆ?

1 ಕೆ.ಜಿ. ಎಂದರೆ ಎಷ್ಟುಎಂಬುದನ್ನು ಮಾಪನ ಮಾಡುವುದಕ್ಕೆ 1889ರಿಂದ ಒಂದೇ ವ್ಯವಸ್ಥೆ ಬಳಸಲಾಗುತ್ತಿದೆ. ಅದನ್ನು ‘ಲೇ ಗ್ರ್ಯಾಂಡ್‌ ಕೆ’ ಎಂದು ಕರೆಯಲಾಗುತ್ತದೆ. ಶೇ.90ರಷ್ಟುಪ್ಲಾಟಿನಂ ಹಾಗೂ ಶೇ.10ರಷ್ಟುಇರಿಡಿಯಂ ಅನ್ನು ಮೂರು ಸುತ್ತಿನ ಗಾಜಿನ ಕವಚದಲ್ಲಿ ಸಂರಕ್ಷಿಸಿ, ಅದನ್ನೇ ಮಾಪನವಾಗಿ ಪರಿಗಣಿಸಲಾಗುತ್ತಿದೆ. ಇದರ ಪ್ರಮುಖ ಮಾದರಿ ಫ್ರಾನ್ಸ್‌ನ ಅಂತಾರಾಷ್ಟ್ರೀಯ ತೂಕ ಮತ್ತು ಅಳತೆ ಸಂಸ್ಥೆಯಲ್ಲಿದೆ. ಇದೇ ರೀತಿಯ 67 ಮಾದರಿಗಳು ವಿಶ್ವದ ಮೂಲೆಮೂಲೆಯಲ್ಲಿವೆ. ಆದರೆ ಲೇ ಗ್ರ್ಯಾಂಡ್‌ ಕೆ ಮಾಪನ ಧೂಳು ಹಿಡಿಯುತ್ತದೆ. ವಾತಾವರಣದಿಂದಲೂ ಪ್ರಭಾವಕ್ಕೆ ಒಳಗಾಗುತ್ತದೆ. ಸ್ವಚ್ಛಗೊಳಿಸುವಾಗ ತೂಕ ಬದಲಾವಣೆಯಾಗುವ ಅಪಾಯವಿರುತ್ತದೆ. ಈಗಾಗಲೇ ಈ ಮಾಪನ 50 ಮೈಕ್ರೋ ಗ್ರಾಂನಷ್ಟುತೂಕ ಕಳೆದುಕೊಂಡಿದೆ. ಕಣ್ಣಿನ ರೆಪ್ಪೆಯಲ್ಲಿರುವ 1 ಕೂದಲಿಗೆ ಇದು ಸಮ! ಇದರಿಂದ ಎಚ್ಚೆತ್ತಿರುವ ತಜ್ಞರು, ಮುಂದೆ ಈ ರೀತಿ ತೂಕ ಕಡಿತವಾಗದಂತೆ ನೋಡಿಕೊಳ್ಳಲು ಹೊಸ ವಿಧಾನದ ಮೊರೆ ಹೋಗಿದ್ದಾರೆ.

ಇನ್ನು ಕರೆಂಟ್‌ನಿಂದ ಕೆ.ಜಿ. ತೂಕ

‘ಲೇ ಗ್ರ್ಯಾಂಡ್‌ ಕೆ’ ಮಾಪನದ ಬದಲಾಗಿ ವಿದ್ಯುತ್‌ ಕರೆಂಟ್‌ ಬಳಸಿ ಕೆ.ಜಿ. ತೂಕ ಹಾಕಲು 57 ದೇಶಗಳು ನಿರ್ಧಾರ ಕೈಗೊಳ್ಳಲು ಮುಂದಾಗಿವೆ. ಬೃಹತ್‌ ಗುಜರಿಗಳಲ್ಲಿ ಹಳೆಯ ಕಾರಿನಂತಹ ದೊಡ್ಡ ಸರಕು ಎತ್ತಲು ಕ್ರೇನ್‌ಗಳನ್ನು ಬಳಸಲಾಗುತ್ತದೆ. ಆ ಕ್ರೇನು ಎಷ್ಟುವಿದ್ಯುತ್‌ ಸೆಳೆಯುತ್ತದೋ ಅಷ್ಟುಹೆಚ್ಚು ತೂಕ ಎತ್ತು್ತತ್ತದೆ. ಇದರರ್ಥ ವಿದ್ಯುತ್‌ ಹಾಗೂ ತೂಕದ ನಡುವೆ ನೇರ ಸಂಬಂಧವಿದೆ ಎಂದಾಯಿತು. ಇದನ್ನೇ ‘ಪ್ಲ್ಯಾಂಕ್ಸ್‌ ಕಾನ್‌ಸ್ಟಂಟ್‌’ ಎನ್ನಲಾಗುತ್ತದೆ. ಅದೇ ವಿಧಾನವನ್ನು ಕೆ.ಜಿ. ಮಾಪನಕ್ಕೆ ಬಳಸಲು ಉದ್ದೇಶಿಸಲಾಗಿದೆ. ಒಂದು ಕೆ.ಜಿ.ಯನ್ನು ತೂಕ ಹಾಕಲು ತಕ್ಕಡಿಯನ್ನು ಸಮಪ್ರಮಾಣದವರೆಗೆ ವಿದ್ಯುತ್‌ ಮೂಲಕ ಎಳೆಯಲಾಗುತ್ತದೆ. ಅದೇ ಇನ್ನು ಕೆ.ಜಿ. ಮಾಪನ ವಿಧಾನ. ಇದರಡಿ ತೂಕ ವ್ಯತ್ಯಾಸಕ್ಕೆ ಸಾಧ್ಯತೆಯೇ ಇಲ್ಲ. ಯಾವತ್ತಿಗೂ ಇದು ಬದಲಾಗುವ ಸಂಭವವಿಲ್ಲ.

ಹಿಂದೆ ತೂಕ ಲೆಕ್ಕ ಹೇಗಿತ್ತು?

ಒಂದು ಲೀಟರ್‌ ನೀರನ್ನು ಮಂಜುಗಡ್ಡೆ ರೂಪಕ್ಕೆ ಇಳಿಸಿ, ಅದನ್ನೇ ಒಂದು ಕೆ.ಜಿ. ಎಂದು ಪರಿಗಣಿಸಲಾಗುತ್ತಿತ್ತು. ಇದೇ ರೀತಿಯ ಬೇರೆ ಬೇರೆ ಮಾಪನಗಳು ವಿಶ್ವಾದ್ಯಂತ ಬಳಕೆಯಲ್ಲಿದ್ದವು.

click me!