BJPಯಲ್ಲಿ ನೆರೆ ಪರಿಹಾರ ಸಮರ, ಮಯಾಂಕ್ ದ್ವಿಶತಕದ ಅಬ್ಬರ; ಇಲ್ಲಿವೆ ಅ.03ರ ಟಾಪ್ 10 ಸುದ್ದಿ

By Web DeskFirst Published Oct 3, 2019, 5:06 PM IST
Highlights

ಕರ್ನಾಟಕ ಬಿಜೆಪಿಯಲ್ಲೀಗ ನೆರೆ ಪರಿಹಾರ ಸಮರ ತಾರಕಕ್ಕೇರಿದೆ. ಕೇಂದ್ರ ಸಚಿವ ಸದಾನಂದ ಗೌಡರನ್ನು ಪ್ರಶ್ನಿಸಿದ್ದ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸುಲಿಬೆಲೆ ಅಭೂತ ಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ.  ಇತ್ತ ಸೌತ್ ಆಫ್ರಿಕಾ ವಿರುದ್ದ ಅಬ್ಬರಿಸಿರುವ ಕನ್ನಡಿಗ ಮಯಾಂಕ್ ಅಗರ್ವಾಲ್ ದ್ವಿಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಗಾಂಧಿ ಜಯಂತಿಯಂದು ಅತ್ತು ನಗೆಪಾಟಲಿಗೀಡಾದ ನಾಯಕ, ನಟಿ ಕಂಗನಾ ಸೇರಿದಂತೆ ಅ.3ರಂದು  ಸದ್ದು ಮಾಡಿದ ಟಾಪ್ 10 ಸುದ್ದಿ ಇಲ್ಲಿವೆ.

1) ಚಕ್ರವರ್ತಿಯನ್ನ ಬೈದ್ರೆ ಪಕ್ಷಕ್ಕೆ ಹಿನ್ನಡೆ: ಸದಾನಂದಗೌಡ್ರನ್ನ ಹಿಗ್ಗಾಮುಗ್ಗಾ ಜಾಡಿಸಿದ ಬಿಜೆಪಿ ನಾಯಕ

ಉತ್ತರ ಕರ್ನಾಟಕದ ನೆರೆ ಪರಿಹಾರಕ್ಕೆ ಕೇಂದ್ರ ಸರ್ಕಾರ ಒಂದು ಪೈಸೆ ಹಣ ಬಿಡುಗಡೆ ಮಾಡಿಲ್ಲ ಎಂಬ ಆಕ್ರೋಶ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕರ್ನಾಟಕ ಬಿಜೆಪಿ ಸಂಸದರ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿವೆ. ನೆರೆ ಪರಿಹಾರ ವಿಚಾರವಾಗಿ ಇತ್ತೀಚೆಗೆ ಬಿಜೆಪಿ ನಾಯಕರ ವಿರುದ್ಧವೇ ತಿರುಗಿಬಿದ್ದಿದ್ದ ಬಿಜೆಪಿ ಶಾಸಕ ಯತ್ನಾಳ್​ ಮತ್ತೆ ಕೇಂದ್ರದ ವಿರುದ್ಧ ಕಿಡಿಕಾರಿದ್ದು, ಚಿಂತಕ ಚಕ್ರವರ್ತಿ ಸೂಲಿಬೆಲೆ ಪರ ಬ್ಮಾಟಿಂಗ್ ಮಾಡಿದ್ದಾರೆ. 

2) ಉಪಚುನಾವಣೆಯಲ್ಲಿ ಸ್ಪರ್ಧಿಸ್ತಾರೆ ಭೂಗತ ಪಾತಕಿ ಛೋಟಾ ರಾಜನ್ ತಮ್ಮ!, ಯಾವ ಪಕ್ಷ?

ತಿಹಾರ್ ಜೈಲಿನಲ್ಲಿರುವ ಕುಖ್ಯಾತ ಭೂಗತ ಪಾತಕಿ ಛೋಟಾ ರಾಜನ್ ತಮ್ಮ ದೀಪಕ್ ನಿಕಲ್ಜೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಬಿಜೆಪಿ ಮೈತ್ರಿ ಪಕ್ಷ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ದೀಪಕ್ ಪಶ್ಚಿಮ ಮಹಾರಾಷ್ಟ್ರದ ಪಲ್ಟಾನ್ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.

3) ಕೆಬಿಸಿಯಲ್ಲಿ ಕೋಟಿ ಗೆದ್ದ ಬಬಿತಾಗೆ ಮತ್ತೊಂದು ಬಂಪರ್ ಆಫರ್!

ಕೌನ್‌ ಬನೇಗಾ ಕರೋಡ್‌ಪತಿ’ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಒಂದು ಕೋಟಿ ರು. ಗೆದ್ದ ಬಬಿತಾ ತಾಡೆ ಅವರನ್ನು ಮಹಾರಾಷ್ಟ್ರ ಚುನಾವಣಾ ಆಯೋಗ ರಾಯಭಾರಿಯನ್ನಾಗಿ ನೇಮಕ ಮಾಡಿಕೊಂಡಿದೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಮರಾವತಿ ಜಿಲ್ಲೆಯಲ್ಲಿ ಮತಯಂತ್ರ ಮತ್ತು ಮತ ಜಾಗೃತಿ ಅಭಿಯಾನಕ್ಕೆ ಬಬಿತಾ ಅವರನ್ನು ರಾಯಭಾರಿಯನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

4) ಸ್ವಾತಂತ್ರ್ಯ ಕೊಡಿಸಿದ ನೀವು ಯಾಕಿಷ್ಟು ಬೇಗ ನಮ್ಮನ್ನಗಲಿದ್ರಿ?: ಕಣ್ಣೀರಿಟ್ಟು ನಗೆ ಪಾಟಲಿಗೀಡಾದ ನಾಯಕ!

ಅಕ್ಟೋಬರ್ 2ರಂದು ದೇಶಾದ್ಯಂತ ಮಹಾತ್ಮ ಗಾಂಧಿ ಜನ್ಮ ಜಯಂತಿಯನ್ನು ಸ್ವಚ್ಛತೆ, ಪ್ಲಾಸ್ಟಿಕ್ ವಿರೋಧಿ ಅಭಿಯಾನ, ಪಾದಯಾತ್ರೆ ಹೀಗೆ ವಿಭಿನ್ನವಾಗಿ ಆಚರಿಸಲಾಯ್ತು. ಆದರೆ ಈ ಆಚರಣೆಯಲ್ಲಿ ಸಮಾಜವಾದಿ ಪಕ್ಷದ ನಾಯಕ ಫಿರೋಜ್ ಖಾನ್ ಹಾಗೂ ಆತನ ಬೆಂಬಲಿಗರು ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ನಾಯಕನ ವಿಡಿಯೋ ಒಂದು ಭಾರೀ ವೈರಲ್ ಆಗಿದ್ದು, ನಗೆಪಾಟಲಿಗೀಡಾಗಿದ್ದಾರೆ.


5) JDS ತೊರೆದು ಬಿಜೆಪಿ ಸೇರಿದ ಮಂಡ್ಯ ಮುಖಂಡ : ರಾಜೀನಾಮೆ ನೀಡಲು ಪತ್ನಿಗೆ ವಾರ್ನಿಂಗ್!


ಜೆಡಿಎಸ್ ತೊರೆದು ಮಂಡ್ಯ ಮುಖಂಡ ಬಿಜೆಪಿ ಸೇರ್ಪಡೆಯಾಗಿದ್ದು ಇದೀಗ ಅವರ ಪತ್ನಿ ಹುದ್ದೆ ತೊರೆಯುವಂತೆ ಅವರ ಪತ್ನಿಗೆ ಇದೀಗ ಖಡಕ್ ವಾರ್ನಿಂಗ್ ನೀಡಲಾಗಿದೆ. ಮಂಡ್ಯ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಾಗರತ್ನ ಸ್ವಾಮಿ ರಾಜೀನಾಮೆ ನೀಡಬೇಕು ಎಂದು ತಾಕೀತು ಮಾಡಿದ್ದಾರೆ.

6) ಮಂಡ್ಯ ಕಣಕ್ಕೆ ಸಿಎಂ ಪುತ್ರ : ಕಮಲ ಅರಳಿಸಲು ಮಾಸ್ಟರ್ ಪ್ಲಾನ್!

ರಾಜ್ಯದ 15 ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದ್ದು, ಜೆಡಿಎಸ್ ಭದ್ರಕೋಟೆ ಎನಿಸಿರುವ  ಕೆ.ಆರ್ ಪೇಟೆ ಅಖಾಡಕ್ಕೆ ಸಿಎಂ ಪುತ್ರ ಇಳಿದಿದ್ದಾರೆ. ಸಿಎಂ ತವರೂರಲ್ಲಿ ಕಮಲ ಅರಳಿಸಲು ವಿಜಯೇಂದ್ರ ಪಣ ತೊಟ್ಟಿದ್ದು, ಕೆ ಆರ್ ಪೇಟೆ ವಿಜಯೇಂದ್ರ ಭೇಟಿ ನೀಡಿ ಕಾರ್ಯಕರ್ತರ ಭೇಟಿ ಮಾಡಲಿದ್ದಾರೆ. 

7) ವೈಜಾಗ್ ಟೆಸ್ಟ್: ದ್ವಿಶತಕ ಚಚ್ಚಿದ ಮಯಾಂಕ್ ಅಗರ್‌ವಾಲ್!

ನ್ನಡಿಗ ಮಯಾಂಕ್ ಅಗರ್ ವಾಲ್ ತಮ್ಮ ಚೊಚ್ಚಲ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಮಯಾಂಕ್ ಅಗರ್‌ವಾಲ್ 358 ಎಸೆತಗಳಲ್ಲಿ ದ್ವಿಶತಕ ಪೂರೈಸಿದ್ದಾರೆ. 

8) ಟ್ಯಾಟೂ ಅಭಿ​ಮಾ​ನಿಯ ಮೆಚ್ಚಿ ಅಪ್ಪಿದ ಕೊಹ್ಲಿ!

ಭಾರತ ಕ್ರಿಕೆಟ್‌ ತಂಡದ ನಾಯ​ಕ ವಿರಾಟ್‌ ಕೊಹ್ಲಿ ಯಾವುದೇ ಮೈದಾ​ನ​ದಲ್ಲಿ ಆಡು​ತ್ತಿ​ದ್ದರೂ ಅಭಿ​ಮಾ​ನಿ​ಗಳನ್ನು ಸೆಳೆ​ಯು​ತ್ತಾರೆ. ವಿಶೇಷ ಅಭಿ​ಮಾ​ನಿ​ಯನ್ನು ಮೊದಲ ಟೆಸ್ಟ್‌ ಆರಂಭಕ್ಕೂ ಮುನ್ನ ಸುದ್ದಿ​ಗೋಷ್ಠಿಯಲ್ಲಿ ವಿರಾಟ್‌ ಕೊಹ್ಲಿ ಭೇಟಿ​ಯಾ​ಗಿದ್ದು, ತಾವಾ​ಗಿಯೇ ಅಭಿ​ಮಾ​ನಿ​ಯನ್ನು ಅಪ್ಪಿ​ಕೊಂಡರು. 

9) ಬಿಗ್ ಬಾಸ್ ಮನೆಯೊಳಗೆ ಹೋಗುವವರ‌್ಯಾರು? ಸುದೀಪ್ ಕೊಡ್ತಾರೆ ಉತ್ತರ!

ಬಿಗ್ ಬಾಸ್ 7 ಶುರುವಾಗಲು ಕ್ಷಣಗಣನೆ ಆರಂಭವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ ಮನೆಯೊಳಗೆ ಯಾರ್ಯಾರು ಹೋಗಲಿದ್ದಾರೆ ಎಂಬ ಸುದ್ದಿ ಹರಿದಾಡತೊಡಗಿದೆ. ಈ ಸಲ ಕೇವಲ ಸೆಲಬ್ರಿಟಿಗಳು ಮಾತ್ರ, ಜನಸಾಮಾನ್ಯರಿಗೆ ಅವಕಾಶವಿಲ್ಲ ಎಂದು ಹೇಳಲಾಗುತ್ತಿದೆ. 

10) ಪ್ರಪೋಸ್ ರಿಜೆಕ್ಟ್; ಕಂಗನಾ ಅಕ್ಕ ಮೇಲೆ ಆ್ಯಸಿಡ್ ಆಟ್ಯಾಕ್!


ಬಾಲಿವುಡ್ ಮೋಸ್ಟ್ ಡಿಮ್ಯಾಂಡಬಲ್ ನಟಿ ಕಂಗನಾ ಪರ್ಸನಲ್ ಅಕೌಂಟ್ ಗಳನ್ನು ಅವರ ಅಕ್ಕ ರಂಗೋಲಿ ನೋಡಿಕೊಳ್ಳುತ್ತಾರೆ. ಕಂಗನಾಳ ಪರ್ಸನಲ್ ಸೆಕ್ರೇಟರಿ ಎಂದರೆ ತಪ್ಪಾಗಲಿಕ್ಕಿಲ್ಲ. ಇಬ್ಬರ ನಡುವೆ ಅಷ್ಟೊಂದು ಅನ್ಯೋನ್ಯತೆ ಇದೆ. ಕಂಗನಾ ಹಿಂದಿರುವ ಶಕ್ತಿ ರಂಗೋಲಿಯ ಕಾಲೇಜು ಕಹಾನಿ ಮನಮಿಡಿಯುವಂತಿದೆ.
 

click me!