ಆಶಾ ಕಾರ್ಯಕರ್ತೆಯರಿಗೆ ದಸರಾ ಗಿಫ್ಟ್ ಕೊಟ್ಟ ಯಡಿಯೂರಪ್ಪ ಸರ್ಕಾರ

By Web DeskFirst Published Oct 3, 2019, 4:17 PM IST
Highlights

ಆಶಾ ಕಾರ್ಯಕರ್ತೆಯರಿಗೆ ದಸರಾ ಗಿಫ್ಟ್ ಕೊಟ್ಟ ಯಡಿಯೂರಪ್ಪ ಸರ್ಕಾರ| ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳ| ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ.

ಬೆಂಗಳೂರು, (ಅ.03): ರಾಜ್ಯದಲ್ಲಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ ಕೊಡುವ ನಿಶ್ಚಿತ ಗೌರವಧನವನ್ನು 500 ರೂ. ಹೆಚ್ಚಿಸಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ಸಿಎಂ ಬಿ.ಎಸ್​. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಇಂದು (ಗುರುವಾರ) ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 2019ರ ನ.1ರಿಂದ ಅನ್ವಯವಾಗುವಂತೆ ಗೌರವಧನ ಹೆಚ್ಚಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

2ನೇ ದಿನಕ್ಕೆ 'ಆಶಾ' ಮುಷ್ಕರ; ಕುಸಿದು ಬಿದ್ದಳು ಒಬ್ಬ ಮಹಿಳೆ; ಮಳೆ ಚಳಿಯಲ್ಲೇ ರಾತ್ರಿ ಕಳೆದ 25 ಸಾವಿರ ಕಾರ್ಯಕರ್ತೆಯರು

ಮಹಾತ್ಮಾ ಗಾಂಧಿ ಅವರ 150ನೇ ಜಯಂತಿ ನಿಮಿತ್ತ 20 ಶಿಕ್ಷಾಬಂಧಿಗಳಿಗೆ ವಿಶೇಷ ಮಾಫಿಯೊಂದಿಗೆ 2 ಮತ್ತು 3ನೇ ಹಂತದಲ್ಲಿ ಬಿಡುಗಡೆ ಮಾಡುವ ನಿರ್ಧಾರವನ್ನೂ ಸಚಿವ ಸಂಪುಟ ಸಭೆ ಅನುಮೋದಿಸಿದೆ.

ಮಾಸಿಕ 12 ಸಾವಿರ ರೂ. ಗೌರವ ಧನ ನೀಡಬೇಕು, ಆರ್‌ಸಿಎಚ್‌ ಪೋರ್ಟಲ್‌ಗೆ ಆಶಾ ವೇತನ ಜಮೆ ರದ್ದುಗೊಳಿಸಬೇಕು ಎಂದು  ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಪ್ರತಿಭಟನೆ ಮಾಡಿತ್ತು.

click me!