ದೋಸ್ತಿಗೆ ಅಗ್ನಿಪರೀಕ್ಷೆ: ವಿಶ್ವಾಸಮತ ಪ್ರಕ್ರಿಯೆ ಹೇಗೆ ನಡೆಯುತ್ತೆ? ನಿಯಮಗಳೇನು?

By Web DeskFirst Published Jul 17, 2019, 2:09 PM IST
Highlights

ಸುಪ್ರೀಂ ತೀರ್ಪಿನಿಂದ ಸ್ಪೀಕರ್, ಅತೃಪ್ತ ಶಾಸಕರು ನಿರಾಳ, ಸರ್ಕಾರಕ್ಕೆ ಕಳವಳ| ವಿಶ್ವಾಸಮತಕ್ಕೆ ಸೈ ಎಂದ ದೋಸ್ತಿಗೆ ಬಿಗ್ ಚಾಲೆಂಜ್| ಅತೃಪ್ತ ಶಾಸಕರು ಬರ್ತಾರಾ? ಬರಲ್ವಾ?| ವಿಶ್ವಾಸಮತ ಪ್ರಕ್ರಿಯೆ ಹೇಗೆ ನಡೆಯುತ್ತೆ? ನಿಯಮಗಳೇನು? 

ಬೆಂಗಳೂರು[ಜು.17]: ರಾಜ್ಯ ರಾಜಕೀಯದಲ್ಲಿ ಕಳೆದೆರಡು ವಾರಗಳಿಂದ ನಡೆಯುತ್ತಿರುವ ಹೈಡ್ರಾಮಾ ನಾಳೆ ಕೊನೆಗೊಳ್ಳುವ ಸಾಧ್ಯತೆಗಳಿವೆ. ಈಗಾಘಲೇ ರಾಜೀನಾಮೆ ಅಂಗೀಕಾರ ವಿಳಂಬಕ್ಕೆ ಸಂಬಂಧಿಸಿದಂತೆ ಸ್ಪೀಕರ್ ವಿರುದ್ಧ ಅತೃಪ್ತ ಆಶಸಕರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆದು ತೀರ್ಪು ಹೊರ ಬಿದ್ದಿದೆ. ತೀರ್ಪಿನನ್ವಯ ರಾಜೀನಾಮೆ ಅಂಗೀಕಾರಕ್ಕೆ ಸ್ಪೀಕರ್ ಗೆ ಕಾಲಮಿತಿ ವಿಧಿಸಲು ಸಾಧ್ಯವಿಲ್ಲ ಎನ್ನಲಾಗಿದೆ. ಅತ್ತ ಅತೃಪ್ತ ಶಾಸಕರು ವಿಶ್ವಾಸಮತ ಸಾಬೀತುಪಡಿಸುವ ವೇಳೆ ಸದನಕ್ಕೆ ಬರುವುದು, ಬಿಡುವುದು ಅವರ ವಿವೇಚನೆಗೆ ಬಿಟ್ಟಿದ್ದು ಎಂದೂ ತಿಳಿಸಿದೆ.

ಸುಪ್ರೀಂ ಮಹಾ ತೀರ್ಪು: ರಾಜೀನಾಮೆ ಸ್ವೀಕಾರ, ಸ್ಪೀಕರ್‌ಗಿಲ್ಲ ಒತ್ತಡ

ಹೀಗಿರುವಾಗ ವಿಶ್ವಾಸಮತ ಸಾಬೀತುಪಡಿಸುವುದು ಸಿಎಂ ಕುಮಾರಸ್ವಾಮಿಗೆ ಬಹುದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅತೃಪ್ತ ಶಾಸಕರು ತಾವು ಸದನಕ್ಕೆ ಬರುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಅದೇನಿದ್ದರೂ ನಾಳೆ ವಿಶ್ವಾಸಮತ ಸಾಬೀತುಪಡಿಸಲು ಸ್ಪೀಕರ್ ದಿನಾಂಕ ನಿಗಧಿಪಡಿಸಿದ್ದಾರೆ. ಹಾಗಾದ್ರೆ ಈ ಪ್ರಕ್ರಿಯೆ ಹೇಗೆ ನಡೆಯುತ್ತೆ? ಏನೆಲ್ಲ ನಿಯಮಗಳಿವೆ? ಇಲ್ಲಿದೆ ವಿವರ

ಸುಪ್ರೀಂ ತೀರ್ಪು: ಸರ್ಕಾರಕ್ಕೆ ಸೋಲು?, ಯಾವುದಯ್ಯಾ ಸಿಎಂಗೆ ಮುಂದಿನ ದಾರಿ?

1. ವಿಧಾನಸಭೆ ಆರಂಭವಾಗುತ್ತಿದ್ದಂತೆ ವಿಶ್ವಾಸಮತ ಗೊತ್ತುವಳಿ ಪ್ರಸ್ತಾವನೆ ಮಂಡನೆ

2. ವಿಶ್ವಾಸಮತ ಪ್ರಸ್ತಾವನೆ ಮಂಡಿಸುವ ಸಿಎಂಗೆ ಸದನದಲ್ಲಿ ಮಾತನಾಡಲು ಸ್ಪೀಕರ್ ಅವಕಾಶ ನೀಡಬಹುದು

3. ಪ್ರಸ್ತಾವನೆ ಮೇಲೆ ಚರ್ಚೆ ನಡೆಯಲಿ ಎಂದು ಸದಸ್ಯರು ಹೇಳಿದರೆ ಸ್ಪೀಕರ್ ಅವಕಾಶ ನೀಡುತ್ತಾರೆ

4.  ಚರ್ಚೆ ಇಲ್ಲದೆ ವಿಶ್ವಾಸಮತ ಯಾಚನೆ ನಿರ್ಣಯವನ್ನು ಮತಕ್ಕೆ ಹಾಕಿ ಎಂದರೆ ಸ್ಪೀಕರ್ ಅದಕ್ಕೂ ಅವಕಾಶ ನೀಡುತ್ತಾರೆ 

5.‘ಈ ಸದನವು ಎಚ್.ಡಿ. ಕುಮಾರಸ್ವಾಮಿ  ನೇತೃತ್ವದ ಸಚಿವ ಸಂಪುಟಲ್ಲಿ ವಿಶ್ವಾಸವನ್ನು ವ್ಯಕ್ತಪಡಿಸುತ್ತದೆ’ 

ಈ ಮಾತಿನ ಮೂಲಕ ವಿಶ್ವಾಸಮತ ಪ್ರಸ್ತಾವನೆ ಮಂಡಿಸಲಿರುವ ಸಿಎಂ ಕುಮಾರಸ್ವಾಮಿ

6. ಬಹುಮತ ಕೋರುವ ಪ್ರಸ್ತಾವನೆ ಮತಕ್ಕೆ ಹಾಕುವ ಮುನ್ನ ಕೋರಂ ಗಂಟೆ ಬಾರಿಸಲಾಗುತ್ತೆ, ಸದಸ್ಯರು ತಮ್ಮ ಆಸನಗಳಿಗೆ ಬಂದು ಕೂರಬೇಕು
 
7. ಸ್ಪೀಕರ್ ಸೂಚನೆಯಂತೆ ಸದನದ ಎಲ್ಲ ಬಾಗಿಲು ಮುಚ್ಚಲಾಗುತ್ತೆ, ಬಾಗಿಲು ಮುಚ್ಚಿದ ಬಳಿಕ ಸದಸ್ಯರು ಹೊರ ಹೋಗಲು, ಒಳ ಪ್ರವೇಶಿಸಲು ಅವಕಾಶವಿಲ್ಲ

8.ಪ್ರಸ್ತಾವನೆಯನ್ನು ಮತಕ್ಕೆ ಹಾಕುವ ಮುನ್ನ ಸ್ಪೀಕರ್ ತಲೆ ಎಣಿಕೆ ಮಾಡುತ್ತಾರೆ, ಇದರ  ಬದಲು ಡಿವಿಜನ್ ಆಫ್ ವೋಟ್ ಆಯ್ಕೆಗಳನ್ನೂ ಮುಂದಿಡುತ್ತಾರೆ

9. ಡಿವಿಜನ್ ಆಫ್ ವೋಟ್ ಎಂದರೆ, ಯಾರಿಗೆ ಎಷ್ಟು ಮತ ಎಂದು ವಿಭಜಿಸುವುದು

10. ಮೊದಲು ವಿಶ್ವಾಸಮತದ ಪರ ಮತ ಎಣಿಕೆ, ಮೊದಲ ಸಾಲಿನಲ್ಲಿ ಎದ್ದು ನಿಲ್ಲುವ ಸದಸ್ಯರನ್ನು ಎಣಿಕೆ , ನಂತರದ ಪ್ರತಿ ಸಾಲಿನ ಸದಸ್ಯರ ಎಣಿಕೆ ಕಾರ್ಯ 

11. ಈ ಸಂಖ್ಯೆಗಳನ್ನು ಕಾರ್ಯದರ್ಶಿ, ಅಧೀನ ಸಿಬ್ಬಂದಿ ಬರೆದುಕೊಳ್ಳುತ್ತಾರೆ

12. 2ನೇ ಸುತ್ತಿನಲ್ಲಿ ವಿಶ್ವಾಸಮತದ ವಿರುದ್ಧ ಇರುವ ಸದಸ್ಯರ ಎಣಿಕೆ ಕಾರ್ಯ ನಡೆಯುತ್ತೆ

13. ಪ್ರಸ್ತಾವನೆ ಪರ, ವಿರುದ್ಧ ಇರುವ ಮತಗಳ ಸಂಖ್ಯೆ ಕಾರ್ಯದರ್ಶಿಯಿಂದ ಸ್ಪೀಕರ್‌ಗೆ ಸಲ್ಲಿಕೆ

14. ವಿಶ್ವಾಸಮತಕ್ಕೆ ಸೋಲಾಯಿತಾ  ಅಥವಾ ಗೆಲುವಾಯಿತಾ ಎಂಬುದನ್ನು ಸ್ಪೀಕರ್ ಪ್ರಕಟಿಸುತ್ತಾರೆ

15. ವಿಶ್ವಾಸಮತದ ಪರ ಮತ್ತು ವಿರುದ್ಧ ಮತಗಳು ಟೈ ಆದರೆ, ಸ್ಪೀಕರ್ ಮತಚಲಾಯಿಸುತ್ತಾರೆ

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

click me!