ಬೈ ಎಲೆಕ್ಷನ್ ಡೇಟ್ ಅನೌನ್ಸ್, ಬೆಂಗ್ಳೂರಲ್ಲಿ ಕೊಹ್ಲಿ ಪಡೆ ಪ್ರಾಕ್ಟೀಸ್; ಇಲ್ಲಿವೆ ಸೆ.21ರ ಟಾಪ್ 10 ಸುದ್ದಿ!

By Web DeskFirst Published Sep 21, 2019, 4:51 PM IST
Highlights

ಕರ್ನಾಟಕದ ಉಪ ಚುನಾವಣೆ ದಿನಾಂಕ ನಿಗಧಿಯಾಗುತ್ತಿದ್ದಂತೆ, ರಾಜಕೀಯ ಚುಟುವಟಿಕೆ ಗರಿಗೆದರಿದೆ. ಅಕ್ಟೋಬರ್ 21ಕ್ಕೆ ಚುನಾವಣೆ ನಡೆಯಲಿದ್ದು, 24ಕ್ಕೆ ಫಲಿತಾಂಶ ಹೊರ ಬೀಳಲಿದೆ. ಆದರೆ ಬೈ ಎಲೆಕ್ಷನ್ ಅನರ್ಹ ಶಾಸಕರ ಟೆನ್ಶನ್ ಹೆಚ್ಚಿಸಿದೆ. ಪೈಲ್ವಾನ್ ಪೈರಸಿ ವಿರುದ್ಧ ಗುಡುಗಿರುವ ಕಿಚ್ಚ ಸುದೀಪ್ ಕೈಗೆ ಬಳೆತೊಟ್ಟುಕೊಂಡಿಲ್ಲ ಎಂದಿದ್ದಾರೆ. ಇತ್ತ ಅಂತಿಮ ಟಿ20 ಪಂದ್ಯಕ್ಕಾಗಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಬೆಂಗಳೂರಿನಲ್ಲಿ ಅಭ್ಯಾಸ ನಡೆಸುತ್ತಿದೆ. ಸೆ.21ರಂದು ಸಂಚಲನ ಮೂಡಿಸಿದ ಟಾಪ್ 10 ಸುದ್ದಿ ಇಲ್ಲಿವೆ.

1) ‘ಮಿಸ್ಟರ್ ಪಿಎಂ ನಿಮ್ಮ ತಾಯಿ ಮೀಟ್ ಆದ್ರಿ: ನನ್ನನ್ನೇಕೆ ದೂರ ಇಟ್ರಿ?’

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿ ಬಳಿಕ ಕಣಿವೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅಲ್ಲದೇ ಮುಂಜಾಗೃತಾ ಕ್ರಮವಾಗಿ ರಾಜಕೀಯ ನಾಯಕರನ್ನು ಗೃಹ ಬಂಧನದಲ್ಲಿರಿಸಲಾಗಿದೆ. ಕೇಂದ್ರ ಸರ್ಕಾರದ ಈ ನಿಲುವನ್ನು ಖಂಡಿಸಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಪುತ್ರಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.

2) ಕರ್ನಾಟಕ 15 ಕ್ಷೇತ್ರದ ಉಪಚುನಾವಣೆಗೆ ದಿನಾಂಕ ಫಿಕ್ಸ್!: ಅನರ್ಹರಿಗೆ ಟೆನ್ಶನ್

ಕರ್ನಾಟಕ 15 ಕ್ಷೇತ್ರದ ಉಪಚುನಾವಣೆಗೆ ದಿನಾಂಕ ಫಿಕ್ಸ್ ಆಗಿದೆ. ಚುನಾವಣಾ ಆಯೋಗ ಉಪ ಚುನಾವಣೆಗೆ ದಿನಾಂಕ ಘೋಷಿಸಿದ್ದು, ಕರ್ನಾಟಕದ 15 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಅಕ್ಟೋಬರ್ 21ಕ್ಕೆ ಚುನಾವಣೆ ನಡೆಯಲಿದ್ದು, 24ಕ್ಕೆ ಫಲಿತಾಂಶ ಹೊರ ಬೀಳಲಿದೆ. ಸುಪ್ರೀಂ ಕೋರ್ಟ್‌ನಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆ ಇನ್ನೂ ಮುಂದುವರೆದಿದ್ದು, ಚುನಾವಣಾ ದಿನಾಂಕ ಘೋಷಣೆಯಿಂದ ಮತ್ತಷ್ಟು ಟೆನ್ಶನ್ ಹೆಚ್ಚಿದೆ.


3) ಇತ್ತ ಬೈ ಎಲೆಕ್ಷನ್ ಡೇಟ್ ಫಿಕ್ಸ್: ಅತ್ತ ಡಿಕೆಶಿ ಜಾಮೀನು ತೀರ್ಪು ಮತ್ತೆ ಮುಂದೂಡಿಕೆ


ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರ ಜಾಮೀನು ತೀರ್ಪು ಮುಂದೂಡಲಾಗಿದೆ. ಇಂದು (ಶನಿವಾರ) ಡಿಕೆಶಿ ಜಾಮೀನು ಅರ್ಜಿ ವಿಚಾರಣೆಯ ವಾದ-ಪ್ರತಿವಾದ ಆಲಿಸಿದ ಇಡಿ ವಿಶೇಷ ಕೋರ್ಟ್ ನ್ಯಾಯಾಲಯದ ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್, ಡಿಕೆಶಿ ಜಾಮೀನು ತೀರ್ಪು ಅನ್ನು ಸೆಪ್ಟೆಂಬರ್ 25ಕ್ಕೆ ಮುಂದೂಡಿ ಆದೇಶ ಹೊರಡಿಸಿದರು.

4) ಬೈಎಲೆಕ್ಷನ್ ನಡೆಯೋದು ಡೌಟು! ಕುತೂಹಲ ಕೆರಳಿಸಿದೆ ಬಿಜೆಪಿ ನಾಯಕನ ಮಾತು

ಶಾಸಕರ ರಾಜೀನಾಮೆಯಿಂದ ತೆರವಾಗಿರುವ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪ-ಚುನಾವಣೆ ದಿನಾಂಕ ಘೋಷಣೆಯಾಗಿದೆ. ಅನರ್ಹ ಶಾಸಕರ ಸ್ಪರ್ಧೆ ಬಗ್ಗೆ ಭಾರೀ ಚರ್ಚೆಗೆ ಈ ವಿಷಯ ಗ್ರಾಸವಾಗಿದೆ. ಆದರೆ ಬಿಜೆಪಿ ಸಚಿವ ಸಿ.ಟಿ. ರವಿ ಉಪಚುನಾವಣೆ ನಡೆಯೋದು ಅನುಮಾನವೆಂದಿದ್ದಾರೆ.  


5) ಸಿಲಿಕಾನ್ ಸಿಟಿಗೆ ಉಗ್ರರ ಆತಂಕ; ನಗರದಲ್ಲಿ ಹೈ ಅಲರ್ಟ್!

ಸಿಲಿಕಾನ್ ಸಿಟಿ ಮೇಲೆ ಉಗ್ರು ಕಣ್ಣಿಟ್ಟಿದ್ದಾರೆ. ಸೆಪ್ಟೆಂಬರ್  30 ರಂದು ಬಾಂಬ್ ಬ್ಲಾಸ್ಟ್ ಮಾಡಲು ಪ್ಲಾನ್ ಮಾಡಿದ್ದಾರಂತೆ! ವಿಧಾನಸೌಧ, ವಿಧಾನಸೌಧ ಮೆಟ್ರೋ ಸ್ಟೇಷನ್ ಕೂಡಾ ಇವರ ಟಾರ್ಗೆಟ್. ಬಾಂಬ್ ಬ್ಲಾಸ್ಟ್ ಮಾಡೋದಾಗಿ ಶಂಕಿತ ಉಗ್ರರು ಬೆದರಿಕೆ ಪತ್ರ ಬರೆದಿದ್ದಾರೆ. ಹೈಕೋರ್ಟ್ ರಿಜಿಸ್ಟ್ರಾರ್ ದರ್ಶನ್ ಸಿಂಗ್ ನಾಗಪಾಲ್ ಎಂಬಾತನಿಂದ ಪತ್ರ ಬಂದಿದೆ ಎನ್ನಲಾಗಿದೆ. 

6) ಬೆಂಗ್ಳೂರಲ್ಲಿ ಕೊಹ್ಲಿ ಪಡೆ ಬಿರುಸಿನ ಅಭ್ಯಾಸ

ದಕ್ಷಿಣ ಆಫ್ರಿಕಾ ವಿರು​ದ್ಧದ 2ನೇ ಟಿ20 ಪಂದ್ಯ​ದಲ್ಲಿ ಭರ್ಜರಿ 7 ವಿಕೆಟ್‌ಗ​ಳಿಂದ ಗೆದ್ದ ಭಾರ​ತ, ಭಾನುವಾರ ಇಲ್ಲಿನ ಚಿ​ನ್ನ​ಸ್ವಾಮಿ ಕ್ರೀಡಾಂಗ​ಣ​ದಲ್ಲಿ ನಡೆ​ಯ​ಲಿ​ರುವ 3ನೇ ಟಿ-20 ಪಂದ್ಯ​ಕ್ಕಾಗಿ ಶುಕ್ರ​ವಾರ ಬೆಳ​ಗಿ​ನಿಂದಲೇ ಕಠಿಣ ಅಭ್ಯಾಸ ನಡೆ​ಸಿತು. 

7) ಕೋಟ್ಯಧಿಪತಿಯಲ್ಲಿ ರಾಮಾಯಣದ ಬಗ್ಗೆ ಉತ್ತರ ಗೊತ್ತಿಲ್ಲದೇ ಒದ್ದಾಡಿದ ಸೋನಾಕ್ಷಿ

ಖ್ಯಾತ ಕ್ವಿಜ್ ಕಾರ್ಯಕ್ರಮ ಕೌನ್ ಬನೇಗಾ ಕರೋಡ್ ಪತಿ ಹಾಟ್ ಸೀಟ್ ನಲ್ಲಿ ಕುಳಿತ ರಾಜಸ್ಥಾನ ಮೂಲದ ಸ್ಪರ್ಧಿಗೆ ಸಪೋರ್ಟ್ ಮಾಡಲು ದಬಾಂಗ್ ಗರ್ಲ್ ಸೋನಾಕ್ಷಿ ಸಿನ್ಹಾ ಭಾಗಿಯಾಗಿದ್ದರು. ಹಿಂದೂಗಳ ಮಹಾಕಾವ್ಯ ರಾಮಾಯಣಕ್ಕೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಉತ್ತರ ನೀಡಲು ತಡಬಡಾಯಿಸಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಕಟು ವಿಮರ್ಶೆಗೆ ಒಳಗಾಗಿದ್ದಾರೆ. 

8) ನಾನು, ನನ್ನ ಸ್ನೇಹಿತರು ಕೈಗೆ ಹಾಕಿರುವುದು ಕಡಗ, ಬಳೆಯಲ್ಲ; ಸುದೀಪ್ ಗುಡುಗು


ಪೆಲ್ವಾನ್ ಪೈರಸಿ ಸ್ಟಾರ್ ವಾರ್ ಗೆ ಕಿಚ್ಚು ಹಚ್ಚಿತ್ತು. ಪೈರಸಿ ಮಾಡಿದವನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪೈರಸಿಗರ ವಿರುದ್ಧ ಸುದೀಪ್ ಕಿಡಿ ಕಾರಿದ್ದಾರೆ. ನಾನು ಹಾಗು ನನ್ನ ಸ್ನೇಹಿತರು ಕೈಗೆ ಹಾಕಿರುವುದು ಕಡಗ ಬಳೆಯನ್ನಲ್ಲ. ಪೈರಸಿ ಮಾಡಿರುವುದು ನೆಮ್ಮದಿಯಾಗಿರುವುದು ಇನ್ನು ಕೆಲವೇ ದಿನ ಮಾತ್ರ ಎಂದು ಗುಡುಗಿದ್ದಾರೆ. 


9) ವಿಕ್ರಮ್ ಲ್ಯಾಂಡರ್‌ ಪತನಗೊಂಡಿದ್ದು ಹೇಗೆ? ಬಯಲಾಯ್ತು ಕಾರಣ

ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ವಿಕ್ರಂ ಲ್ಯಾಂಡರ್‌ ಇಳಿಸುವ ಕುರಿತು ಬರೆಯಲಾಗಿದ್ದ ಪ್ರೋಗ್ರಾಂನಲ್ಲಿನ ದೋಷದಿಂದಾಗಿಯೇ ಲ್ಯಾಂಡರ್‌ ಸಾಫ್ಟ್‌ ಲ್ಯಾಂಡಿಂಗ್‌ ಆಗಲು ವಿಫಲವಾಗಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.


10) ಪೆಟ್ರೋಲ್ ದರ ಏರಿಕೆಯ ಹೊರೆ: ವಿಕೇಂಡ್ಸ್’ನಲ್ಲೇ ಏಕೆ ಈ ಬರೆ?

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯಲ್ಲಿ ಏರಿಕೆಯಾದ ಪರಿಣಾಮ, ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಕೊಂಚ ಏರಿಕೆ ಕಂಡು ಬಂದಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಇಳಿಕೆಯತ್ತ ಮುಖ ಮಾಡಿದ್ದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ, ಈ ವಾರಾಂತ್ಯದಲ್ಲಿ ಏರಿಕೆ ಕಂಡಿರುವುದು ಅಚ್ಚರಿಗೆ ಕಾರಣವಾಗಿದೆ. 

click me!