ಬೈ ಎಲೆಕ್ಷನ್‌ಗೆ ಅನರ್ಹರು ಸ್ಪರ್ಧಿಸಲು ಅವಕಾಶ ಇದ್ಯಾ? ಇಲ್ಲ?: ಸಂಪೂರ್ಣ ಮಾಹಿತಿ

By Web Desk  |  First Published Sep 21, 2019, 4:49 PM IST

17  ಪೈಕಿ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದ್ದು, ಅನರ್ಹ ಶಾಸಕರು ಉಪಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಇದ್ಯಾ? ಅಥವಾ ಇಲ್ವಾ? ಎನ್ನುವುದಕ್ಕೆ ಸಂಪೂರ್ಣಾ ಮಾಹಿತಿಯನ್ನು ರಾಜ್ಯ ಚುನಾವಣೆ ಆಯುಕ್ತರು ಸ್ಪಷ್ಟನೆ ನೀಡಿದ್ದು, ಅದು ಈ ಕೆಳಗಿನಂತಿದೆ.


ಬೆಂಗಳೂರು, (ಸೆ.21): ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಅನರ್ಹಗೊಂಡೊರುವ 17 ಶಾಸಕರ ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಕೇಂದ್ರ ಚುನಾವಣೆ ಆಯೋಗ ಉಪಚುನಾವಣೆ ದಿನಾಂಕ ಘೋಷಣೆ ಮಾಡಿದೆ. 

ಆದ್ರೆ ಈ ಉಪಚುನಾವಣೆಗಳಲ್ಲಿ ಅನರ್ಹಗೊಂಡಿರುವ ಶಾಸಕ ಸ್ಪರ್ಧಿಸಬಹುದಾ? ಅಥವಾ ಇಲ್ಲ? ಎನ್ನುವ ಪ್ರಶ್ನೆ  ಜನರಲ್ಲಿ ಮೂಡಿದೆ. ಈ ಪ್ರಶ್ನೆಗೆ ಇದೀಗ ಸ್ವತಃ ರಾಜ್ಯ ಚುನಾವಣೆ ಆಯೋಗ ಆಯುಕ್ತ ಸಂಜೀವ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

Latest Videos

ಬೈ ಎಲೆಕ್ಷನ್: ಮಸ್ಕಿ, RR ನಗರ ಕ್ಷೇತ್ರಗಳಿಗೆ ಚುನಾವಣೆಯಾಕಿಲ್ಲ? ಕಾರಣ ಇಲ್ಲಿದೆ

 ಇಂದು (ಶನಿವಾರ) ಸುದ್ದಿಗೋಷ್ಠಿ ನಡೆಸಿದ ರಾಜ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ , ಅನರ್ಹ ಶಾಸಕರು ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲಿಗೆ ಅನರ್ಹ ಶಾಸಕರ ಆಸೆಗೆ ತಣೀರು ಸುರಿದಂತಾಗಿದೆ.

 ಅನರ್ಹ ಶಾಸಕರಿಗೆ ಭಾರಿ ಆಘಾತವನ್ನು ಚುನಾವಣೆ ಆಯೋಗ ನೀಡಿದ್ದು, ಅನರ್ಹ ಶಾಸಕರು ಉಪಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಹೇಳಿದ್ದಾರೆ.

ಕರ್ನಾಟಕ 15 ಕ್ಷೇತ್ರದ ಉಪಚುನಾವಣೆಗೆ ದಿನಾಂಕ ಫಿಕ್ಸ್!: ಅನರ್ಹರಿಗೆ ಟೆನ್ಶನ್

 'ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಸ್ಪೀಕರ್ ಅವರು ತಡೆ ಒಡ್ಡಿದ್ದಾರೆ. ಅನರ್ಹ ಶಾಸಕರ ಮರುಪರಿಶೀಲನಾ ಅರ್ಜಿ ಸುಪ್ರೀಂಕೋರ್ಟ್‌ನಲ್ಲಿ ಇನ್ನೂ ಇತ್ಯರ್ಥವಾಗಿಲ್ಲ. ಹಾಗಾಗಿ ಅವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲವೆಂದು ಸಂಜೀವ್ ಕುಮಾರ್ ಸ್ಪಷ್ಟಪಡಿಸಿದರು.

ಅನರ್ಹ ಶಾಸಕರ ವಿಚಾರವಾಗಿ ನಾನು ಈಗ ಏನೂ ಹೇಳಲಾರೆ. ಆದರೆ ಪ್ರಸ್ತುತ ಸನ್ನಿವೇಶದ ಪ್ರಕಾರ ಅವರು ಉಪ ಚುನಾವಣೆಗೆ ಸ್ಪರ್ಧಿಸಲು ಅರ್ಹತೆ ಇಲ್ಲದವರಾಗಿದ್ದಾರೆ ಎಂದು ಹೇಳಿದರು.

ಬೈ ಎಲೆಕ್ಷನ್: ಮಸ್ಕಿ, RR ನಗರ ಕ್ಷೇತ್ರಗಳಿಗೆ ಚುನಾವಣೆಯಾಕಿಲ್ಲ? ಕಾರಣ ಇಲ್ಲಿದೆ

ಅನರ್ಹತೆ ಬಗ್ಗೆ ಮರುಪರೀಶಲನೆ ಅರ್ಜಿಯನ್ನು ಅನರ್ಹ ಶಾಸಕರು ಸುಪ್ರೀಂಕೋರ್ಟ್‌ನಲ್ಲಿ ಹಾಕಿದ್ದು, ಅದರ ವಿಚಾರಣೆ ಸೋಮವಾರ ನಡೆಯಲಿದೆ. ಒಂದು ವೇಳೆ ಸುಪ್ರೀಂಕೋರ್ಟ್ ತಡೆ ಆಜ್ಞೆ ನೀಡಿದರೆ, ಚುನಾವಣೆ ತಡೆ ಆಗಲಿದೆ. ಹಾಗೊಂದು ವೇಳೆ ವಿಚಾರಣೆ ಇನ್ನಷ್ಟು ತಡವಾದರೆ ಅನರ್ಹ ಶಾಸಕರು ಚುನಾವಣೆ ಸ್ಪರ್ಧಿಸಲಾಗುವುದಿಲ್ಲ.

ಒಟ್ಟಿನಲ್ಲಿ ಅನರ್ಹ ಶಾಸಕರ ಸದ್ಯದ ಅತ್ಲಾಗಿಲ್ಲ, ಇತ್ಲಾಗಿಲ್ಲ ಎನ್ನುವಂತಾಗಿ ಕಂಗಾಲಾಗಿದ್ದಾರೆ.  

ಉಪಚುನಾವಣೆ ನಡೆಯಲಿರುವ ಕ್ಷೇತ್ರಗಳು
1) ಚಿಕ್ಕಬಳ್ಳಾಪುರ 2) ಮಹಾಲಕ್ಷ್ಮಿ ಲೇಔಟ್ 3) ಹೊಸಕೋಟೆ 4) ಹುಣಸೂರು 5) ಗೋಕಾಕ 6) ಯಶವಂತಪುರ 7) ಅಥಣಿ 8) ಕಾಗವಾಡ 9) ಶಿವಾಜಿನಗರ 10) ಕೆ.ಆರ್.ಪೇಟೆ 11) ಕೆ.ಆರ್.ಪುರಂ 12) ಹಿರೇಕೆರೂರು 13) ರಾಣೆಬೆನ್ನೂರು 14) ವಿಜಯನಗರ 15) ಯಲ್ಲಾಪುರ.

ಮಹತ್ವದ ದಿನಾಂಕಗಳು
ನಾಮಪತ್ರ ಸಲ್ಲಿಕೆ ಅಧಿಸೂಚನೆ - ಸೆಪ್ಟೆಂಬರ್ 23
ನಾಮಪತ್ರ ಸಲ್ಲಿಕೆ ಅಂತ್ಯ - ಸೆಪ್ಟೆಂಬರ್ 30
ನಾಮಪತ್ರ ಪರಿಶೀಲನೆ - ಅಕ್ಟೋಬರ್ 1
ನಾಮಪತ್ರ ವಾಪಸ್: ಅಕ್ಟೋಬರ್.3
ಮತದಾನ ಅಕ್ಟೋಬರ್ 21
ಫಲಿತಾಂಶ ಅಕ್ಟೋಬರ್ 24

click me!