ಕೈ ಮುಖಂಡಗೆ ಬಿಜೆಪಿ ಆಹ್ವಾನ, ನಿಯಮ ಉಲ್ಲಂಘಿಸಿದ ಪಾಕಿಸ್ತಾನ; ನ.16ರ ಟಾಪ್ 10 ಸುದ್ದಿ!

Published : Nov 16, 2020, 04:34 PM ISTUpdated : Nov 16, 2020, 04:35 PM IST
ಕೈ ಮುಖಂಡಗೆ ಬಿಜೆಪಿ ಆಹ್ವಾನ, ನಿಯಮ ಉಲ್ಲಂಘಿಸಿದ ಪಾಕಿಸ್ತಾನ; ನ.16ರ ಟಾಪ್ 10 ಸುದ್ದಿ!

ಸಾರಾಂಶ

ಪ್ರಭಾವಿ ಕೈ ಮುಂಡನಿಗೆ ಬಿಜೆಪಿ ಸೇರುವಂತೆ ಆಹ್ವಾನ ನೀಡಲಾಗಿದೆ ಅನ್ನೋ ಮಾತುಗಳು ಬಲವಾಗುತ್ತಿದೆ. ಇತ್ತ ಭಾರತವಿಲ್ಲದೆ ಆರ್‌ಸಿಇಪಿ ಒಪ್ಪಂದಕ್ಕೆ 15 ದೇಶಗಳ ಸಹಿ ಹಾಕಿವೆ. ಇನ್ನು ಗಡಿಯಲ್ಲಿ ಪಾಕಿ್ಸ್ತಾನ ಭಾರಿ ಶಸ್ತ್ರಾಸ್ತ್ರ ಬಳಸೋ ಮೂಲಕ ಮಹಾ ಪ್ರಮಾದ ಎಸಗಿದೆ. ಕಾಲೇಜು ಆರಂಭದಲ್ಲಿ ಮತ್ತೆ ಗೊಂದಲ, ಬೆಂಗಳೂರು ಮೂಲಕ ಎಲೆಕ್ಟ್ರಿಕ್ ಕಾರು ಸೇರಿದಂತೆ ನವೆಂಬರ್ 16ರ ಟಾಪ್ 10 ಸುದ್ದಿ ಇಲ್ಲಿವೆ.  

ಗಡಿ ಪುಂಡಾಟಿಕೆಗೆ ದೊಡ್ಡ ಅಸ್ತ್ರ ಬಳಸಿದ್ದ ಪಾಕಿಸ್ತಾನ!...

ನ.13ರಂದು ಕದನ ವಿರಾಮ ಉಲ್ಲಂಘಿಸಿ ಭಾರತದ ಮೇಲೆ ದಾಳಿ ನಡೆಸಿದ್ದ ಪಾಕಿಸ್ತಾನ ದೊಡ್ಡ ಮಟ್ಟದ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡಿತ್ತು. ಈ ವೇಳೆ ಪಾಕ್‌ ಸೇನೆಯ ನೆರವು ಪಡೆದು ಉಗ್ರರು ಒಳನುಸುಳಿದ್ದರು. ಇದರಿಂದಾಗಿ ಭಾರತದ ಕಡೆಯಲ್ಲಿ ಹೆಚ್ಚಿನ ಸಾವು-ನೋವು ಸಂಭವಿಸಿದೆ ಎಂದು ಬಿಎಸ್‌ಎಫ್‌ ಹಿರಿಯ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಭಾರತವಿಲ್ಲದೆ ಆರ್‌ಸಿಇಪಿ ಒಪ್ಪಂದಕ್ಕೆ 15 ದೇಶಗಳ ಸಹಿ!...

ಜಗತ್ತಿನ ಅತಿದೊಡ್ಡ ವಾಣಿಜ್ಯ ಒಪ್ಪಂದವೆಂದು ಹೆಸರಾದ ಸಮಗ್ರ ಆರ್ಥಿಕ ಪಾಲುದಾರಿಕೆಯ ಪ್ರಾದೇಶಿಕ ಒಪ್ಪಂದ (ಆರ್‌ಸಿಇಪಿ)ಕ್ಕೆ ಚೀನಾ, ಜಪಾನ್‌, ಆಸ್ಪ್ರೇಲಿಯಾ ಸೇರಿದಂತೆ ಏಷ್ಯಾ ಪೆಸಿಫಿಕ್‌ನ 15 ದೇಶಗಳು ಭಾನುವಾರ ಸಹಿ ಹಾಕಿವೆ. 

ತೆರೆದ ಅಯ್ಯಪ್ಪ ದೇಗುಲ, ಭಕ್ತರಿಗೆ ಪ್ರವೇಶ!...

ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಭಾನುವಾರ ಸಂಜೆ ತೆರೆದಿದೆ. ಭಕ್ತರಿಗೆ ಸೋಮವಾರದಿಂದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

ಸಿಎಂ ಯಡಿಯೂರಪ್ಪ ಮುಂದೆ ಬೇಡಿಕೆ ಇಟ್ಟ ರಾಮುಲು :ಕುತೂಹಲದ ಭೇಟಿ...

ಸಚಿವ ಬಿ.ಶ್ರೀರಾಮುಲು ಅವರು  ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಕೆಲ ನಿಮಿಷ ಚರ್ಚೆ ನಡೆಸಿದ್ದು ಕುತೂಹಲಕ್ಕೆ ಕಾರಣವಾಗಿದೆ. 

ಗೋಪಿನಾಥ್‌ ಬಯೋಪಿಕ್ 'ಸೂರರೈ ಪೋಟ್ರು' ಚಿತ್ರದ ಬೊಮ್ಮಿ ಯಾರು ಗೊತ್ತಾ?...

ಅಮೆಜಾನ್‌ ಪ್ರೈಂನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಆರ್‌ ಗೋಪಿನಾಥ್ ಬಯೋಪಿಕ್ ಸೂರರೈ ಪೋಟ್ರು ಸಿನಿಮಾದಲ್ಲಿ ಎಲ್ಲರ ಗಮನ ಸೆಳೆದ ಬೊಮ್ಮಿ ಅಲಿಯಾಸ್ ಅಪರ್ಣಾ ಬಾಲಮುರಳಿ ಯಾರು ಗೊತ್ತಾ?

ಕೇವಲ ಒಂದು ಸೆಕೆಂಡ್‌ನಲ್ಲಿ 26 ಕೋಟಿ ಲಾಭ : ಆ ಗಳಿಕೆ ಹಿಂದಿನ ರಹಸ್ಯ ಏನು..?...

ಕೇವಲ ಒಂದು ಸೆಕೆಂಡ್‌ನಲ್ಲಿ 26 ಕೋಟಿ ಲಾಭ, ಒಂದೇ ಗಂಟೆಯಲ್ಲಿ 24 ಲಕ್ಷ ಕೋಟಿ ಲಾಭ... ಒಂದೇ ಗಳಿಗೆಯಲ್ಲಿ ನಡೆದು ಹೋಯ್ತು ಚಮತ್ಕಾರ.. ಏನಿದು ಸಂವತ್ ಚಮತ್ಕಾರ...?

ಬಿಡುಗಡೆಯಾಗುತ್ತಿದೆ ಬೆಂಗಳೂರು ಮೂಲದ ಎಲೆಕ್ಟ್ರಿಕ್ ಕಾರು; ಟೆಸ್ಲಾಗೆ ಪೈಪೋಟಿ!...

ಅಮೆರಿಕದ ಟೆಸ್ಲಾ ಎಲೆಕ್ಟ್ರಿಕ್ ಕಾರುಗಳು ವಿಶ್ವದೆಲ್ಲೆಡೆ ಜನಪ್ರಿಯವಾಗಿದೆ. ಇದಕ್ಕೆ ಪೈಪೋಟಿ ನೀಡುವ ಎಲೆಕ್ಟ್ರಿಕ್ ಕಾರು ಇದುವರೆಗೂ ಬಿಡುಗಡೆಯಾಗಿಲ್ಲ. ಆದರೆ ಇದೀಗ ಮೇಡ್ ಇನ್ ಇಂಡಿಯಾ ಮಾತ್ರವಲ್ಲ, ನಮ್ಮ ಬೆಂಗಳೂರು ಮೂಲದ ಎಲೆಕ್ಟ್ರಿಕ್ ಕಾರು ಟೆಸ್ಲಾ ಕಾರಿಗೆ ಪೈಪೋಟಿ ನೀಡಲು ಸಜ್ಜಾಗಿದೆ. ಶೀಘ್ರದಲ್ಲೇ ಈ ಕಾರು ಬಿಡುಗಡೆಯಾಗಲಿದೆ.

ಪ್ರಭಾವಿ ಕೈ ಮುಖಂಡಗೆ ಬಿಜೆಪಿ ಆಹ್ವಾನ : ನಳಿನ್‌ರಿಂದ ಸೀಕ್ರೇಟ್ ಟಾಕ್?...

ಕರಾವಳಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಿಗೆ ಬಿಜೆಪಿ ಸೇರಲು ಪರೋಕ್ಷವಾಗಿ ಆಹ್ವಾನ ನೀಡಲಾಗಿದೆ. ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಿಂದಲೇ ಆಹ್ವಾನ ದೊರೆತಿದೆ.

'ಗಮನಿಸಿ : ನಾಳೆ ಕಾಲೇಜುಗಳನ್ನು ಓಪನ್ ಮಾಡಲ್ಲ'...

ನವೆಂಬರ್ 17 ರಂದು ಕಾಲೇಜು ಓಪನ್ ಮಾಡಲು ಸುತ್ತೋಲೆ.. ಆದರೆ ಕಾಲೇಜುಗಳನ್ನು ತೆರೆಯಲುa ನಕಾರ...ಅಧಿಕೃತ ಮಾಹಿತಿ

ರಾಜ್ಯ ರಾಜಕೀಯಕ್ಕೆ ಅಚ್ಚರಿಯ ಎಂಟ್ರಿ! ಬಿಜೆಪಿಯಿಂದ ಸೂಪರ್‌ಸ್ಟಾರ್‌ ಕಣಕ್ಕೆ?...

ನಡೆಯುತ್ತಾ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರ ನಡುವೆ ಮೈತ್ರಿ.. ಕುತೂಹಲ ಸೃಷ್ಟಿಸಿ ರಾಜಕೀಯ ನಡೆ.. ಆಗುತ್ತಾ ಮೈತ್ರಿ..? 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೂರು ವರ್ಷಗಳಲ್ಲಿ 57,733 ಸೈಬರ್ ಅಪರಾಧ, ₹5,473 ಕೋಟಿ ವಂಚನೆ: ಗೃಹ ಸಚಿವ ಪರಮೇಶ್ವರ್
ಮೇಕೆದಾಟು, ಭದ್ರಾ, ಕೃಷ್ಣಾ ಯೋಜನೆಗಳಲ್ಲಿ ಕೇಂದ್ರ ಸರ್ಕಾರ ವಿಳಂಬ: ಡಿ.ಕೆ.ಶಿವಕುಮಾರ್ ಆಕ್ರೋಶ