
ಬರ್ಲಿನ್(ನ.16): ಅಚ್ಚರಿಯ ಘಟನೆಯೊಂದು ಬೆಡಳಕಿಗೆ ಬಂದಿದ್ದು, ಜರ್ಮನಿಯ ಹಮ್ಮ್‌ನಲ್ಲಿ ಪೊಲೀಸರು ಮಕ್ಕಳು ರಚಿಸಿದ ಸ್ಕೆಚ್ ಆಧಾರದಲ್ಲಿ ಅಪಘಾತವೊಂದರ ಆಪರಾಧಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಶಾಲೆಗೆ ತೆರಳುತ್ತಿದ್ದ ನಾಲ್ವರು ವಿದ್ಯಾರ್ಥಿಗಳು ಈ ದುರ್ಘಟನೆಯನ್ನು ನೋಡಿದ್ದಾರೆ. ಹೀಗಾಗಿ ಈ ಮಕ್ಕಳಿಂದ ಪೆನ್ಸಿಲ್ ಸ್ಕೆಚ್ ಮಾಡಿಸಿರುವ ಪೊಲೀಸರು ವಾಹನ ಚಾಲಕನ ಪತ್ತೆಗೆ ಬಲೆ ಬೀಸಿದ್ದಾರೆ. ಈ ಮೂಲಕ ಆರು ವರ್ಷದ ಮಕ್ಕಳು ಮಾಡಿದ ಈ ಪೆನ್ಸಿಲ್ ಸ್ಕರೆಚ್ ತನಿಖಾ ಫೈಲ್ ಸೇರಿಕೊಂಡಿದೆ.
ಸದ್ಯ ಈ ಆರು ಮಂದಿ ಮಕ್ಕಳು ಪೊಲೀಸರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇವರು ಬೆಳಗ್ಗೆ 8:45ಕ್ಕೆ ಕಪ್ಪು ಕಾರೊಂದು ಅಪಘಾತಕ್ಕೀಡಾಗಿದ್ದನ್ನು ಗಮನಿಸಿದ್ದಾರೆ. ಅಪಘಾತದ ವೇಳೆ ಈ ಮಕ್ಕಳು ರಸ್ತೆ ದಾಟಲು ಹಾಕಲಾಗುವ ಝೀಬ್ರಾ ಪಟ್ಟಿ ಬಳಿ ಹಸಿರು ಸಿಗ್ನಲ್ ಬರಲು ಕಾಯುತ್ತಿದ್ದರು. ಇನ್ನು ಅಪಘಾತವವೆಸಗಿದರೂ ವಾಹನ ಚಾಲಕ ಇದನ್ನು ನಿರ್ಲಕ್ಷಿಸಿ ಮುಂದಕ್ಕೆ ತೆರಳಿದ್ದಾನೆಂದು ಮಕ್ಕಳು ಈ ಘಟನೆಯನ್ನು ವಿವರಿಸಿದ್ದಾರೆ.
ತದ ನಂತರ ಶಾಲೆಗೆ ತಲುಪಿದ ಮಕ್ಕಳು ಈ ಘಟನೆಯನಮ್ನು ತಮ್ಮ ಶಿಕ್ಷಕರಿಗೆ ವಿವರಿಸಿದ್ದಾರೆ. ಕೂಡಲೇ ಶಿಕ್ಷಕರು ಜಿಲ್ಲಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಿರುವಾಗ ಸೆಲಿನಾ ಹಾಗೂ ಲೂವಿಸ್ ಹೆಸರಿನ ಮಕ್ಕಳು ಈ ಘಟನೆಯ ಪೆನ್ಸಿಲ್ ಸ್ಕೆಚ್ ಮಾಡಿ ಪೊಲೀಸರಿಗೊಪ್ಪಿಸಿದ್ದಾರೆ. ಸದ್ಯ ಪೊಲೀಸರು ಇಲಾಖೆಯ ಟ್ವಿಟರ್ ಖಾತೆಯಲ್ಲಿ ಇದನ್ನು ಶೇರ್ ಮಾಡಿಕೊಂಡಿದ್ದು, ಅಪರಾಧಿಗಳನ್ನು ಹುಡುಕಲು ನೀವೂ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ