ಕಾರ್ಗಿಲ್ ವೀರರಿಗೆ ಮೋದಿ ನಮನ, ಉ.ಕೊರಿಯಾದಲ್ಲಿ ಕೊರೋನಾ; ಜು.26ರ ಟಾಪ್ 10 ಸುದ್ದಿ!

By Suvarna News  |  First Published Jul 26, 2020, 4:59 PM IST

ಕಾರ್ಗಿಲ್ ವಿಜಯ್ ದಿವಸ್ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ದೇಶಕ್ಕಾಗಿ ಹೋರಾಡಿ ಹುತಾತ್ಮರಾದ ವೀರ ಯೋಧರಿಗೆ ನಮನ ಸಲ್ಲಿಸಿದ್ದಾರೆ.  ಭಾರತದ ಡ್ರೋನ್ ಖರೀದಿಗೆ ಅಮೆರಿಕ ತನ್ನ ನಿಯಮ ಸಡಿಲ ಮಾಡಲಾಗಿದೆ. ಬಾಲಿವುಡ್‌ನಲ್ಲಿ ಸ್ವಜನ ಪಕ್ಷಪಾತದ ಕುರಿತು ಬಾಲಿವುಡ್ ನಟ ಸೋನು ಸೂದ್ ಬಾಯ್ಬಿಟ್ಟಿದ್ದಾರೆ. ಮಾಜಿ ವೇಗಿ ಜಾವಗಲ್ ಶ್ರೀನಾಥ್‌ಗೆ ಪದ್ಮಶ್ರೀ ಪ್ರಶಸ್ತಿ ನೀಡಲು ಒತ್ತಾಯ ಕೇಳಿ ಬಂದಿದೆ. ಸರ್ವಾಧಿಕಾರಿ ಕಿಮ್ ರಾಷ್ಟ್ರಕ್ಕೂ ಕೊರೋನಾ ವಕ್ಕರಿಸಿದೆ. ಕೊರೋನಾ ಲಸಿಕೆ ಪ್ರಯೋಗ, ಸಂಯುಕ್ತಾ ಹೆಗ್ಡೆ ವಿಚಿತ್ರ ಫೋಟೋ ಸೇರಿದಂತೆ ಜುಲೈ 26ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.


ಮನ್‌ ಕೀ ಬಾತ್: ಕಾರ್ಗಿಲ್ ವೀರರು, ಅವರನ್ನು ಹೆತ್ತ ತಾಯಂದಿರಿಗೆ ಮೋದಿ ನಮನ!...

Latest Videos

undefined

ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದ್ದು, ಕಾರ್ಗಿಲ್‌ ವಿಜಯ್ ದಿವಸ್ ಸಂದರ್ಭದಲ್ಲಿ ದೇಶಕ್ಕಾಗಿ ತನ್ನ ಪ್ರಾಣ ತ್ಯಾಗ ಮಾಡಿದ ವೀರ ಯೋಧರನ್ನು  ನೆನಪಿಸಿಕೊಳ್ಳುವಂತೆ ಆಗ್ರಹಿಸಿದ್ದಾರೆ. ಅಲ್ಲದೇ ಕೊರೋನಾ ಆತಂಕದ ಮಧ್ಯೆ ಎಚ್ಚರದಿಂದಿರುವಂತೆ ಸೂಚಿಸಿದ್ದಾರೆ.

ಭಾರತದ ಕೊರೋನಾ ಲಸಿಕೆ ಕೊವ್ಯಾಕ್ಸಿನ್ ಮೊದಲ ಪ್ರಯೋಗ ಯಶಸ್ವಿ!

ಕೊರೋನಾ ಮಹಾಮಾರಿ ತಡೆಗೆ ಲಸಿಕೆ ಸಂಶೋಧನೆಗಳು ನಡೆಯುತ್ತಿದೆ. ಹಲವು ವಿದೇಶಿ ಲಸಿಕೆಗಳ ಅಂತಿಮ ಹಂತದ ಪ್ರಯೋಗದಲ್ಲಿದೆ. ಇತ್ತ ಭಾರತ ಕೂಡ ಕೊರೋನಾ ಲಸಿಕೆಯಲ್ಲಿ ಮುಂಚೂಣಿಯಲ್ಲಿದೆ. ಭಾರತದ ಮೊಟ್ಟ ಮೊದಲ ಕೊರೋನಾ ಲಸಿಕೆ ಕೊವ್ಯಾಕ್ಸಿನ್ ಮೊದಲ ಹಂತದ ಪ್ರಯೋಗ ಯಶಸ್ವಿಯಾಗಿದ್ದು, ಭಾರತೀಯರಲ್ಲಿ ಹೊಸ ಭರವಸೆ ಮೂಡಿಸಿದೆ

ಕಾರ್ಗಿಲ್ ವೀರರನ್ನು 5 ವರ್ಷ ಮರೆತಿದ್ದ ಯುಪಿಎ ಸರ್ಕಾರ, ಮತ್ತೆ ವಿಜಯ್ ದಿವಸ್ ಜಾರಿಗೆ ಬಂದಿದ್ದು ಹೀಗೆ!...

ಪಾಕಿಸ್ತಾನದ ವಿರುದ್ಧ 1999ರಲ್ಲಿ ನಡೆದ ಯುದ್ಧದಲ್ಲಿ ಗೆಲುವು ಸಾಧಿಸಿದ ದಿನವನ್ನು ‘ಕಾರ್ಗಿಲ… ವಿಜಯ ದಿವಸ್‌’ ಎಂದು ಪ್ರತಿ ವರ್ಷ ಸ್ಮರಣೆ ಮಾಡಿಕೊಳ್ಳಲಾಗುತ್ತಿದೆ. ಕಾರ್ಗಿಲ್‌ ಯುದ್ಧದಲ್ಲಿ ಭಾರತ ಜಯಿಸಿ ಭಾನುವಾರಕ್ಕೆ 21 ವರ್ಷ. 

ನಿಯಮ ಸಡಿಲಿಸಿದ ಅಮೆರಿಕ: ಡ್ರೋನ್‌ ಖರೀದಿಯ ಭಾರತದ ಉದ್ದೇಶಕ್ಕೆ ಮತ್ತಷ್ಟು ಬಲ!...

ಉಗ್ರರ ನೆಲೆ ಹುಡುಕಿ ಧ್ವಂಸ ಮಾಡುವ ಶಕ್ತಿ ಹೊಂದಿರುವ ಸಶಸ್ತ್ರ ಪ್ರಿಡೇಟರ್‌ ಬಿ ಮತ್ತು ಹಾಕ್‌ ಕಣ್ಗಾವಲು ಡ್ರೋನ್‌ಗಳ ಮಾರಾಟದ ಮೇಲಿನ ನಿರ್ಬಂಧವನ್ನು ಅಮೆರಿಕ ಸಡಿಲಗೊಳಿಸಿದೆ. ಹೀಗಾಗಿ ಗಡಿಯಲ್ಲಿ ಕಣ್ಗಾವಲು ಮತ್ತು ದಾಳಿಗೆ ಅಮೆರಿಕದ ಡ್ರೋನ್‌ ಖರೀದಿಯ ಭಾರತದ ಆಶಯಕ್ಕೆ ಬಲ ಸಿಕ್ಕಿದೆ.

ಜಾವಗಲ್ ಶ್ರೀನಾಥ್‌ಗೆ ಪದ್ಮಶ್ರೀ ನೀಡಲು ಜಾಲತಾಣಗಳಲ್ಲಿ ಒತ್ತಾಯ...

ದಶಕಗಳ ಕಾಲ ಟೀಂ ಇಂಡಿಯಾ ಬೌಲಿಂಗ್ ಸಾರಥ್ಯ ವಹಿಸಿದ್ದ ಜಾವಗಲ್ ಶ್ರೀನಾಥ್ ಅವರಿಗೆ ದೇಶದ ನಾಲ್ಕನೇ ಅತ್ಯುಚ್ಚ ನಾಗರೀಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿ ನೀಡಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ಇದಕ್ಕೆ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಸಹ ದ್ವನಿ ಗೂಡಿಸಿದ್ದಾರೆ.

ಅವಕಾಶಕ್ಕಾಗಿ ಅಲೆದಿದ್ರು ಸೋನು ಸೂದ್: ರಿಯಲ್ ಹಿರೋ ಬಾಲಿವುಡ್ ನೆಪೊಟಿಸಂ ಬಗ್ಗೆ ಹೇಳಿದ್ದಿಷ್ಟು

ಬಾಲಿವುಡ್‌ನಲ್ಲಿ ಸ್ವಜನ ಪಕ್ಷಪಾತದ ಬಗ್ಗೆ ತೀವ್ರ ಚರ್ಚೆಗಳಾಗುತ್ತಿರುವ ಬೆನ್ನಲ್ಲೇ ನಟ ಸೋನು ಸೂದ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಬಾಲಿವುಡ್ ನೆಪೊಟಿಸಂ ಬಗ್ಗೆ ರಿಯಲ್ ಹೀರೋ ಏನ್ ಹೇಳಿದ್ದಾರೆ..? ಇಲ್ಲಿ ಓದಿ.

ಸಂಯುಕ್ತಾ ಹೆಗ್ಡೆ ವಿಚಿತ್ರ ಫೋಟೋ; 10 ಲಕ್ಷ ಜನರ ಪ್ರೀತಿ ಪಡೆದ ತುಂಟಿ!

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಸಂಯುಕ್ತಾ ಹೆಗ್ಡೆ ಇನ್‌ಸ್ಟಾಗ್ರಾಂ ಖಾತೆಯಲ್ಲಿ 1 ಮಿಲಿಯನ್ ಫಾಲೋವರ್ಸ್‌ ಪಡೆದುಕೊಂಡಿದ್ದಾರೆ. ಅವರ ಖಾತೆಯಲ್ಲಿ ಅತಿ ಹೆಚ್ಚು ಗಮನ ಸೆಳೆದ ಫೋಟೋಗಳಿವು....

ಕೆಟ್ಟ ವೈರಸ್‌ ದೇಶಕ್ಕೆ ಪ್ರವೇಶಿಸಿದೆ: ಲಾಕ್‌ಡೌನ್ ಘೋಷಿಸಿದ ಉ. ಕೊರಿಯಾ ಸರ್ವಾಧಿಕಾರಿ ಕಿಮ್!...

ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳಿಗೂ ವ್ಯಾಪಿಸಿರುವ ಮಹಾಮಾರಿ ಕೊರೋನಾ ವೈರಸ್ ಉತ್ತರ ಕೊರಿಯಾಗೂ ಪ್ರವೇಶಿಸಿದೆ. ಈ ಹಿನ್ನೆಲೆ ಸರ್ಕಾರ ಕೈಸೊಂಗ್ ಗಡಿ ನಗರದಲ್ಲಿ ಲಾಕ್ ಡೌನ್ ಜಾರಿ ಮಾಡಿದೆ.

ಪಂಜಾಬ್‌ ಸರ್ಕಾರಿ ಶಾಲೆಗಳಲ್ಲಿ ಈ ಬಾರಿ ಎಡ್ಮಿಷನ್, ರೀ ಎಡ್ಮಿಷನ್, ಟ್ಯೂಶನ್ ಫೀಸ್ ಇಲ್ಲ...

2020-2021ರ ಶೈಕ್ಷಣಿಕ ವರ್ಷದಲ್ಲಿ ಪಂಜಾಬ್‌ನ ಸರ್ಕಾರಿ ಶಾಲೆಗಳಲ್ಲಿ ಎಡ್ಮಿಷನ್, ರೀ ಎಡ್ಮಿಷನ್, ಟ್ಯೂಷನ್ ಫೀಸ್ ರದ್ದು ಮಾಡಲಾಗಿದೆ ಎಂದು ಪಂಜಾಬ್ ಸಿಎಂ ಕ್ಯಾ. ಅಮರಿಂದರ್ ಸಿಂಗ್ ಘೋಷಿಸಿದ್ದಾರೆ.

ಸಂಶೋಧನೆ ಹೆಸರಲ್ಲಿ ಚೀನಾ ವಿದ್ಯಾರ್ಥಿಗಳ ಗೂಢಚರ್ಯೆ?

ಕೊರೋನಾ ಲಸಿಕೆ ಸಂಶೋಧನೆ ಕುರಿತ ತನ್ನ ದೇಶದ ಸಂಶೋಧನಾ ಮಾಹಿತಿಯನ್ನು ಚೀನಾ ಕದಿಯುತ್ತಿದೆ ಎಂದು ಆರೋಪಿಸಿದ್ದ ಅಮೆರಿಕ, ಇದೀಗ ಗೂಢಚರ್ಯೆ ಆರೋಪದ ಮೇಲೆ ಚೀನಾದ ಮೂವರು ವಿದ್ಯಾರ್ಥಿಗಳನ್ನು ಬಂಧಿಸಿದೆ. ಬಂಧಿತರು, ಸಂಶೋಧನಾ ವಿದ್ಯಾರ್ಥಿಗಳ ರೂಪದಲ್ಲಿ ಅಮೆರಿಕಕ್ಕೆ ಆಗಮಿಸಿ ಇಲ್ಲಿ ಚೀನಾ ಸೇನೆಯ ಪರವಾಗಿ ಗೂಢಚರ್ಯೆ ನಡೆಸುತ್ತಿದ್ದರು. ಈ ತಂಡದ ಇನ್ನೊಬ್ಬ ಪರಾರಿಯಾಗಿದ್ದು, ಆತನಿಗೆ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿನ ಚೀನಾ ರಾಯಭಾರ ಕಚೇರಿಯಲ್ಲಿ ಆಶ್ರಯ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

click me!