ಅಫ್ಘಾನಿಸ್ತಾನದಲ್ಲಿ ಪಾಕ್‌ನ 6000ಕ್ಕೂ ಹೆಚ್ಚು ಉಗ್ರರು!

By Suvarna NewsFirst Published Jul 26, 2020, 4:24 PM IST
Highlights

ಅಷ್ಘಾನಿಸ್ತಾನದಲ್ಲಿ ಪಾಕ್‌ನ 6000ಕ್ಕೂ ಹೆಚ್ಚು ಉಗ್ರರು| ವಿಶ್ವಸಂಸ್ಥೆ ಕಳವಳಕಾರಿ ವರದಿ| ಬಹುತೇಕರು ಪಾಕಿಸ್ತಾನದ ತೆಹ್ರಿಕ್‌-ಇ-ತಾಲಿಬಾನ್‌ ಸಂಘಟನೆಗೆ ಸೇರಿದವರಾಗಿದ್ದಾರೆ

ವಿಶ್ವಸಂಸ್ಥೆ(ಜು.26): ಪಾಕಿಸ್ತಾನದ 6000-6500 ಭಯೋತ್ಪಾದಕರು ನೆರೆಯ ಅಷ್ಘಾನಿಸ್ತಾನದಲ್ಲಿದ್ದಾರೆ. ಇವರಲ್ಲಿ ಬಹುತೇಕರು ಪಾಕಿಸ್ತಾನದ ತೆಹ್ರಿಕ್‌-ಇ-ತಾಲಿಬಾನ್‌ ಸಂಘಟನೆಗೆ ಸೇರಿದವರಾಗಿದ್ದಾರೆ.

ಕರ್ನಾಟಕ, ಕೇರಳದಲ್ಲಿ ಐಸಿಸ್ ಉಗ್ರರ ಸಂಖ್ಯೆ ಹೆಚ್ಚಳ; ದಾಳಿಗೆ ಅಲ್‌ಖೈದಾ ಸಂಚು!

ಇದು ಉಭಯ ದೇಶಗಳಿಗೂ ಅಪಾಯಕಾರಿ ಎಂದು ವಿಶ್ವಸಂಸ್ಥೆ ವರದಿಯೊಂದು ಹೇಳಿದೆ. ಐಸ್‌ಐಎಸ್‌, ಅಲ್‌ಖೈದಾ ಮತ್ತಿತರ ಸಂಬಂಧಿತ ವ್ಯಕ್ತಿಗಳು ಮತ್ತು ಘಟಕಗಗಳ ಸಂಬಂಧಿಸಿದ ವರದಿಯಲ್ಲಿ, ಭಾರತದ ಉಪಖಂಡಗಳಲ್ಲಿರುವ ಅಲ್‌ಖೈದಾ ಭಯೋತ್ಪಾದಕರ ಗುಂಪು ಅಷ್ಘಾನಿಸ್ತಾನದ ನಿಮ್ರೂಜ್‌, ಹೆಲ್ಮಂಡ್‌ ಮತ್ತು ಕಂದಹಾರ್‌ ಪ್ರಾಂತ್ಯಗಳಲ್ಲಿ ತಾಲಿಬಾನ್‌ ಅಡಿಯಲ್ಲಿ ಕಾರ‍್ಯನಿರ್ವಹಿಸುತ್ತಿದೆ ಎಂದು ಹೇಳಿದೆ.

ಈ ಗುಂಪು ಬಾಂಗ್ಲಾ, ಭಾರತ, ಮಯನ್ಮಾರ್‌ ಮತ್ತು ಪಾಕಿಸ್ತಾನದ 150ರಿಂದ 200 ಮಂದಿಯನ್ನು ಒಳಗೊಂಡಿದೆ ಎನ್ನಲಾಗಿದೆ.

click me!