ನಿಮ್ಮೂರಿನ ಗಾರ್ಬೆಜ್ ಪ್ರಾಬ್ಲಂಗೆ ಈ IAS ಅಧಿಕಾರಿ ಬಳಿ ಇದೆ ಸೊಲ್ಯುಶನ್!

By Web DeskFirst Published Jan 17, 2019, 2:14 PM IST
Highlights

ದಿನದಿಂದ ದಿನಕ್ಕೆ ಗಂಭೀರವಾಗುತ್ತಿರುವ ಕಸದ ಸಮಸ್ಯೆ| ಎಲ್ಲಾ ನಗರಗಳಲ್ಲೂ ಭೖಂಕರ ಸ್ವರೂಪ ಪಡೆಯುತ್ತಿರುವ ಕಸದ ಸಮಸ್ಯೆ| ಗಾರ್ಬೆಜ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದ ಸರ್ಕಾರಗಳು| ಈ ಐಎಎಸ್ ಅಧಿಕಾರಿ ಬಳಿ ಇದೆ ಕಸದ ಸಮಸ್ಯೆಗೆ ಪರಿಹಾರ| ಇಂಧೋರ್ ಮಹಾನಗರ ಪಾಲಿಕೆ ಕಮಿಷನರ್ ಆಶೀಶ್ ಸಿಂಗ್| ಬಯೋ ಮೈನಿಂಗ್ ಮೂಲಕ ಕಸದ ಸಮಸ್ಯೆಗೆ ಮುಕ್ತಿ

ಇಂಧೋರ್(ಜ.17): ಎಲ್ಲಿ ನೋಡಿದರಲ್ಲಿ ಕಸದ ರಾಶಿ, ಗಬ್ಬುನಾತ. ಹಿಂದೊಮ್ಮೆ ಸುಂದರ ತಾಣವಾಗಿದ್ದ ನಿಮ್ಮ ಪ್ರೀತಿಯ ನಗರ ಇದೀಗ ಕಸದ ತೊಟ್ಟಿಯಾಗಿ ಮಾರ್ಪಡುತ್ತಿದೆಯೇ?.

ಕಸದ ಸಮಸ್ಯೆಯನ್ನು ನಿವಾರಿಸಬೇಕಾದ ನಿಮ್ಮೂರಿನ ಪಂಚಾಯ್ತಿ, ನಗರಸಭೆ, ಜಿಲ್ಲಾಡಳಿತ, ಸರ್ಕಾರ ಹೀಗೆ ಎಲ್ಲ ವ್ಯವಸ್ಥೆಯೂ ವಿಫಲವಾಗಿಯೇ?. ನಿಮ್ಮೂರಿನ ಕಸದ ಸಮಸ್ಯೆಗೆ ಪರಿಹಾರವೇ ಇಲ್ಲ ಅಂತಾ ತಲೆ ಮೇಲೆ ಕೈಹೊತ್ತು ಕುಳಿತಿದ್ದೀರಾ?.

ಇಲ್ಲ, ತಲೆ ಮೇಲೆ ಕೈ ಹೊತ್ತು ಕೂರುವ ಸಮಯ ಇದಲ್ಲ. ಕಸದ ಸಮಸ್ಯೆಯನ್ನು ನಿವಾರಿಸಲು ತಲೆ ಉಪಯೋಗಿಸುವ ಸಮಯ ಇದು. ಈ ಗಂಭೀರ ಸಮಸ್ಯೆಗೆ ಪರಿಹಾರ ಹುಡುಕುವ ಮನಸ್ಸುಗಳು ನಮ್ಮ ವ್ಯವಸ್ಥೆಯಲ್ಲೇ ಇವೆ.

ಅದರಂತೆ ಮಧ್ಯಪ್ರದೇಶದ ರಾಜಧಾನಿ ಇಂಧೋರ್ ನ ಮಹಾನಗರ ಪಾಲಿಕೆ ಕಮಿಷನರ್, ಐಎಎಸ್ ಅಧಿಕಾರಿ ಆಶೀಶ್ ಸಿಂಗ್ ತಮ್ಮೂರಿನ ಕಸದ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ.

ಏನಿದು ಬಯೋ ಮೈನಿಂಗ್?:

ಆಶೀಶ್ ಸಿಂಗ್ ಇಂಧೋರ್ ಮಹಾನಗರ ಪಾಲಿಕೆ ಕಮಿಷನರ್ ಆಗಿ ನೇಮಕಗೊಂಡ ಬಳಿಕ, ಕಸದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದರು. ಈ ಮೊದಲು ಹೊರ ಗುತ್ತಿಗೆ ನೀಡಿದ ಕಸವನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿತ್ತು. ಇದಕ್ಕೆ 60-65 ಕೋಟಿ ರೂ. ವೆಚ್ಚವಾಗುತ್ತಿತ್ತು.

ಆದರೆ ಆಶೀಶ್ ಅಧಿಕಾರ ಸ್ವೀಕರಿಸಿದ ಬಳಿಕ ಪಾಲಿಕೆ ಅಧೀನದಲ್ಲಿ ಬರುವ ಸಂಪನ್ಮೂಲಗಳನ್ನೇ ಬಳಸಿ ಬಯೋ ಮೈನಿಂಗ್ ಮುಖಾಂತರ ಕಸದ ವಿಲೇವಾರಿಗೆ ಮುಂದಾದರು.

ಜೈವಿಕವಾಗಿ ವೀಘಟನೀಯ ಮತ್ತು ಜೈವಿಕವಾಗಿ ವೀಘಟನೀಯವಲ್ಲದ ಕಸವನ್ನು ಪ್ರತ್ಯೇಕಗೊಳಿಸಿ, ಯಂತ್ರದ ಸಹಾಯದಿಂದ ಕಸವನ್ನು ಕ್ರಶ್ ಮಾಡುವ ಅಥವಾ ಸ್ಥಳಾಂತರಿಸುವ ವ್ಯವಸ್ಥೆ ಜಾರಿಗೆ ತಂದರು.

ಆಶೀಶ್ ಅವರ ಈ ಪ್ರಯತ್ನದಿಂದಾಗಿ ಇಂಧೋರ್ ಮಹಾನಗರ ಪಾಲಿಕೆ ಇದೀಗ 13 ಲಕ್ಷ ಟನ್ ಕಸವನ್ನು ತೆರವುಗೊಳಿಸುತ್ತಿದೆ. ಈ ಮೂಲಕ ನಗರವನ್ನು ಸ್ವಚ್ಛವಾಗಿಡುವ ತಮ್ಮ ಉದ್ದೇಶದಲ್ಲಿ ಆಶೀಶ್ ಯಶಸ್ವಿಯಾಗಿದ್ದಾರೆ.

click me!