ಹೊತ್ತಿದ ಬೆಂಕಿ, ಇಳಿಯದ ಜ್ವರ, ಭಾರತ-ಪಾಕ್ ನ 10 ಮೈಲುಗಲ್ಲು!

Aug 14, 2018, 3:58 PM IST

ಬೆಂಗಳೂರು(ಆ.14): 1947, 1965, 1971, 1999 ಪಾಕಿಸ್ತಾನ ಎಂಬ ಮಗ್ಗುಲು ಮುಳ್ಳು ಭಾರತದ ಮೇಲೆ ದಂಡೆತ್ತಿ ಬಂದ ವರ್ಷಗಳು. ಪ್ರತೀ ಬಾರಿಯೂ ಸೋಲಿನ ರುಚಿಯನ್ನೇ ಕಂಡ ಪಾಕ್, ಭಾರತವನ್ನು ನೇರ ಯುದ್ಧದಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಬಹಬೇಗ ಅರಿತುಕೊಂಡಿತು. ಅದರಲ್ಲೂ 1971 ರಲ್ಲಿ ತನ್ನಿಂದ ಬಾಂಗ್ಲಾದೇಶವನ್ನು ಕಸಿದುಕೊಂಡ ಭಾರತವನ್ನು ಹೇಗಾದರೂ ಮಾಡಿ ಸೋಲಿಸಲೇಬೇಕು ಎಂದು ಹವಣಿಸುತ್ತಲೇ ಇರುವ ಪಾಕ್‌ಗೆ ಭವಿಷ್ಯದಲ್ಲೂ ನಿರಾಶೆಯೇ ಕಾದಿದೆ.

ಈ ಹಿನ್ನೆಲೆಯಲ್ಲಿ ನೇರ ಯುದ್ಧ ತಂತ್ರವನ್ನು ಕೈಬಿಟ್ಟ ಪಾಕ್, ಭಾರತ ಭಯೋತ್ಪಾದನೆಯಿಂದ ನರಳುವಂತೆ ಮಾಡಲು ಹುನ್ನಾರ ನಡೆಸಿ ಅದರಲ್ಲಿ ಬಹುಮಟ್ಟಿನ ಯಶಸ್ವಿಯನ್ನೂ ಕಂಡಿತು. ಆದರೆ ಭಾರತೀಯ ಸೈನಿಕರ ದಿಟ್ಟ ಉತ್ತರಕ್ಕೆ, ದೇಶದ ಜನತೆಯ ತಿರಸ್ಕಾರಕ್ಕೆ ಬಲಿಯಾದ ಭಯೋತ್ಪಾದನೆ ಕೂಡ ಇಂದಿನ ದಿನಗಳಲ್ಲಿ ಜೀವ ಉಳಿಸಿಕೊಳ್ಳಲು ಬಿಲದ ಹುಡುಕಾಟ ನಡೆಸುತ್ತಿದೆ.

ಭಾರತ-ಪಾಕ್ ನಡುವಿನ ಕದನ ಇತಿಹಾಸ ಮತ್ತು ಅದರ ಪರಿಣಾಮವನ್ನು ನಿಮ್ಮೆದುರಿಗೆ ಇಡುವ ಪ್ರಯತ್ನ ಇಲ್ಲಿದೆ..