ದೇಶದ ಎಲ್ಲಾ ಹಳ್ಳಿಗೆ ಇಂಟರ್ನೆಟ್, ಕೆಜಿ ಹಳ್ಳಿ ಠಾಣೆ ಎದುರು ಹೊಸ ಪ್ರೊಟೆಸ್ಟ್: ಆ.16ರ ಟಾಪ್ 10 ಸುದ್ದಿ!

By Suvarna News  |  First Published Aug 16, 2020, 5:12 PM IST

ದೇಶದ ಎಲ್ಲಾ 6 ಲಕ್ಷ ಹಳ್ಳಿಗಳಿಗೆ ಹೈಸ್ಪೀಡ್ ಇಂಟರ್ನೆಟ್ ಸೌಲಭ್ಯ ನೀಡುವ ಭರವಸೆಯನ್ನು ಪ್ರಧಾನಿ ಮೋದಿ ನೀಡಿದ್ದಾರೆ. ಗಡಿ ಖ್ಯಾತೆ ಬಳಿಕ ಇದೀಗ ಪ್ರಧಾನಿ ಮೋದಿ ಹಾಗೂ ನೇಪಾಳ ಪ್ರಧಾನಿ ಚರ್ಚೆ ನಡೆಸಲಿದ್ದಾರೆ.  ಕೆಜಿ ಹಳ್ಳಿ ಪೊಲೀಸ್ ಠಾಣೆ ಎದುರು ಬಂಧಿತ ಆರೋಪಿಗಳ ಪೋಷಕರು ಪ್ರತಿಭಟನೆ ಆರಂಭಿಸಿದ್ದಾರೆ. ಎಂ.ಎಸ್.ಧೋನಿ ಸಂಜೆ 7.29ಕ್ಕೆ ವಿದಾಯ ಹೇಳಿದ ಹಿಂದಿನ ರಹಸ್ಯ ಬಯಲಾಗಿದೆ.  ಬಿಗಿಯಾಗ ತೆರಿಗೆ ಕಾನೂನು, 2 ತಿಂಗಳ ಬಳಿಕ ಕರನ್ ಜೋಹರ್ ಪೋಸ್ಟ್ ಸೇರಿದಂತೆ ಆಗಸ್ಟ್ 16ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.


1000 ದಿನದಲ್ಲಿ ದೇಶದ ಎಲ್ಲ 6 ಲಕ್ಷ ಹಳ್ಳಿಗೂ ಬರಲಿದೆ ಈ ಸೌಲಭ್ಯ: ಮೋದಿ ಭರವಸೆ!...

Tap to resize

Latest Videos

ಹೈಸ್ಪೀಡ್‌ ಇಂಟರ್ನೆಟ್‌ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಮುಂದಿನ ಒಂದು ಸಾವಿರ ದಿನಗಳಲ್ಲಿ ದೇಶದ ಎಲ್ಲ ಆರು ಲಕ್ಷ ಹಳ್ಳಿಗಳಿಗೂ ಆಪ್ಟಿಕಲ್‌ ಫೈಬರ್‌ ಸಂಪರ್ಕ ಕಲ್ಪಿಸಲಾಗುವುದು. ಸಬ್‌ಮರೀನ್‌ ಫೈಬರ್‌ ಕೇಬಲ್‌ ಮೂಲಕ ಲಕ್ಷದ್ವೀಪಕ್ಕೂ ಇದೇ ಅವಧಿಯಲ್ಲಿ ಹೈ ಸ್ಪೀಡ್‌ ಇಂಟರ್ನೆಟ್‌ ಸಂಪರ್ಕ ಒದಗಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ

4 ತಿಂಗಳ ಬಳಿಕ ಮೋದಿ, ನೇಪಾಳ ಪ್ರಧಾನಿ ಚರ್ಚೆ!...

ಗಡಿ ವಿಚಾರವಾಗಿ ಕ್ಯಾತೆ ತೆಗೆದಿದ್ದ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರು 4 ತಿಂಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಸ್ವಾತಂತ್ರ್ಯ ದಿನಕ್ಕೆ ಶುಭಾಶಯ ಕೋರಿದ್ದಾರೆ.

ರಾಜ್ಯದಲ್ಲಿ ಒಂದೇ ದಿನ ದಾಖಲೆಯ 8818 ಕೇಸ್‌, 6629 ಜನ ಡಿಸ್ಚಾರ್ಜ್!...

ರಾಜ್ಯದಲ್ಲಿ ಆಗಸ್ಟ್‌ ತಿಂಗಳಲ್ಲಿ ಕೇವಲ ಮೂರು ಬಾರಿ ಏಳು ಸಾವಿರ ಗಡಿ ದಾಟಿದ್ದ ಕೊರೋನಾ ಸೋಂಕು ಶನಿವಾರ ದಿಢೀರನೆ ಒಂಭತ್ತು ಸಾವಿರದ ಗಡಿ ಸಮೀಪಿಸಿದೆ. ಶನಿವಾರ ಒಂದೇ ದಿನ ದಾಖಲೆಯ 8,818 ಮಂದಿಗೆ ಸೋಂಕು ದೃಢಪಟ್ಟಿದ್ದು, 114 ಮಂದಿ ಸೋಂಕಿತರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಎಂ ಎಸ್ ಧೋನಿ ಸರಿಯಾಗಿ ಸಂಜೆ 7.29ಕ್ಕೆ ನಿವೃತ್ತಿ ಘೋಷಿಸಿದ್ದೇಕೆ..? ಇಲ್ಲಿದೆ ನಿಜವಾದ ಕಾರಣ

ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿಯಾದಂತೆ ಮಹೇಂದ್ರ ಸಿಂಗ್ ಧೋನಿ ಸೀಮಿತ ಓವರ್‌ಗಳ ಕ್ರಿಕೆಟ್‌ಗೂ ಅಚಾನಕ್‌ ಆಗಿ ಗುಡ್‌ ಬೈ ಹೇಳಿದ್ದಾರೆ. 13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಇನ್ನೊಂದು ತಿಂಗಳು ಬಾಕಿ ಇರುವಾಗಲೇ ಧೋನಿ ಸಾಮಾಜಿಕ ಜಾಲತಾಣದಲ್ಲಿ ತಣ್ಣಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯಂದೇ ಇಂದಿನ 19:29(7.29) ಗಂಟೆಯ ಬಳಿಕ ನಾನು ನಿವೃತ್ತಿಯಾಗಿದ್ದೇನೆ ಎಂದು ಪರಿಗಣಿಸಿ ಎಂದು ಹೇಳುವ ನಿವೃತ್ತಿಯಾಗಿದ್ದಾರೆ.

ಬೆಂಗಳೂರಿಗೆ ಬೆಂಕಿ ಇಟ್ಟವರು ಅಮಾಯಕರಂತೆ; ಪೊಲೀಸ್‌ ಸ್ಟೇಷನ್ ಮುಂದೆ ಪೋಷಕರ ಹೈಡ್ರಾಮಾ...

ಬೆಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪುಂಡರ ಹೆಡೆಮುರಿ ಕಟ್ಟಿದ್ದಾರೆ. ಸುಮಾರು 350 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಇದೀಗ ಕೆಜೆ ಹಳ್ಳಿ ಪೊಲೀಸ್ ಸ್ಟೇಷನ್ ಎದುರು ಹೈಡ್ರಾಮಾ ನಡೆದಿದೆ. ನಮ್ಮ ಅಣ್ಣ, ತಮ್ಮ ಹಾಗೂ ಗಂಡನನ್ನು ಅನವಶ್ಯಕವಾಗಿ ಅರೆಸ್ಟ್ ಮಾಡಿದ್ದಾರೆ. ಅವರಿಗೂ, ಗಲಭೆಗೂ ಯಾವುದೇ ಸಂಬಂಧ ಇಲ್ಲ. ಅವರೆಲ್ಲಾ ಅಮಾಯಕರು' ಎಂದು ಸಾಕಷ್ಟು ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಜಮೀರ್ ಆಯ್ತು, ಈಗ ಪೋಷಕರು ಅಮಾಯಕರ ಪಟ್ಟ ಕಟ್ಟಿದ್ದಾರೆ. ಪೊಲೀಸರ ಮೇಲೆ ಗೂಬೆ ಕೂರಿಸಿದ್ದಾರೆ. 

2 ತಿಂಗಳ ನಂತರ ಕಾಣಿಸಿಕೊಂಡ ಕರಣ್ ಜೋಹಾರ್ ಹಾಕಿದ ಪೋಸ್ಟಿದು!...

ಸುಶಾಂತ್ ಸಾವಿನ ನಂತರ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳದ ಕರಣ್ ಜೋಹಾರ್‌ ಇದೀಗ ಮತ್ತೆ ಪ್ರತ್ಯಕ್ಷರಾಗಿದ್ದಾರೆ. ಆದರೀಗ ಸಿನಿಮಾ ಪ್ರಚಾರಕ್ಕಾಗಲಿ ಅಥವಾ ಪರ್ಸನಲ್‌ ಮ್ಯಾಟರ್‌‌ಗೆ ಅಲ್ಲ......

ಐಟಿ ಇನ್ನಷ್ಟು ಬಿಗಿಯಾಗೈತಿ! ಯಾರೂ ತಪ್ಪಿಸಿಕೊಳ್ಳುವ ಹಂಗಿಲ್ಲ!...

ತೆರಿಗೆ ವಂಚನೆ ತಪ್ಪಿಸಲು ಹಾಗೂ ದುಬಾರಿ ಮೊತ್ತದ ಹಣಕಾಸು ವ್ಯವಹಾರಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ನೇರ ತೆರಿಗೆ ಸುಧಾರಣೆಗಳನ್ನು ಪ್ರಕಟಿಸುವಾಗ ಪ್ರಧಾನಿ ಮೋದಿ ಅವರು ನಮ್ಮ ದೇಶದ 130 ಕೋಟಿ ಜನರಲ್ಲಿ ಕೇವಲ 1.5 ಕೋಟಿ ಜನರು ಆದಾಯ ತೆರಿಗೆ ಪಾವತಿಸುತ್ತಾರೆ ಎಂದು ಹೇಳಿದ್ದರು. ಅದರ ಬೆನ್ನಲ್ಲೇ ಜಾರಿಗೆ ಬರುತ್ತಿರುವ ತೆರಿಗೆ ಸುಧಾರಣಾ ಕ್ರಮಗಳಡಿ ಆದಾಯ ತೆರಿಗೆ ಪಾವತಿಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ಹೊಸ ಹೊಸ ನಿಯಮಗಳು ಜಾರಿಗೆ ಬರುವ ಸಾಧ್ಯತೆಯಿದೆ. 

PUC ನಿಯಮ ಉಲ್ಲಂಘಿಸಿದ 440 ವಾಹನ ಮಾಲೀಕರಿಗೆ ಬಿತ್ತು ದುಬಾರಿ ದಂಡ!...

ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಬಳಿಕ ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ದುಬಾರಿ ದಂಡ ಬೀಳಲಿದೆ. ಹೀಗಾಗಿ ಎಚ್ಚರ ವಹಿಸುವುದು ಅಗತ್ಯ. ಇದೀಗ PUC ನಿಯಮ ಉಲ್ಲಂಘಿಸಿದ ವಾಹನ ಮಾಲೀಕರಿಗೆ ತಲಾ 10,000 ರೂಪಾಯಿ ದಂಡ ಹಾಕಲಾಗಿದೆ. 

ದೇಶದಲ್ಲಿ ತಯಾರಾಗ್ತಿವೆ 3 ಲಸಿಕೆ: ಯಾವಾಗಿಂದ ಉತ್ಪಾದನೆ? ಸಿಕ್ತು ಸುಳಿವು!...

ವಿಜ್ಞಾನಿಗಳು ಒಪ್ಪಿಗೆ ನೀಡುತ್ತಿದ್ದಂತೆ ಭಾರತದಲ್ಲಿ ಕೋವಿಡ್‌-19 ಲಸಿಕೆಯ ಸಮೂಹ ಉತ್ಪಾದನೆ ಆರಂಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಪ್ರೇಕ್ಷಕರಿಲ್ಲದೆ ವಾಘಾ ಬೀಟಿಂಗ್‌ ರಿಟ್ರೀಟ್‌: 61 ವರ್ಷದಲ್ಲೇ ಮೊದಲು!...

61 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸ್ವಾತಂತ್ರ್ಯ ದಿನಾಚರಣೆಯಂದು ಅಟ್ಟಾರಿ- ವಾಘಾ ಗಡಿಯಲ್ಲಿ ಪ್ರೇಕ್ಷಕರಿಲ್ಲದೆ ಬೀಟಿಂಗ್‌ ರಿಟ್ರೀಟ್‌ ಕಾರ್ಯಕ್ರಮ ನಡೆಯಿತು.

click me!