
ದುಬೈ(ಆ. 16): ದುಬೈ ರಾಜಕುಮಾರ ಹಾಗೂ ಕಾರ್ಯಕಾರಿ ಪರಿಷದ್‌ನ ಅಧ್ಯಕ್ಷ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಾಶಿದ್ ಅಲ್ ಮಕ್ತೂಮ್ ತನ್ನ ಕಾರಿನ ವಿಂಡ್‌ಶೀಲ್ಡ್‌ನಲ್ಲಿ ಹಕ್ಕಿಯೊಂದು ಗೂಡು ಕಟ್ಟಿದ ಬಳಿಕ ತನ್ನ ಮರ್ಸಿಡೀಸ್ ಎಸ್‌ಯುವಿ ಬಳಸುವುದನ್ನೇ ನಿಲ್ಲಿಸಿದ್ದಾರೆ. ಸದ್ಯ ಅವರು ತಮ್ಮ ಕಾರಿನ ವಿಡಿಯೋ ಒಂದನ್ನು ಸೇರ್ ಮಾಡಿಕೊಂಡಿದ್ದು, ಇಲ್ಲಿ ಹಕ್ಕಿ ಪುಟ್ಟ ಮರಿಗಳಿಗೆ ಜನ್ಮ ನೀಡಿ, ಆರೈಕೆ ಮಾಡುತ್ತಿರುವ ದೃಶ್ಯಗಳಿವೆ.
ಇನ್ಸ್ಆ ಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ ಕ್ರೌನ್ ಪ್ರಿನ್ಸ್ ಆ ಹಕ್ಕಿ ಹಾಗೂ ಅವುಗಳ ಮರಿಯನ್ನು ತೋರಿಸಿದ್ದಾರೆ. ಈ ವಿಡಿಯೋವನ್ನು ಶೇರ್ ಮಾಡಿರುವ ರಾಜಕುಮಾರ ಶೇಖ್ ಹಮ್ದಾನ್ ಕೆಲವೊಮ್ಮೆ ಪುಟ್ಟ ಪುಟ್ಟ ವಿಚಾರಗಳೂ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಬರೆದಿದ್ದಾರೆ. ಸದ್ಯ ಈ ವಿಡಿಯೋ ಭಾರೀ ವೈರಲ್ ಆಗಿದೆ.
ಮೊಟ್ಟೆಯೊಳಗಿನಿಂದ ಹೊರ ಬರುವ ಮರಿಗಳು ತನ್ನ ತಾಯಿಯೊಂದಿಗೆ ಆಟವಾಡುತ್ತಿರುವ ದೃಶ್ಯಗಳು ಈ ವಿಡಿಯೋದಲ್ಲಿವೆ.
ಪಾರಿವಾಳ ರಾಜಕುಮಾರನ ಕಾರಿನ ಮೇಲೆ ಗೂಡು ಕಟ್ಟಲು ನಿರ್ಧರಿಸಿತ್ತು. ಈ ವಿಚಾರ ಗಮನಕ್ಕೆ ಬಂದ ಬೆನ್ನಲ್ಲೇ ರಾಜಕುಮಾರ ಕಾರನ್ನು ಒಂದೆಡೆ ಪಾರ್ಕ್ ಮಾಡಿಸಿದ್ದರು. ಈ ಮೂಲಕ ಹಕ್ಕಿ ಶಾಂತಿಯಿಂದ ಮಕ್ಕಳಿಗೆ ಜನ್ಮ ನೀಡಲಿ ಎಂಬ ಉದ್ದೇಶ ಅವರದ್ದಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ