4 ಸೂತ್ರ ಅನುಸರಿಸಿದರೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗಲ್ಲ!

First Published Jun 4, 2018, 4:43 PM IST
Highlights

 ದೇಶದಲ್ಲಿ ನಿರ್ಮಾಣವಾಗಿರುವ ತೈಲಬೆಲೆ ಹೆಚ್ಚಳ ಜನರ ಆತಂಕಕ್ಕೆ ಕಾರಣವಾಗಿದೆ. ಆದರೆ ಇದೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಸಲು ಹಲವು ಸೂತ್ರಗಳಿವೆ.  ಈ ಸೂತ್ರಗಳ ಮೇಲೆ ಬೆಳಕು ಚೆಲ್ಲೋ ಪ್ರಯತ್ನ ಇಲ್ಲಿದೆ.

ನವದೆಹಲಿ(ಜೂನ್.4): ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಳ ದೇಶದ ಜನರ ನಿದ್ದೆಗೆಡಿಸಿದೆ. ಬೆಲೆ ಕಡಿತಗೊಳಿಸಲು ಹರಸಾಹಸ ಪಟ್ಟರೂ ಇಂಧನದ ಬೆಲೆ ಮಾತ್ರ ಕಡಿಮೆಯಾಗಿಲ್ಲ. ಇದಕ್ಕೆ ಶಾಶ್ವತ ಪರಿಹಾರ ಹುಡುಕಲು ಸರ್ಕಾರ ಕೂಡ ವಿಫಲವಾಗಿದೆ. ಆದರೆ ಈ ನಾಲ್ಕು ಸೂತ್ರಗಳನ್ನ ಅನುಸರಿಸಿದರೆ ಇಂಧನ ಬೆಲೆ ಹೆಚ್ಚಳವನ್ನ ಕಡಿತಗೊಳಿಸಲು ಸಾಧ್ಯವಿದೆ.

ಸೂತ್ರ 1- ಜಿಎಸ್‌ಟಿ : ಪೆಟ್ರೋಲಿಯಮ್ ಉತ್ವನ್ನಗಳನ್ನ ಜಿಎಸ್‌ಟಿ ಕಾಯ್ದಿಯಡಿ ತರಲು ಟ್ರೇಡ್ ಅಸೋಸಿಯೇಶನ್ ಹಲವು ಬಾರಿ ಪ್ರಸ್ತಾಪ ಮುಂದಿಟ್ಟಿದೆ. ಆದರೆ ರಾಜ್ಯ ಸರ್ಕಾರಗಳಿಂದ ಈ ಕುರಿತು ಯಾವುದೇ ಮಾತುಕತೆ ನಡೆದಿಲ್ಲ. ಕೇಂದ್ರ ಸರ್ಕಾರ ತೈಲ ಉತ್ಪನ್ನಗಳನ್ನ ಜಿಎಸ್‌ಟಿ ಕಾಯ್ದಿಯಡಿ ತರಲು ಪ್ರಯತ್ನ ನಡೆಸುತ್ತಿದೆ. ಆದರೆ ಇದಕ್ಕೆ ರಾಜ್ಯ ಸರ್ಕಾರಗಳು ಸ್ಪಂದಿಸಿಲ್ಲ ಎಂದು ಇತ್ತೀಚೆಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಾಲ ಸೀತಾರಾಮ್ ಹೇಳಿದ್ದರು. ತೈಲ ಉತ್ಪನ್ನಗಳನ್ನ ಜಿಎಸ್‌ಟಿ ಕಾಯ್ದಿಯಡಿ ತರುವುದು ಬೆಲೆ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ. ಇದರಿಂದ ಶೇಕಡಾ 50 ರಷ್ಟಿರುವ ತೆರೆಗೆ ಜಿಎಸ್‌ಟಿಯಿಂದ 40ಕ್ಕೆ ಇಳಿಯಲಿದೆ.

ಸೂತ್ರ 2- ಭಾರಿ ಲಾಭದ ಮೇಲೆ ತೆರಿಗೆ : ವಿಂಡ್‌ಫಾಲ್ ತೆರಿಗೆ ಎಂದೇ ಜನಪ್ರೀಯವಾಗಿರುವ ಭಾರಿ ಲಾಭದ ಮೇಲಿನ ತೆರಿಗೆಯನ್ನ  ತೈಲೋತ್ವನ್ನ ಕಂಪೆನಿಗಳ ಮೇಲೆ ವಿಧಿಸಬಹುದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಏರಿಕೆಯಾದಾಗ, ಭಾರತದಲ್ಲಿ ತೈಲ ಸಂಸ್ಕರಣೆ ಮಾಡೋ ಕಂಪೆನಿಗಳಿಗೆ ಬಾರಿ ಲಾಭವಾಗಲಿದೆ. ಈ ಲಾಭದ ಮೇಲೆ ವಿಧಿಸುವ ತೆರಿಗೆಯೇ ವಿಂಡ್‌ಫಾಲ್ ಟ್ಯಾಕ್ಸ್. ಇದು ಸೆಸ್ ರೂಪದಲ್ಲಿರುತ್ತದೆ. ಇದರಿಂದ ಬರುವ ಆದಾಯವನ್ನ ಚಿಲ್ಲರೆ ತೈಲ ಮಾರಾಟಗಾರರಿಗೆ ನೀಡಿ, ದೇಶದಲ್ಲಿ ತೈಲ ಬೆಲೆ ಹೆಚ್ಚಳವಾಗದಂತೆ ನೋಡಿಕೊಳ್ಳುವುದು. 

ಸೂತ್ರ 3-ಭವಿಷ್ಯದ ಟ್ರೇಡಿಂಗ್ : ಪೆಟ್ರೋಲಿಯಮ್ ಸಚಿವ ಧರ್ಮೇಂದ್ರ ಪ್ರಧಾನ್, ಇದೀಗ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಫ್ಯೂಚರ್ ಟ್ರೇಡಿಂಗ್ ಕರಾರು ಮಾಡಲು ಮುಂದಾಗಿದ್ದಾರೆ. ಭಾರತ ಸರ್ಕಾರದಿಂದ ಈಗಾಗಲೇ ನೋ ಅಬ್ಜೆಕ್ಷನ್ ಸರ್ಟಿಫಿಕೆಟ್ ಸಿಕ್ಕಿದೆ ಎಂದು ಭಾರತದ ಕಮೋಡಿಟಿ ಎಕ್ಸ್‌ಚೇಂಜ್ ವ್ಯವಸ್ಥಾಪಕ ಸಂಜೀತ್ ಪ್ರಸಾದ್ ಹೇಳಿದ್ದಾರೆ. ಆದರೆ ಸೆಬಿಯಿಂದ ಮಾನ್ಯತೆ ಸಿಕ್ಕಿಲ್ಲ. ಫ್ಯೂಚರ್ ಟ್ರೆಡಿಂಗ್ ಎಂದರೆ ಭವಿಷ್ಯದಲ್ಲಿ ಪ್ರೆಟ್ರೋಲ್ ಅಥವ ಡೀಸೆಲ್ ಶೇರನ್ನ ಕೊಳ್ಳುವ ಅಥವಾ ಮಾರಾಟ ಮಾಡುವು ಕರಾರು. ಇದರಿಂದ ಕರಾರು ಮಾಡುವ ದಿನ ಪೆಟ್ರೋಲ್ ಹಾಗೂ ಡಿಸೆಲ್ ಶೇರಿನ ಬೆಲೆ ಖಾತೆಗೆ ಬೀಳಲಿದೆ. ಇದರಿಂದ ಮಾರುಕಟ್ಟೆಯಲ್ಲಿ ಅದೆಷ್ಟೇ ಬದಲಾವಣೆ ಆದರೂ, ಮೊದಲೇ ನಿರ್ಧರಿಸಿದ ಕರಾರಿನ ಬೆಲೆಗೆ ಶೇರು ಮಾರಾಟವಾಗಲಿದೆ.

ಸೂತ್ರ 4-ಕಚ್ಚಾ ತೈಲದ ಮೇಲೆ ರಿಯಾಯಿತಿ: ಭಾರತ ಸೇರಿದಂತೆ ಏಷ್ಯಾ ರಾಷ್ಟ್ರಗಳಿಗೆ ಬರೋ ಕಚ್ಚಾ ತೈಲದ ಬೆಲೆ ಇತರ ಖಂಡಗಳಿಗಿಂತ ಹೆಚ್ಚು. ಇದಕ್ಕೆ ಏಷ್ಯನ್ ಪ್ರೀಮಿಯಮ್ ಎನ್ನಲಾಗುತ್ತೆ. ಇದೀಗ ಇತರ ವೆಸ್ಟರ್ನ್ ದೇಶಗಳನ್ನ ತಮ್ಮ ಜೊತೆ ಸೇರಿಸಿಕೊಳ್ಳೋ ಯೋಜನೆಯನ್ನ ಸರ್ಕಾರ ಹಾಕಿಕೊಂಡಿದೆ. ಇದು ಸಂಪೂರ್ಣ ಸಾಧ್ಯ ಎನ್ನಲು ಕಷ್ಟಸಾಧ್ಯ. 
 

click me!