ಡಿಕೆಶಿ ಕಾಯುವಿಕೆ ಮುಂದೂಡಿಕೆ, ತೇಜಸ್‌ ರೆಕ್ಕೆ ರಾಜನಾಥ್ ಹಾರಾಟಕ್ಕೆ: ಸೆ.19ರ ಟಾಪ್ 10 ಸುದ್ದಿ!

By Web DeskFirst Published Sep 19, 2019, 5:56 PM IST
Highlights

ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಹತ್ತು ಹಲವು ಘಟನಾವಳಿಗಳು| ಸುದ್ದಿಯ ಸಾರವರಿತು ಸುದ್ದಿಯ ಆಳಕ್ಕಿಳಿದು ವಿಶ್ಲೇಷಿಸುವ ನಿಮ್ಮ ಸುವರ್ಣನ್ಯೂಸ್.ಕಾಂ| ದಿನದ ಟಾಪ್ 10 ಸುದ್ದಿಗಳು ನಿಮಗಾಗಿ| ಸೆ.19ರಂದು ನಡೆದ ವಿವಿಧ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ|

ಬೆಂಗಳೂರು(ಸೆ.03): ದಿನವೊಂದಕ್ಕೆ ದೇಶದಲ್ಲಿ ಅದೆಷ್ಟು ಘಟನೆಗಳು ಸಂಭವಿಸುತ್ತವೆ. ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಅಸಂಖ್ಯಾತ ಘಟನಾವಳಿಗಳು ಜರುತ್ತಲೇ ಇರುತ್ತವೆ. ಈ ಎಲ್ಲ ಸುದ್ದಿಗಳನ್ನು ಹೆಕ್ಕಿ ತೆಗೆಯುವ, ಸುದ್ದಿಯ ಆಳಕ್ಕಿಳಿದು ವಿಶ್ಲೇಷಿಸುವ ಪತ್ರಿಕಾಧರ್ಮವನ್ನು ನಿಮ್ಮ ಸುವರ್ಣನ್ಯೂಸ್.ಕಾಂ ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತದೆ.

ಅದರಂತೆ ಇಂದಿನ ಅಸಂಖ್ಯ ಘಟನಾವಳಿಗಳ ಸಮುದ್ರದಿಂದ ಟಾಪ್ 10 ಸುದ್ದಿ ಎಂಬ ಬೊಗಸೆಯಲ್ಲಿಡಿದು ಓದುಗರ ಮುಂದಿಟ್ಟಿದೆ ನಿಮ್ಮ ಸುವರ್ಣನ್ಯೂಸ್.ಕಾಂ. ಓದಿರಿ, ಓದಿಸಿರಿ.

1. ಜಾಮೀನು ನಿರೀಕ್ಷೆಯಲ್ಲಿದ್ದ ಡಿಕೆಶಿಗೆ ಬಿಗ್‌ ಶಾಕ್: 2 ದಿನ ತಿಹಾರ್ ಜೈಲೇ ಗತಿ

ಹವಾಲಾ ಹಣ ದಂಧೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಮಾಜಿ ಸಚಿವ ಡಿಕೆ ಶಿವಕುಮಾರ್‌ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಲಾಗಿದೆ. ಇಡಿ ವಿಶೇಷ ಕೋರ್ಟ್ ನ್ಯಾಯಾಲಯ ಇಂದು (ಗುರುವಾರ) ಜಾಮೀನು ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಿ ಆದೇಶ ಹೊರಡಿಸಿದೆ. ಇದರಿಂದ ಡಿಕೆಶಿಗೆ ಇನ್ನೆರಡು ದಿನ ತಿಹಾರ್ ಜೆಲೇ ಗತಿ.

2. ತೇಜಸ್‌ನಲ್ಲಿ ರಾಜನಾಥ್ ಸಿಂಗ್: ನಾವ್ ರೆಡಿ ಅಂದ್ರು ಆದರೆ ಜಂಗ್!

ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ತೇಜಸ್ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಗೊಂಡಿದೆ. ಇತ್ತಿಚಿಗೆ ನಡೆದ ಯಶಸ್ವಿ ಪರೀಕ್ಷಾರ್ಥ ಹಾರಾಟದ ಬಳಿಕ ತೇಜಸ್‌ನ್ನು ನೌಕಾಪಡೆಗೆ ಸೇರಿಸಿಕೊಳ್ಳಲಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಬೆಂಗಳೂರಿನಲ್ಲಿ ತೇಜಸ್ ಲಘು ಯುದ್ಧ ವಿಮಾನದಲ್ಲಿ ಹಾರಾಟ ನಡೆಸುವ ಮೂಲಕ ತೇಜಸ್ ಸೇರ್ಪಡೆ ಕಾರ್ಯಕ್ಕೆ ಚಾಲನೆ ನೀಡಿದರು.

3. ಕಹಿ ಸುದ್ದಿ: ಮಂಕಾಯ್ತು ಡಾಲರ್ ಎದುರು ರೂಪಾಯಿ ಮೌಲ್ಯದ ಜಿದ್ದಾಜಿದ್ದಿ!

ಆರ್ಥಿಕ ಹಿಂಜರಿತ ಹಾಗೂ ಆರ್ಥಿಕ ವಲಯದ ನಿರಾಶಾದಾಯಕ ಚಟುವಟಿಕೆ ಹಿನ್ನೆಲೆಯಲ್ಲಿ ರೂಪಾಯಿ ಮೌಲ್ಯದಲ್ಲಿ ಗಣನೀಯ ಕುಸಿತ ಕಂಡುಬಂದಿದೆ. ಆರ್ಥಿಕ ಕುಸಿತದ ಆತಂಕದ ನಡುವೆಯೇ ಗಾಯದ ಮೇಲೆ ಬರೆ ಎಂಬಂತೆ ಡಾಲರ್ ಎದುರು ರೂಪಾಯಿ ಮೂಲ್ಯ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ.

4. ‘ಪೈಲ್ವಾನ್’ ನೋಡಿ ಸ್ಟಾರ್ ವಾರ್ ಬಗ್ಗೆ ಮಾತನಾಡಿದ ಶಿವಣ್ಣ

ಪೈಲ್ವಾನ್ ಸಿನಿಮಾವನ್ನು ಸೆಂಚುರಿ ಸ್ಟಾರ್ ಶಿವಣ್ಣ ವೀಕ್ಷಿಸಿ ಮೆಚ್ಚುಗೆ ಮಾತನಾಡಿದ್ದಾರೆ. ಕಿಚ್ಚ ಸುದೀಪ್ ಅಭಿಯದ ಬಗ್ಗೆ, ಕೃಷ್ಣ ನಿರ್ದೇಶನದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಇದೇ ಸಂದರ್ಭದಲ್ಲಿ ‘ಪೈಲ್ವಾನ್’ ಪೈರಸಿ ಬಗ್ಗೆ ಕೇಳಿದಾಗ ಬಹಳ ಮಾರ್ಮಿಕವಾಗಿ ಉತ್ತರಿಸಿದ್ದಾರೆ. 

5. ಹೊಸ ಕಾಶ್ಮೀರ, ಹೊಸ ಸ್ವರ್ಗ: ಪ್ರಧಾನಿ ಮೋದಿ ಭರವಸೆ!

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ಮಹಾರಾಷ್ಟ್ರದಲ್ಲಿ ತಮ್ಮ ಅಧಿಕೃತ ಚುನಾವಣಾ ಪ್ರಚಾರ ಆರಂಭಿಸಿರುವ ಪ್ರಧಾನಿ ಮೋದಿ, ಇಂದು ನಾಶಿಕ್'ನಲ್ಲಿ ಭರ್ಜರಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದರು. ಇದೇ ಮೊದಲ ಬಾರಿಗೆ ಸಾರ್ವಜನಿಕ ಸಮಾರಂಭದಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಕುರಿತು ಮಾತನಾಡಿರುವ ಪ್ರಧಾನಿ ಮೋದಿ, ಹೊಸ ಕಾಶ್ಮೀರ ನಿರ್ಮಾಣದ ವಾಗ್ದಾನ ನೀಡಿದರು.

6. ಡಿಕೆಶಿಯಿಂದ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಹೋದ ಕೋಟಿ-ಕೋಟಿ ಹಣದ ರಹಸ್ಯ ಬಯಲು

ಮಾಜಿ ಸಚಿವ ಡಿಕೆ ಶಿವಕುಮಾರ್  ಅಕ್ರಮ ಹಣ ಪ್ರಕರಣದಲ್ಲಿ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಇಡಿ ಕಂಟಕ ಎದುರಾಗಿದೆ. ಈ ಬಗ್ಗೆ ಇಡಿ ಕೂಡ ಸಮನ್ಸ್ ನೀಡಿ ವಿಚಾರಣೆಗೊಳಪಡಿಸಿದ್ದು, ಡಿಕೆಶಿಯಿಂದ  ಲಕ್ಷ್ಮೀ ಹೆಬ್ಬಾಳ್ಕರ್ ಕೋಟಿ-ಕೋಟಿ ಹಣ  ಹರಿದುಹೋಗಿದೆ ಎಂದು ತಿಳಿದುಬಂದಿದೆ. ಹಾಗಾದ್ರೆ ಎಷ್ಟು ಕೋಟಿ? ಸಂಪೂರ್ಣ ಮಾಹಿತಿ ವಿಡಿಯೋನಲ್ಲಿ ನೋಡಿ.

7. ಯುವರಾಜ್ ಸಿಂಗ್ 6,6,6,6,6,6 ಬಾರಿಸಿ ಇಂದಿಗೆ 12 ವರ್ಷ..!

ಯುವರಾಜ್ ಸಿಂಗ್ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿ ಇಂದಿಗೆ 12 ವರ್ಷ ತುಂಬಿವೆ. 2007ರಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ದ ಯುವಿ ಅಕ್ಷರಶಃ ಅಬ್ಬರಿಸಿದ್ದರು. ಈ ಮೂಲಕ ಸಿಕ್ಸರ್ ಕಿಂಗ್ ಆಗಿ ಹೊರಹೊಮ್ಮಿದ್ದರು. ಹೀಗಿತ್ತು ನೋಡಿ ಆ ಕ್ಷಣ..

8. ಎನ್‌ಆರ್‌ಸಿ ಸರಿಯಿಲ್ಲ: ಗೃಹ ಸಚಿವರ ಮುಂದೆ ಮಮತಾ ಬೆವರಲಿಲ್ಲ!

ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆ ಅವೈಜ್ಞಾನಿಕವಾಗಿದ್ದು, ಎನ್‌ಆರ್‌ಸಿ ಪಟ್ಟಿಯಿಂದ 19 ಲಕ್ಷ ಜನರನ್ನು ಕೈಬಿಟ್ಟಿರುವುದು ಸರಿಯಲ್ಲ ಎಂದು ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ. ನವದೆಹಲಿಯಲ್ಲಿ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಮಮತಾ, ಎನ್‌ಆರ್‌ಸಿ ಪ್ರಕ್ರಿಯೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

9. ಜಗತ್ತಿನ ಅತಿ ಯಶಸ್ವಿ ವ್ಯಕ್ತಿಗಳ ಉದ್ಯೋಗ ಸಂಬಂಧಿ ಅಭ್ಯಾಸಗಳಿವು

ಜಗತ್ತಿನಲ್ಲೇ ಅತಿ ಯಶಸ್ವಿ ಎನಿಸಿಕೊಂಡವರು ರಿಲ್ಯಾಕ್ಸ್ ಆಗಲು, ಕೆಲಸದಲ್ಲಿ ಮತ್ತಷ್ಟು ಮುಂದೆ ಸಾಗಲು, ಬದುಕಿನಲ್ಲಿ ಇನ್ನಷ್ಟು ಉತ್ತುಂಗಕ್ಕೇರಲು, ವಿಭಿನ್ನ ವ್ಯಕ್ತಿತ್ವ ಎನಿಸಿಕೊಳ್ಳಲು ಕೆಲವು ಅಭ್ಯಾಸಗಳನ್ನು ರೂಢಿಸಿಕೊಂಡಿರುತ್ತಾರೆ. ಪೂರ್ತಿ ಮೌನದ ನಡುವೆ ಮೀಟಿಂಗ್ ಶುರು ಮಾಡುವುದರಿಂದ ಹಿಡಿದು ಡೂಡಲ್ ಮಾಡುವ ತನಕ ಅವರ ಹವ್ಯಾಸಗಳು ವಿಭಿನ್ನವಾಗಿವೆ. 

10. IIFA Award 2019 : ಯಾರ್ಯಾರಿಗೆ ಯಾವ್ಯಾವ ಪ್ರಶಸ್ತಿ ಗರಿ? ಇಲ್ಲಿದೆ ಲಿಸ್ಟ್

IIFA 2019 (ಇಂಟರ್ ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್) ಘೋಷಣೆಯಾಗಿದೆ. ಸಾಮಾನ್ಯವಾಗಿ IIFA Award ನ್ನು ಬೇರೆ ದೇಶಗಳಲ್ಲಿ ಆಯೋಜಿಸಲಾಗುತ್ತಿತ್ತು. ಈ ಬಾರಿ ಮುಂಬೈನಲ್ಲಿ ಆಯೋಜಿಸಲಾಗಿತ್ತು. 20 ನೇ IIFA Award ಇದಾಗಿದೆ. ಯಾರ್ಯಾರಿಗೆ ಯಾವ್ಯಾವ ಪ್ರಶಸ್ತಿ ಬಂದಿದೆ? ಇಲ್ಲಿದೆ ಲಿಸ್ಟ್

click me!