ಮಂಗ್ಳೂರು ಬಾಂಬ್ ಶಂಕಿತನ ಬಗ್ಗೆ ಕಂಡಕ್ಟರ್ ಹೇಳಿದ್ದು, ಚಂಡಿಯಾಗಕ್ಕೆ ರಚ್ಚು ಹೋಗಿದ್ದು: ಟಾಪ್ 10 ಸುದ್ದಿ!

By Suvarna NewsFirst Published Jan 21, 2020, 5:26 PM IST
Highlights

ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಹತ್ತು ಹಲವು ಘಟನಾವಳಿಗಳು| ಸುದ್ದಿಯ ಸಾರವರಿತು ಸುದ್ದಿಯ ವಿಶ್ಲೇಷಿಸುವ ನಿಮ್ಮ ಸುವರ್ಣನ್ಯೂಸ್.ಕಾಂ| ದಿನದ ಟಾಪ್ 10 ಸುದ್ದಿಗಳು ನಿಮಗಾಗಿ| ಜ. 21ರ ರಂದು ನಡೆದ ವಿವಿಧ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ|

ಬೆಂಗಳೂರು(ಜ.21): ದಿನವೊಂದಕ್ಕೆ ದೇಶದಲ್ಲಿ ಅದೆಷ್ಟು ಘಟನೆಗಳು ಸಂಭವಿಸುತ್ತವೆ. ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಅಸಂಖ್ಯಾತ ಘಟನಾವಳಿಗಳು ಜರುತ್ತಲೇ ಇರುತ್ತವೆ. ಈ ಎಲ್ಲ ಸುದ್ದಿಗಳನ್ನು ಹೆಕ್ಕಿ ತೆಗೆಯುವ, ಸುದ್ದಿಯ ಆಳಕ್ಕಿಳಿದು ವಿಶ್ಲೇಷಿಸುವ ಪತ್ರಿಕಾಧರ್ಮವನ್ನು ನಿಮ್ಮ ಸುವರ್ಣನ್ಯೂಸ್.ಕಾಂ ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತದೆ. ಅದರಂತೆ ಇಂದಿನ ಅಸಂಖ್ಯ ಘಟನಾವಳಿಗಳ ಸಮುದ್ರದಿಂದ ಟಾಪ್ 10 ಸುದ್ದಿ ಎಂಬ ಬೊಗಸೆಯಲ್ಲಿಡಿದು ಓದುಗರ ಮುಂದಿಟ್ಟಿದೆ. ಸುವರ್ಣನ್ಯೂಸ್.ಕಾಂ. ಓದಿರಿ, ಓದಿಸಿರಿ.

1. ಮಂಗಳೂರು ಬಾಂಬ್ ಬ್ಲಾಸ್ಟ್ : ಶಂಕಿತನ ಬಗ್ಗೆ ಕಂಡಕ್ಟರ್ ಬಾಯ್ಬಿಟ್ರು ಸ್ಫೋಟಕ ವಿಚಾರ!

ಬಾಂಬ್ ಬ್ಲಾಸ್ಟ್ ಪ್ರಕರಣ ಒಂದೊಂದು ಟ್ವಿಸ್ಟ್ ಪಡೆಯುತ್ತಿದೆ. ಶಂಕಿತನಿಗಾಗಿ ಖಾಕಿ ಪಡೆ ಬೆನ್ನತ್ತಿದೆ. ಶಂಕಿತನ ಬಗ್ಗೆ ಖಾಸಗಿ ಬಸ್ ಕಂಡಕ್ಟರ್ ಸ್ಫೋಟಕ ವಿಚಾರವೊಂದನ್ನು ಸುವರ್ಣ ನ್ಯೂಸ್ ಜೊತೆ ಹೇಳಿಕೊಂಡಿದ್ದಾರೆ. ಕಂಡಕ್ಟರ್ ಜೊತೆ ಸುವರ್ಣ ನ್ಯೂಸ್ ಪ್ರತಿನಿಧಿ ನಡೆಸಿದ ಚಿಟ್‌ಚಾಟ್ ಇದು.

2. ಅನುಮಾನಾಸ್ಪದ ಬ್ಯಾಗ್ ಪತ್ತೆ; ಯಾದಗಿರಿ ಬಸ್ ನಿಲ್ದಾಣದಲ್ಲಿ ಟೆನ್ಷನ್​..ಟೆನ್ಷನ್​..!

ಮಂಗಳೂರು ಏರ್‌ಪೋರ್ಟ್‌ನಲ್ಲಿ ಬಾಂಬ್ ಪತ್ತೆ ಪ್ರಕರಣದ ನಂತರ ಯಾದಗಿರಿ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು.

3. ಸಾಯಿಬಾಬಾ ಜನ್ಮಸ್ಥಾನ: ಹೇಳಿಕೆ ಹಿಂಪಡೆದ ಉದ್ಧವ್

ಮಹಾರಾಷ್ಟ್ರದ ಪರಭಣಿ ಜಿಲ್ಲೆಯ ಪಾಥರಿ ಗ್ರಾಮವನ್ನು ಶಿರಡಿ ಸಾಯಿಬಾಬಾ ಜನ್ಮಸ್ಥಳವೆಂದು ಪರಿಗಣಿಸಲಾಗುವುದು’ ಎಂದು ಹೇಳಿ ಅದರ ಅಭಿವೃದ್ಧಿಗೆ 100 ಕೋಟಿ ರು. ಬಿಡುಗಡೆ ಮಾಡಿದ್ದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ತಮ್ಮ ಹೇಳಿಕೆಯಿಂದ ಹಿಂದೆ ಎಂದು ತಿಳಿದು ಬಂದಿದೆ.

4. ಕೋಟಿ ಸಂಪಾದಿಸುತ್ತಿದ್ದ ಬೇಬಿ ಶಾಮಿಲಿ ಫ್ಲಾಪ್ ನಟಿಯಾಗಲು ಕಾರಣವೇನು?

ಕಾಲ್‌ ಶೀಟ್‌ ಫ್ರೀ ಇಲ್ಲದಷ್ಟು ಚಿತ್ರರಂಗದಲ್ಲಿ ಹೆಸರು ಮಾಡಿದ ಬಾಲನಟಿ ಬೇಬಿ ಶಾಮಿಲಿಯನ್ನು ದಕ್ಷಿಣ ಭಾರತೀಯ ಚಿತ್ರರಂಗ ಬಿಗದಪ್ಪಿಕೊಂಡಿತ್ತು. ಇವಳ ಬಗ್ಗೆ ಚಿತ್ರ ರಸಿಕರಿಗೆ ಅಪಾರ ಭರವಸೆಯೂ ಇತ್ತು. ದೊಡ್ಡವಳಾದ ಮೇಲೆ ದೊಡ್ಡ ಹೀರೋಯಿನ್ ಆಗ್ತಾರೆ ಎಂದೇ ಹೇಳಲಾಗುತ್ತಿತ್ತು. ಆದರೆ, ಅವರು ಹೋಗಿದ್ದೆಲ್ಲಿಗೆ?.

5. ಮೋದಿ 'ನೌಕರಿ ಪೇ ಚರ್ಚಾ' ಮಾಡಲಿ: ಸೀತಾರಾಮ್ ಯೆಚೂರಿ!

ಪ್ರಧಾನಿ ಮೋದಿ ಅವರ ವಿದ್ಯಾರ್ಥಿಗಳೊಂದಿಗಿನ 'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮವನ್ನು ಟೀಕಿಸಿರುವ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಇದರ ಬದಲು ಪ್ರಧಾನಿ 'ನೌಕರಿ ಪೇ ಚರ್ಚಾ' ಮಾಡಲಿ ಎಂದು ವ್ಯಂಗ್ಯವಾಡಿದ್ದಾರೆ.

6. ನ್ಯೂಜಿಲೆಂಡ್ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಅತಿದೊಡ್ಡ ಆಘಾತ..!

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಿಂದ ಟೀಂ ಇಂಡಿಯಾದ ಇನ್‌ ಫಾರ್ಮ್ ಆಟಗಾರ ಹೊರಬಿದ್ದಿದ್ದಾರೆ. ಯಾರು ಆ ಆಟಗಾರ.? ಏನಾಯ್ತು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ..

7. ಶೃಂಗೇರಿ: ದೇವೇಗೌಡ ಕುಟುಂಬದ ಮಹಾ ಯಾಗದಲ್ಲಿ 'ಸೀತಾರಾಮ ಕಲ್ಯಾಣ' ಜೋಡಿ?

ಚಿಕ್ಕಮಗಳೂರು ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ಕುಟುಂಬ ಸಹಸ್ರ ಚಂಡಿಯಾಗ ಮಾಡಿಸುತ್ತಿದೆ. ಈ ವೇಳೆ ಡಿಂಪಲ್ ಕ್ವೀನ್‌ ರಚಿತಾ ರಾಮ್‌ ಕಾಣಿಸಿಕೊಂಡಿದ್ದು, ನಿಖಿಲ್ ಜೊತೆ ಯಾಗಕ್ಕೆ ಬಂದ್ರಾ ಎಂಬ ಗುಸು ಗುಸು ಕೇಳಿ ಬರುತ್ತಿದೆ.

8. ಗಾಡಿ ಹೊರ ತೆಗೆಯುವ ಮುನ್ನ: ತೈಲ ನೀತಿ ಬದಲಾಗಿರುವುದು ತಿಳಿದುಕೊಂಡರೆ ಚೆನ್ನ!

ವಿಶ್ವದ ಮೂರನೇ ಅತಿದೊಡ್ಡ ತೈಲ ಗ್ರಾಹಕ ಭಾರತ, ಮಧ್ಯಪ್ರಾಚ್ಯದಿಂದ ತೈಲದ ಆಮದನ್ನು ತಗ್ಗಿಸಿದೆ. 2019ರಲ್ಲಿ ಮಧ್ಯಪ್ರಾಚ್ಯದಿಂದ ಆಮದಾಗಿರುವ ತೈಲ ಪ್ರಮಾಣ ಕಳೆದ ನಾಲ್ಕು ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿದಿರುವುದು ವಿಶೇಷ.

9. ಬರಿಗಾಲಲ್ಲಿ 265 ಕಿ.ಮೀ ನಡೆದು ತಿಮ್ಮಪ್ಪನ ದರ್ಶನ ಪಡೆದ ಅಂಜಲಿ ನಿಂಬಾಳ್ಕರ್

ಬೆಳಗಾವಿಯ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಬರಿಗಾಲಿನಲ್ಲಿಯೇ ನೂರಾರು ಕಿಲೋ ಮೀಟರ್ ಪಾದಯಾತ್ರೆ ಮಾಡಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.  ವೆಂಕಟಾದ್ರಿ ಗಿರಿಶ್ರೇಣಿಯ  2388 ಮೆಟ್ಟಿಲುಗಳನ್ನು ಏರಿ   ಪ್ರಾತಃಕಾಲದಲ್ಲಿ ತಿರುಮಲ ವೆಂಕಟರಮಣನ   ದರ್ಶನ ಪಡೆದಿದ್ದಾರೆ. ಈ ದರ್ಶನ ನನ್ನಲ್ಲಿ ಹುಟ್ಟಿಸಿದ ಆಧ್ಯಾತ್ಮಿಕ ಅನುಭೂತಿ, ಮನದಲ್ಲಿ ಸ್ಫುರಿಸಿದ ಭಾವಗಳು ಪದಗಳ ಮೂಲಕ ಬಣ್ಣನೆಗೆ ನಿಲುಕುತ್ತಿಲ್ಲ ಎಂದಿದ್ದಾರೆ.

10. ಪಾಕಿಸ್ತಾನದಲ್ಲಿ ಗೋದಿ ಹಿಟ್ಟು ಸಿಗ್ತಿಲ್ಲ: ಚಪಾತಿ ಪ್ರಿಯರು ಅಳು ನಿಲ್ಲಸ್ತಿಲ್ಲ!

ಪಾಕಿಸ್ತಾನ ಗೋದಿ ಹಿಟ್ಟಿನ ತೀವ್ರ ಕೊರತೆ ಎದುರಿಸುತ್ತಿದ್ದು, ಅಲ್ಲಿನ ಚಪಾತಿ ಪ್ರಿಯರು ಪರಿತಪಿಸುವಂತಾಗಿದೆ. ಪಾಕ್‌ನ ಖೈಬರ್ ಪಖ್ತೂನ್ ಖವಾ  ಪ್ರಾಂತ್ಯದ  ರಾಜಧಾನಿ  ಪೇಷಾವರ್ ನಗರದಲ್ಲಿ ಗೋದಿ ಹಿಟ್ಟು  ಮಾರಾಟ ಮಾಡುವ 2,500 ಮಳಿಗೆಗಳಿದ್ದು, ಗೋಧಿ  ಹಿಟ್ಟಿನ ಕೊರತೆ ಕಾರಣ ಈ  ಅಂಗಡಿಗಳು  ಬಹುತೇಕ ಮುಚ್ಚಲ್ಪಟ್ಟಿವೆ.

click me!