
ನೋಯ್ಡಾ, (ಜ.21): 'ಬೇಲಿಯೇ ಎದ್ದು ಹೊಲ ಮೇಯ್ದಂತೆ' ಕಳ್ಳರನ್ನು ಹಿಡಿಯುವ ಪೊಲೀಸರೇ ಕಳ್ಳರಾದ್ರೆ ಹೇಗೆ..? ಓರ್ವ ಪೊಲೀಸಪ್ಪ ಮಾಡುವ ನೀಚ ಕೆಲಸಕ್ಕೆ ಇಡೀ ಡಿಪಾರ್ಟ್‌ಮೆಂಟ್‌ಗೆ ಕೆಟ್ಟ ಹೆಸರು.
ಹೌದು...ಉತ್ತರ ಪ್ರದೇಶದ ನೋಯ್ಡದಲ್ಲಿ ಪೊಲೀಸನೋರ್ವ ರಾತ್ರಿ ಗಸ್ತು ತಿರುಗುತ್ತಿದ್ದ ವೇಳೆ ಅಂಗಡಿ ಹೊರಗಡೆ ಇಟ್ಟಿದ್ದ ಹಾಲಿನ ಪ್ಯಾಕೆಟ್ ಕದ್ದಿದ್ದಾನೆ.
ರೆಡ್ ಲೈಟ್ ಏರಿಯಾಗೆ ಬರಲ್ಲ ಎಂದ ಕ್ಯಾಬ್ ಚಾಲಕನನ್ನೇ ರೇಪ್ ಮಾಡಿದ ಬರಗೆಟ್ಟ ಪೊಲೀಸಪ್ಪ
ಆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದೆ. ಜನವರಿ 19ರಂದು ನಸುಕಿನ ವೇಳೆ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ಗಸ್ತು ತಿರುಗುತ್ತಿದ್ದ ಪೊಲೀಸ್ ಅಂಗಡಿ ಹೊರಗಿಟ್ಟಿದ್ದ ಹಾಲಿನ ಪ್ಯಾಕೆಟ್‌ಗಳನ್ನು ಕದ್ದು ತಮ್ಮ ವಾಹನ ಏರಿದ್ದಾನೆ. ಸಿಸಿಟಿವಿಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿವೆ.
ಕೌಂಪೌಂಡ್ ಒಳಗಿಂದಲೇ ಬೈಕ್ ಕದ್ದೊಯ್ದ ಪೊಲೀಸರು..!
ಇದರಿಂದ ಎಚ್ಚೆತ್ತ ನೋಯ್ಡಾ ಪೊಲೀಸ್ ಪ್ರತಿಕ್ರಿಯಿಸಿ, ಈ ಬಗ್ಗೆ ತನಿಖೆ ನಡೆಸಿ ಯಾರು ಎನ್ನುವುದನ್ನು ಪತ್ತೆ ಮಾಡಿ ಸೂಕ್ತ ಕ್ರಮಕೈಗೊಳ್ಳುವುದಾಗಿ ತಿಳಿಸಿದೆ.
ಇತ್ತೀಚೆಗೆ ಬೆಂಗಳೂರಿನ ಮನೆಯೊಂದರ ಕಾಂಪೌಂಡ್‌ನಲ್ಲಿ ನಿಲ್ಲಿಸಲಾಗಿದ್ದ ಬೈಕ್‌ನ್ನು ಪೊಲೀಸರು ಕದ್ದಿರುವುದು ಸಿಸಿಟಿಯಲ್ಲಿ ಸೆರೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ