BSY ಅನ್‌ವಾಂಟೆಡ್ ಚೈಲ್ಡ್ ಎಂದ ಸಿದ್ದು, ಟ್ರಂಪ್ ಇನ್ಮುಂದೆ ಮಾಡಲ್ವಂತೆ ಮುದ್ದು: ಅ.18ರ ಟಾಪ್ 10 ಸುದ್ದಿ!

By Web DeskFirst Published Oct 18, 2019, 4:17 PM IST
Highlights

ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಹತ್ತು ಹಲವು ಘಟನಾವಳಿಗಳು| ಸುದ್ದಿಯ ಸಾರವರಿತು ಸುದ್ದಿಯ ಸಾರವರಿತು ಸುದ್ದಿಯ ಸಾರವರಿತು ಸುದ್ದಿಯ ವಿಶ್ಲೇಷಿಸುವ ನಿಮ್ಮ ಸುವರ್ಣನ್ಯೂಸ್.ಕಾಂ| ದಿನದ ಟಾಪ್ 10 ಸುದ್ದಿಗಳು ನಿಮಗಾಗಿ| ಅ.18ರಂದು ನಡೆದ ವಿವಿಧ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ|

ಬೆಂಗಳೂರು(ಅ.18): ದಿನವೊಂದಕ್ಕೆ ದೇಶದಲ್ಲಿ ಅದೆಷ್ಟು ಘಟನೆಗಳು ಸಂಭವಿಸುತ್ತವೆ. ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಅಸಂಖ್ಯಾತ ಘಟನಾವಳಿಗಳು ಜರುತ್ತಲೇ ಇರುತ್ತವೆ. ಈ ಎಲ್ಲ ಸುದ್ದಿಗಳನ್ನು ಹೆಕ್ಕಿ ತೆಗೆಯುವ, ಸುದ್ದಿಯ ಆಳಕ್ಕಿಳಿದು ವಿಶ್ಲೇಷಿಸುವ ಪತ್ರಿಕಾಧರ್ಮವನ್ನು ನಿಮ್ಮ ಸುವರ್ಣನ್ಯೂಸ್.ಕಾಂ ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತದೆ.  ಅದರಂತೆ ಇಂದಿನ ಅಸಂಖ್ಯ ಘಟನಾವಳಿಗಳ ಸಮುದ್ರದಿಂದ ಟಾಪ್ 10 ಸುದ್ದಿ ಎಂಬ ಬೊಗಸೆಯಲ್ಲಿಡಿದು ಓದುಗರ ಮುಂದಿಟ್ಟಿದೆ. ಸುವರ್ಣನ್ಯೂಸ್.ಕಾಂ. ಓದಿರಿ, ಓದಿಸಿರಿ.

‘ನನಗೆ ಅಧಿಕಾರವೇ ಬೇಡ : ಬೇರೆ ನಾಯಕರನ್ನು ಆರಿಸಿಕೊಳ್ಳಲಿ’

ನಮ್ಮ ಶಾಸಕರಿಗೆ ನಂಬಿಕೆ ಇಲ್ಲದಿದ್ದರೆ ನನಗೆ ಯಾವುದೇ ರೀತಿಯ ಅಧಿಕಾರ ಬೇಡ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.  ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ನನಗೆ ಅಧಿಕಾರವೇ ಬೇಡ. JDS ಶಾಸಕರು ಬೇರೆ ನಾಯಕನನ್ನು ಆಯ್ಕೆ ಮಾಡಿಕೊಳ್ಳಲಿ ಎಂದು ಹೇಳಿದರು.

BSY ಮೋದಿ, ಅಮಿತ್ ಶಾ ಅವರ ಅನ್‌ವಾಂಟೆಡ್ ಚೈಲ್ಡ್ ಎಂದ ಸಿದ್ದು

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಅನ್‌ ವಾಂಟೆಡ್ ಚೈಲ್ಡ್ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಮಂಗಳೂರಿನಲ್ಲಿ ಕಾರ್ಯಕರ್ತರ ಸಭೆಯಲ್ಲಿ ಸಿದ್ದರಾಮಯ್ಯ ಏನೇನು ಹೇಳಿದ್ರು ಎಂದು ತಿಳಿಯೋಕೆ ಈ ಸುದ್ದಿ ಓದಿ.

ಇಂಡೋ-ಪಾಕ್ ಸರಣಿ ಬಗ್ಗೆ ಮೋದಿ, ಇಮ್ರಾನ್ ಕೇಳಿ; ದಾದಾ ಖಡಕ್ ಮಾತು

ಭಾರತ-ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿಯ ಆಯೋಜನೆಯ ಬಗ್ಗೆ ಉಭಯ ದೇಶಗಳ ಪ್ರಧಾನಿಗಳಾದ ಮೋದಿ ಹಾಗೂ ಇಮ್ರಾನ್ ಖಾನ್ ಅವರನ್ನು ಕೇಳಿ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ.

ನಾಟ್ ಎ ಜೋಕ್: ಟ್ರಂಪ್ ಪತ್ರ ಹರಿದು ಡಸ್ಟ್‌ಬಿನ್‌ಗೆ ಎಸೆದ ಟರ್ಕಿ ಅಧ್ಯಕ್ಷ!

ಟರ್ಕಿ ಅಧ್ಯಕ್ಷ ರೆಜೆಪ್ ತಾಯಿಪ್ ಎರ್ಡೋಗಾನ್ ಮಾತ್ರ ಅಮೆರಿಕ ಅಧ್ಯಕ್ಷರ ಎಚ್ಚರಿಕೆಗೆ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಸಿರಿಯಾ ಮೇಲೆ ದಾಳಿ ಬೇಡ ಎಂಬ ಡೋನಾಲ್ಡ್ ಟ್ರಂಪ್ ಮನವಿ ಪತ್ರವನ್ನು ಎರ್ಡೋಗಾನ್ ಅಕ್ಷರಶಃ ಹರಿದು ಕಸದ ಬುಟ್ಟಿಗೆ ಎಸೆದಿದ್ದಾರಂತೆ.

ಅಸ್ಸಾಂನಿಂದ NRC ಮುಖ್ಯಸ್ಥರ ದಿಢೀರ್ ಎತ್ತಂಗಡಿ: ಕಾರಣ ಕೇಳ್ಬೇಡಿ ಎಂದ ಸುಪ್ರೀಂ!

ಮಹತ್ವದ ಬೆಳವಣಿಗೆಯೊಂದರಲ್ಲಿ ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿ(NRC)ಮುಖ್ಯಸ್ಥರನ್ನು ವರ್ಗಾವಣೆ ಮಾಡಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ. ಅಸ್ಸಾಂನಲ್ಲಿ NRC ಪ್ರಕ್ರಿಯೆ ಬಹುತೇಕ ಅಂತ್ಯಗೊಂಡಿದ್ದು, ಇಡೀ ಪ್ರಕ್ರಿಯೆ ಜವಾಬ್ದಾರಿ ಹೊತ್ತಿದ್ದ ಪ್ರತೀಕ್ ಹಜೆಲಾ ಅವರನ್ನು ಸುಪ್ರೀಂಕೋರ್ಟ್ ಮಧ್ಯಪ್ರದೇಶಕ್ಕೆ ದಿಢೀರ್ ವರ್ಗಾವಣೆ ಮಾಡಿದೆ.

ಬಯಲಾಯ್ತು ಅಂಬಾನಿ ಬಂಡವಾಳ: ಅಂಬಾರಿ ಮೇಲೆ ಕುಳಿತೇ ಆಡಿಸ್ತಾರೆ ದಾಳ!

ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಮೌಲ್ಯ ಬರೋಬ್ಬರಿ 9 ಲಕ್ಷ ಕೋಟಿ ರೂ. ಗಡಿ ದಾಟಿದ್ದು, ಗರಿಷ್ಠ ಮೌಲ್ಯ ತಲುಪಿದ ಮೊದಲ ಭಾರತೀಯ ಕಂಪನಿ ಎಂಬ ಹೆಗ್ಗಳಿಕೆಗೆ ಭಾಜನವಾಗಿದೆ. ಮುಂಬೈ ಷೇರು ಮಾರುಕಟ್ಟೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಷೇರು ಬೆಲೆ ನಿರಂತರವಾಗಿ ಏರುತ್ತಲೇ ಇದೆ. ಕಂಪನಿಯ ಮಾರುಕಟ್ಟೆ ಬಂಡವಾಳದ ಮೌಲ್ಯ ಈಗಾಗಲೇ 9 ಲಕ್ಷ ಕೋಟಿ ರೂ.ಗೂ ಅಧಿಕವಾಗಿದೆ.

ಕ್ವೀನ್ ಬೀ ಸಿಂಡ್ರೋಮ್ ಬಗ್ಗೆ ಕೇಳಿದ್ದೀರಾ?

ಕಚೇರಿಗಳಲ್ಲಿ ಪುರುಷರು ಮಹಿಳೆಯರನ್ನು ಕೀಳಾಗಿ ಕಾಣ್ತಾರೆ, ಬೆಳೆಯಲು ಬಿಡೋಲ್ಲ, ಪ್ರಮೋಶನ್ ಕೋಡೋಲ್ಲ, ದೌರ್ಜನ್ಯ ಮಾಡ್ತಾರೆ ಎಂಬ ಆರೋಪಗಳನ್ನು ಸಾಮಾನ್ಯವಾಗಿ ಕೇಳಿಯೇ ಇರುತ್ತೇವೆ. ಆದರೆ, ಅಧ್ಯಯನಗಳ ಪ್ರಕಾರ ಮಹಿಳಾ ಬಾಸ್‌ಗಳಿಂದ ಮಹಿಳಾ ಬಾಸ್‌ಗಳಿಂದ ಮಹಿಳಾ ಉದ್ಯೋಗಿಗಳ ಮೇಲಾಗುವಷ್ಟು ದೌರ್ಜನ್ಯ ಪುರುಷ ಬಾಸ್‌ಗಳಿಂದ ಆಗೋಲ್ಲವಂತೆ. ಇದನ್ನೇ ಕ್ವೀನ್ ಬೀ ಸಿಂಡ್ರೋಮ್ ಎನ್ನೋದು.

'ಭರಾಟೆ' ಅಚ್ಚರಿಗಳ ಮೂಟೆ; ಚಿತ್ರವನ್ನು ಯಾಕೆ ನೋಡಬೇಕು?

'ಮಫ್ತಿ’ ಚಿತ್ರದ ಭರ್ಜರಿ ಸಕ್ಸಸ್ ನಂತರ ಶ್ರೀಮುರಳಿ ನಾಯಕ ನಟರಾಗಿ ಅಭಿನಯಿಸಿದ ‘ಭರಾಟೆ’ ಸಿನಿಮಾ ಇವತ್ತು ಬಿಡುಗಡೆಯಾಗುತ್ತಿದೆ. ‘ಉಗ್ರಂ’ನಿಂದ ಶುರುವಾದ ಅವರ ಯಶಸ್ಸಿನ ಜರ್ನಿಗೆ ಈಗ ರೋರಿಂಗ್ ಸ್ಟಾರ್ ಬಿರುದು ಸಿಕ್ಕಿದೆ. ಅಭಿಮಾನಿಗಳ ಸಂಘ ಶುರುವಾಗಿದೆ. ‘ಭರಾಟೆ’ ಮೇಲೆ ಭಾರಿ ನಿರೀಕ್ಷೆ ಇದೆ. ಸಂದರ್ಭ ಹೀಗಿರುವಾಗ ಶ್ರೀಮುರಳಿ ಏನಂತಾರೆ?.

‘ವಿಕ್ರಮ್‌’ ಇಳಿಯಬೇಕಿದ್ದ ಜಾಗದ ಚಿತ್ರ ಸೆರೆ ಹಿಡಿದ ನಾಸಾ ಆರ್ಬಿಟರ್!

ಚಂದ್ರನ ಅಂಗಳದಿಂದ ಕೆಲವೇ ಕ್ಷಣಗಳ ಅಂತರದಲ್ಲಿರುವಾಗ ನಿಗೂಢ ರೀತಿಯಲ್ಲಿ ನಾಪತ್ತೆಯಾದ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಯ ಚಂದ್ರಯಾನ-2 ನೌಕೆಯ ‘ವಿಕ್ರಮ್‌’ ಲ್ಯಾಂಡರ್‌ ಇಳಿಯಬೇಕಿದ್ದ ಜಾಗದ ಚಿತ್ರವನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಆರ್ಬಿಟರ್‌ ಮತ್ತೊಮ್ಮೆ ಸೆರೆ ಹಿಡಿದಿದೆ.

ಭಾರತ, ಚೀನಾ ಮುಖವಾಡ ತೆರೆದಿಟ್ಟು ಬನ್ನಿ ಎಂದ ಟ್ರಂಪ್: ಇತ್ತ ಮೋದಿ, ಅತ್ತ ಕ್ಸಿ ಗರಂ!

ಭಾರತ ಹಾಗೂ ಚೀನಾ ರಾಷ್ಟ್ರಗಳನ್ನು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ.   ಭಾರತ ಹಾಗೂ ಚೀನಾ ರಾಷ್ಟ್ರಗಳು ಅಮೆರಿಕದಿಂದ ಈಗಾಗಲೇ ಸಾಕಷ್ಟು ವ್ಯಾಪಾರಿ ಲಾಭ ಪಡೆಯುತ್ತಿದ್ದು, ಈ ಎರಡೂ ರಾಷ್ಟ್ರಗಳು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಎಂಬ ಮುಖವಾಡ ತೆಗೆದಿಟ್ಟು ವ್ಯಾಪಾರಕ್ಕೆ ಬರಲಿ ಎಂದು ಟ್ರಂಪ್ ಆಗ್ರಹಿಸಿದ್ದಾರೆ.

click me!