ನಕಲಿ ಆರೋಗ್ಯ ಸೇತು ಮಾಡಿ ಪಾಕ್ ಅಕ್ರಮ, ಕ್ರಿಕೆಟ್‌ನಲ್ಲಿ ಕೊರೋನಾ ನಿಯಮ; ಜೂ.10ರ ಟಾಪ್ 10 ಸುದ್ದಿ!

By Suvarna NewsFirst Published Jun 10, 2020, 4:58 PM IST
Highlights

ದೆಹಲಿಯಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಬೆನ್ನಲ್ಲೇ ಸರ್ಕಾರ ಮತ್ತೊಂದು ಆಘಾತಕಾರಿ ಮಾಹಿತಿ ಬಿಡುಗಡೆ ಮಾಡಿದೆ. ಉತ್ತರ ಪ್ರದೇಶದಲ್ಲಿ ಕಠಿಣ ಗೋ ರಕ್ಷಕ ಕಾನೂನು ಜಾರಿ ಮಾಡಿದೆ. ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಕ್ರಿಕೆಟ್‌ನಲ್ಲಿ ಐಸಿಸಿ ಹೊಸ ನಿಯಮ ಜಾರಿ ಮಾಡಿದೆ. DYFI ಅಧ್ಯಕ್ಷ ಮುಹಮ್ಮದ್‌ ಜೊತೆ ಕೇರಳ ಸಿಎಂ ಪಿಣರಾಯಿ ಪುತ್ರಿ ಮದುವೆ, ಹೊಂಡಾದಿಂದ 999 ರೂಪಾಯಿ ಇಎಂಐ ಆಫರ್ ಸೇರಿದಂತೆ ಜೂನ್ 10ರ ಟಾಪ್ 10 ಸುದ್ದಿ ಇಲ್ಲಿವೆ.

ಜುಲೈ ಅಂತ್ಯದೊಳಗೆ ರಾಷ್ಟ್ರ ರಾಜಧಾನಿಗೆ ಮತ್ತೊಂದು ಶಾಕ್!

ಜುಲೈ ತಿಂಗಳ ಅಂತ್ಯದ ವೇಳೆ ದೆಹಲಿಯೊಂದರಲ್ಲೇ ಕೊರೋನಾ ಸೋಂಕಿತರ ಪ್ರಮಾಣ 5.5 ಲಕ್ಷಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಹೇಳಿದ್ದಾರೆ.

ಗೋ ಹಂತಕರಿಗಿಲ್ಲ ಉಳಿಗಾಲ, ಕಠಿಣ ಕಾನೂನು ಜಾರಿಗೊಳಿಸಿದ ಸರ್ಕಾರ!

ಗೋವುಗಳ ರಕ್ಷಣೆ ಮಾಡುವ ಹಾಗೂ ಇವುಗಳ ಹತ್ಯೆ ತಡೆಯುವ ನಿಟ್ಟಿನಲ್ಲಿ ಯೋಗಿ ಸರ್ಕಾರ ಪ್ರಮುಖ ಹೆಜ್ಜೆ ಇರಿಸಿದೆ. ಉತ್ತರ ಪ್ರದೇಶ ಸಚಿವ ಸಂಪುಟ ಗೋವಧೆ ತಿದ್ದುಪಡಿ ಸುಗ್ರೀವಾಜ್ಞೆ 2020ಕ್ಕೆ ಸಮ್ಮತಿ ಸೂಚಿಸಿದ್ದು, ಇನ್ಮುಂದೆ ಉತ್ತರ ಪ್ರದೇಶದ್ಲಿ ಗೋ ಹತ್ಯೆ ಕಾನೂನು ಬಾಹಿರ ಅಪರಾಧವಾಗಲಿದೆ.

ಗರ್ಭಿಣಿ ಪತ್ನಿಯನ್ನು ಭಾರತಕ್ಕೆ ಕಳಿಸಿದ ಒಂದು ತಿಂಗಳಲ್ಲಿ ದುಬೈನಲ್ಲಿ ಪತಿ ದುರ್ಮರಣ..!

ಕಳೆದೊಂದು ತಿಂಗಳ ಹಿಂದಷ್ಟೇ ತನ್ನ ಗರ್ಭಿಣಿ ಪತ್ನಿಯನ್ನು ಭಾರತಕ್ಕೆ ಕಳಿಸಿದ್ದ 28 ವರ್ಷದ ಇಂಜಿನಿಯರ್ ದುಬೈನಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 

ಕೊರೋನಾ ಆತಂಕದ ನಡುವೆ ವಾಹನ ಮಾಲಕರಿಗೆ ಗುಡ್‌ ನ್ಯೂಸ್!

ಕೊರೋನಾ ಸಂದಿಗ್ಧತೆಯಿಂದಾಗಿ ಈ ವರ್ಷ ಫೆಬ್ರವರಿ 1 ರಿಂದ ಅವಧಿ ಮುಗಿದಿರುವ ಪರವಾನಗಿ, ವಿಮೆ ಸಹಿತ ವಾಹನ ದಾಖಲೆಗಳ ಮಾನ್ಯತೆಯನ್ನು ಸೆ.30ರ ವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶಿಸಿದೆ.

ಟೆಸ್ಟ್‌ ನಲ್ಲಿ ಕೊರೋನಾ ರೀಪ್ಲೇಸ್‌ಮೆಂಟ್‌: ಚೆಂಡಿಗೆ ಎಂಜಲು ಹಚ್ಚಿದರೆ 5 ರನ್ ಪೆನಾಲ್ಟಿ..!

ಕೊರೋನಾ ವೈರಸ್ ಭೀತಿಯ ನಡುವೆಯೇ ಕ್ರಿಕೆಟ್ ಚಟುವಟಿಕೆಗಳು ಗರಿಗೆದರಲಾರಂಭಿಸಿವೆ. ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಐಸಿಸಿ ಕೆಲವೊಂದು ಮಹತ್ವದ ತೀರ್ಮಾನಗಳನ್ನು ತೆಗೆದುಕೊಂಡಿದೆ. 

ಹೃತಿಕ್ ಇಲ್ಲದೆ ತನ್ನ ಜೀವನದ ಬಗ್ಗೆ ಯೋಚಿಸಲು ಸಾಧ್ಯವಿಲ್ಲ - ಸುಸೇನ್‌ ಖಾನ್‌

ಲಾಕ್ ಡೌನ್ ಸಮಯದಲ್ಲಿ, ಹೃತಿಕ್ ಮಾಜಿ ಪತ್ನಿ ಸುಸೇನ್ ಖಾನ್  ಹೃತಿಕ್‌ ಮನೆಯಲ್ಲಿ ಉಳಿಯಲು ಬಂದಿದ್ದಾರೆ. ಸುಸೇನ್‌  ತಮ್ಮ ಮಕ್ಕಳು ಒಂಟಿತನ ಅನುಭವಿಸಬಾರದು ಎಂದು ಈ ನಿರ್ಧಾರ ತೆಗೆದುಕೊಂಡಿದ್ದಾರೆ. 2000ರಲ್ಲಿ ಮದುವೆಯಾಗಿದ್ದ ಬಾಲಿವುಡ್‌ ನಟ ಹೃತಿಕ್‌ ರೋಷನ್‌ ಹಾಗೂ ಸುಸೇನ್‌ರದ್ದು ಆದರ್ಶ ದಾಂಪತ್ಯ ಎಂದೇ ಹೇಳಲಾಗುತ್ತಿತ್ತು. 

ಭಾರತೀಯರ ಮಾಹಿತಿ ಕದಿಯಲು ಪಾಕ್‌ನಿಂದ ನಕಲಿ ಆರೋಗ್ಯ ಸೇತು!...

ದೇಶದಲ್ಲಿ ಕೊರೋನಾ ಸೋಂಕಿತರ ಪತ್ತೆಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿ ಭಾರೀ ಜನಪ್ರಿಯತೆ ಪಡೆದಿರುವ ಆರೋಗ್ಯ ಸೇತು ಆ್ಯಪ್‌ ಮೇಲೆ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಕಣ್ಣು ಬಿದ್ದಿದೆ. ಅದು ಅಸಲಿ ಹೋಲುವ ನಕಲಿ ಆ್ಯಪ್‌ ತಯಾರಿಸಿದ್ದು, ಅದರ ಮೂಲಕ ಗೌಪ್ಯ ಮಾಹಿತಿ ಕದಿಯುವ ಸಂಚು ರೂಪಿಸಿದೆ.

ಸುಲಭ ಸಾಲ, ಕಡಿಮೆ ಬಡ್ಡಿ, 999 ರೂ EMI; ಹೊಸ ಆಫರ್ ಘೋಷಿಸಿದ ಹೊಂಡಾ!...

ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ ಜನರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ವೇತನ ಕಡಿತ, ವ್ಯಾಪಾರ-ವಹಿವಾಟು ಕುಂಠಿತ ಸೇರಿದಂತೆ ಹಲವು ಸಮಸ್ಯೆಗಳು ತಲೆದೋರಿದೆ. ಇದರ ನಡುವೆ ಕಾರು ಮಾರಾಟ ಉತ್ತೇಜಿಸಲು ಬಹುತೇಕ ಎಲ್ಲಾ ಆಟೋಮೊಬೈಲ್ ಕಂಪನಿಗಳು ಸಾಲ ಸೌಲಭ್ಯ, ಇಎಂಐ ಸೇರಿದಂತೆ ಹಲವು ಆಫರ್ ಘೋಷಿಸುತ್ತಿದೆ. 

ಕೇರಳ ಮಾಜಿ ರಣಜಿ ಕ್ರಿಕೆಟಿಗ ಸಾವು; ಮಗ ಅಶ್ವಿನ್ ಬಂಧನ..!...

ಕೇರಳ ರಣಜಿ ತಂಡವನ್ನು ಪ್ರತಿನಿಧಿಸಿದ್ದ ಕೆ. ಜಯಮೋಹನ್ ಥಂಪಿ ಅನುಮಾನಾಸ್ಪಾದವಾಗಿ ಕೊನೆಯುಸಿರೆಳೆದಿದ್ದಾರೆ. ಈ ಕುರಿತಂತೆ ಪೊಲೀಸರು ಪುತ್ರ ಅಶ್ವಿನ್ ಥಂಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 

DYFI ಅಧ್ಯಕ್ಷ ಮುಹಮ್ಮದ್‌ ಜೊತೆ ಕೇರಳ ಸಿಎಂ ಪಿಣರಾಯಿ ವಿಜಯನ್‌ ಮಗಳ ಮದುವೆ!...

 

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹಿರಿಯ ಮಗಳು ವೀಣಾ ಥಯಿಕ್ಕಂಡಿಯಿಲ್‌ ಮದುವೆ ಡಿವೈಎಫ್‌ಐ ರಾಷ್ಟ್ರೀಯ ಅಧ್ಯಕ್ಷ ಮುಹಮ್ಮದ್‌ ರಿಯಾಸ್‌ ಜೊತೆ ಶೀಘ್ರವೇ ನೆರವೇರಲಿದೆ.

click me!