ಗಡಿಯಲ್ಲಿ ಗುಂಡಿನ ಚಕಮಕಿ: ಒಬ್ಬ ಡಿಎಸ್ಪಿ ಹುತಾತ್ಮ, 3 ಉಗ್ರರು ಮಟ್ಯಾಷ್

By Web DeskFirst Published Feb 24, 2019, 6:10 PM IST
Highlights

ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಭಾರತೀಯ ಸೇನೆ ಹಾಗೂ ಉಗ್ರರ ನಡುವೆ ಮುಂದುವರಿದ ಗುಂಡಿನ ಚಕಮಕಿ. ಇಂದು [ಬಾನುವಾರ] ದಕ್ಷಿಣ ಕಾಶ್ಮೀರದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಉಗ್ರರು ಉಡೀಸ್.

ಶ್ರೀನಗರ, [ಫೆ.24]: ದಕ್ಷಿಣ ಕಾಶ್ಮೀರದ ಕುಲ್ಗಾಮಾ ಜಿಲ್ಲೆಯಲ್ಲಿ ಭಾರತೀಯ ಸೇನೆ ಹಾಗೂ ಉಗ್ರರ ನಡುವೆ ಇಂದು [ಭಾನುವಾರ] ಗುಂಡಿನ ಕಾಳಗ ನಡೆದಿದೆ.

ಘಟನೆಯಲ್ಲಿ ಬಿಎಸ್ಎಫ್ ಯೋಧರು ಮೂವರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಹತ್ಯೆಯಾದವರನ್ನ ಜೈಷ್ ಎ ಮೊಹಮದ್ ಸಂಘಟನೆಯ  ಉಗ್ರರು ಎಂದು ತಿಳಿದುಬಂದಿದೆ. 

ಗಡಿಯಲ್ಲಿ ಯುದ್ಧ ಭೀತಿ: ಕಾಶ್ಮೀರಕ್ಕೆ 10ಸಾವಿರ ಯೋಧರ ರವಾನೆ

Kulgam: DSP Aman Thakur has lost his life in an encounter between security forces and terrorists in Tarigam. Two Army personnel are injured. pic.twitter.com/3EDoZG5Qga

— ANI (@ANI)

ಇನ್ನು ಘಟನೆಯಲ್ಲಿ ಒಬ್ಬ ಡಿಎಸ್ಪಿ ಹುತಾತ್ಮರಾಗಿದ್ದರೆ, ಒಬ್ಬ ಯೋಧನಿಗೆ ಗಾಯವಾಗಿದೆ. ಫೆ.14ರಂದು ಪುಲ್ವಾಮಾ ದಾಳಿ ನಡೆದ ದಿನದಿಂದ ಉಗ್ರರನ್ನು ಮಟ್ಯಾಷ್ ಮಾಡಲು ಭಾರತೀಯ ಸೇನೆ ನಿರಂತರ ಕಾರ್ಯಚರಣೆ ಮುಂದುವರಿಸಿದೆ.

ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿಯಾಗಿ ವಿವಿಧ ಪಡೆಯ ಸುಮಾರು10 ಸಾವಿರ ಯೋಧರನ್ನು ರವಾನಿಸಲಾಗಿದೆ.

click me!