ಡ್ರ್ಯಾಗನ್, ಆನೆ ಜೋಡಿ ಕುಣಿತ ಚೆಂದ: ವರ್ಣಿಸಲಸಾಧ್ಯ ಕ್ಸಿ ಹೇಳಿಕೆಯ ಅಂದ!

By Web DeskFirst Published Oct 13, 2019, 9:27 AM IST
Highlights

ಭಾರತ-ಚೀನಾ ಅನೌಪಚಾರಿಕ ಶೃಂಗಸಭೆ ಅಂತ್ಯ| ಮಹತ್ವದ ಒಪ್ಪಂದಗಳಿಗೆ ಸೈ ಎಂದ ಮೋದಿ-ಕ್ಸಿ| ಭಾರತ ಭೇಟಿಯನ್ನು ಫಲಪ್ರದ ಎಂದು ಬಣ್ಣಿಸಿದ ಚೀನಾ ಅಧ್ಯಕ್ಷ| ಡ್ರ್ಯಾಗನ್-ಆನೆ ಜೋಡಿ ಕುಣಿತ ನೋಡಲು ಚೆಂದ ಎಂದ ಕ್ಸಿ| ಭಾರತ-ಚೀನಾ ಸಂಬಂಧ ಅತ್ಯಂತ ಗಟ್ಟಿಯಾಗಿದೆ ಎಂದ ಜಿನ್‌ಪಿಂಗ್| ‘ಪರಸ್ಪರ ಅಭಿವೃದ್ಧಿಯೇ ಉಭಯ ರಾಷ್ಟ್ರಗಳ ಧ್ಯೇಯ ಮಂತ್ರ’|‘ನಮ್ಮ ಭವಿಷ್ಯ ರೂಪಿಸುವ ಜವಾಬ್ದಾರಿ ನಮ್ಮ ಮೇಲೆಯೇ ಇದೆ’| ಸಾಂಸ್ಕೃತಿಕ ಬೆಸುಗೆ ನಮ್ಮನ್ನು ಸದಾಕಾಲ ಬಂಧಿಸಿರಲಿ ಎಂದು ಹಾರೈಸಿದ ಕ್ಸಿ|

ನವದೆಹಲಿ(ಅ.13): ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಅನೌಪಚಾರಿಕ ಭಾರತ ಭೇಟಿ ಮುಕ್ತಾಯ ಕಂಡಿದ್ದು, ಪ್ರಧಾನಿ ಮೋದಿ ಅವರೊಂದಿಗಿನ ಮಾತುಕತೆ ವೇಳೆ ಹಲವು ಮಹತ್ವದ ಒಪ್ಪಂದಗಳಿಗೆ ಸೈ ಎಂದಿದ್ದಾರೆ.

ಭಾರತ-ಚೀನಾ ಸಂಬಂಧವನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಬಣ್ಣಿಸಿರುವ ಚೀನಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಡ್ರ್ಯಾಗನ್ ಹಾಗೂ ಆನೆಯ ಜೋಡಿ ಕುಣಿತ ನೋಡಲು ಚೆಂದ ಎಂದು ವರ್ಣಿಸಿದ್ದಾರೆ.

ಎಂತಹ ಕಠಿಣ ಪರಿಸ್ಥಿತಿಯಲ್ಲೂ ಭಾರತ-ಚೀನಾ ರಾಷ್ಟ್ರಗಳು ತಮ್ಮ ಸಂಬಂಧವನ್ನು ಕಾಪಾಡಿಕೊಳ್ಳುವ ಅಗತ್ಯವಿದೆ ಎಂದು ಕ್ಸಿ ಅಭಿಪ್ರಾಯಪಟ್ಟಿದ್ದಾರೆ.

ಪರಸ್ಪರ ಅಭಿವೃದ್ಧಿ ಉಭಯ ರಾಷ್ಟ್ರಗಳ ಧ್ಯೇಯ ಮಂತ್ರವಾಗಬೇಕು ಎಂದಿರುವ ಕ್ಸಿ, ನಮ್ಮ ಭವಿಷ್ಯ ರೂಪಿಸುವ ಜವಾಬ್ದಾರಿ ನಮ್ಮ ಮೇಲೆಯೇ ಇದೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಭಾರತದಿಂದ ವಾಪಸ್ಸಾದ ಬಳಿಕ ಈ ಕುರಿತು ಹೇಳಿಕೆ ನೀಡಿರುವ ಚೀನಾ ಅಧ್ಯಕ್ಷ, ಪ್ರಧಾನಿ ಮೋದಿ ಅವರೊಂದಿಗಿನ ಶೃಂಗಸಭೆ ಅತ್ಯಂತ ಫಲಪ್ರದ ಎಂದು ಬಣ್ಣಿಸಿದ್ದಾರೆ.

ವ್ಯಾಪಾರ ಸಂಬಂಧವನ್ನು ಉತ್ತಮಗೊಳಿಸಿವುದು ಉಭಯ ರಾಷ್ಟ್ರಗಳಿಗೂ ಅನಿವಾರ್ಯ ಕ್ರಮ ಎಂದಿರುವ ಕ್ಸಿ, ಸಾಂಸ್ಕೃತಿಕ ಬೆಸುಗೆ ನಮ್ಮನ್ನು ಸದಾಕಾಲ ಬಂಧಿಸಿರಲಿ ಎಂದು ಹಾರೈಸಿದ್ದಾರೆ.

click me!