ಹರ್ಷವರ್ಧನ್‌ಗೆ WHO ಅಧಿಕಾರ, ಜೂನ್‌ನಿಂದ ರೈಲು ಸಂಚಾರ; ಮೇ.21ರ ಟಾಪ್ 10 ಸುದ್ದಿ!

Suvarna News   | Asianet News
Published : May 21, 2020, 04:56 PM IST
ಹರ್ಷವರ್ಧನ್‌ಗೆ WHO ಅಧಿಕಾರ, ಜೂನ್‌ನಿಂದ ರೈಲು ಸಂಚಾರ; ಮೇ.21ರ ಟಾಪ್ 10 ಸುದ್ದಿ!

ಸಾರಾಂಶ

ವಿಶ್ವಸಂಸ್ಥೆಯ ಅಂಗವಾಗಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯ ಕಾರ್ಯಕಾರಿ ಮಂಡಳಿಯ ಚೇರ್ಮನ್‌ ಆಗಿ ಮೇ 22ರಂದು ಭಾರತದ ಆರೋಗ್ಯ ಸಚಿವ,  ಡಾ| ಹರ್ಷವರ್ಧನ್‌ ಅಧಿಕಾರ ಸ್ವೀಕರಿಸಲಿದ್ದಾರೆ. ಭಾರತೀಯ ರೈಲ್ವೆ, ಮೊದಲ ಹಂತದಲ್ಲಿ ಜೂ.1ರಿಂದ 200 ವಿಶೇಷ ರೈಲುಗಳ ಸಂಚಾರ ಆರಂಭಿಸಲಿದೆ. IPL ಟೂರ್ನಿಗೆ ತಯಾರಿ ಆರಂಭ, ಹೆಸರ ಬದಲಾಯಿಸಲು ನಿರ್ಧರಿಸಿದ್ರಾ ರಶ್ನಿಕಾ ಮಂದಣ್ಣ ಸೇರಿದಂತೆ ಮೇ.22ರ ಟಾಪ್ 10 ಸುದ್ದಿ ಇಲ್ಲಿವೆ.

ಜೂನ್ 1 ರಿಂದ ದೇಶವ್ಯಾಪಿ ಸಂಚಾರ, ಟಿಕೆಟ್ ಬುಕ್ಕಿಂಗ್ ಆರಂಭ: ಇಲ್ಲಿದೆ ಪಟ್ಟಿ

ಲಾಕ್‌ಡೌನ್‌ ಸಡಿಲಗೊಂಡಿರುವ ಹಿನ್ನೆಲೆಯಲ್ಲಿ ಹಂತಹಂತವಾಗಿ ರೈಲು ಸಂಚಾರ ಪುನಾರಂಭಿಸಲು ಉದ್ದೇಶಿಸಿರುವ ಭಾರತೀಯ ರೈಲ್ವೆ, ಮೊದಲ ಹಂತದಲ್ಲಿ ಜೂ.1ರಿಂದ 200 ವಿಶೇಷ ರೈಲುಗಳ ಸಂಚಾರ ಆರಂಭಿಸಲಿದೆ. ನಾನ್‌- ಎಸಿ ರೈಲುಗಳು ಇವಾಗಿರಲಿದ್ದು, ಈ ರೈಲುಗಳ ಟಿಕೆಟ್‌ ಬುಕಿಂಗ್‌ ಆನ್‌ಲೈನ್‌ ಮೂಲಕ ಇಂದು ಗುರುವಾರ ಬೆಳಗ್ಗೆ ಹತ್ತು ಗಂಟೆಯಿಂದ ಆರಂಭಿಸಲಾಗಿದೆ. ಈ ಮೂಲಕ ರಿಸರ್ವೇಶನ್ ಆರಂಭಿಸಲಾಗಿದೆ. 

6 ಅಡಿ ಅಂತರ ಕಾಯ್ದುಕೊಂಡರೂ ವೈರಸ್‌ ದಾಳಿ ತಪ್ಪಿದ್ದಲ್ಲ!

ಕೊರೋನಾ ವೈರಸ್‌ನಿಂದ ತಪ್ಪಿಸಿಕೊಳ್ಳಲು ಸಾಮಾಜಿಕ ಅಂತರ ಕಡ್ಡಾಯ. ಕನಿಷ್ಠ ಆರು ಅಡಿ ಅಂತರ ಕಾಯ್ದುಕೊಂಡರೆ ವೈರಾಣುವಿನಿಂದ ರಕ್ಷಿಸಿಕೊಳ್ಳಬಹುದು ಎನ್ನುವುದು ತರ್ಕ. ಆದರೆ ಇದು ಸಂಪೂರ್ಣ ಸತ್ಯವಲ್ಲ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. 

ರಾಮ ಮಂದಿರ ನಿರ್ಮಾಣ ಕಾರ್ಯ: ಭೂಮಿ ಅಗೆದಾಗ ಸಿಕ್ತು ಮೂರ್ತಿ ಹಾಗೂ ಮಂದಿರದ ಅವಶೇಷ!

ಲಾಕ್‌ಡೌನ್ ನಡುವೆ 67 ಎಕರೆ ವಿಸ್ತೀರ್ಣದ ಶ್ರೀರಾಮ ಜನ್ಮಭೂಮಿ ಪರಿಸರದಲ್ಲಿ ಉತ್ಖನನ ಹಾಗೂ ಇನ್ನಿತರ ಕಾರ್ಯಗಳು ಆರಂಭವಾಗಿವೆ. ಶೀಘ್ರದಲ್ಲೇ ಈ ಇಡೀ ಪ್ರದೇಶವನ್ನು ಸಮತಟ್ಟುಗೊಳಿಸಿ ಭೂಮಿ ಪೂಜೆ ಕಾರ್ಯ ನಡೆಯಲಿದೆ. ಆದರೀಗ ಅಗೆಯುವ ಹಾಗೂ ಈ ಭೂಮಿ ಸಮತಟ್ಟು ಮಾಡುವ ಪ್ರಕ್ರಿಯೆ ವೇಳೆ ಅನೇಕ ಪುರಾತನ ಮೂರ್ತಿ ಹಾಗೂ ಮಂದಿರದ ಅವಶೇಷಗಳು ಲಭ್ಯವಾಗಿವೆ.

ಪೋಲಿಯೂ ತೊಡೆದ ಹರ್ಷವರ್ಧನ್‌ಗೆ WHO ಅಧಿಪತ್ಯ!

ವಿಶ್ವಸಂಸ್ಥೆಯ ಅಂಗವಾಗಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯ ಕಾರ್ಯಕಾರಿ ಮಂಡಳಿಯ ಚೇರ್ಮನ್‌ ಆಗಿ ಮೇ 22ರಂದು ಭಾರತದ ಆರೋಗ್ಯ ಸಚಿವ, ಭಾರತದಲ್ಲಿ ಪೋಲಿಯೋ ಪಿಡುಗು ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಾ| ಹರ್ಷವರ್ಧನ್‌ ಅಧಿಕಾರ ಸ್ವೀಕರಿಸಲಿದ್ದಾರೆ. 

ಅಕ್ಟೋ​ಬರ್‌-ನವೆಂಬರ್‌ನಲ್ಲಿ ಐಪಿ​ಎಲ್‌ ಟಿ20 ಟೂರ್ನಿ, BCCI ಕಸರತ್ತು ಆರಂಭ?

ನಿಗದಿತ ವೇಳಾಪಟ್ಟಿ ಪ್ರಕಾರ ಅಕ್ಟೋಬರ್- ನವೆಂಬರ್ ತಿಂಗಳಲ್ಲಿ ಟಿ20 ವಿಶ್ವಕಪ್ ಟೂರ್ನಿ ಆಯೋಜಿಸಲಾಗಿದೆ. ಕೊರೋನಾ ವೈರಸ್ ಕಾರಣ ಟಿ20 ವಿಶ್ವಕಪ್ ಟೂರ್ನಿ ಅನುಮಾನವಾಗಿದೆ. ಆದರೆ ಇದೇ ಸಮಯದಲ್ಲಿ ಐಪಿಎಲ್ ಟೂರ್ನಿ ಆಯೋಜಿಸಲು ಬಿಸಿಸಿಐ ಚಿಂತಿಸಿದೆ.

ಮ್ಯಾಗಜಿನ್‌ಗೆ ಪೋಸ್‌ ಕೊಡಲು ಹೋಗಿ ಟಾಯ್ಲೆಟ್ ನಲ್ಲಿ ಸಿಲುಕಿಕೊಂಡ 'ತಪ್ಪಡ್' ನಟಿ ?

ಬಾಲಿವುಡ್‌ ಬೋಲ್ಡ್‌ ನಟಿ ತಾಪ್ಸಿ ಪನ್ನು ಲಾಕ್‌ಡೌನ್‌ ಇದ್ದರೂ ಮನೆಯಲ್ಲಿ ಎಷ್ಟು ದಿನ ಕಾಲ ಕಳೆಯುವುದಕ್ಕೆ ಆಗುತ್ತದೆ ಎಂದು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಕೆಲ ದಿನಗಳ ಹಿಂದೆ ಜಾಹ್ನವಿ ಕಪೂರ್‌ ಮನೆಯಲ್ಲಿಯೇ ಫೋಟೋ ಶೋಟ್ ಮಾಡಿಸಿದ ನಂತರ ತಾಪ್ಸಿನೂ ಅದನ್ನೇ ಫಾಲೋ ಮಾಡಿದ್ದಾರೆ.

20 ಲಕ್ಷ ಕೋಟಿ ಪ್ಯಾಕೇಜ್‌ನ ಹಲವು ಯೋಜನೆಗೆ ಸಮ್ಮತಿ!

ಕೊರೋನಾದಿಂದ ಕಂಗೆಟ್ಟಆರ್ಥಿಕತೆಗೆ ಚೇತರಿಕೆ ನೀಡಲು ಕೇಂದ್ರ ಸರ್ಕಾರ ಇತ್ತೀಚೆಗೆ ಘೋಷಿಸಿದ್ದ 20 ಲಕ್ಷ ಕೋಟಿ ರು. ಪ್ಯಾಕೇಜ್‌ನ ಕೆಲ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ದೇಶಿ ವಿಮಾನ ಹಾರಾಟಕ್ಕೆ ಗ್ರೀನ್ ಸಿಗ್ನಲ್; ಪ್ರಯಾಣಿಕರು ಪಾಲಿಸಲೇಬೇಕು 15 ಮಾರ್ಗಸೂಚಿ!.

ಲಾಕ್‌ಡೌನ್ ಸಡಿಲಿಕೆ ಮಾಡಿದ ಬೆನ್ನಲ್ಲೇ ದೇಶದಲ್ಲಿ ಬಹುತೇಕ ವಲಯದ ಕಾರ್ಯಚಟುವಟಿಕೆ ಆರಂಭಗೊಂಡಿದೆ. ಇದೀಗ ಸೋಮವಾರದಿಂದ(ಮೇ.25) ದೇಶಿಯ ವಿಮಾನ ಹಾರಾಟಕ್ಕೆ ಅನುಮತಿ ನೀಡಲಾಗಿದೆ.  ಇದರ ಜೊತೆಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ನೀಡಲಾಗಿದೆ. ಪ್ರಯಾಣಿಕರು ಪಾಲಿಸಬೇಕಾದ 15 ಮಾರ್ಗಸೂಚಿಗಳ ವಿವರ ಇಲ್ಲಿದೆ.

ಪಿಜಿ ಬಾಡಿಗೆ ಕೊಡದ ಯುವತಿಯರನ್ನು ಕೂಡಿ ಹಾಕಿದ ಮಾಲೀಕ..!

ಪಿಜಿ ಬಾಡಿಗೆ ನೀಡದ ಯುವತಿಯರನ್ನು ರೂಮಿನಲ್ಲಿ ಕೂಡಿಹಾಕಿದ ಘಟನೆ ಹಾಸನದಲ್ಲಿ ನಡೆದಿದೆ. ಪಿಜಿ ಮಾಲೀಕ ಯುವತಿಯರನ್ನು ಕೂಡಿ ಹಾಕಿದ್ದಾರೆ. ಲಗೇಜು ತೆಗೆದುಕೊಳ್ಳಲು ಬಂದವರು ಬಂಧಿಯಾಗಿದ್ದಾರೆ. 

ಹೆಸರು ಬದಲಾಯಿಸಿಕೊಂಡ ರಶ್ಮಿಕಾ ಮಂದಣ್ಣ; ಅಭಿಮಾನಿಗಳು ಕೊಟ್ಟ ಅಡ್ವೈಸ್‌ ನೋಡಿ!

ದಕ್ಷಿಣ ಭಾರತದಲ್ಲಿ ಸಿಕ್ಕಾಪಟ್ಟೆ ಹೆಸರು ವಾಸಿಯಾಗಿರುವ ರಶ್ಮಿಕಾ ಮಂದಣ್ಣ ಈಗ ಹೆಸರು ಬದಲಾಯಿಸಿಕೊಳ್ಳಲು ನಿರ್ಧರಿಸಿದ್ದಾರೆ. ಇದಕ್ಕೆ ಅಭಿಮಾನಿಗಳು ಮಾಡಿದ ಕಾಮೆಂಟ್‌ ನೋಡಿದ್ರೆ ಶಾಕ್ ಆಗ್ತೀರಾ....

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!
ತಮಿಳು ಚಿತ್ರದಲ್ಲಿ ಕನ್ನಡ ಹಾಡು ಬಳಸಿದ್ದಕ್ಕೆ ದಂಡ, ಒಟಿಟಿ ರಿಲೀಸ್‌ಗೂ ಮುನ್ನ 30 ಲಕ್ಷ ಠೇವಣಿ ಇಡಿ ಎಂದ ಕೋರ್ಟ್‌!