ಸಂಕಷ್ಟದಲ್ಲಿ ಪರಮೇಶ್ವರ್,ಬಿಗ್‌ಬಾಸ್‌ನಲ್ಲಿ ಸಿಗಲಿದೆ ಲಿಕ್ಕರ್; ಇಲ್ಲಿವೆ ಅ.12ರ ಟಾಪ್ 10 ಸುದ್ದಿ!

By Web Desk  |  First Published Oct 12, 2019, 5:14 PM IST

IT ದಾಳಿ ಬೆನ್ನಲ್ಲೇ ಮಾಜಿ ಡಿಸಿಎಂ ಪರಮೇಶ್ವರ್ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರಂ ಪಿಎಂ ಆತ್ಮಹತ್ಯೆಗೆ ಶರಣಾಗಿದ್ದರೆ, ಇತ್ತ ಕೇಸ್ ಇಡಿ ಕೈಗೆ ವರ್ಗಾವಣೆಯಾಗುತ್ತಿದೆ. ಈ ಬಾರಿಯ ಬಿಗ್‌ಬಾಸ್ ರಿಯಾಲಿಟಿ ಶೋನ ಲಕ್ಷುರಿ ಬಜೆಟ್‌ನಲ್ಲಿ ಬಿಯರ್ ಸಿಗಲಿದೆ. ಪ್ರಧಾನಿ ಮೋದಿ ಕಡಲ ತೀರದಲ್ಲಿ ಪ್ಲಾಸ್ಟಿಕ್ ಹೆಕ್ಕಿ ಸ್ವಚ್ಚತಾ ಸಂದೇಶ ಸಾರಿದರು. ರೋಹಿತ್ ಶರ್ಮಾ ಅಭಿಮಾನಿಯಿಂದ ನಿಯಮ ಉಲ್ಲಂಘನೆ ಸೇರಿದಂತೆ ಅ.12ರ ಟಾಪ್ 10 ಸುದ್ದಿ ಇಲ್ಲಿವೆ.


1)  ನನ್ನ ಹೆಂಡತಿ ಮಕ್ಕಳಿಗೆ ಟಾರ್ಚರ್ ಕೊಡಬೇಡಿ, ಪರಂ ಪಿಎ ಡೆತ್‌ ನೋಟ್‌ ಪತ್ತೆ!

Latest Videos

ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಮೇಲೆ ಐಟಿ ದಾಳಿ ನಡೆದ ಬೆನ್ನಲ್ಲೇ ಓಡಿ ಪರಾರಿಯಾಗಿದ್ದ ಪಿಎ ರಮೇಶ್ ಬೆಂಗಳೂರಿನ ಜ್ಞಾನಭಾರತಿ ಕ್ಯಾಂಪಸ್‌ನ ಸಾಯಿ ಗ್ರೌಂಟ್‌ನಲ್ಲಿದ್ದ ಮರಕ್ಕೆ ರಮೇಶ್ ನೇಣು ಹಾಕಿಕೊಂಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಅವರ ಕಾರಿನಲ್ಲಿ ಡೆತ್‌ ನೋಟ್ ಪತ್ತೆಯಾಗಿದೆ.

2) ಪರಂ ಸಾಮ್ರಾಜ್ಯಕ್ಕೆ IT ದಾಳಿ: ಸಂತೋಷ ಎಂದಿದ್ದ ಮಾಜಿ ಡಿಸಿಎಂಗೆ ಮತ್ತೊಂದು ಶಾಕ್!...

ಡಾ. ಜಿ. ಪರಮೇಶ್ವರ್ ಅಕ್ರಮ ಆಸ್ತಿ ಸಾಮ್ರಾಜ್ಯಕ್ಕೆ ದಾಳಿ ನಡೆಸಿದ ಐಟಿ ಅಧಿಕಾರಿಗಳಿಗೆ ಬೆಚ್ಚಿ ಬಿಳಿಸುವ ಮಾಹಿತಿ ಲಭ್ಯವಾಗಿದೆ.  ಹೌದು ಪರಂ ಆಸ್ತಿ ಕಂಡ ಅಧಿಕಾರಿಗಳು ಅಕ್ಷರಶಃ ದಂಗಾಗಿದ್ದಾರೆ. ಈ ಅಕ್ರಮ ಆಸ್ತಿ ಪ್ರಕರಣಕ್ಕೆ ED ಎಂಟ್ರಿಯಾಗುವುದು ಬಹುತೇಕ ಖಚಿತವಾಗಿದ್ದು, ಡಿಕೆ ಶಿವಕುಮಾರ್‌ಗೆ ಎದುರಾದ ಪರಿಸ್ಥಿತಿಯೇ ಪರಮೇಶ್ವರ್‌ಗೂ ಎದುರಾಗುವ ಸಾಧ್ಯತೆಗಳಿವೆ.

3) ಸಮುದ್ರ ತೀರದಲ್ಲಿ ಮೋದಿ ಪ್ಲಾಗಿಂಗ್: ಕಸ ಆಯ್ದು ಸ್ವಚ್ಛತೆಯ ಸಂದೇಶ ಸಾರಿದ ಪ್ರಧಾನಿ!

ಚೀನಾ ಅಧ್ಯಕ್ಷ  ಕ್ಸಿ ಜಿನ್​ಪಿಂಗ್ ಅನೌಪಚಾರಿಕ ಶೃಂಗಸಭೆಗಾಗಿ ತಮಿಳುನಾಡಿನ ಮಹಾಬಲಿಪುರಂನಲ್ಲಿರುವ ಪ್ರಧಾನಿ ಮೋದಿ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಇಂದು ಶನಿವಾರ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ. ಹೀಗಿರುವಾಗ ಇಂದು ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದ ಪಿಎಂ ಮೋದಿ ಬೀಚ್​ನಲ್ಲಿ ಸ್ವಚ್ಛತಾ ಕಾರ್ಯ ನಡೆಸಿ, ಸ್ವಚ್ಛತೆಯ ಸಂದೇಶ ಸಾರಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.

4) ಮನೆಗೆ ಹೋದ ಅಧಿಕಾರಿಗಳನ್ನು ವಾಪಸ್ ಕರೆಸಿ ಸಂಸದೆ ತರಾಟೆ

ಮನೆಗೆ ಹೋದ ಅಧಿಕಾರಿಗಳನ್ನು ವಾಪಸ್ ಕರೆಸಿ ಸಂಸದೆ ಸುಮಲತಾ ಅಂಬರೀಶ್ ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸು ವುದನ್ನು ಬಿಟ್ಟು ಮನೆಗೆ ಹೋದರೆ ಹೇಗೆಂದು ತರಾಟೆಗೆ ತೆಗೆದುಕೊಂಡರು

5) ರಾಜ್ಯದಲ್ಲಿ ಉಪ ಚುನಾವಣೆ ನಡೆಯುವುದೇ ಡೌಟು!

ರಾಜ್ಯದ ಉಪಚುನಾವಣೆಗೆ ಮುಖಂಡರು ಸಜ್ಜಾಗುತ್ತಿದ್ದಾರೆ. ಎಲ್ಲಾ ಪಕ್ಷಗಳು ಸದ್ದಿಲ್ಲದೆ ಕಾರ್ಯತಂತ್ರ ಹೆಣೆಯುತ್ತಿದೆ. ಆದರೆ  ಈ ಉಪುಚುನಾವಣೆ ನಡೆಯುವುದೇ ಡೌಟ್ ಎನ್ನಲಾಗುತ್ತಿದೆ.

6) ಭದ್ರತಾ ಸಿಬ್ಬಂಧಿ ಕಣ್ತಪ್ಪಿಸಿ ರೋಹಿತ್ ಪಾದಕ್ಕೆರಗಿದ ಅಭಿಮಾನಿ!

ಪುಣೆ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅಭಿಮಾನಿ, ಸೆಕ್ಯೂರಿಟಿ ನಿಯಮ ಉಲ್ಲಂಘಿಸಿ ಮೈದಾನದೊಳಕ್ಕೆ ಪ್ರವೇಶಿಸಿದ ಘಟನೆ ನಡೆದಿದೆ. ಈ ಘಟನೆಯಿಂದ ಟೀಂ ಇಂಡಿಯಾ ಹಾಗೂ ಸೆಕ್ಯೂಟಿ ಗಾರ್ಡ್‌ಗಳು ಒಂದು ಕ್ಷಣ ಬೆಚ್ಚಿ ಬಿದ್ದರು.

7) ಬಿಗ್‌ಬಾಸ್‌ ಲಕ್ಷುರಿ ಬಜೆಟ್‌ ಟಾಸ್ಕ್‌ಗೆ ಆಲ್ಕೋಹಾಲ್‌, ಮೊಬೈಲ್?

ಅಕ್ಟೋಬರ್ 13 ರಿಂದ ವಿಭಿನ್ನವಾಗಿ ಪ್ರೇಕ್ಷಕರನ್ನು ಮನೋರಂಜಿಸಲು ಸಜ್ಜಾಗಿರುವ ಬಿಗ್‌ಬಾಸ್‌ ಸೀಸನ್-7 ಕೆಲವೊಂದು ವಿಶೇಷತೆಗಳನ್ನು ಹೊಂದಿದ್ದು ನೋಡುಗರಿಗೆ ಶಾಕ್ ನೀಡುವುದಂತೂ ಗ್ಯಾರಂಟಿ.

8) ರಸ್ತೆ ಮಧ್ಯದಲ್ಲಿ ಜೇಬಲ್ಲಿದ್ದ ಹಣವನ್ನೆಲ್ಲಾ ದಾನ ಮಾಡಿದ ಸ್ಯಾಂಡಲ್‌ವುಡ್ ನಟ!...

ಸುಡು ಬಿಸಿಲಿನಲ್ಲಿ ಸಂಚರಿಸುತ್ತಿದ್ದ ಹಿರಿಯ ವ್ಯಕ್ತಿಯನ್ನು ಕಂಡು ಜೇಬಲ್ಲಿದ್ದ ಹಣವನ್ನೆಲ್ಲಾ ದಾನ ಮಾಡಿದ್ದಾರೆ ಹ್ಯಾಟ್ರಿಕ್ ಹೀರೋ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

9) ಮುಚ್ಚುತ್ತಾ ಬಿಎಸ್‌ಎನ್‌ಎಲ್‌ : ಇಲ್ಲಿದೆ ಸ್ಪಷ್ಟನೆ ?

ಬಿಎಸ್‌ಎನ್‌ಎಲ್‌ ಮುಚ್ಚುವ ಬಗ್ಗೆ ಹರಡುತ್ತಿರುವ ವದಂತಿಗಳು ಸತ್ಯಕ್ಕೆ ದೂರ ಎಂದು ಬಿಎಸ್‌ಎನ್‌ಎಲ್‌ ಕರ್ನಾಟಕದ ಮುಖ್ಯ ಮಹಾವ್ಯವಸ್ಥಾಪಕ ಸುಶೀಲ್‌ ಕುಮಾರ್‌ ಮಿಶ್ರಾ ಸ್ಪಷ್ಟನೆ ನೀಡಿದ್ದಾರೆ.

10) ಟ್ಯಾಕ್ಸ್ ರಿಫಂಡ್ ಸ್ಟೇಟಸ್ ತಿಳಿಯೋದು ಹೀಗೆ: ಒಂದು ಕ್ಲಿಕ್‌ನ ಸೇವೆ ನಿಮಗೆ!

ಆದಾಯ ತೆರಿಗೆ ಸಲ್ಲಿಕೆ ಪ್ರಕ್ರಿಯೆ ಮುಗಿಯುತ್ತಾ ಬಂದಿದ್ದು, ವೈಯಕ್ತಿಕ ಆದಾಯ ತೆರಿಗೆ ಸಲ್ಲಿಕೆ ಮುಕ್ತಾಯ ಕಂಡಿದೆ. ಈ ಮಧ್ಯೆ ಐಟಿ ರಿಟರ್ನ್ಸ್  ಪ್ರಕ್ರಿಯೆಗೆ ಆದಾಯ ತೆರಿಗೆ ಇಲಾಖೆ ಮುಂದಾಗಲಿದೆ.  ಆನ್‌ಲೈನ್‌ನಲ್ಲಿ ಐಟಿಆರ್ ಮಾಹಿತಿಗಾಗಿ ನೀವು ಅನುಸರಿಸಬೇಕಾದ ಕ್ರಮಗಳು ಈ ಸುದ್ದಿಯಲ್ಲಿ ಪಟ್ಟಿ ಮಾಡಲಾಗಿದೆ.
 

click me!