DKS ಬಂಧನ, ಕನಕಪುರ ಕಂಪನ; ಬಾಲಿವುಡ್‌ನತ್ತ ಮಂದಣ್ಣ: ಇಲ್ಲಿವೆ ಸೆ.04ರ ಟಾಪ್ 10 ಸುದ್ದಿ!

By Web Desk  |  First Published Sep 4, 2019, 5:07 PM IST

ಕಾಂಗ್ರೆಸ್ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್ ಬಂಧನದ ಬಳಿಕ ದೆಹಲಿ ಮಾತ್ರವಲ್ಲ, ರಾಜ್ಯ ಕೂಡ ಹಲವು ಹೈಡ್ರಾಮಕ್ಕೆ ಸಾಕ್ಷಿಯಾಗಿದೆ. ರಾಮನಗರ ಸೇರಿದಂತೆ ಕೆಲೆವು ಪಟ್ಟಗಳು ಸಂಪೂರ್ಣ ಬಂದ್ ಆಗಿತ್ತು. ಅತ್ತ ಕೋರ್ಟ್ ಕಟಕಟೆಯಲ್ಲಿ ಡಿಕೆಶಿ ನಿಂತಿದ್ದರೆ, ಇತ್ತ ಬೆಂಬಲಿಗರು ಬೀದಿಗಿಳಿದು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ರಾಜಕೀಯದ ಹೈಡ್ರಾಮದ ಬೆನ್ನಲ್ಲೇ ಸ್ಯಾಂಡಲ್‌‌ವುಡ್ ನಟಿ ರಶ್ಮಿಕಾ ಮಂದಣ್ಣ ಸದ್ದಿಲ್ಲದೆ ಬಾಲಿವುಡ್ ನಟನ ಜೊತೆ ಡುಯೆಟ್ ಹಾಡಲು ಸಜ್ಜಾಗಿದ್ದಾರೆ. ಡಿಕೆಶಿ ಬಂಧನ ಬಿಸಿ, ಮಂದಣ್ಣಾ ಬಾಲಿವುಡ್ ಎಂಟ್ರಿ ಜೊತೆಗೆ ವಾಹನದ ಮೇಲೆ ಜಾತಿ, ಧರ್ಮ, ರಾಜಕೀಯದ ಸ್ಟಿಕ್ಕರ್ ಹಾಕಿದವರಿಗೂ ಬಿಸಿ ಮುಟ್ಟಿದೆ. ಬ್ರೇಕಿಂಗ್ ನ್ಯೂಸ್ ಜೊತೆಗೆ  ಹಲವು ಶಾಕಿಂಗ್ ನ್ಯೂಸ್ ಇಂದು ಸಂಚಲನ ಮೂಡಿಸಿತು. ಸೆಪ್ಟೆಂಬರ್ 4 ರ ಟಾಪ್ 10 ಸುದ್ದಿಗಳು ಇಲ್ಲಿವೆ.


1 ED ವಶದಲ್ಲಿ ಡಿಕೆಶಿ: ನಾಲ್ವರು ಆಪ್ತರು ನಾಪತ್ತೆ?


ಹವಾಲಾ ಪ್ರಕರಣದಲ್ಲಿ ಕಾಂಗ್ರೆಸ್ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್‌ರನ್ನು ಜಾರಿ ನಿರ್ದೇಶನಾಲಯ (ED) ಬಂಧಿಸಿದೆ. ಅತ್ತ ಡಿಕೆಶಿ ಬಂಧನವಾಗುತ್ತಿದ್ದಂತೆ ಇತ್ತ ಅವರ ನಾಲ್ವರು ಆಪ್ತರು ನಾಪತ್ತೆಯಾಗಿದ್ದಾರೆಂದು ತಿಳಿದು ಬಂದಿದೆ. ED ವಿಚಾರಣೆ ನಡೆಸುತ್ತಿದ್ದಂತೆ, ಡಿಕೆಶಿ ಆಪ್ತರು ಕಾಣೆಯಾಗಿರುವು ಹಿಂದಿನ ಕಾರಣಗಳು ಬಲು ರೋಚಕ.

Tap to resize

Latest Videos

undefined


2 ಡಿಕೆಶಿ ಬಂಧನ: ಬಸ್‌ಗೆ ಬೆಂಕಿ.. ಯಾವ ರಸ್ತೆಗಳು ಬಂದ್?

ಅತ್ತ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಡಿ ಡಿಕೆ ಶಿವಕುಮಾರ್ ಅವರ ಬಂಧನ ಮಾಡಿದ್ದರೆ ಇತ್ತ ಕರ್ನಾಟಕದ ಕೆಲವು ಭಾಗದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗುತ್ತಿದೆ. ಕಾರ್ಯಕರ್ತರು, ಬೆಂಬಲಿಗರ ಪ್ರತಿಭಟನೆಗೆ ಹಲವು ದಾರಿಗಳು ಬಂದ್ ಆಗಿವೆ.

3 ಕ್ಯಾಮೆರಾ ಮುಂದೆಯೇ ಆಪ್ತನಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಕಪಾಳಮೋಕ್ಷ!

ಡಿ.ಕೆ. ಶಿವಕುಮಾರ್ ಬಂಧನ ಕಾಂಗ್ರೆಸ್ ನಾಯಕರನ್ನು ಕೆರಳಿಸಿದೆ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಂಬಂತೆ, ಈ ಸಂದರ್ಭದಲ್ಲಿ ಸಿದ್ದರಾಮಯ್ಯಗೆ ಸಿಟ್ಟು ಬಂದರೆ ಯಾರ್ಯಾರೋ ಪೆಟ್ಟು ತಿನ್ನಬೇಕು! ಮೈಸೂರಿಗೆ ಬಂದಿಳಿದ ಸಿದ್ದರಾಮಯ್ಯ ಕ್ಯಾಮೆರಾ ಮುಂದೆಯೇ ಅಪ್ತನೊಬ್ಬನಿಗೆ ಕಪಾಳ ಮೋಕ್ಷ ಮಾಡಿ, ದೂರ ತಳ್ಳಿದ್ದಾರೆ.
 
4 ಉತ್ತರ ಪ್ರದೇಶ ಕ್ರಿಕೆ​ಟ್‌ ತಂಡಕ್ಕೆ ಕನ್ನಡಿಗ ಸುನಿಲ್ ಜೋಶಿ ಕೋಚ್‌


ರ್ನಾಟಕ ರಣಜಿ ತಂಡದ ಮಾಜಿ ನಾಯಕ ಸುನಿಲ್‌ ಜೋಶಿ, 2019-20ರ ಸಾಲಿನ ದೇಸಿ ಋುತು​ವಿ​ನಲ್ಲಿ ಉತ್ತರ ಪ್ರದೇಶದ ಕೋಚ್‌ ಆಗಿ ಕಾರ್ಯ​ನಿ​ರ್ವ​ಹಿ​ಸ​ಲಿ​ದ್ದಾರೆ. ಅವ​ರನ್ನು ಒಂದು ವರ್ಷ ಅವ​ಧಿಗೆ ಕೋಚ್‌ ಆಗಿ ನೇಮಕ ಮಾಡಿ​ಕೊಂಡಿ​ರು​ವು​ದಾಗಿ ಉತ್ತರ ಪ್ರದೇಶ ಕ್ರಿಕೆಟ್‌ ಸಂಸ್ಥೆ ಮಂಗ​ಳ​ವಾರ ಪ್ರಕ​ಟಿ​ಸಿದೆ. 


5 ಭೂಲೋಕದ ಅಪ್ಸರೆಗೆ ಸಿಂಗಾಪುರ್ ನಲ್ಲಿ ರೆಡಿಯಾಯ್ತು ಮೇಣದ ಪ್ರತಿಮೆ!

 

ಬಾಲಿವುಡ್ ಎಂದೂ ಮರೆಯಲಾಗದ ನಟಿ, ಭೂ ಲೋಕದ ಅಪ್ಸರೆ ಶ್ರೀದೇವಿ ಜನಮಾನಸದಲ್ಲಿ ಯಾವತ್ತಿಗೂ ಉಳಿಯುವ ನಟಿ. ಆಕೆಯ ಸ್ಮರಣಾರ್ಥ ಸಿಂಗಾಪೂರ್ ನಲ್ಲಿ ಮೇಣದ ಪ್ರತಿಮೆಯೊಂದನ್ನು ನಿರ್ಮಿಸಲಾಗಿದೆ. 


6 ಬಾಲಿವುಡ್ ಚಾಕಲೇಟ್ ಬಾಯ್ ಜೊತೆ ರಶ್ಮಿಕಾ ಮಂದಣ್ಣ?

ಸ್ಯಾಂಡಲ್ ವುಡ್ ಕ್ರಶ್ ರಶ್ಮಿಕಾ ಮಂದಣ್ಣ ಸ್ಯಾಂಡವುಡ್ ಆಯ್ತು, ಟಾಲಿವುಡ್ ಆಯ್ತು ಈಗ ಬಾಲಿವುಡ್ ನಲ್ಲಿ ಹವಾ ಎಬ್ಬಿಸಲು ಹೊರಟಿದ್ದಾರೆ ರಶ್ಮಿಕಾ ಮಂದಣ್ಣ.  ಬಾಲಿವುಡ್ ಚಾಕಲೇಟ್ ಬಾಯ್ ಶಾಹಿದ್ ಕಪೂರ್ ಜೊತೆ ರಶ್ಮಿಕಾ ನಟಿಸುತ್ತಾರೆ ಎನ್ನುವ ಮಾತು ಕೇಳಿ ಬಂದಿದೆ. 


7 ಸ್ಯಾಂಡಲ್‌ವುಡ್ ನೆನಪುಗಳ ಮೆಲುಕುಗಳೊಂದಿಗೆ ಅನಂತ್ ನಾಗ್ 71 ರ ಸಂಭ್ರಮ!

ಕನ್ನಡ ಚಿತ್ರರಂಗ ಕಂಡ ಮೇರು ನಟ, ರಾಜಕಾರಣಿ ಅನಂತ್ ನಾಗ್ ಇಂದಿಗೆ 71 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಸಹಜವಾದ ನಟನೆ, ಸ್ಪಷ್ಟವಾದ ಕನ್ನಡ, ಸುಲಲಿತವಾಗಿ ಹೇಳುವ ಡೈಲಾಗ್, ವಿಭಿನ್ನವಾದ ಮ್ಯಾನರಿಸಂನಿಂದ ಪ್ರೇಕ್ಷಕರಿಗೆ ಹತ್ತಿರವಾದ ನಾಯಕ ನಟ. ಈ ಸಂದರ್ಭದಲ್ಲಿ ಅವರ ಅಪರೂಪದ ಫೋಟೋಗಳ ಜೊತೆ ನೆನಪುಗಳ ಮೆಲುಕು. 

8 ಫೇಸ್ ಬುಕ್ ನಲ್ಲಿ ಇನ್ನು ಮುಂದೆ ಲೈಕ್ ಗಳು ಕಾಣಿಸೋದಿಲ್ಲ?

ಫೇಸ್ ಬುಕ್ ನಲ್ಲಿ ಇನ್ನು ಮುಂದೆ ಲೈಕುಗಳನ್ನು ತೆಗೆಯುವ ಸಾಧ್ಯತೆ ಇದೆ. ಲೈಕುಗಳನ್ನು ನೋಡಿ ಬಳಕೆದಾರರು ಮಾನಸಿಕ ಖಿನ್ನತೆಗೊಳಗಾಗುವುದನ್ನು ತಡೆಗಟ್ಟಲು ಫೇಸ್ ಬುಕ್ ಈ ನಿರ್ಧಾರ ತೆಗೆದುಕೊಂಡಿದೆ. 


9 ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ; ಇನ್ಮುಂದೆ ಕಾಯಬೇಕಿಲ್ಲ ಆಟೋ, ಟ್ಯಾಕ್ಸಿ !

ಮೆಟ್ರೋ ಪ್ರಯಾಣಿಕರು ಮನೆಯಿಂದ ಸ್ಟೇಶನ್‌ಗೆ, ಮೆಟ್ರೋ ಇಳಿದ ಬಳಿಕ ಕಚೇರಿ, ಮನೆ ಸೇರಿದಂತೆ ತಮ್ಮ ತಮ್ಮ ಅವಶ್ಯಕತೆಗಳಿಗೆ ತೆರಳು ಇನ್ಮುಂದೆ ಆಟೋ, ಟ್ಯಾಕ್ಸಿಗೆ ಕಾಯಬೇಕಿಲ್ಲ. ಪ್ರಯಾಣಿಕರಿಗೆ ಹೊಸ ಸೇವೆ ಆರಂಭವಾಗುತ್ತಿದೆ. 

10 ವಾಹನದ ಮೇಲೆ ಧರ್ಮ, ಜಾತಿ, ರಾಜಕೀಯ ಸ್ಟಿಕ್ಕರ್; ಬೀಳುತ್ತೆ ಬಾರಿ ದಂಡ!

ವಾಹನದ ಮೇಲೆ ಸ್ಟಿಕ್ಕರ್ ಅಥವಾ ಬರಹಗಳನ್ನು ಅಂಟಿಸುವುದು ಭಾರತದಲ್ಲಿ ಟ್ರೆಂಡ್.  ಖಾಸಗಿ ವಾಹನವಾಗಲಿ, ಕ್ಯಾಬ್ ಆಗಲಿ, ಕಾರಿನ ಖಾಲಿ ಜಾಗದಲ್ಲಿ ಸ್ಟಿಕ್ಕರ್ ರಾರಾಜಿಸುತ್ತದೆ. ಇದೀಗ ಕಾರು ಸೇರಿದಂತೆ ಯಾವುದೇ ವಾಹನದಲ್ಲಿ ಸ್ಟಿಕ್ಕರ್ ಅಂಟಿಸಿದರೆ ಬಾರಿ ದಂಡ ಕಟ್ಟಬೇಕು.

click me!