81 ಸಾವಿರ ಗಡಿ ದಾಟಿದ ಕೊರೋನಾ, ಮಾಜಿ ಡಾನ್ ಮುತ್ತಪ್ಪ ರೈ ನಿಧನ; ಮೇ.15ರ ಟಾಪ್ 10 ಸುದ್ದಿ!

Suvarna News   | Asianet News
Published : May 15, 2020, 05:25 PM IST
81 ಸಾವಿರ ಗಡಿ ದಾಟಿದ ಕೊರೋನಾ, ಮಾಜಿ ಡಾನ್ ಮುತ್ತಪ್ಪ ರೈ ನಿಧನ; ಮೇ.15ರ ಟಾಪ್ 10 ಸುದ್ದಿ!

ಸಾರಾಂಶ

ಭಾರತದಲ್ಲಿ ಕೊರೋನಾ ವೈರಸ್ ಹರಡುವಿಕೆ ತೀವ್ರವಾಗುತ್ತಿದೆ. ಇಂದು 3731 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಭಾರತದಲ್ಲಿ ಸೋಂಕಿತರ ಸಂಖ್ಯೆ 81634ಕ್ಕೇರಿಕೆಯಾಗಿದೆ. ಕರ್ನಾಟಕದಲ್ಲಿ ಒಂದೇ ದಿನ 45 ಕೇಸ್ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ ಸಾವಿರ ಗಡಿ ದಾಟಿದೆ. ಕೊರೋನಾ ಕಾರಣದಿಂದ ರಾಷ್ಟ್ರಪತಿ ರಾಮನಾಥ್ ಕೋವಿಂದ್  ಖರ್ಚು ವೆಚ್ಚ ಕಡಿಮೆ ಮಾಡಿದ್ದಾರೆ. ಅಮಿತಾಬ್ ಬಚ್ಚನ್ ಸಿನಿಮಾ ಇದೀಗ ಥಿಯೇಟರ್ ಬದಲು ಅಮೇಜಾನ್‌ನಲ್ಲಿ ರೀಲೀಸ್, ಮಾಜಿ ಡಾನ್ ಮುತ್ತಪ್ಪ ರೈ ನಿಧನ ಸೇರಿದಂತೆ ಮೇ.15ರ ಟಾಪ್ 10 ಸುದ್ದಿ ಇಲ್ಲಿವೆ.  

10 ಕೋಟಿ ಕಾರು, 1.5 ಲಕ್ಷ ರುಪಾಯಿ ಸಂಬಳ ಕೈಬಿಟ್ಟ ರಾಷ್ಟ್ರಪತಿ!...

ಕೊರೋನಾ ಹೋರಾಟಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಮಿತವ್ಯಯಿ ಕ್ರಮಗಳನ್ನು ಕೈಗೊಂಡಿದ್ದಾರೆ. 10 ಕೋಟಿ ರುಪಾಯಿ ಮೌಲ್ಯದ ಕಾರು ಕೊಳ್ಳುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. 

81000 ಸೋಂಕಿತರು: ಚೀನಾ ಹಿಂದಿಕ್ಕುವತ್ತ ಭಾರತ! ಒಂದೇ ದಿನ 99 ಸಾವು...

ದೇಶದಲ್ಲಿ ಕೊರೋನಾ ವೈರಸ್‌ ಅಬ್ಬರ ಮುಂದುವರಿದಿದ್ದು, ಗುರುವಾರ ಹೊಸದಾಗಿ 3731 ಮಂದಿಯಲ್ಲಿ ಸೋಂಕು ಕಂಡುಬಂದಿದೆ. ಇದರೊಂದಿಗೆ ವೈರಸ್‌ಪೀಡಿತರ ಸಂಖ್ಯೆ 80 ಸಾವಿರದ ಗಡಿ ದಾಟಿ 81634ಕ್ಕೇರಿಕೆಯಾಗಿದೆ.


ಮಾಜಿ ಡಾನ್, ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಮುತ್ತಪ್ಪ ರೈ ನಿಧನ...

ಒಂದು ಕಾಲದಲ್ಲಿ ಭೂಗತ ಲೋಕವನ್ನು ಆಳಿ, ನಂತರ ಜಯ ಕರ್ನಾಟಕ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಮುತ್ತಪ್ಪ ರೈ ಕೊನೆಯುಸಿರೆಳೆದಿದ್ದಾರೆ. 

ಎಸ್ಸೆಸ್ಸೆಲ್ಸಿ ಪರೀಕ್ಷೆ, ದಿನಾಂಕ, ವೇಳಾಪಟ್ಟಿ: ಅಂತಿಮ ನಿರ್ಧಾರ ಪ್ರಕಟಿಸಿದ ಸುರೇಶ್ ಕುಮಾರ್...

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಸೋಮವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದು, ಪರೀಕ್ಷೆ ನಡೆಸುವ ಬಗ್ಗೆ ಅಂದು ತೀರ್ಮಾನ ನಡೆಸಲಾಗುವುದು ಎಂದು ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು. 

ಸೋಮವಾರದಿಂದ ವಿಮಾನ ಸಂಚಾರ ಆರಂಭ?...

ಮೂರನೇ ಹಂತದ ಲಾಕ್‌ಡೌನ್‌ ಭಾನುವಾರ ಮುಕ್ತಾಯವಾಗಲಿದ್ದು, ಸೋಮವಾರದಿಂದ ಜಾರಿಗೆ ಬರಲಿರುವ ಲಾಕ್‌ಡೌನ್‌ 4.0 ವೇಳೆ ದೇಶೀಯ ವಿಮಾನಗಳ ಸಂಚಾರ ಸೀಮಿತ ಪ್ರಮಾಣದಲ್ಲಿ ಆರಂಭವಾಗುವ ಸಾಧ್ಯತೆ ಇದೆ. 

ಅಯ್ಯಯೋ ಸನ್ನಿ ಲಿಯೋನ್ ಐಷಾರಾಮಿ ಬಂಗ್ಲೆ ನೋಡಿ; ಕಳೆದೋಗ್ತೀರಾ!...

ಬಾಲಿವುಡ್‌ ಸುಂದರಿ, ಪೋರ್ನ್‌ ನಟಿ ಸನ್ನಿಲಿಯೋನ್ ದಿನೇ ದಿನೇ  ಕೊರೋನಾ ಕಾಟ ಹೆಚ್ಚಾಗುತ್ತಿದ್ದಂತೆ ಮಕ್ಕಳನ್ನು ತಮ್ಮ ತವರೂರಾದ ಲಾಸ್‌ ಏಂಜಲ್ಸ್‌ಗೆ ಕರೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲೂ ಹೇಳಿಕೊಂಡಿದ್ದಾರೆ. 

ಅಮಿತಾಭ್‌ ಸಿನಿಮಾ ಥಿಯೇಟರ್‌ ಬದಲು ಅಮೆಜಾನಲ್ಲಿ ರಿಲೀಸ್‌!

ಕೊರೋನಾ ಲಾಕ್‌ಡೌನ್‌ನಿಂದಾಗಿ ದೇಶಾದ್ಯಂತ ಚಿತ್ರಮಂದಿರಗಳು ಬಂದ್‌ ಆಗಿರುವುದರಿಂದ ಅಮಿತಾಭ್‌ ಬಚ್ಚನ್‌ ಮತ್ತು ಆಯುಷ್ಮಾನ್‌ ಖುರಾನಾ ಸಿನಿಮಾ ಅಮೇಜಾನ್‌ ಪ್ರೈಮ್‌ನಲ್ಲಿ ರಿಲೀಸ್‌ ಆಗುತ್ತಿದೆ.

ಹಲವು ವಿಶೇಷತೆಗಳೊಂದಿಗೆ BS6 ದಟ್ಸನ್ ಗೋ & ಗೋ+ ಕಾರು ಬಿಡುಗಡೆ!...

ಈಗ ಖರೀದಿ, 2021ರಲ್ಲಿ ಹಣ ಪಾವತಿ ಸ್ಕೀಮ್‌ನೊಂದಿಗೆ ದಾಟ್ಸನ್ ಮತ್ತೆ ಮಾರುಕಟ್ಟೆ ಪ್ರವೇಶಿಸುತ್ತಿದೆ. ಲಾಕ್‌ಡೌನ್, ವೇತನ  ಕಡಿಗಳನ್ನು ಅರಿತಿರುವ ದಾಟ್ಸನ್ ಕಾರು ಕಂಪನಿ ಇದೀಗ ದಟ್ಸನ್ ಗೋ & ಗೋ+ ಕಾರು ಬಿಡುಗಡೆ ಮಾಡಿದೆ. ನೂತನ ಕಾರಿನ ವಿಶೇಷತೆ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.

ಕೊರೋನಾ ಫೇಕ್‌ನ್ಯೂಸ್ ಗೆ ವಾಟ್ಸ್ಆ್ಯಪ್ ಚಾಟ್‌ಬಾಟ್ ಬ್ರೇಕ್!...

ಫೇಕ್‌ನ್ಯೂಸ್ ವಿರುದ್ಧ ವಾಟ್ಸ್ಆ್ಯಪ್ ವಾರ್ ಶುರು ಮಾಡಿದೆ. ಕೋವಿಡ್-19 ಸಂದರ್ಭದಲ್ಲಿ ಪ್ರಪಂಚದಾದ್ಯಂತ ಸುಳ್ಳುಗೋಪುರಗಳನ್ನು ಸತ್ಯಸಂಗತಿಗಳನ್ನೂ ನಾಚಿಸುವಂತೆ ಕಟ್ಟಿಕೊಳ್ಳತೊಡಗಿರುವ ಹಿನ್ನೆಲೆಯಲ್ಲಿ ಅವುಗಳನ್ನು ಒಂದೊಂದಾಗಿಯೇ ಕೆಡವಲು ಖೆಡ್ಡಾಗಳನ್ನು ತೋಡುತ್ತಲೇ ಇದೆ. ಈಗ ಚಾಟ್‌ಬಾಟ್‌ವೊಂದು ಸಿದ್ಧವಾಗಿದೆ. ಈಗಾಗಲೇ ಸುಳ್ಳುಕೋರರ ಮಾಹಿತಿಗಳಿಗೆ ಬ್ರೇಕ್ ಬೀಳುತ್ತಿದೆ

ಕರ್ನಾಟಕದಲ್ಲಿ ಸಾವಿರದ ಗಡಿ ದಾಟಿದೆ ಸೋಂಕಿತರ ಸಂಖ್ಯೆ; ಇಂದು 45 ಪಾಸಿಟೀವ್ ಕೇಸ್...

ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದೆ. ಸೋಂಕಿತರ ಸಂಖ್ಯೆ 1032 ಕ್ಕೆ ಏರಿಕೆಯಾಗಿದೆ. ಇಂದು ಒಂದೇ ದಿನ 45 ಪಾಸಿಟೀವ್ ಕೇಸ್‌ಗಳು ದಾಖಲಾಗಿದೆ. ಮಂಗಳೂರು- 16, ಬೆಂಗಳೂರು - 13, ಉಡುಪಿ -5, ಹಾಸನ- 3, ಬೀದರ್ - 3 ಕೇಸ್‌ಗಳು ಪತ್ತೆಯಾಗಿದೆ. ದುಬೈನಿಂದ ಉಡುಪಿಗೆ 52 ಮಂದಿ ಪ್ರಯಾಣಿಕರು ಬಂದಿದ್ದರು. ಅವರಲ್ಲಿ 5 ಮಂದಿಗೆ ಸೋಂಕು ದೃಢಪಟ್ಟಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ
ಏರಿಕೆಯಾಗ್ತಿರೋ ಚಿನ್ನವನ್ನು ಲಾಭದಾಯಕವಾಗಿ ಹೇಗೆ ಖರೀದಿಸಬೇಕು? ತಜ್ಞರ ಸಲಹೆ