ಕಾಂಗ್ರೆಸ್ ಪಕ್ಷಕ್ಕೆ ಖಡಕ್ ಸಂದೇಶ, ಮರೆಯಾಯ್ತು ಟೀಂ ಇಂಡಿಯಾ ಹರ್ಷ; ಮಾ.12ರ ಟಾಪ್ 10 ಸುದ್ದಿ!

Suvarna News   | Asianet News
Published : Mar 12, 2020, 05:55 PM IST
ಕಾಂಗ್ರೆಸ್ ಪಕ್ಷಕ್ಕೆ ಖಡಕ್ ಸಂದೇಶ, ಮರೆಯಾಯ್ತು ಟೀಂ ಇಂಡಿಯಾ ಹರ್ಷ; ಮಾ.12ರ ಟಾಪ್ 10 ಸುದ್ದಿ!

ಸಾರಾಂಶ

ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ ಪಕ್ಷ ತೊರೆದು ಬಿಜೆಪಿ ಸೇರಿದ ಬೆನ್ನಲ್ಲೇ, ರಾಜಸ್ಥಾನ ಉಪಮುಖ್ಯಮಂತ್ರಿ, ಕಾಂಗ್ರೆಸ್ ಯುವ ನಾಯಕ ಸಚಿನ್ ಪೈಲೆಟ್ ಪಕ್ಷಕ್ಕೆ ಖಡಕ್ ಸಂದೇಶ ರವಾನಿಸಿದ್ದಾರೆ. ರಾಜಕೀಯ ಚಟುವಟಿಕೆಗಿಂತೆ ದೇಶದಲ್ಲಿ ಕೊರೋನಾ ವೈರಸ್ ಹೆಚ್ಚು ಸದ್ದು ಮಾಡುತ್ತಿದೆ. ವೈರಸ್‌ನಿಂದ  ಭಾರತದ ಎಲ್ಲಾ ವೀಸಾ ಅಮಾನತು ಮಾಡಲಾಗಿದೆ. ಇತ್ತ ಭಾರತ-ಸೌತ್ ಆಫ್ರಿಕಾ ಮೊದಲ ಏಕದಿನ ಪಂದ್ಯದಲ್ಲಿ ಮಳೆ ಆರ್ಭಟವೇ ಹೆಚ್ಚಾಯಿತು. ಶ್ರೀರಾಮುಲುಗೆ ನಕಲಿ ಟ್ವೀಟ್ ಸಂಕಟ ಸೇರಿದಂತೆ ಮಾರ್ಚ್ 12ರ ಟಾಪ್ 10 ಸುದ್ದಿ ಇಲ್ಲಿವೆ. 

ಸಿಂಧಿಯಾ ಕಾಂಗ್ರೆಸ್ ಬಿಟ್ಟ ಬೆನ್ನಲ್ಲೇ ಪಕ್ಷಕ್ಕೆ ಖಡಕ್ ಸಂದೇಶ ಕೊಟ್ಟ ಪೈಲಟ್!

 ಕಾಂಗ್ರೆಸ್ ದಿಗ್ಗಜ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಪಕ್ಷ ತೊರೆದು ಕಮಲ ಪಾಳಯಕ್ಕೆ ಸೇರ್ಪಡೆಗೊಂಡಿದ್ದಾರೆ. ಹೀಗಿರುವಾಗ ರಾಜಸ್ಥಾನದ ಉಪ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಯುವ ನಾಯಕ ಸಚಿನ್ ಪೈಲಟ್, ಸಿಂಧಿಯಾ ಪಕ್ಷದಿಂದ ಬೇರ್ಪಟ್ಟಿರುವುದು ಬಹಳ ದುಃಖಕರ ವಿಚಾರ ಎಂದು ಕಾಂಗ್ರೆಸ್ ಖಡಕ್ ಸಂದೇಶ ರವಾನಿಸಿದ್ದಾರೆ.


ಶ್ರೀರಾಮುಲು ಹೆಸರಲ್ಲಿ ನಕಲಿ ಟ್ವೀಟ್: ಪೊಲೀಸ್ ಮೊರೆ ಹೋದ ಹೆಲ್ತ್ ಮಿನಿಸ್ಟರ್

ಕೊರೋನಾ ಮಹಾಮಾರಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಇಲ್ಲಸಲ್ಲದ ಸುಳ್ಳು ಸುದ್ದಿಗಳು ಸುಳಿದಾಡುತ್ತಿವೆ. ಇನ್ನುಇದೇ ಕೊರೋನಾ ವೈರಸ್‌ಗೆ ಸಂಬಂಧಿಸಿದಂತೆ ಶ್ರೀರಾಮುಲು ಹೆಸರಲ್ಲಿ ನಕಲಿ ಟ್ವೀಟ್‌ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಬೆಂಗಳೂರು ಪೊಲೀಸ್‌ ಕಮಿಷನರ್‌ಗೆ ರಾಜ್ಯ ಆರೋಗ್ಯ ಸಚಿವರು ಮನವಿ ಮಾಡಿದ್ದಾರೆ. 

ಕೊರೋನಾ ಭೀತಿ: ಭಾರತದ ಎಲ್ಲಾ ವೀಸಾ ಅಮಾನತು!

ಕೊರೋನಾ ವೈರಸ್‌ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಹೊಸ ಪ್ರವಾಸಿ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ರಾಜತಾಂತ್ರಿಕ, ಸರ್ಕಾರಿ, ವಿಶ್ವಸಂಸ್ಥೆ/ಅಂತಾರಾಷ್ಟ್ರೀಯ ಸಂಸ್ಥೆಗಳು, ಯೋಜನಾ ವೀಸಾ ಹೊರತುಪಡಿಸಿ ಮಿಕ್ಕೆಲ್ಲ ವೀಸಾಗಳನ್ನು ಏಪ್ರಿಲ್‌ 15ರವರೆಗೆ ಅಮಾನತುಗೊಳಿಸಿದೆ. ಮಾಚ್‌ರ್‍ 13ರಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ.

ದೆಹಲಿ ಹಿಂಸಾಚಾರ ಪೂರ್ವನಿಯೋಜಿತ!

ದಿಲ್ಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ಹಿಂಸಾಚಾರದಲ್ಲಿ ಯಾರೇ ಭಾಗಿಯಾಗಿರಲಿ, ಅವರು ಯಾವುದೇ ಪಕ್ಷ ಮತ್ತು ಜಾತಿ-ಧರ್ಮಕ್ಕೆ ಸೇರಿದವರಗಿರಲಿ. ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು.

INDvsSA ಏಕದಿನ ಪಂದ್ಯಕ್ಕೆ ಮಳೆ ಅಡ್ಡಿ: ಪಂದ್ಯ ನಡೆಯುತ್ತಾ? ಗೊಂದಲಕ್ಕೆ ಇಲ್ಲಿದೆ ಉತ್ತರ!...

ಭಾರತ ಹಾಗೂ ಸೌತ್ ಆಫ್ರಿಕಾ ಏಕದಿನ ಸರಣಿಯ ಮೊದಲ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ನಿರಂತರ ಸುರಿದ ಮಳೆಯಿಂದ ಮೈದಾನ ಸಂಪೂರ್ಣ ಒದ್ದೆಯಾಗಿದೆ. 1 ಗಂಟೆಗೆ ನಡೆಯಬೇಕಿದ್ದ ಟಾಸ್ ಪ್ರಕ್ರಿಯೆ ಇದೀಗ ವಿಳಂಭವಾಗಿದೆ. ಸದ್ಯ ಅಭಿಮಾನಿಗಳಲ್ಲಿ ಪಂದ್ಯ ನಡೆಯುತ್ತಾ ಅಥವಾ ರದ್ದಾಗುತ್ತಾ ಅನ್ನೋ ಗೊಂದಲಕ್ಕೆ ಇಲ್ಲಿದೆ ಉತ್ತರ.

ಶರ್ಟ್ ಬಿಚ್ಚಿ ಪೋಸ್ ಕೊಟ್ಟ ಡೆಂಟಿಸ್ಟ್; ಇದು ಮಾಯಾ ನಗರಿಯ ಕೈವಾಡ!

'ರಾಂಚಿ ಡೈರೀಸ್‌ ' ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ದಿಲ್ಲಿ ಹುಡುಗಿ ಸೌಂದರ್ಯಾ ಶರ್ಮಾ ಈಗಾ ಸೋಷಿಯಲ್‌ ಮೀಡಿಯಾ ಸೆನ್ಸೇಷನ್ ಕ್ವೀನ್‌ ಆಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಸೌಂದರ್ಯಾ ಶೇರ್ ಮಾಡಿಕೊಂಡಿರುವ ಫೋಟೋಗಳಿಗೆ ಲಕ್ಷಾಂತರ ಮೆಚ್ಚುಗೆ ಹಾಗೂ ಕಮೆಂಟ್ ಬರುತ್ತಿದೆ.

ದುಗ್ಗಮ್ಮನ ಜಾತ್ರೆಗಷ್ಟೇ ಏಕೆ ಪ್ರಾಣಿ ಬಲಿ ತಡೆಯೋದು? : ಮುತಾಲಿಕ್

ಹಿಂದುಗಳ ಜಾತ್ರೆ, ಸಂಸ್ಕೃತಿ, ಸಂಪ್ರದಾಯ, ಆಚರಣೆಗಳಿಗಷ್ಟೇ ಕಡಿವಾಣ ಹಾಕುವುದಲ್ಲ, ಬಕ್ರೀದ್‌ ಸೇರಿದಂತೆ ಎಲ್ಲಾ ಧರ್ಮೀಯರ ಹಬ್ಬ-ಆಚರಣೆಗಳಲ್ಲೂ ಪ್ರಾಣಿ ಬಲಿ ತಡೆಯುವ ಕೆಲಸವಾಗಬೇಕು ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್‌ ಒತ್ತಾಯಿಸಿದರು.

ಕೊರೋನಾ ವೈರಸ್; ಹಲಸಿನ ಹಣ್ಣಿಗೆ ಬೇಡಿಕೆ, ಕೋಳಿ ಬೆಲೆ ಪಾತಾಳಕ್ಕೆ!

ಕೊರೋನಾ ವೈರಸ್ ಹರಡುತ್ತಿರುವ ಕಾರಣ  ಬಹುತೇಕ ವ್ಯವಹಾರಗಳು ಬಂದ್  ಆಗಿವೆ. ಇನ್ನು ಕೋಳಿ ಮಾಂಸದಿಂದ ಕೊರೋನಾ ಹರಡುತ್ತಿದೆ ಅನ್ನೋ ವದಂತಿ ಬೆನ್ನಲ್ಲೋ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಜನರು ಕೋಳಿ ಮಾಂಸ ತ್ಯಜಿಸಿ ಸಸ್ಯಾಹಾರಿಗಳಾಗಿದ್ದಾರೆ. ಇತ್ತ ಹಲಸಿನ ಹಣ್ಣಿಗೆ ಭಾರಿ ಬೇಡಿಕೆ ನಿರ್ಮಾಣವಾಗಿದೆ.

ನಿನ್ ಹತ್ರ ಬೈಕ್ ಇಲ್ಲ, ನಡ್ಕೊಂಡ್ ನಾ ಬರಲ್ಲ; ಗರ್ಲ್‌ಫ್ರೆಂಡ್‌ ಮಾತಿಗೆ 8 ಬೈಕ್ ಕದ್ದ!

ನಿಯತ್ತಾಗಿ ದುಡಿಯದೆ ಸುಲಭವಾಗಿ ಹಣಗಳಿಸಬೇಕು ಅನ್ನೋದು ಕಳ್ಳರ ಆಲೋಚನೆ. ವಾಹನ ಕಳ್ಳರ ಲೆಕ್ಕಾಚಾರ ಕೂಡ ಇದಕ್ಕೆ ಹೊರತಾಗಿಲ್ಲ. ಆದರೆ ಇಲ್ಲೊಂದು ಬೈಕ್ ಕಳ್ಳನ ಪ್ರಕರಣ ವಿಚಿತ್ರವಾಗಿದೆ. ಪ್ರೀತಿಸಿದ ಹುಡುಗಿಯನ್ನು ಸುತ್ತಾಡಿಸಲು ಒಂದಲ್ಲ, ಎರಡಲ್ಲ 8 ಬೈಕ್ ಕದ್ದ ಘಟನೆ ನಡೆದಿದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ಕೇಂದ್ರಕ್ಕೆ ಇನ್ಸುಲಿನ್‌ ಒಯ್ಯಬಹುದು!

ಮಧುಮೇಹದಿಂದ ಬಳಲುತ್ತಿರುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷಾ ಕೇಂದ್ರಗಳಿಗೆ ಇನ್ಸುಲಿನ್‌ನಂತಹ ವೈದ್ಯಕೀಯ ಸಲಕರಣೆಗಳನ್ನು ಕೊಂಡೊಯ್ಯಲು ಹಾಗೂ ಶ್ರವಣದೋಷವುಳ್ಳ ವಿದ್ಯಾರ್ಥಿಗಳಿಗೆ ಸಂಜ್ಞಾ ಭಾಷೆ ಅರಿತ ವಿಶೇಷ ಶಿಕ್ಷಕರನ್ನು ಒದಗಿಸಲು ಅವಕಾಶ ಕಲ್ಪಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪೌರತ್ವ ಸಿಗುವ ಮುನ್ನವೇ ವೋಟರ್‌ ಲಿಸ್ಟ್‌ನಲ್ಲಿ ಹೆಸರು, ಸೋನಿಯಾ ಗಾಂಧಿಗೆ ನೋಟಿಸ್‌ ಕೊಟ್ಟ ದೆಹಲಿ ಕೋರ್ಟ್!
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ