ಭಯ ಬೇಡ: ಶೇ. 80 ರಷ್ಟು ಕೊರೋನಾ ರೋಗಿಗಳು ಸಾಯೋದಿಲ್ಲ!

By Kannadaprabha News  |  First Published Mar 12, 2020, 5:20 PM IST

ಕೊರೋನಾ ಬೆದ​ರಿ​ಕೆ​ಯನ್ನು ಸಮ​ರ್ಥ​ವಾಗಿ ಎದು​ರಿ​ಸಲು ಸಮನ್ವಯ ಮತ್ತು ಸಹಯೋಗ ಅತ್ಯಗತ್ಯ. ಸದ್ಯ ನಮ್ಮ ದೊಡ್ಡ ಶತ್ರು ಕರೋನಾ ವೈರಸ್‌ ಅಲ್ಲ. ಇದರ ಬಗ್ಗೆ ಉಂಟಾ​ಗಿ​ರುವ ಭಯ, ವದಂತಿಗಳು ಮತ್ತು ಕಳಂಕ.


ಚೀನಾ​ದಲ್ಲಿ ಕಳೆದ ವರ್ಷ ಡಿಸೆಂಬ​ರ್‌​ನಲ್ಲಿ ಕಾಣಿ​ಸಿ​ಕೊಂಡ ಕೊರೋ​ನಾ ಸಾಂಕ್ರ​ಮಿಕ ರೋಗವು ಜಗ​ತ್ತಿ​ನಾ​ದ್ಯಂತ ವ್ಯಾಪಿ​ಸು​ತ್ತಿದೆ. ಈ ಮಾರ​ಣಾಂತಿಕ ಸೋಂಕು ಭಾರತ ಸೇರಿ​ದಂತೆ ಈಗ ಜಗತ್ತಿನ 110 ರಾಷ್ಟ್ರ​ಗ​ಳಲ್ಲಿ ಕಂಡು​ಬಂದಿದೆ. 4000 ಕ್ಕೂ ಹೆಚ್ಚು ಜನರು ಈ ಸೋಂಕಿಗೆ ಬಲಿ​ಯಾ​ಗಿ​ದ್ದಾರೆ.

ಇದು ಈ ಹಿಂದೆ ಚೀನಾ​ದಲ್ಲಿ ಮರಣ ಮೃದಂಗ ಬಾರಿ​ಸಿದ್ದ ಸಾರ್ಸ್‌ನ ಇನ್ನೊಂದು ಭೀಕರ ರೂಪ. ಅಥವಾ ಸಾಮಾನ್ಯ ಶೀತದ ಗುಂಪಿನ ಸದ​ಸ್ಯ. ಜ್ವರ, ತಲೆ​ನೋವು, ಒಣ ಕೆಮ್ಮು ಕೋವಿ​ಡ್‌-19 ಅಥವಾ ಕೊರೋ​ನಾ​ದ ಲಕ್ಷ​ಣ​ಗಳು.

Tap to resize

Latest Videos

undefined

ಕೆಲ ರೋಗಿ​ಗ​ಳಿಗೆ ನೋವು, ಅತಿ​ಸಾರ ಕೂಡ ಇರು​ತ್ತದೆ. ಒಂದು ಒಳ್ಳೆಯ ಸುದ್ದಿ ಎಂದರೆ ಈ ರೋಗವು ಬಹು​ತೇ​ಕ​ರನ್ನು ಅಲ್ಪ​ಮ​ಟ್ಟಿಗೆ ಮಾತ್ರ ಬಾಧಿ​ಸುತ್ತದೆ. 80% ರೋಗಿ​ಗಳು ವಿಶೇಷ ಚಿಕಿತ್ಸೆಯ ಅಗತ್ಯ ಇಲ್ಲ​ದೆಯೇ ಗುಣ​ಮು​ಖ​ರಾ​ಗು​ತ್ತಾ​ರೆ.

ಒಂದೇ ನಿಮಿಷದಲ್ಲಿ ಹೀಗೆ ಮಾಸ್ಕ್ ತಯಾರಿಸಿ, ಆನಂದ್ ಮಹೀಂದ್ರಾ ಟ್ವೀಟ್ ವೈರಲ್!

ಲಸಿ​ಕೆಗೆ ಇನ್ನೂ 18 ತಿಂಗಳು ಬೇಕು

ವಯ​ಸ್ಸಾ​ದ​ವ​ರು ಮತ್ತು ಅಧಿಕ ರಕ್ತದ ಒತ್ತಡ, ಹೃದಯ ಸಮಸ್ಯೆ, ಮಧು​ಮೇಹ ಇದ್ದ​ವ​ರಿಗೆ ಇದು ಗಂಭೀರ ಕಾಯಿ​ಲೆ​ಯಾಗಿ ಪರಿ​ವ​ರ್ತ​ನೆ​ಯಾ​ಗು​ತ್ತದೆ. ಅಂಥ​ವ​ರಲ್ಲಿ 2-3% ಜನರು ಸಾವ​ನ್ನ​ಪ್ಪು​ತ್ತಾರೆ. ಇದು ಸೀಸ​ನಲ್‌ ಇನ್‌ಫ್ಲು​ಯೆಂಜಾ​ಗಿಂ​ತ ಅಲ್ಪ​ಮ​ಟ್ಟಿಗೆ ಹೆಚ್ಚಾ​ಗಿಯೇ (0.1%) ಇರು​ತ್ತದೆ. ಇದು​ವ​ರೆ​ಗಿನ ಪ್ರಕ​ರ​ಣ​ಗ​ಳಲ್ಲಿ ಮಕ್ಕ​ಳಲ್ಲಿ ಕೇವಲ 2%, ಯುವ​ಜ​ನ​ತೆ​ಯಲ್ಲಿ ಕೇವಲ 20% ಮಾತ್ರ ಈ ಸೋಂಕು ಕಂಡು​ಬಂದಿ​ದೆ.

ಈ ರೋಗಕ್ಕೆ ಇದು​ವ​ರೆಗೂ ಯಾವುದೇ ಔಷ​ಧ​ವಾ​ಗಲೀ, ಮದ್ದಾ​ಗಲೀ, ಲಸಿ​ಕೆ​ಯಾ​ಗಲೀ ಕಂಡು​ಹಿ​ಡಿ​ದಿಲ್ಲ. ಲಸಿ​ಕೆಯನ್ನು ಅಭಿ​ವೃ​ದ್ಧಿ​ಪ​ಡಿ​ಸ​ಲಾ​ಗು​ತ್ತಿದೆ. ಅದ​ರೆ ಅದು ಸಾಮಾನ್ಯ ಜನ​ರಿಗೆ ಲಭ್ಯ​ವಾ​ಗ​ಬೇ​ಕೆಂದರೆ ಕನಿಷ್ಠ 12-18 ತಿಂಗಳು ಬೇಕು. ಅನೇಕ ಪುನ​ರಾ​ವ​ರ್ತಿತ ಡ್ರಗ್‌ಗಳು (ಅಂದರೆ ಎಚ್‌​ಐವಿ, ಇನ್‌​ಫ್ಲು​ಯೆಂಜಾ ಮತ್ತಿ​ತರ ಸೋಂಕಿಗೆ ಬಳ​ಸುವ ಡ್ರಗ್‌​) ಕ್ಲಿನಿ​ಕಲ್‌ ಪರೀ​ಕ್ಷೆಗೆ ಒಳ​ಗಾ​ಗು​ತ್ತಿವೆ. ನೂತನ ಲಸಿಕೆ, ಮದ್ದು ಕಂಡು​ಹಿ​ಡಿ​ಯಲು ಭಾರತ ಸಂಶೊ​ಧ​ನೆ​ಗ​ಳಿಗೆ ಬೆಂಬಲ ನೀಡ​ಬೇಕು.

ಮುನ್ನೆ​ಚ್ಚ​ರಿ​ಕೆಯೇ ಮದ್ದು

ಸಣ್ಣ ಹನಿ​ಯಿಂದಲೂ ವೈರಸ್‌ ಹರ​ಡು​ತ್ತದೆ. ಕೊರೋನಾ ಸೋಂಕಿ​ರುವ ವ್ಯಕ್ತಿ ಸೀನಿದಾಗ, ಕೆಮ್ಮಿ​ದಾಗ ಸಣ್ಣ ಹನಿ​ಗಳು ಮೂಗು ಮತ್ತು ಬಾಯಿ​ಯಿಂದ ಹೊರ ಬರು​ತ್ತವೆ. ಅದು ಸುತ್ತ​ಮು​ತ್ತ​ಲಿ​ರುವ ವಸ್ತು​ಗಳ ಮೇಲೆ ಕೂರು​ತ್ತದೆ. ಬೇರೆ​ಯ​ವರು ಅದನ್ನು ಸ್ಪರ್ಶಿ​ಸಿ​ ತಮ್ಮ ಮೂಗು ಕಣ್ಣು ಅಥವಾ ಮುಖ ಮುಟ್ಟಿ​ಕೊ​ಂಡರೆ ಅವ​ರಿಗೂ ಸೋಂಕು ತಗು​ಲು​ತ್ತದೆ.

ಅದೃ​ಷ್ಟ​ವ​ಶಾತ್‌ ಜನರು ಸೋಂಕಿ​ನಿಂದ ಪಾರಾ​ಗಲು ಹಲವು ಮಾರ್ಗೋ​ಪಾ​ಯ​ಗ​ಳಿವೆ. ಅದ​ರಲ್ಲಿ ಎಲ್ಲ​ದ​ಕ್ಕಿಂತ ಮುಖ್ಯ​ವಾ​ದುದು ಕೈಗ​ಳನ್ನು ಶುಚಿ​ಯಾ​ಗಿ​ಟ್ಟು​ಕೊ​ಳ್ಳು​ವುದು. ಜನರು ತಮ್ಮ ಕೈಗ​ಳನ್ನು ಕನಿಷ್ಠ 20-30 ಸೆಕೆಂಡು​ಗಳ ಕಾಲ ಸೋಪು ಹಾಕಿ ಶುಚಿ​ಗೊ​ಳಿ​ಸ​ಬೇಕು. ಎರ​ಡ​ನೆ​ಯದು ನೀರು ಲಭ್ಯ​ವಿ​ಲ್ಲ​ದಿ​ದ್ದಾಗ ಆಲ್ಕೋ​ಹಾಲ್‌ ಆಧಾ​ರಿತ ಸ್ಯಾನಿ​ಟೈ​ಸರ್‌ ಬಳ​ಸ​ಬ​ಹುದು. ಹಾಗೆಯೇ ಕೆಮ್ಮು ಅಥವಾ ಸೀನು​ವ​ವ​ರಿ​ಂದ ಒಂದು ಮೀಟರ್‌ ಅಂತರ ಕಾಯ್ದು​ಕೊಳ್ಳಿ.

ಭಾರತೀಯತೆಯನ್ನು ವಿಶ್ವದಾದ್ಯಂತ ಪರಿಚಯಿಸಿದ ಕೊರೋನಾ

ಮೂಗು, ಕಣ್ಣು ಮತ್ತು ಬಾಯಿ​ಯನ್ನು ಪದೇ ಪದೇ ಮುಚ್ಚಿ​ಕೊ​ಳ್ಳ​ದಿರಿ. ಕೆಮ್ಮು​ವಾಗ ಟಿಶ್ಯು, ಕರ್ಚೀಫ್‌ ಬಳ​ಸಿ. ಬ​ಳ​ಸಿದ ಟಿಶ್ಶು​ವನ್ನು ಕೂಡಲೇ ಮನೆ​ಯಿಂದ ಆಚೆ ಹಾಕಿ. ಇನ್ನು ಅನಾ​ರೋಗ್ಯ ಇರು​ವ​ವರು ಮನೆ​ಯಲ್ಲೇ ಇರು​ವುದು ಒಳ್ಳೆ​ಯ​ದು.

ಹಾಗೆಯೇ ಯಾವುದೇ ಕಾಯಿ​ಲೆಯ ಲಕ್ಷ​ಣ​ಗಳು ಇಲ್ಲ​ದ​ವರು ಮೆಡಿ​ಕಲ್‌ ಮಾಸ್ಕ್‌ ಧರಿ​ಸುವ ಅವ​ಶ್ಯ​ಕತೆ ಇಲ್ಲ. ಆದರೆ ಕೆಮ್ಮು, ಜ್ವರ, ಶೀತದ ಲಕ್ಷಣ ಇರು​ವ​ವರು ಮತ್ತು ರೋಗಿ​ಗ​ಳ ಶುಶ್ರೂಷೆ ಮಾಡು​ವ​ವರು ಮಾಸ್ಕ್‌ ಧರಿ​ಸ​ಲೇ​ಬೇ​ಕು. ಜಗ​ತ್ತಿ​ನಾ​ದ್ಯಂತ ಮೆಡಿ​ಕಲ್‌ ಮಾಸ್ಕ್‌, ಗ್ಲೌಸ್‌, ಗೌನ್‌​ಗಳು ಸೇರಿ​ದಂತೆ ವೈಯ​ಕ್ತಿಕ ರಕ್ಷಣಾ ಸಲ​ಕ​ರ​ಣೆ​ಗ​ಳ ಕೊರತೆ ಉಂಟಾ​ಗು​ರು​ವುದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ತೀವ್ರ ಕಳ​ವಳ ವ್ಯಕ್ತ​ಪ​ಡಿ​ಸು​ತ್ತಿ​ದೆ. ಜನರು ಭಯ​ಭೀ​ತ​ರಾಗಿ ಖರೀ​ದಿ​ಯಲ್ಲಿ ಮುಗಿ​ಬಿ​ದ್ದಿ​ರು​ವು​ದ​ರಿಂದ ಈ ಎಲ್ಲ ವಸ್ತು​ಗ​ಳ ಕೊರತೆ ಉಂಟಾ​ಗಿದೆ. ಹಾಗಾಗಿ ಪ್ರತಿ​ಯೊ​ಬ್ಬರೂ ರಾಷ್ಟ್ರೀಯ ಅಥವಾ ಸ್ಥಳೀಯ ಆರೋ​ಗ್ಯಾ​ಧಿ​ಕಾ​ರಿ​ಗಳು ನೀಡುವ ಸಲ​ಹೆ​ಗ​ಳನ್ನು ಸ್ವೀಕ​ರಿ​ಸ​ಬೇ​ಕು.

ಪ್ರಯೋ​ಗಾ​ಲ​ಯ​ಗಳೇ ನಿರ್ಣಾ​ಯ​ಕ

ಕೊರೋನಾ ಹರಡತೊಡಗಿದ ಮೇಲೆ ಜಗತ್ತಿನಾದ್ಯಂತ ಆರೋಗ್ಯ ಅಧಿ​ಕಾ​ರಿ​ಗಳು ಏನು ಮಾಡು​ತ್ತಿ​ದ್ದಾ​ರೆ?

ಭಾರತ ಸೇರಿ​ದಂತೆ ಎಲ್ಲಾ ದೇಶ​ಗಳು ರಾಷ್ಟ್ರೀಯ ಸಾರ್ವ​ಜ​ನಿಕ ಆರೋಗ್ಯ ತುರ್ತು ಸ್ಥಿತಿ ನಿರ್ವ​ಹಣೆಯನ್ನು ಸಕ್ರಿ​ಯ​ಗೊ​ಳಿಸಿವೆ. ಬಹು​ತೇಕ ದೇಶ​ಗಳು ಇನ್‌​ಫ್ಲು​ಯೆಂಜಾ ತಡೆ​ಗ​ಟ್ಟಲು ಪೂರ್ವ​ಸಿ​ದ್ಧತೆ ನಡೆ​ಸಿ​ವೆ. ಆರೋಗ್ಯ ಸಚಿವಾಲಯದ ಇಂಟಿಗ್ರೇಟೆಡ್‌ ಹೆಲ್ತ್‌ ಇನ್ಫಾರ್ಮೇಶನ್‌ ಪ್ಲಾಟ್‌ಫಾರ್ಮ್ (ಐಎಚ್‌ಐಪಿ) ಇನ್‌​ಫ್ಲು​ಯೆಂಜಾ, ನ್ಯುಮೋ​ನಿ​ಯಾ ರೀತಿ​ಯ ಸಾಂಕ್ರಾಮಿಕ ರೋಗಗಳ ಕಣ್ಗಾವಲಾಗಿ ಕೆಲಸ ಮಾಡು​ತ್ತಿದೆ. ಇಂಥ ಸಂದ​ರ್ಭ​ದಲ್ಲಿ ದೊಡ್ಡ ಪ್ರಮಾಣದ ಪ್ರಯೋಗಾಲಯಗಳು ನಿರ್ಣಾ​ಯಕ ಎಂದ​ನಿ​ಸು​ತ್ತವೆ. ಏಕೆಂದರೆ ಸೋಂಕಿ​ತ ಪ್ರಕರಣಗಳನ್ನು ಶೀಘ್ರವಾಗಿ ಕಂಡುಹಿಡಿದು, ಶಂಕಿ​ತ​ರ​ನ್ನು ಸಂಪರ್ಕಿಸಿ ರೋಗ ಹರ​ಡು​ವು​ದನ್ನು ನಿಯಂತ್ರಿ​ಸ​ಬ​ಹು​ದು.

ಆಸ್ಪ​ತ್ರೆ​ಗಳು ಮತ್ತು ಅಲ್ಲಿನ ಸಿಬ್ಬಂದಿ​ ಹೆಚ್ಚಿನ ಸಂಖ್ಯೆ​ಯಲ್ಲಿ ಶಂಕಿತ ಕರೋನಾ ಪೀಡಿ​ತರು ದಾಖ​ಲಾ​ದರೂ ಅವ​ರಿಗೆ ಚಿಕಿತ್ಸೆ ನೀಡಲು ಸಿದ್ಧ​ರಾ​ಗಿ​ರ​ಬೇಕು. ವೈರಸ್‌ನ ಭೌಗೋಳಿಕ ಹರಡುವಿಕೆಯನ್ನು ಮೇಲ್ವಿಚಾರಣೆ ಮಾಡಬೇಕು. ಜೊತೆಗೆ ಪ್ರಸರಣ ತೀವ್ರತೆ, ರೋಗದ ಪ್ರವೃತ್ತಿಗಳು, ವೈರಾಲಾಜಿಕ್‌ ವೈಶಿಷ್ಟ್ಯಗಳು, ಅವು​ಗ​ಳ ಗುಣಲಕ್ಷಣ ಮತ್ತು ಆರೋಗ್ಯ ಸೇವೆಗಳ ಮೇಲೆ ರೋಗದ ಪ್ರಭಾವದ ಬಗ್ಗೆ ಮೌಲ್ಯಮಾಪನ ಮಾಡು​ತ್ತಿ​ರ​ಬೇ​ಕು.

ವಿಮಾನ ನಿಲ್ದಾಣ ಮತ್ತು ಬಂದ​ರು​ಗಳ ಪ್ರವೇಶದ ಸ್ಥಳಗಳಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಮಾಹಿತಿ ಲಭ್ಯವಿರುವಂತೆ ನೋಡಿ​ಕೊ​ಳ್ಳ​ಬೇ​ಕು. ಮತ್ತೊಂದು ಪ್ರಮುಖ ವಿಷಯ ಎಂದರೆ ಸರ್ಕಾರ ಸಾರ್ವ​ಜ​ನಿ​ಕ​ರಿಗೆ ನೀಡುವ ಮಾಹಿ​ತಿಯು ಸ್ಪಷ್ಟ​ವಾ​ಗಿಯೂ ಖಚಿ​ತ​ವಾ​ಗಿ​ಯೂ ಇರ​ಬೇಕು.

ಅನ​ಗತ್ಯ ಗೊಂದ​ಲಕ್ಕೆ ಹಾದಿ ಮಾಡಿ​ಕೊ​ಡು​ವಂತಿ​ರ​ಬಾ​ರದು. ಹಾಗೆಯೇ ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಏನು ಮಾಡುತ್ತಿ​ದ್ದಾರೆ ಮತು ರೋಗ ನಿಯಂತ್ರ​ಣಕ್ಕೆ ಅವ​ರೇನು ಕ್ರಮ ಕೈಗೊ​ಳ್ಳು​ತ್ತಿ​ದ್ದಾ​ರೆ ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು.

ಕೊರೋನಾ ವೈರಸ್; ಹಲಸಿನ ಹಣ್ಣಿಗೆ ಬೇಡಿಕೆ, ಕೋಳಿ ಬೆಲೆ ಪಾತಾಳಕ್ಕೆ!

ಪಾರ​ದ​ರ್ಶ​ಕತೆ ಮುಖ್ಯ

ವಿಶ್ವಾಸಾರ್ಹ ತಜ್ಞರು ಮತ್ತು ಸಮುದಾಯದ ಮುಖಂಡರಿಂದ ಸ್ಪಷ್ಟಮತ್ತು ಸ್ಥಿರವಾದ ಸಂದೇಶಗಳನ್ನು ಸ್ಥಳೀಯ ಭಾಷೆಗಳಲ್ಲಿ ಪ್ರಸಾರ ಮಾಡಬೇಕಾಗಿದೆ. ಪಠ್ಯ ಮತ್ತು ಟೆಲಿ​ಫೋ​ನ್‌ ಹಾಟ್‌ಲೈನ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳಂತಹ ದ್ವಿಮುಖ ಚಾನಲ್‌ಗಳ ಮೂಲಕ ಜನರು ಮಾಹಿತಿ ಪಡೆಯಬಹುದು ಮತ್ತು ಅವ​ರಲ್ಲಿ ಉದ್ಭ​ವ​ವಾ​ಗಿ​ರು​ವ ಪ್ರಶ್ನೆಗಳನ್ನೂ ಕೇಳಬಹುದು. ಸುಳ್ಳು ಸುದ್ದಿ ಹರಡುವಿಕೆ ಮತ್ತು ತಪ್ಪು ಮಾಹಿತಿಯ ವಿರುದ್ಧ ಹೋರಾಡಲು ಇದು ಪ್ರಮುಖ ಅಸ್ತ್ರ.

ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ರೋಗದ ಬಗ್ಗೆ ಸಾರ್ವ​ಜ​ನಿ​ಕ​ರೊಂದಿಗೆ ಪಾರದರ್ಶಕ ಮತ್ತು ಮುಕ್ತವಾಗಿರುವುದು ಎಷ್ಟುಮುಖ್ಯ ಎಂದು ನಾನು ಒತ್ತಿ ಹೇಳಲಾರೆ. ಸರ್ಕಾರವು ತಮ್ಮೊಂದಿಗೆ ನಿಸ್ಸಂಶಯವಾಗಿ ವರ್ತಿಸುತ್ತಿದೆ ಎಂದು ಜನ​ರು ನಂಬಿದಾಗ, ಅವರು ತಮ್ಮ ಮತ್ತು ತಮ್ಮ ಸಮುದಾಯಗಳಿಗೆ ರಕ್ಷಣಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ.

ಬದಲಾಗುತ್ತಿರುವ ಸಾಂಕ್ರಾಮಿಕ ರೋಗಶಾಸ್ತ್ರದ ಆಧಾರದ ಮೇಲೆ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ನಿರ್ದಿಷ್ಟಸಂದರ್ಭಗಳಿಗೆ ಅನುಗುಣವಾಗಿ ಮತ್ತು ಆಗಾಗ್ಗೆ ಮೌಲ್ಯಮಾಪನ ಮತ್ತು ನವೀಕರಿಸಬೇಕಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯು ಭಾರತ ಮತ್ತು ಇತರ ಎಲ್ಲ ದೇಶಗಳಿಗೆ ಈ ಬಗ್ಗೆ ಮಾಹಿತಿ ನೀಡಿದೆ. ತಾಂತ್ರಿಕ ಮಾರ್ಗದರ್ಶನವನ್ನೂ ನೀಡ​ಲಾ​ಗಿದೆ.

ಒಟ್ಟಾರೆ ಕೊರೋನಾ ಬೆದ​ರಿ​ಕೆ​ಯನ್ನು ಸಮ​ರ್ಥ​ವಾಗಿ ಎದು​ರಿ​ಸಲು ಸಮನ್ವಯ ಮತ್ತು ಸಹಯೋಗ ಅತ್ಯಗತ್ಯ. ವಿಶ್ವ ಆರೋಗ್ಯ ಸಂಸ್ಥೆ​ಯ ಮಹಾನಿರ್ದೇಶಕ ಡಾ. ಟೆಡ್ರೊಸ್‌ ಹೇಳಿದಂತೆ ಸದ್ಯ ನಮ್ಮ ದೊಡ್ಡ ಶತ್ರು ಕರೋನಾ ವೈರಸ್‌ ಅಲ್ಲ. ಇದರ ಬಗ್ಗೆ ಉಂಟಾ​ಗಿ​ರುವ ಭಯ, ವದಂತಿಗಳು ಮತ್ತು ಕಳಂಕ. ನಮ್ಮ ದೊಡ್ಡ ಭರ​ವಸೆ ಎಂದ​ರೆ ಸತ್ಯ ಮತ್ತು ಏಕತೆ.

-  ಸೌಮ್ಯಾ ಸ್ವಾಮಿ​ನಾ​ಥ​ನ್‌

ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾ​ನಿ

click me!